-: ಪೂರ್ಣ ಸ್ವರಾಜ್ಯ :-
* 1929 ರಲ್ಲಿ ಲಾಹೋರನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಂಪೂರ್ಣ ಸ್ವಾತಂತ್ರ್ಯದ ನಿರ್ಣಯವನ್ನು ಮಂಡಿಸಲಾಯಿತು.
* 1939 ರಲ್ಲಿ ಜನವರಿ 26 ರಂದು ಪೂರ್ಣ ಸ್ವರಾಜ್ಯ ದಿನ ಎಂದು ಆಚರಿಸಲು ಅಧಿವೇಶನದಲ್ಲಿ ನಿರ್ಧರಿಸಲಾಯಿತು.ಐತಿಹಾಸಿಕ ಸಂಭ್ರಮಾಚರಣೆಯ ದಿನದ ನೆನಪನ್ನು ಹಸಿರಾಗಿಸಲು ಸ್ವತಂತ್ರ ಭಾರತದ ಸಂವಿಧಾನವನ್ನು ಜನವರಿ 26 1950 ರಂದು ಅಂಗೀಕರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಿಸಲಾಗುತ್ತದೆ.
-: ನಾಗರಿಕ ಕಾನೂನು ಭಂಗ ಚಳುವಳಿ :-
* ನಾಗರಿಕ ಕಾನೂನು ಭಂಗ ಚಳುವಳಿಯನ್ನು ಸಾಮಾನ್ಯ ಶಕ 1930ರ ಮಾರ್ಚ್ 12ರಂದು ಗಾಂಧೀಜಿಯವರು ಪ್ರಸಿದ್ಧ ದಂಡಯಾತ್ರೆಯೊಂದಿಗೆ ಆರಂಭಿಸಿದರು. ಆಯ್ದ 78 ಮಂದಿ ಅನುಯಾಯಿಗಳೊಂದಿಗೆ ಗಾಂಧೀಜಿ ಸಾಬರಮತಿ ಆಶ್ರಮದಿಂದ ಗುಜರಾತಿನ ಕಡಲ ತೀರದ ದಂಡಿಯವರೆಗೆ ಸುಮಾರು 375 ಕಿಲೋಮೀಟರ್ ದೂರವನ್ನು ಕ್ರಮಿಸಿದರು. ಜನರಿಂದ ಉಪ್ಪನ್ನು ಉತ್ಪಾದಿಸುವ ಮೂಲಕ ಉಪ್ಪಿನ ಕಾನೂನನ್ನು ಮುರಿಯುವುದು ಅದರ ಮುಖ್ಯ ಉದ್ದೇಶವಾಗಿತ್ತು .
* ಇದೇ ವೇಳೆ ವಾಯುವ್ಯ ಭಾರತದಲ್ಲಿ ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರು ಖುದಾಯಿ ಖಿದ್ಮತ್ ಗಾರ ಅಂದರೆ ದೇವರ ಸೇವಕರು ಎಂಬ ಸಂಘವನ್ನು ಸ್ಥಾಪಿಸಿದರು.
* ನಾಗಾಲ್ಯಾಂಡ್ ನಲ್ಲಿ 13 ವರ್ಷದ ಬಾಲೆ ರಾಣಿ ಗಾಯ್ಡಿ ಲ್ಯೂ ಬ್ರಿಟಿಷರ ವಿರುದ್ಧ ಬಂಡಾಯ ನಡೆಸಿದಳು.
-: ದುಂಡು ಮೇಜಿನ ಸಮ್ಮೇಳನಗಳು (1930-1932):-
* ಕಾಂಗ್ರೆಸ್ ಪರವಾಗಿ ಗಾಂಧೀಜಿಯವರು ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದರು.
* ಬ್ರಿಟನ್ ಪ್ರಧಾನಿ ರಾಮ್ಸೆ ಮ್ಯಾಕ್ಡೊನಾಲ್ಡ್ ಅವರು ದುಂಡುಮೇಜಿನ ಸಮ್ಮೇಳನ ನಂತರ ಮತೀಯ ತೀರ್ಪು (Communal Award) 1932 ಘೋಷಿಸಿದರು. ಅದರಲ್ಲಿ ದಲಿತ ವರ್ಗಕ್ಕೆ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ಕಲ್ಪಿಸಿತು. ಈ ತೀರ್ಪು ಭಾರತೀಯರ ಒಗ್ಗಟ್ಟನ್ನು ಹೊಡೆಯುವ ತಂತ್ರವೆಂದು ಗಾಂಧೀಜಿಯವರು ವಿರೋಧಿಸಿ ಪುನಾದ ಎರವಾಡ ಜೈಲಿನಲ್ಲಿ ಆಮರಣ ಉಪಾಸವನ್ನು ಕೈಗೊಂಡರು. ಅಂತಿಮವಾಗಿ ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಪುನಾ ಒಪ್ಪಂದ ಏರ್ಪಟ್ಟಿತು.
-: ಭಾರತ ಬಿಟ್ಟು ತೊಲಗಿ ಚಳುವಳಿ (1942):-
* ಕ್ರಿಪ್ಸ್ ಆಯೋಗದ ವೈಫಲ್ಯವು ಭಾರತೀಯರನ್ನು ಕೆರಳಿಸಿತು. ಮಹಾತ್ಮ ಗಾಂಧೀಜಿ ಅವರು ಸಾಮಾನ್ಯ ಶಕ 1942 ರಲ್ಲಿ ಆಗಸ್ಟ್ 8ರಂದು ಮುಂಬೈನಲ್ಲಿ ಕಾಂಗ್ರೆಸ್ಸಿನ ಸಭೆ ಕರೆದರು. ಅಲ್ಲಿ ಪ್ರಸಿದ್ಧ ಭಾರತ ಬಿಟ್ಟು ತೊಲಗಿ ಎಂಬ ನಿರ್ಣಯವನ್ನು ಅಂಗೀಕರಿಸಿದರು. ಭಾರತೀಯರಿಗೆ ಮಾಡು ಇಲ್ಲವೇ ಮಡಿ ಎಂಬ ಘೋಷಣೆ ನೀಡಿದರು.
-: ಸುಭಾಷ್ ಚಂದ್ರ ಬೋಸ್:-
* ಫಾರ್ವರ್ಡ್ ಬ್ಲಾಕ್ ಎಂಬ ಹೊಸ ಪಕ್ಷವನ್ನು ಸಂಘಟಿಸಿದರು.
* 1943ರಲ್ಲಿ ಸುಭಾಷ್ ಚಂದ್ರ ಬೋಸ್ರು ಇಂಡಿಯನ್ ನ್ಯಾಷನಲ್ ಆರ್ಮಿಯ ನಾಯಕತ್ವ ವಹಿಸಿಕೊಂಡರು.
* ಇವರನ್ನು ನೇತಾಜಿ ಎಂದು ಕರೆಯಲಾಗುತ್ತದೆ.
* ಛಲೋದಿಲ್ಲಿ ಎಂಬ ಘೋಷಣೆಯೊಂದಿಗೆ ನೇತಾಜಿಯವರ ನಾಯಕತ್ವದಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿ ಬರ್ಮಾದ ಕಡೆಯಿಂದ ಭಾರತದ ಪ್ರದೇಶದಲ್ಲಿ ಸುಮಾರು 150 ಮೈಲಿಗಳಷ್ಟು ಮುನ್ನುಗಿತು.
* ಇವರ ಪ್ರಸಿದ್ಧ ಘೋಷಣೆ ” ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ ”
-: ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮತ್ತು ಅವರ ಸುಧಾರಣೆಗಳು :-
* ಸಂವಿಧಾನ ಶಿಲ್ಪಿ.
* ಅಂಬೇಡ್ಕರ್ ಅವರು ಮಹಾರಾಷ್ಟ್ರದ ಅಂಬಾವಾಡಿ ಎಂಬಲ್ಲಿ 14 ಏಪ್ರಿಲ್ 1891ರಲ್ಲಿ ಜನಿಸಿದರು.
* ತಂದೆ ರಾಮ್ ಜಿ ಸಕ್ಪಲ್ ತಾಯಿ ಭೀಮಬಾಯಿ.
* ಬಹಿಷ್ಕೃತ ಹಿತಕಾರಿಣಿ ಸಭಾ ಎಂಬ ಸಂಘಟನೆಯನ್ನು ಸ್ಥಾಪಿಸಿದರು.
* ಮೂಕ ನಾಯಕ ಮತ್ತು ಬಹಿಷ್ಕೃತ ಭಾರತ ಎಂಬ ಪತ್ರಿಕೆಗಳ ಸಂಪಾದಕರಾಗಿದ್ದರು.
* ಡಾ. ಬಿ .ಆರ್ ಅಂಬೇಡ್ಕರ್ ಅವರು ದಲಿತ ವರ್ಗಗಳ ಪ್ರತಿನಿಧಿಯಾಗಿ ಲಂಡನ್ನಿನಲ್ಲಿ ನಡೆದ ಮೂರು ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದರು.
* ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾಗಿದ್ದರು.
* 1956 ಡಿಸೆಂಬರ್ 6 ರಂದು ನಿಧನ ಹೊಂದಿದ್ದರು.
* ಶಿಕ್ಷಣ, ಸಂಘಟನೆ ಮತ್ತು ಹೋರಾಟ ಇದು ಅಂಬೇಡ್ಕರ್ ಅವರ ಪ್ರಸಿದ್ಧ ಘೋಷ ವಾಕ್ಯ.
* 1990ರಲ್ಲಿ ಭಾರತ ಸರ್ಕಾರ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿದೆ.
-: ಸಮಾಜವಾದಿಗಳು :-
* 1934 ಜವಾಹರ್ ಲಾಲ್ ನೆಹರೂ ಜಯಪ್ರಕಾಶ್ ನಾರಾಯಣ ಆಚಾರ್ಯ ನರೇಂದ್ರ ದೇವ್ ಇವರು ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷವನ್ನು ಸ್ಥಾಪಿಸಿದರು.
-: ಜಯಪ್ರಕಾಶ್ ನಾರಾಯಣ :-
* 1902ರಲ್ಲಿ ಬಿಹಾರದಲ್ಲಿ ಜನನ.
* ಪ್ರಮುಖ ಸಮಾಜವಾದಿ.
* 1934ರಲ್ಲಿ ಕಾಂಗ್ರೆಸ್ ಸೋಶಿಯಲ್ ಲಿಸ್ಟ್ ಪಕ್ಷವನ್ನು ಸ್ಥಾಪಿಸಿದರು.
* ಸಂಪೂರ್ಣ ಕ್ರಾಂತಿ ಎಂಬ ಆಂದೋಲನವನ್ನು ಹುಟ್ಟುಹಾಕಿದರು.
* ಇವರನ್ನು ಪ್ರೀತಿಯಿಂದ ಲೋಕ ನಾಯಕ ಎಂದು ಕರೆಯುತ್ತಾರೆ.
* ಮರಣ 1979.
-: ಸ್ವಾತಂತ್ರ್ಯದೆಡೆಗೆ:-
* 1947ರ ಜೂನ್ ಮೂರರಂದು ಭಾರತದ 34ನೇ ಮತ್ತು ಕೊನೆಯ ಗವರ್ನರ್ ಜನರಲ್ ಹಾಗೂ ವೈಸ್ರಾಯ್ ಆದ ಲಾರ್ಡ್ ಮೌಂಟ್ ಬ್ಯಾಟನ್ ಭಾರತವನ್ನು ವಿಭಜಿಸಿ ಅಧಿಕಾರವನ್ನು ಭಾರತೀಯರಿಗೆ ಹಸ್ತಾಂತರಿಸಲಾಗುವುದು ಎಂಬ ಐತಿಹಾಸಿಕ ನಿರ್ಣಯವನ್ನು ಘೋಷಿಸಿದನು.
* ಸಾಮಾನ್ಯ ಶಕ 1947 ರಂದು ಪಾಕಿಸ್ತಾನ ಭಾರತದಿಂದ ಪ್ರತ್ಯೇಕಗೊಂಡಿತು.
* ಆಗಸ್ಟ್ 15 ಸಾಮಾನ್ಯ ಶಕ 1947 ಭಾರತದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ದಿನವಾಗಿದೆ.