-: ಮಾಹಿತಿ ಹಕ್ಕು-2005 :-
ಮಾಹಿತಿ ಹಕ್ಕು 2005, ಸಾರ್ವಜನಿಕ ಅಧಿಕಾರ ನಿಯಂತ್ರಣದಡಿಯಲ್ಲಿ ಬರುವ ಸಾರ್ವಜನಿಕರಿಗೆ ಮಾಹಿತಿ ಪಡೆಯಲು ಪ್ರಯೋಗಾತ್ಮಕ ಚೌಕಟ್ಟನ್ನು ಸಿದ್ಧಪಡಿಸಿದೆ. ಇದರಿಂದ ಎಲ್ಲಾ ಸಾರ್ವಜನಿಕರ ಪ್ರಾಧಿಕಾರಗಳಲ್ಲಿ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆ ಉತ್ತೇಜನಗೊಳ್ಳುತ್ತದೆ.
ಕೇಂದ್ರ ಮಾಹಿತಿ ಹಕ್ಕು 12-10-2005 ಕ್ಕೆ ಜಾರಿಗೆ ಬಂತು ಆದರೆ ಅದಕ್ಕಿಂತ ಮುಂಚಿತವಾಗಿ 9 ರಾಜ್ಯ ಸರ್ಕಾರಗಳು ಈ ಕಾಯ್ದೆಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡಿದವು. ಆ ರಾಜ್ಯಗಳು ಜಮ್ಮು, ಕಾಶ್ಮೀರ, ದೆಹಲಿ, ರಾಜಸ್ಥಾನ, ಮಧ್ಯ ಪ್ರದೇಶ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗೋವಾ, ಮತ್ತು ಅಸ್ಸಾಂ. ಯಾವುದಾದರೂ ಸರ್ಕಾರಿ ಇಲಾಖೆಗೆ ಹೋಗಿ, ಅಲ್ಲಿಯ ಅಧಿಕಾರಿಯನ್ನು ಮಾಹಿತಿ ಹಕ್ಕು ನನ್ನ ಮೂಲಭೂತ ಹಕ್ಕು. ನಾನು ಈ ದೇಶದ ಪ್ರಜೆ. ದಯವಿಟ್ಟು ನನಗೆ ಎಲ್ಲಾ ಕಡೆತಗಳನ್ನು ತೋರಿಸಿ ಎಂದರೆ ಮಾಹಿತಿ ನೀಡಲು ನಿರಕರಿಸುವುದರ ಜೊತೆಗೆ ನಿಮ್ಮನ್ನು ಕೊಠಡಿಯಿಂದ ಹೊರ ಹಾಕುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಯಾವುದಾದರೂ ಒಂದು ಪದ್ಧತಿ ಇಲ್ಲವೇ ನಿಯಮದ ಮೂಲಕ ಈ ಹಕ್ಕನ್ನು ಬಳಸಬೇಕಾಯಿತು. ಇದಕ್ಕಾಗಿ 13-10-2005 ರಲ್ಲಿ ಜಾರಿಗೆ ಬಂದಿದೆ. ಮಾಹಿತಿ ಹಕ್ಕು 2005. ನಮಗೆ ಯಾವ ಹೊಸ ಹಕ್ಕನ್ನು ನೀಡಿಲ್ಲ. ಮಾಹಿತಿಗಾಗಿ ಅರ್ಜಿ ಹೇಗೆ ಸಲ್ಲಿಸಬೇಕು, ಎಲ್ಲಿ ಸಲ್ಲಿಸಬೇಕು, ಎಷ್ಟು ಶುಲ್ಕ ಇತ್ಯಾದಿ ಪ್ರಕ್ರಿಯೆಗಳನ್ನು ತೋರಿಸಿದೆ.
ಮಾಹಿತಿ ಹಕ್ಕು 2005 ರಲ್ಲಿ ಯಾವ ಯಾವ ಹಕ್ಕುಗಳು ದೊರೆಯುತ್ತವೆ?
ಸರ್ಕಾರವನ್ನು ಯಾವ ಪ್ರಶ್ನೆಯನ್ನಾದರೂ ಕೇಳಬಹುದು ಅಥವಾ ಯಾವ ಮಾಹಿತಿಯನ್ನಾದರೂ ಪಡೆಯಬಹುದು.ಸರ್ಕಾರದ ಯಾವುದೇ ದಾಖಲೆಗಳ ಪ್ರತಿ ಪಡೆಯಬಹುದು. ಸರ್ಕಾರದ ಯಾವುದೇ ದಾಖಲೆಗಳನ್ನು ತಪಾಸಣೆ ಮಾಡಬಹುದು. ಯಾವುದೇ ಸರ್ಕಾರಿ ಕೆಲಸದ ವಸ್ತುಗಳ ಮಾದರಿ ಪಡೆಯಬಹುದು. ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ, ಈ ಕಾಯ್ದೆ ಭಾರತ ದೇಶವನ್ನು ಪಸರಿಸಿದೆ. ಸಂವಿಧಾನದ ಅಡಿಯಲ್ಲಿ ರಚಿಸಲ್ಪಟ್ಟಿರುವ ಯಾವುದೇ ಕಾಯ್ದೆ ಅಥವಾ ಸರ್ಕಾರದ ಘೋಷಣೆ ಅಡಿಯಲ್ಲಿ ಬರುವ ಸರ್ಕಾರೇತರ ಸಂಸ್ಥೆಗಳು, ಸರ್ಕಾರದ ಹಿಡಿತದಲ್ಲಿರುವ ಅಥವಾ ಸರ್ಕಾರದಿಂದ ಸಹಾಯಧನ ಪಡೆಯುವ ಎಲ್ಲಾ ಸಂಸ್ಥೆಗಳು ಇದರೊಳನೊಳಗೊಂಡಿದೆ. ಯಾರು ನಿಮಗೆ ಮಾಹಿತಿ ನೀಡುತ್ತಾರೆ, ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಒಬ್ಬರು ಅಥವಾ ಹೆಚ್ಚು ಪ್ರಸ್ತುತ ಅಧಿಕಾರಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಎಂದು ನೇಮಿಸುತ್ತಾರೆ. ನಿಮ್ಮ ಅರ್ಜಿಯನ್ನು ಅವರಿಗೆ ಸಲ್ಲಿಸಬೇಕು. ಇಲಾಖೆಯ ಬೇರೆ ಬೇರೆ ವಿಭಾಗಗಳಿಂದ ಮಾಹಿತಿ ಸಂಗ್ರಹಿಸಿ ನಿಮಗೆ ನೀಡುವುದು ಅವರ ಕರ್ತವ್ಯ. ಇದರ ಜೊತೆಗೆ ಕೆಲವು ಅಧಿಕಾರಿಗಳನ್ನು ಸಹಾಯಕ ಮಾಹಿತಿ ಅಧಿಕಾರಿ ಎಂದು ನೇಮಿಸಲಾಗುವುದು. ಇವರು ನಿಮ್ಮಿಂದ ಅರ್ಜಿಯನ್ನು ಪಡೆದು ಅದನ್ನು ಸಂಬಂಧಿಸಿದವರಿಂದ ಮಾಹಿತಿ ಕೊಡಿಸುವುದು ಅವರ ಕರ್ತವ್ಯವಾಗಿರುತ್ತದೆ.
ಯಾವುದೇ ಕಚೇರಿಯಲ್ಲಿ ಮಾಹಿತಿ ಹಕ್ಕು ಕೌಂಟರ್ ಗಳಲ್ಲಿ ಅರ್ಜಿ ಹಾಗೂ ಶುಲ್ಕ ಪಾವತಿಸಬಹುದು. ಅವರು ನಿಮಗೆ ರಶೀದಿ ಹಾಗೂ ಸ್ವೀಕೃತಿಯನ್ನು ನೀಡುತ್ತಾರೆ.
ಅರ್ಜಿ ಸಲ್ಲಿಕೆ ಹೇಗೆ ?
ಬಿಳಿ ಹಾಳೆಯಲ್ಲಿ ಅಥವಾ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಬರೆದು ಖುದ್ದಾಗಿ ಇಲ್ಲವೇ ಅಂಚೆ ಮೂಲಕ ಮಾಹಿತಿ ಅಧಿಕಾರಿಗೆ ಕಳುಹಿಸಿ ಒಂದು ಪ್ರತಿ ನಿಮ್ಮ ಉಲ್ಲೇಖಕ್ಕಾಗಿ ನಿಮ್ಮೊಂದಿಗೆ ಇಟ್ಟುಕೊಳ್ಳಿ. ಅರ್ಜಿ ಶುಲ್ಕ ಪಾವತಿಸಲು, ಪ್ರತಿ ರಾಜ್ಯಕ್ಕೂ ಬೇರೆ ನಿಯಮ ಇದೆ. ಸಾಮಾನ್ಯವಾಗಿ ಅರ್ಜಿ ಶುಲ್ಕವನ್ನು ಅಂಚೆ ಮೂಲಕ, ಡಿ.ಡಿ, ಐ.ಪಿ.ಒ, ಎಂ.ಒ, ಕೋರ್ಟ್ ಶುಲ್ಕ ಚೀಟಿ, ಬ್ಯಾಂಕ್ ಮೂಲಕ ಚೆಕ್ ಯಾವುದಾದರೂ ಒಂದು ರೂಪದಲ್ಲಿ ಪಾವತಿಸಬಹುದು.
ಶುಲ್ಕ ಪಾವತಿ ಹೇಗೆ?
ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳಿಗೆ 10 ರೂ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ನಿಗದಿತ ಬೆಲೆ ಬೇರೆ ಬೇರೆ ಇರುತ್ತದೆ. ಮಾಹಿತಿ ಪಡೆಯಲು , ಕೇಂದ್ರ ಸರ್ಕಾರಿ ಕಚೇರಿಯಿಂದ ದೊರೆತ ಮಾಹಿತಿ 1 ಹಾಳೆಗೆ ರೂ.2/ ಇರುತ್ತದೆ. ಬೇರೆ ರಾಜ್ಯಗಳಿಗೆ ನಿಗದಿತ ಬೆಲೆ ಬೇರೆ. ಅದೇ ರೀತಿ ದಾಖಲಾತಿ ತಪಾಸಣೆಗೆ ಒಂದು ಗಂಟೆಗೆ 5 ರೂ ನೀಡಬೇಕು. ಇದು ಕೇಂದ್ರ ಸರ್ಕಾರದ ಕಾನೂನು ಪ್ರಕಾರ ಬೇರೆ ಬೇರೆ ರಾಜ್ಯಗಳಿಗೆ ಆಯಾಯ ರಾಜ್ಯದ ಕಾನೂನು ನೋಡಿ ಶುಲ್ಕವನ್ನು ನಗದು ರೂಪದಲ್ಲಿ ಇಲ್ಲವೇ ಡಿ.ಡಿ ಮುಖಾಂತರ ಚೆಕ್ ಮೂಲಕ ಇಲ್ಲವೇ ಪೋಸ್ಟಲ್ ಆರ್ಡರ್ ಮೂಲಕ ಸಾರ್ವಜನಿಕ ಪ್ರಾಧಿಕಾರದ ಪರವಾಗಿ ಪಡೆಯಬಹುದು. ಕೆಲವು ರಾಜ್ಯಗಳಲ್ಲಿ ನ್ಯಾಯಾಲಯದ ಸ್ಟಾಂಪು ಅರ್ಜಿಯೊಂದಿಗೆ ಲಗತ್ತಿಸಬಹುದು. ಇದು ನೀವು ಶುಲ್ಕ ನೀಡಿದ ರೀತಿಯೇ ಆಗಿರುತ್ತದೆ. ನಂತರ ಅರ್ಜಿಯನ್ನು ಅಂಚೆ ಅಥವಾ ಕೈಯಿಂದ ಕೊಡಬಹುದು.
ಅರ್ಜಿ ನಿರಾಕರಿಸಿದ ಅಧಿಕಾರಿಗೆ ದಂಡ.
ಪರಿಚ್ಛೇದ 18 ರ ಅಡಿಯಲ್ಲಿ, ದೂರನ್ನು ಸಂಬಂಧ ಪಟ್ಟ ಮಾಹಿತಿ ಆಯುಕ್ತರಿಗೆ ಕಳಿಸಬಹುದು. ನಿಮ್ಮ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಅಧಿಕಾರಿಗೆ 25.000/- ರೂ ದಂಡ ಹಾಕುವ ಅಧಿಕಾರ ಮಾಹಿತಿ ಆಯುಕ್ತರಿಗೆ ಇರುತ್ತದೆ.
ಕೇಂದ್ರ ಸರ್ಕಾರ ಇಲಾಖೆಗಳಿಗೆ ಅರ್ಜಿ ನಮೂನೆ ಇರುವುದಿಲ್ಲ. ಮಾಮೂಲ ಅರ್ಜಿಯಂತೆ ಖಾಲಿ ಹಾಳೆಯಲ್ಲಿ ಬರೆದು ಸಲ್ಲಿಸಬೇಕು ಆದರೆ ಕೆಲವು ರಾಜ್ಯ, ಸಚಿವಾಲಯ ಹಾಗೂ ಇಲಾಖೆಗಳಲ್ಲಿ ನಿರ್ದಿಷ್ಟ ನಮೂನೆ ಇರುತ್ತದೆ. ಅಂತಹ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.