EPFO Recruitment: ಭವಿಷ್ಯ ನಿಧಿ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗ, ಉದ್ಯೋಗ ಆಕಾಂಕ್ಷಿಗಳು ಗಮನಿಸಿ-2025.
EPFO Recruitment:ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಉದ್ಯೋಗಾಕಾಂಕ್ಷಿಗಳನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಭರ್ಜರಿ ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸುವಂತೆ ಅಧಿಸೂಚನೆ ಪ್ರಕಟಿಸಲಾಗಿದೆ.
EPFO ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಒಟ್ಟು 25 ಹುದ್ದೆಗಳು ಖಾಲಿ ಇವೆ. ಉಪ ನಿರ್ದೇಶಕ (ವಿಜಿಲೆನ್ಸ್) ಹಾಗೂ ಸಹಾಯಕ ನಿರ್ದೇಶಕ (ವಿಜಿಲೆನ್ಸ್) ಹುದ್ದೆಗಳು ಇದ್ದು, ಅರ್ಹರಿಂದ ಅರ್ಜಿ ಕರೆದಿದೆ. ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
EPFO ಕಚೆರಿಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ಮಾರ್ಚ್ 29ರೊಳಗೆ ಸರ್ಕಾರದ ಅಧಿಕೃತ ವೆಬ್ಸೈಟ್ https://www.epfindia.gov.in/ ಗೆ ಭೇಟಿ ನೀಡಬೇಕು. ನಿಮಗೆ ಗೊತ್ತಿರಲಿ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಅಭ್ಯರ್ಥಿಗಳನ್ನು ಖಾಲಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಿದೆ. ಮಾಸಿಕವಾಗಿ ಸೂಕ್ತ ವೇತನ ಸಹ ನೀಡಲಿದೆ.
EPFO Recruitment: ನೇಮಕಾತಿ ಪೂರ್ಣ ಮಾಹಿತಿ.
• ನೇಮಕಾತಿ ಸಂಸ್ಥೆ ಹೆಸರು-EPFO
• ಒಟ್ಟು ಹುದ್ದೆಗಳೂ- 25
• ಅರ್ಜಿ ಸಲ್ಲಿಕೆ ವಿಧಾನ- ಅಂಚೆ ಮೂಲಕ
• ಅರ್ಜಿ ಸಲ್ಲಿಕೆ ಕೊನೆ ದಿನ- ಮಾರ್ಚ್ 29
• ಪೋಸ್ಟಿಂಗ್- ದೆಹಲಿ
• ಮಾಸಿಕ ವೇತನ- ನಿಯಮಾನುಸಾರ 56 ವರ್ಷ
• ಶೈಕ್ಷಣಿಕ ಅರ್ಹತೆ- ಅಧಿಸೂಚನೆ ಪ್ರಕಾರ ಅರ್ಹತೆ, ಕಾರ್ಯಾನುಭವ(EPFO).
ಮಾಸಿಕ ವೇತನ ವಿವರ.
• ಉಪ ನಿರ್ದೇಶಕ (ವಿಜಿಲೆನ್ಸ್) ಹುದ್ದೆಗೆ ಮಾಸಿಕ ರೂ.15600 ನಿಂದ 39100 ರೂಪಾಯಿ (+ ಗ್ರೇಡ್ ಪೇ 6600 ರೂ.)
• ಸಹಾಯಕ ನಿರ್ದೇಶಕ (ವಿಜಿಲೆನ್ಸ್) ಹುದ್ದೆಗೆ ಆಯ್ಕೆ ಆದರೆ ಮಾಸಿಕ ರೂ.15600 ರಿಂದ 39100 ರೂ. (+ ಗ್ರೇಡ್ ಪೇ 5400).
ಅಭ್ಯರ್ಥಿಗಳ ಗರಿಷ್ಠ ವಯೋಮಿತಿ.
ಇಪಿಎಫ್‌ಓ(EPFO)ನೇಮಕಾತಿ ಅಧಿಸೂಚನೆ ಪ್ರಕಾರ, ಈ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರ ಗರಿಷ್ಠ ವಯಸ್ಸು 56 ವರ್ಷದ ಒಳಗೆ ಇರಬೇಕು. ಇದೇ ತಿಂಗಳ ಮಾರ್ಚ್ 15ಕ್ಕೆ ನಿಗದಿತ ವಯಸ್ಸು ಆಗಿರಬೇಕು.(EPFO)
EPFO Recruitment:ಅರ್ಜಿ ಸಲ್ಲಿಕೆ ವಿಧಾನ.
ಸಂಸ್ಥೆಯ ಅಧಿಕೃತ ವೆಬ್ಸೈಟ್ https://www.epfindia.gov.in/ ಗೆ ಭೇಟಿ ನೀಡಬೇಕು. ಅಲ್ಲಿ ದೊರೆಯುವ ಅರ್ಜಿ ಭರ್ತಿ ಮಾಡಿ, ಸೂಕ್ತ ದಾಖಲೆ ಲಗತ್ತಿಸಬೇಕು. ನಂತರ ಅದರ ಪ್ರತಿ ಪಡೆದು ಇಲ್ಲಿರುವ ”ಶ್ರೀ ದೀಪಕ್ ಆರ್ಯ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು-II (ನೇಮಕಾತಿ/ಪರೀಕ್ಷಾ ವಿಭಾಗ), ಪ್ಲೇಟ್ A, ನೆಲ ಮಹಡಿ, ಬ್ಲಾಕ್ II, ಪೂರ್ವ ಕಿದ್ವಾಯಿ ನಗರ, ನವದೆಹಲಿ – 110023” ಇಲ್ಲಿಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ. epfindia.gov.in ವೆಬ್ಸೈಟ್ ಗೆ ಭೇಟಿ ಕೊಡಿ.(EPFO)