B. L. Rice:ಬಿ ಎಲ್ ರೈಸ್ ಯಾರು, ಮತ್ತು ಕರ್ನಾಟಕ ಇತಿಹಾಸಕ್ಕೆ ಇವರ ಕೊಡುಗೆ ಏನು, ಇವರ ಬಗ್ಗೆ ನಿಮಗೆಷ್ಟು ಗೊತ್ತು?
B. L. Rice:ಕನ್ನಡನಾಡಿನ ಶಾಸನಗಳನ್ನು ಸಂಪಾದಿಸಿ ಹಿಂದಿನಕಾಲದ ಚರಿತ್ರೆ ಬಗ್ಗೆ ತಿಳುವಳಿಕೆ ನೀಡಿದ ಹಾಗೂ ಬಿಳಿ ಕನ್ನಡಿಗ ಎಂದು ಖ್ಯಾತಿಯನ್ನು ಹೊಂದಿದ್ದ ಖ್ಯಾತ ಆಂಗ್ಲ ವಿದ್ವಾಂಸರು ಬೆಂಜಮಿನ್ ಲೂಯಿ ರೈಸ್ತು(B. L. Rice) ಆಂಗ್ಲನಾದರೂ ಕನ್ನಡನಾಡಿನ ಚರಿತ್ರೆಯನ್ನು ಗೌರವಿಸಿದ ಮಹಾನುಭಾವರು ಇವರು ಕನ್ನಡ ಭಾಷೆ, ಮತ್ತು ಕನ್ನಡನಾಡಿನ ಮೇಲೆ ಅಪಾರ ಅಭಿಮಾನವನ್ನಿಟ್ಟುಕೊಂಡಿದ್ದ ವ್ಯಕ್ತಿ. ಶಾಸನಗಳ ಸಂಶೋಧನೆಯನ್ನು ಮೂಲಾಧಾರವಾಗಿಸಿಕೊಂಡು ಸಾಹಿತ್ಯ ಮತ್ತು ಇತಿಹಾಸಗಳಿಗೆ ನಿಖರರೂಪ ನೀಡಿದವರಲ್ಲಿ ಇವರು ಮೊದಲಿಗರು. ಆದ್ದರಿಂದಲೆ ಇವರನ್ನು ಹಳೆಯ ಮೈಸೂರು ಪ್ರಾಂತ್ಯದ ಶಾಸನಶಾಸ್ತ್ರದ ಪಿತಾಮಹ ಎನ್ನಬಹುದು.
B. L. Rice: ಜನನ ಮತ್ತು ಶಿಕ್ಷಣ.
ರೈಸ್’ ರವರ ಪರಿ ಹೆಸರು ‘ಬೆಂಜಮಿನ್ ಲೂಯಿಸ್ ರೈಸ್’ ಇವರು 1836ರ ಜುಲೈ 17 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಬೆಂಜಮಿನ್ ರೈಸ್ ಇವರಿಗೆ ಐದು ಜನ ಮಕ್ಕಳ್ಳಿದ್ದರು. ಮೂಲತಃ ವಿದೇಶದವರಾಗಿದ್ದು, ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಈಸ್ಟ್ ಪೆರೇಡ್ ರಿನಲ್ಲಿ ರಬೋಧಕರಾಗಿದ್ದರು. ಹಾಗಾಗಿ ರೈಸ್ ಅವರ ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲೇ ಆಯಿತು. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ತೆರಳಿ ತಮ್ಮ ಮೂಲಸ್ಥಳವಾಗಿದ್ದ ಇಂಗ್ಲೆಂಡಿನ ಹ್ಯಾರೋ ನಗರದಲ್ಲಿ ಅವರು ಶಿಕ್ಷಣ ಪಡೆದರು. ವಿಧ್ಯಾಭ್ಯಾಸದ ನಂತರ ಮತ್ತೆ ಕನ್ನಡನಾಡಿಗೆ ಮರಳುವ ಆಸೆಯಾಯಿತು. ಆದರೆ ಪದವಿಧರರಾದ ಮೇಲೆ ಕೆಲಕಾಲ ಅಲ್ಲಿಯೇ ಕೆಲಸ ಮಾಡುತ್ತಾ ಐಸಿಎಸ್ ಪರೀಕ್ಷೆಗೆ ತಯಾರಿ ನಡೆಸಿದರು. ಆಗ ಅವರಿಗೆ ಬೆಂಗಳೂರಿನಿಂದ ಉದ್ಯೋಗದ ಆಹ್ವಾನ ಬಂದಿತು. ಅದರ ಮೇರೆಗೆ ಅವರು 1860 ರಲ್ಲಿ ಬೆಂಗಳೂರಿಗೆ ಬರಬೇಕಾಯಿತು. ಬಂದಕೂಡಲೇ ಜನಸಾಮಾನ್ಯರೊಡನೆ ಸುಲಭವಾಗಿ ಬೆರೆತು ಮುಕ್ತವಾಗಿ ಸಂವಹನ ನಡೆಸಲು ಕನ್ನಡ ಭಾಷೆ ಕಲಿತರು. ನಂತರ ಮೈಸೂರು ರಾಜ್ಯ ಶಿಕ್ಷಣ ಇಲಾಖೆಯಲ್ಲಿ ಅವರಿಗೆ ನೌಕರಿ ದೊರಕಿತು. ಇವರಿಗೆ ಕನ್ನಡ, ತೆಲುಗು, ತಮಿಳು ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವಿತ್ತು. ಬಿ ಎಲ್ ರೈಸ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿ ಆನಂತರ ಮೈಸೂರು, ಕೊಡಗುಗಳಲ್ಲಿ ಶಾಲಾ ಇನ್ಸೆಕ್ಟರ್ ಆಗಿ. ಮೈಸೂರು ಸಂಸ್ಥಾನದ ಶಿಕ್ಷಣ ಇಲಾಖೆಯ ನರೆಶಕರಾಗಿ, ಮೈಸೂರು ದ್ವಾರದ ಶಿಕ್ಷಣ ಇಲಾಖೆಯ ಕರರಿಯಾಗಿ, ಹಂಟರ್ ಶಿಕ್ಷಣ ಆಯೋಗದ ಕರಿಯಾಗಿ, ಮೈಸೂರು ಪುರಾತತ್ವ ಇಲಾಖೆಯ ನರೇಶಕರಾಗಿ ಅನುಪಮ ಸೇವೆಗೈದಿದ್ದಾರೆ. ಇವರ ಸೇವೆ ಹೆಚ್ಚಾಗಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗಿತ್ತು.
B. L. Rice ರವರ ಕನ್ನಡ ಪ್ರೀತಿ.
ರೈಸರೂ ಮೂಲತಃ ವಿದೇಶೀಯರಾಗಿದ್ದರು ಕೂಡ ಬೆಂಗಳೂರು ಸೇರಿದಂತೆ ಕನ್ನಡನಾಡು ಮತ್ತು ಕನ್ನಡಭಾಷೆಯ ಬಗ್ಗೆ ಅವರಿಗೆ ಅಪಾರ ಪ್ರೇಮವಿತ್ತು. ಅಷ್ಟೇ ಅಲ್ಲದೆ ಕನ್ನಡದಲ್ಲಿ ಕಲಿಸಲು ಪಠ್ಯ ಪುಸ್ತಕಗಳು ಇಲ್ಲವೆಂದು ತಾವೇ ಶಾಲಾಮಕ್ಕಳ ಉಪಯೋಗಕ್ಕೆ ಕನ್ನಡದಲ್ಲಿ ಪುಸ್ತಕ ಬರೆದರು. ಇದರಿಂದ ಕನ್ನಡದ ಮೇಲೆ ಅವರಿಗಿರುವ ಆಸಕ್ತಿ ಗೊತ್ತಾಗುತ್ತದೆ
ಅವರು ಕಾಲವಾಗುವ ಕೆಲವೇ ಸಮಯದ ಮುಂಚೆ ಬ್ರಿಟನ್ನ ವೆಂಬ್ಲಿಯಲ್ಲಿ ನಡೆದ ಅಂತರಾಷ್ಟ್ರೀಯ ವಸ್ತು ಪ್ರತಿನದ ನಡೆಯಿತು. ಅಲ್ಲಿ ನಾಟಕದ ಕನ್ನಡ ಮಳಿಗೆಗೆ ಇರುವುದನ್ನು ಅರಿತು. ಅವರೊಡನೆ ಕನ್ನಡದಲ್ಲೇ ಮಾತನಾಡಿ ಮನತುಂಬಿಕೊಂಡರು.
ಕನ್ನಡದ ಕಾಳಜಿ.
ಮೈಸೂರು ಸಂಸ್ಥಾನದ ಶಾಲಾ ಇನ್ಸೆಕ್ಟರ್ ಹುದ್ದೆಯಲ್ಲಿದ್ದಾಗ ಪ್ರವಾಸದ ಅಂಗವಾಗಿ ಓಡಾಡಿದ ಕಾರಣದಿಂದ ರೈಸರಿಗೆ ಕನ್ನಡದ ಆಡುನುಡಿಗಳು, ರೀತಿನೀತಿಗಳು ಮುಂತಾದವುಗಳನ್ನು ಅರಿಯುವ ಅವಕಾಶ ದೊರೆಯಿತು. ಅಲ್ಲಲ್ಲಿ ಕಂಡುಬರುತ್ತಿದ್ದ ಶಿಲಾಶಾಸನಗಳನ್ನು ನೋಡಿ ಅವುಗಳ ಬಗ್ಗೆ ಕುತೂಹಲಭರಿತರಾಗಿ ತಮ್ಮನ್ನು ಅಧ್ಯಯನಕ್ಕೆ ತೊಡಗಿಸಿಕೊಂಡರು. ಶಾಸನಗಳಲ್ಲಿ ದಾನಶಾಸನಗಳು, ರಾಜಾಜ್ಞೆಗಳು, ವೀರಗಲ್ಲುಗಳು, ಪ್ರಶಸ್ತಿ ಶಾಸನಗಳು, ಮರಣಶಾಸನಗಳು. ಇದ್ದು ಅವುಗಳಲ್ಲಿ ನೂರಕ್ಕೆ 99ರಷ್ಟು ಕನ್ನಡದವೇ ಆಗಿದ್ದರೂ ವಿವಿಧ ಕಾಲಘಟ್ಟಗಳ ಲಿಪಿ ವೈವಿಧ್ಯತೆಯ ಕಾರಣದಿಂದ ಸುಲಭವಾಗಿ ಓದಲು ಅಸಾಧ್ಯವಾಗಿತ್ತು.
ಶಾಸನಶಾಸ್ತ್ರದ ಸಂಶೋಧನೆ.
1865 ರಲ್ಲಿ ಮೂರು ರಗಳ ಕಾಲ ಮೈಸೂರು ಮತ್ತು ಕೊಡಗು ಸೀಮೆಯ ಶಾಲಾ ಇನಸ್ಪೆಕ್ಟರ್ ಆಗಿ ನೇಮಕಾತಿ ಆಯಿತು. ಆಗ ಮುಖ್ಯ ಕಮಿಷನರ್ ಆಗಿದ್ದ ಬೌರಿಂಗ್ ಹಲವು ಶಾಸನಗಳ ಛಾಯಾಚಿತ್ರ ತೆಗೆಸಿದ್ದರು. ಅದೇ ಸಮಯದಲ್ಲಿ ಮೇರಿಕ್ಸನ್ ಹಲವು ಶಾಸನಗಳ ಭಾವಚಿತ್ರ ನೀಡಿ ಬಿಡುವಾದಾಗ ಭಾಷಾಂತರ ಮಾಡಲು ಕೋರಿದರು. ಇದು ಇವರ ಶಾಸನ ಅಧ್ಯಯನಕ್ಕೆ ಅದು ನಾಂದಿಯಾಯಿತು. ಅವರು ಹೈಗೌಂಡಿನಲ್ಲಿದ್ದ ನಿವೇಶನದಲ್ಲಿ ತಮ್ಮ ವಾಸಕ್ಕಾಗಿ ಸುಸಜ್ಜಿತ ಮನೆ ನರಿಸಿಕೊಂಡರು ಅವರ ಮನೆ ಈಗಿನ ಸ್ಯಾಂಕಿರೋಡನಲ್ಲಿ ವಂಡಾರಡ್ಜ್‌ನರ್ ಹೋಟೆಲ್ ಎದುರಿಗೆ ಇತ್ತು. ಇಲ್ಲಿಯೇ ಇವರ ಮೊದಲ ಮಗು ಜನಿಸಿತು. ಆ ಅವಧಿಯಲ್ಲಿಯೇ ಅವರ ಶಾಸನ ಸಂಗ್ರಹದ ಆಸಕ್ತಿ ಚಿಗುರೊಡೆಯಿತು ಹೋದ ಊರುಗಳಲ್ಲೆಲ್ಲ ಶೈಕ್ಷಣಿಕ ತಪಾಸಣೆ ಜತೆ ಹಸ್ತ ಪ್ರತಿ ಸಂಗ್ರಹ, ಶಾಸನಗಳ ಸಮೀಕ್ಷೆ, ಅಧ್ಯಯನ ಮಾಡಿದರು. ಕನ್ನಡ ನುಡಿಗೆ ಅವರು ಸಲ್ಲಿಸಲಿದ್ದ ಮಹಾನ್ ಕೊಡುಗೆಗೆ ಈ ಕೆಲಸವೇ ಮುನ್ನುಡಿ ಬರೆಯಿತು.
ರೈಸ್ ಅವರು ಎಪಿಗ್ರಾಫಿಯ ಕರ್ನಾಟಕ ಎಂಬ ಯೋಜನೆಯಡಿ ಶಾಸನಾಧ್ಯಯನ ಕರವನ್ನು ಕೈಗೊಂಡರು. ಕ್ರಿ.ಶ.1916ರವರೆಗೆ ಸಂಗ್ರಹಿಸಿದ 8869 ಶಾಸನಗಳನ್ನು 12 ಸಂಪುಟಗಳಲ್ಲಿ ದಾಖಲೆಯಾಗವೆ.ಅಲ್ಲದೆ ಕ್ರಿಸ್ತಪತ್ವ 250 ರಷ್ಟು ಹಳೆಯದಾದ ಸಾಮ್ರಾಟ್ ಅಶೋಕನ ಶಾಸನವನ್ನು ಮೊದಲ ಬಾರಿಗೆ ಪ್ರಕಟಿಸಿದ ಕರಿ ಅವರದ್ದು. ಚಂದ್ರಗುಪ್ತ ಮಯ್ಯನು ಶ್ರವಣಬೆಳಗೊಳಕ್ಕೆ ಬಂದಿದ್ದನ್ನು ಸಂಶೋಧಿಸಿದವರು ಇವರೇ ಆಗಿದ್ದಾರೆ. ಇವರು ಈಗಾಗಲೇ “ಮೈಸೂರು ಇನಸ್ಕ್ರಿಪ್ಪನ್” ಎಂಬ ಶಾಸನ ಕುರಿತಾದ ಕೃತಿ ಪ್ರಕಟಿಸಿದ್ದರು. ಮೈಸೂರು ಮತ್ತು ಕೊಡಗು ಸೀಮೆಯ ಗೆಜೆಟಿಗಳನ್ನು ಮೂರು ಸಂಪುಟಗಳಲ್ಲಿ 1887ರಲ್ಲಿಯೇ ಸಿದ್ಧಪಡಿಸಿ ಪ್ರಕಟಿಸಿದ್ದರು.
ಶಾಸನ ಸಂಗ್ರಹದ ಬಗ್ಗೆ ಮಾತ್ರ ಗಮನ ಕೊಡದೆ ಶಾಸನಗಳ ಸಂರಕ್ಷಣೆಯ ಕಡೆಗೂ ಕಾಳಜಿ ವಹಿಸಿದರು. ಅವರ ಕಾಲದಲ್ಲೇ ಬೆಳಕಿಗೆ ಬಂದ ಅಶೋಕನ ಶಾಸನಗಳ ಸಂರಕ್ಷಣೆಗಾಗಿ ದ್ವಾರಕ್ಕೆ ಒತ್ತಡ ಹಾಕಿದರು. ಅವರ ಆಗ್ರಹಕ್ಕೆ ಮಣಿದು ಯಾರವು ಲೋಕೋಪಯೋಗಿ ಇಲಾಖೆಯ ಮೂಲಕ ಆಶೋಕನ ಸಿದ್ದಾಪುರ ಮತ್ತು ಇತರೆಡೆಗಿನ ಶಾಸನಗಳ ಸುತ್ತಲೂ ಗೋಡೆ ಕಟ್ಟಿಸಿದಾಗ ಮತ್ತೊಮ್ಮೆ ಭೇಟಿ ನೀಡಿ ಅಲ್ಲಿರುವ ಅವೈಜ್ಞಾನಿಕ ರಚನೆಗಳನ್ನು ವಿರೋಧಿಸಿ ಪತ್ರ ಬರೆದರು. ಆಗ ರ್ಯರವು ಪುರಾತತ್ವ ಸ್ಮಾರಕಗಳಲ್ಲಿ ಯಾವುದೇ ಕಾಮಗಾರಿ ಮಾಡುವಾಗ ರೈಸ್ ಅವರ ಪಾನುಮತಿ ಪಡೆದು ಅವರ ಸಲಹೆಯಂತೆ ಕೆಲಸ ಮಾಡಲು ಇಲಾಖೆಗೆ ಪುರಾತನ ದಾಖಲೆಗಳಿಂದ ಕಂಡು ಬರುವುದು. ಮುಂದಿನ ದಿನಗಳಲ್ಲಿ ದ್ವಾರ ಇವರ ಸಲಹೆ ಪಡೆದು ಪುರಾತತ್ವ ಇಲಾಖೆಯ ಕರ ನರಹಿಸಿತು.
ಶಿಕ್ಷಣ ತಜ್ಞರಾಗಿ ರೈಸ್(B. L. Rice).
ರೈಸ್ ರವರ ಅಧ್ಯಯನ ಹಾಗೂ ಸಂತೋಷನೆಯನ್ನು ಗಮನಿಸಿದ ಬ್ರಿಟಿಷ್ ಸರಕಾರ ಸಮಗ್ರ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಬದಲಾಣೆ ತರುವ ಉದ್ದೇಶದಿಂದ ಹಂಟರ್ ಶಿಕ್ಷಣ ಆಯೋಗ ರಚಿಸಿತು. ಅಲ್ಲಿ ಅವರಿಗೆ ಆಯೋಗದ ಕಳ್ಳರಿ ಸ್ಥಾನ ಕೊಡಲಾಯಿತು. ಒಂದೇ ಕ್ಷದಲ್ಲಿ ಶಿಕ್ಷಣ ವರದಿ ಸಿದ್ಧವಾಯಿತು. ಆ ಕೆಲಸ ಮುಗಿದ ಕೂಡಲೇ ಮೈಸೂರು ಸಂಸ್ಥಾನದಲ್ಲಿ ಹೊಸದಾಗಿ ಪ್ರಾರಂಭಗೊಂಡ ಪುರಾತತ್ವ ಇಲಾಖೆಯ ನರೇಶಕರಾಗಿ ಹಾಗೂ ಪ್ರಭಾರಿಯಾಗಿ ಶಿಕ್ಷಣ ಇಲಾಖೆಯ ನೋಡಿಕೊಳ್ಳಲು ನೇಮಕಗೊಂಡರು.
ರೈಸರು(B. L. Rice) ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಕೊಡುಗೆ.
ಒಂದು ವಿಶ್ವವಿದ್ಯಾಲಯವು ಮಾಡಲಾಗದ ಕೆಲಸವನ್ನು ಒಂದು ಇಲಾಖೆಯ ಮೂಲಕ ಮಾಡಿಸಿದ ಸಾರ್ ರೈಸರಿಗಿತ್ತು ಎಂಬುದು ಮೆಚ್ಚತಕ್ಕ ವಿಷಯ. ಅವರು ಶಾಸನಗಳನ್ನು ಅವುಗಳ ಮೂಲಪಠ್ಯವನ್ನು ಓದಿ ಮುದ್ರಣರೂಪಕ್ಕೆ ತಂದರು ಎಂದುಬಿಟ್ಟರೆ ಆ ಕೆಲಸದ ಅಗಾಧತೆಯನ್ನು ಹೇಳಿದಂತಾಗುವುದಿಲ್ಲ. ಅದು ಒಂದು ರೀತಿಯಲ್ಲಿ ಪುರಾತನ ನಿವೇಶನವೊಂದರ ಉತ್ಪನನ ನಡೆಸಿದಂತೆ ಕ್ಲಿಷ್ಟಕರ ಕೆಲಸ. ಹೇಳಿಕೇಳಿ ಶಿಲಾಶಾಸನಗಳು ಪ್ರಾಕೃತಿಕ ವೈಪರೀತ್ಯಗಳಿಗೆ ಸುಲಭವಾಗಿ ಸಿಕ್ಕು ಬೇಗನೆ ಮುಕ್ಕಾಗುವಂಥವು. ಅವುಗಳ ಅಕ್ಷರಗಳೂ ಕೆಲವೊಮ್ಮೆ ತುಟಿತವಾಗಿರುವುದೂ ಉಂಟು. ಮೂಲ ಅಕ್ಷರಗಳಿಗೆ ಹಾನಿಯಾಗದಂತೆ ಆ ಪಠ್ಯವನ್ನು ಕಾಗದಕ್ಕೆ ವರ್ಗಾಯಿಸಿ ಓದಿ ಅರ್ಥೈಸಿ ತುಲನಾತ್ಮಕವಾಗಿ ವಿಶ್ಲೇಷಿಸಿ ಶುದ್ಧರೂಪದಲ್ಲಿ ಪ್ರಕಟಿಸಬೇಕು. ಆ ಕೆಲಸಕ್ಕೆ ವಿವಿಧ ಕಾಲಘಟ್ಟಗಳ ಕನ್ನಡ ಭಾಷಾ ಪರಿಚಯವಿರಬೇಕು. ಇಂದಿನ ರಮಾಲೆಯಲ್ಲಿ ಕಂಡುಬರದಂಥಹ ವಿಭಿನ್ನ ಅಕ್ಷರಗಳನ್ನು ಸರಿಯಾಗಿ ಗುರುತಿಸುವುದು ಮಾತ್ರವಲ್ಲ ಹಳಗನ್ನಡ ಮತ್ತು ಪೂರ್ವ ಹಳಗನ್ನಡದ ಮಧ್ಯೆ ಇರುವ ನಡುಗನ್ನಡದ ಭಾಷಾಬಂಧವನ್ನು ಅರಿತುಕೊಂಡು ಈ ಕೆಲಸ ಮಾಡಬೇಕಾಗುತ್ತದೆ. ರೈಸರು ಅಧ್ಯಯನದಲ್ಲಿ ಸಾಕಷ್ಟು ತೊಡಗಿಸಿಕೊಂಡದ್ದರಿಂದಲೇ ಅವರಿಂದ ಕರ್ನಾಟಕದ ಸವಾರ್ಂಗೀಣ ಇತಿಹಾಸವನ್ನು ರಚಿಸಲು ಸಾಧ್ಯವಾಯಿತು.
ಸುಮಾರು ಕ್ರಿ.ಶ. 1891ರಲ್ಲಿ ಬೆಂಗಳೂರಿನ ಪ್ರದೇಶವೊಂದರಲ್ಲಿ ರೋಮನ್ ನಾಣ್ಯಗಳು ದೊರೆತಾಗ ಕನ್ನಡನಾಡು ಮತ್ತು ರೋಮನ್ ಚಕ್ರಾಧಿಪತ್ಯದ ನಡುವಿನ ಕೊಳುಕೊಡುಗೆಯ ಕುರಿತಂತೆ ಪುಸ್ತಕವೊಂದನ್ನು ಪ್ರಕಟಿಸಿದರು. ಸಂಶೋಧನಾ ತಜ್ಞರಾಗಿದ್ದ ರೈಸ್ ಬರೆದ ಬರಹವೆಲ್ಲವೂ ಅನುಪಮ ಮೇಧಾಶಕ್ತಿಯಿಂದ
ಕೂಡಿದ್ದಾಗಿದ್ದು ವಿದ್ವತ್ ನೆಲೆಯಲ್ಲಿ ಉಚ್ಚಮಟ್ಟದಲ್ಲಿ ನಿಲ್ಲುವಂಥದ್ದಾಗಿವೆ ಮೈಸೂರು ಅಂಡ್ ಕರ ಇನ್ನಕ್ರೀಪ್ಸನ್ಸ್ ಎಂಬದು ಅವರ ಮಹೋನ್ನತ ಸಂಶೋಧನಾ ಕೃತಿ. ಕ್ರಿ.ಶ.1842-43ರಲ್ಲಿ ಬೆಂಗಳೂರಿನಲ್ಲಿ ಅಂದಿನ ಮೈಸೂರು ಯಾರವು ಸ್ಥಾಪಿಸಿದ ಮುದ್ರಣಾಲಯವನ್ನು ರೈಸರು ಈ ಶಾಸನಗಳ ಮತ್ತು ಹಳಗನ್ನಡ ಕಾವ್ಯಗಳ ಮುದ್ರಣಕ್ಕಾಗಿ ನವೀಕರಿಸಿದರೆಂಬುದು ವಿಶೇಷ ಅವರು ಮೈಸೂರು ಮತ್ತು ಕೊಡಗಿನ ವಿವರಗಳನ್ನೊಳಗೊಂಡ ಎರಡು ಗೆಝಟಿಯರ್ ಸಂಪುಟಗಳನ್ನು ಪ್ರಕಟಿಸಿದಾಗ ಆ ಕಾರ್ಯಕ್ಕಾಗಿ ಭಾರತ ಸರ್ಕಾರವು ಪ್ರಶಸ್ತಿ ನೀಡಿ ಗೌರವಿಸಿತು. ಈ ಗೆಝಟಿಯರ್ ಸಂಪುಟಗಳನ್ನು ನೋಡಿ ಪ್ರಭಾವಿತರಾದ ಡಬ್ಲ್ಯು ಡಬ್ಲ್ಯು ಹಂಟರ್ ಎಂಬುವರು ತಾವು ಸಂಪಾದಿಸಿದ್ದ ಇಂಪೀರಿಯಲ್ ಗೆಝಟಿಯರ್ ಸಂಪುಟಗಳಿಗೆ ಇವೆರಡನ್ನೂ ಸೇರಿಸಿಕೊಂಡರು. ಶಾಸನಗಳ ಅಧ್ಯಯನ ಮತ್ತು ಇತಿಹಾಸ ನಿರೂಪಣೆಯ ನೆವದಲ್ಲಿ ರೈಸರು ಭಾರತೀಯ ಇತಿಹಾಸ ಸಂಶೋಧನೆಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆಂಬುದನ್ನು ಅಲ್ಲಗಳೆಯುವಂತಿಲ್ಲ.
ಪುರಾತತ್ವ ನಿರ್ಧೆಶಕರಾಗಿದ್ದಾಗಲೇ ಒಂದು ವರ್ಷದಲ್ಲಿ 245 ದಿನಪ್ರವಾಸ ಮಾಡಿ 654 ಐತಿಹಾಸಿಕ ಪ್ರಾಮುಖ್ಯತೆ ಇರುವ ಪಟ್ಟಣ ಮತ್ತು ಗ್ರಾಮಗಳಿಗೆ ಭೇಟಿ ನೀಡಿದ್ದರು. ಇವರು ಬರಿ ಗೆಜೆಟಿಯರ್ ಮತ್ತು ಶಾಸನ ಸಂಪುಟಗಳ ರಚನೆಗೆ ಮಾತ್ರ ತಮ್ಮ ಆಸಕ್ತಿಯನ್ನು ಸೀಮಿತಗೊಳಿಸದೆ ಕನ್ನಡ ಹಸ್ತಪ್ರತಿಗಳ ಸಂಗ್ರಹಣ, ಸೂಚೀಕರಣ, ಹಾಗೂ ಸಂಪಾದನೆಯ ಕಡೆಗೂ ಗಮನ ಹರಿಸಿದ್ದರು. ಪುರಾತನ ಸಾಹಿತ್ಯದಲ್ಲೂ ಆಸಕ್ತಿ ತೋರಿದರು. ಸಾಹಿತ್ಯೋಪಾಸನೆಗೆ ಉಪಯುಕ್ತವಾದ “ಬಿಲ್ಲಿಯೋಥಿಕಾ ರಾಟಿಕಾ” ಎಂಬ ಗ್ರಂಥ ಮಾಲೆ ಪ್ರಾರಂಭಿಸಿ, ಅದರಲ್ಲಿ ‘ಪಂಪ ರಾಮಾಯಣ, ರಾಟಕ ಭಾಷಾಭೂಷಣ, ಪಂಪಭಾರತ, ಶಬ್ದಾನುಶಾಸನ, ಅಮರಕೋಶ, ಕವಿರಾಜಮರ ಮೊದಲಾದ ಕೃತಿಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಮತ್ತು ಇತಿಹಾಸ ಅಧ್ಯಯನಕ್ಕೆ ಈ ಕೃತಿಗಳು ಅಡಿಪಾಯ ಹಾಕಿದವು. ಅವರು ತಮ್ಮ 70ನೇ ವಯಸ್ಸಿನಲ್ಲಿ ನಿವೃತ್ತರಾಗಿ ಇಂಗ್ಲೆಂಡಿಗೆ ಹೋಗಿ ಹ್ಯಾರೋದಲ್ಲಿ ನೆಲಸಿದರು. ಅಲ್ಲಿಯೂ ಕನ್ನಡ ಸೇವೆ ಮುಂದುವರಿಸಿದರು. ನಿವೃತ್ತರಾದ ಮೂರುರದ ನಂತರ ತಮ್ಮ ಅಧ್ಯಯನದ ಫಲವಾದ “ಮೈಸೂರು ಅಂಡ್ ಕೂರ್ಗ್ ಇನ್ನಿಷನ್ಸ್” ಕೃತಿ ಪ್ರಕಟಿಸಿದರು. ಅದನ್ನು ದಕ್ಷಿಣ ಸ್ನಾಟಕದ ಅಧಿಕೃತ ಚಾರಿತ್ರಿಕ ಕೃತಿ ಎನ್ನಬಹುದು. ತಮ್ಮ 78ನೇ ವಯಸ್ಸಿನಲ್ಲೂ “ಎಪಿಗ್ರಾಫಿಯಾ ಕರ್ನಾಟಕದ” ದ ಮೊದಲನೆ ಸಂಪುಟವನ್ನು ಭಾರತ ಯಾರದ ಮನವಿಯ ಮೇರೆಗೆ ಪರಿಷ್ಕರಿಸಿ ಕೊಟ್ಟರು. ಲಂಡನ್ ವಿಶ್ವವಿದ್ಯಾಲಯ ಕನ್ನಡ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯನ್ನು ಅವರೇ ಸಿದ್ಧಪಡಿಸಿ ನಂತರ ಉತ್ತರ ಪತ್ರಿಕೆಗಳನ್ನೂ ಮೌಲ್ಯಮಾಪನ ಮಾಡುತಿದ್ದರು. ಅವರು ತಮ್ಮ ಕೆಲಸ ಮುಂದುವರಿಸಿದ ತಮ್ಮ ಆತ್ಮೀಯ ಶಿಷ್ಯ ಆರ್. ನರಸಿಂಹಾಚರ ಜೊತೆ ಸತತ ಸಂಸ್ಕದಲ್ಲಿದ್ದರು. 1923 ರಲ್ಲಿ ಬರೆದ ಪತ್ರದಲ್ಲಿ ಮೈಸೂರಿನ ಬಗೆಗಿನ ತಮ್ಮ ಅತೀವ ಅಭಿಮಾನವನ್ನು ವ್ಯಕ್ತ ಪಡಿಸಿ ಎಲ್ಲ ಪರಿಚಿತರ ಬಗ್ಗೆ ವಿಚಾರಿಸಿದ್ದರು. ಇಂಪೀರಿಯಲ್ ಗೆಝಟಿಯರ್ ಸಂಪುಟಗಳಿಗೆ ಇವೆರಡನ್ನೂ ಸೇರಿಸಿಕೊಂಡರು. ಶಾಸನಗಳ ಅಧ್ಯಯನ ಮತ್ತು ಇತಿಹಾಸ ನಿರೂಪಣೆಯ ನೆವದಲ್ಲಿ ರೈಸರು ಭಾರತೀಯ ಇತಿಹಾಸ ಸಂಶೋಧನೆಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆಂಬುದನ್ನು ಅಲ್ಲಗಳೆಯುವಂತಿಲ್ಲ.
ಮರಣ.
ಈ ವಿದೇಶಿ” ಕನ್ನಡಿಗನಿಗೆ ಅಧುನಿಕ ಕನ್ನಡ ಋಣಿಯಾಗಿದೆ. 90 ವರ್ಷದ ತುಂಬು ಜೀವನ ನಡೆಸಿ 1927ರಲ್ಲಿ ಜುಲೈ 10 ರಂದು ನಿಧನರಾದರು. ಇವರ ಹೆಸರು ಕರ್ನಾಟಕದ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿದೆ. ಬೆಂಗಳೂರು ಮಹಾನಗರಪಾಲಿಕೆಯು ಸೆಂಟ್ ಥಾಮಸ್ ಟೌನ್ ಪ್ರದೇಶವನ್ನು ಬಿ ಎಲ್ ರೈಸ್ ನಗರವೆಂದು ಘೋಷಿಸಿದೆ.
ಕೃತಿಗಳು.
1. ಮೈಸೂರು: ಶಾಸನಗಳು 10 ಸಂಪುಟಗಳು
2. ಬಿಬ್ಲಿಯೋಥಿಕಾ ಕರ್ನಾಟಕ ಮಾಲೆ
3. ಎಪಿಗ್ರಾಫಿಯಾ ರಾಟಕ, ಸಂಪುಟಗಳು (1886)
4. ಮೈಸೂರು ಅಂಡ್ ಕೂರ್ಗ ಪ್ರಮ್ ದಿ ಇನ್ನಿಪ್ಪನ್ಸ್
5. ಶ್ರವಣಬೆಳಗೊಳ: ಶಾಸನಗಳ ಸಂಪುಟ (1889)
6. ಮೈಸೂರು ಗೆಜೆಟಿಯರ್ (ಸಂಪಾದಕರು)
7. ಇಂಪೀರಿಯಲ್ ಗೆಜೆಟಿಯರ್ (ಸಂಪಾದಕ)