SYA Scholarship: ವಿವಿಧ ಸಾಂಸ್ಕೃತಿಕ ಕ್ಷೇತ್ರಗಳ ಯುವ ಕಲಾವಿದರಿಗೆ ವಿದ್ಯಾರ್ಥಿವೇತನ ಯೋಜನೆ (SYA Scholarship)

SYA Scholarship: ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲಗಳು ಮತ್ತು ತರಬೇತಿ ಕೇಂದ್ರವು “ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಯುವ ಕಲಾವಿದರಿಗೆ ವಿದ್ಯಾರ್ಥಿವೇತನ ಯೋಜನೆಗಾಗಿ” ಭಾರತೀಯ ಶಾಸ್ತ್ರೀಯ ಸಂಗೀತ, ಭಾರತೀಯ ಶಾಸ್ತ್ರೀಯ ನೃತ್ಯ, ರಂಗಭೂಮಿ, ಹಾಸ್ಯನಾಟಕ, ದೃಶ್ಯ ಕಲೆ, ಜಾನಪದ, ಸಾಂಪ್ರದಾಯಿಕ ಮತ್ತು ಸ್ಥಳೀಯ ಕಲೆಗಳು ಮತ್ತು ಲಘು ಶಾಸ್ತ್ರೀಯ ಸಂಗೀತ ಕ್ಷೇತ್ರಗಳಿಂದ ಆಫ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. 2025-26ನೇ ಸಾಲಿಗೆ ಅರ್ಜಿಗಳನ್ನು ನವೆಂಬರ್ 10, 2025 ರಿಂದ ಜಾರಿಗೆ ಬರುವಂತೆ ಆಹ್ವಾನಿಸಲಾಗಿದೆ ಎಂಬುದನ್ನು ಗಮನಿಸಿ. ಈ ವರ್ಷ 400 ವಿದ್ಯಾರ್ಥಿವೇತನಗಳು ಲಭ್ಯವಿವೆ. ಯೋಜನೆಯ ವಿವರಗಳು, ಅರ್ಜಿದಾರರಿಗೆ ಸೂಚನೆಗಳು, ಅರ್ಹತಾ ಷರತ್ತುಗಳು/ಮಾನದಂಡಗಳು ಮತ್ತು ಅರ್ಜಿ ನಮೂನೆಯು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಮತ್ತು ಅಅಖಖಿನ ಕೆಳಕಂಡ ವೆಬ್ಸೈಟ್ಗಳಲ್ಲಿ ಲಭ್ಯವಿದೆ.
• Read more… ರಾಜ್ಯದ ನೌಕರರಿಗೆ ಆಧಾರ್ ಹಾಜರಾತಿ ಹೊಸ ನಿಯಮ: ಆಧಾರ್ ಹಾಜರಾತಿ ಕಡ್ಡಾಯ! ನೀವು ತಡವಾಗಿ ಬಂದರೆ ಏನಾಗುತ್ತದೆ ಗೊತ್ತಾ?
WEBSITE
• www.indiaculture.gov.in
• www.certindia.gov.in
ಅರ್ಜಿಗಳನ್ನು ಸಲ್ಲಿಸಲು 15ನೇ ಡಿಸೆಂಬರ್, 2025 ಕೊನೆಯ ದಿನಾಂಕವಾಗಿದೆ ಆಫ್ಲೈನ್ ಅರ್ಜಿಗಳನ್ನು ಮಾತ್ರ ಅಂಗೀಕರಿಸಲಾಗುತ್ತದೆ.
