INTRODUCTION TO INDIA:ಭಾರತದ ಪರಿಚಯ(INTRODUCTION TO INDIA) ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ-2025.

INTRODUCTION TO INDIA:ಭಾರತದ ಪರಿಚಯ(INTRODUCTION TO INDIA) ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ-2025.

INTRODUCTION TO INDIA

 

INTRODUCTION TO INDIA:ಭಾರತದ ಪರಿಚಯ(INTRODUCTION TO INDIA) ಮುಂಬರುವ ಎಲ್ಲಾ ಕೇಂದ್ರ ಮತ್ತು ರಾಜ್ಯಗಳಲ್ಲಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ-2025.

1. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು     ಪರಸ್ಪರ ಯಾವುದರಿಂದ ಬೇರ್ಪಡಿಸಲಾಗಿದೆ ?

1) 10° ಚಾನೆಲ್

2) ಗ್ರೇಟ್ ಚಾನೆಲ್

3) ಬಂಗಾಳ ಕೊಲ್ಲಿ

4) ಅಂಡಮಾನ್ ಸಮುದ್ರ

ಉತ್ತರ: (1)

=>(1) ಅಂಡಮಾನ್ & ನಿಕೋಬಾರ್ ದ್ವೀಪ (ಅಂಡಮಾನ್ ಮತ್ತು ನಿಕೋಬಾರ್‌ನ್ನು ಬೇರ್ಪಡಿಸುವುದು 10′ ಚಾನೆಲ್) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ (ಕೇಂದ್ರಾಡಳಿತ ಪ್ರದೇಶ) ರಾಜಧಾನಿ – ಪೋರ್ಟ್‌ಪ್ಲೇರ್ (Porthlair), ಭಾರತಕ್ಕೆ ಸೇರಿರುವ ಒಟ್ಟು 247 ದ್ವೀಪಗಳಿವೆ.

204 ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ.

 •ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ & ನಿಕೋಬಾರ್ ದ್ವೀಪಗಳು ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದ ಕೂಡಿದೆ.

 • ಭಾರತದ ಅತ್ಯಂತ ದಕ್ಷಿಣ ತುದಿ ನಿಕೋಬಾರ್ ದ್ವೀಪದಲ್ಲಿರುವ ಇಂದಿರಾ ಪಾಯಿಂಟ್.

ಅಂಡಮಾನ್ & ಲಿಟಲ್ ಅಂಡಮಾನ್ ಡಂಕನ್ ಪ್ಯಾಸೇಜ್ (Duncan Passage)ಬೇರ್ಪಡಿಸುವುದು.

————————————

2. ಭಾರತದ ಅತ್ಯಂತ ದಕ್ಷಿಣದ ತುದಿ ಯಾವುದು?

 1) ಕೇಪ್ ಕೊಮೊರಿನ್ (ಕನ್ಯಾಕುಮಾರಿ)

 2) ಪಾಯಿಂಟ್ ಕ್ಯಾಲಿಮೆರೆ

 3) ನಿಕೋಬಾರ್‌ನ ಇಂದಿರಾ ಪಾಯಿಂಟ್

 4) ತಿರುವನಂತಪುರಂನ ಕೋವಲಂ

 ಉತ್ತರ: (3)

=>(3) ಭಾರತದ ದಕ್ಷಿಣದ ತುದಿ:

  ನಿಕೋಬಾರ್ ದ್ವೀಪದ 6° 45′ ಉತ್ತರ ಅಕ್ಷಾಂಶದಲ್ಲಿರುವ “ಇಂದಿರಾ ಪಾಯಿಂಟ್” (ಪಿಗ್ಗೇಲಿಯನ್ ಪಾಯಿಂಟ್) ಭಾರತದ ಅತ್ಯಂತ ದಕ್ಷಿಣ ತುದಿಯಾಗಿದೆ. ಈ ಬಿಂದುವನ್ನು ಈ ಹಿಂದೆ ‘ಲಾ-ಹಿ-ಚಿಂಗ್’, ಪಿಗ್ದಾಲಿಯನ್ ಪಾಯಿಂಟ್ ಮತ್ತು ಪಾರ್ಸನ್ ಪಾಯಿಂಟ್ ಎಂದು ಕರೆಯಲಾಗುತ್ತಿತ್ತು.

1980ರ ದಶಕದ ಮಧ್ಯಭಾಗದಲ್ಲಿ ಇಂದಿರಾ ಗಾಂಧಿಯವರ ಗೌರವಾರ್ಥವಾಗಿ ಇದನ್ನು ಮರು ನಾಮಕರಣ ಮಾಡಲಾಯಿತು.

ಜಮ್ಮು & ಕಾಶ್ಮೀರ ಇಂದಿರಾ ಕೋಲ್ ಭಾರತದ (37°6′ ಉತ್ತರ ಅಕ್ಷಾಂಶ) ಅತ್ಯಂತ ಉತ್ತರ ತುದಿಯಾಗಿದೆ.

ಪೂರ್ವತುದಿ ಅರುಣಾಚಲ ಪ್ರದೇಶದಲ್ಲಿ ಬರುವ “ಕಿಬಿತು-97°25”

ಪಶ್ಚಿಮ ತುದಿ – ಗುಜರಾತ್‌ನ ಗುಹಾರ್ ಮುತ್ತು (68°7’E ರೇಖಾಂಶ)

————————————————–

3. ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕರಾವಳಿ  ಪ್ರದೇಶವನ್ನು ಏನೆಂದು ಕರೆಯಲಾಗುತ್ತದೆ.

1) ಕೊಂಕಣ

2) ಕೋರಮಂಡಲ್

3) ಪೂರ್ವ ಕರಾವಳಿ

4) ಮಲಬಾರ್ ಕರಾವಳಿ

ಉತ್ತರ: (2)

=> ಕೋರಮಂಡಲ್

  ಗುಜರಾತ್ – ಗುಜರಾತ್ ತೀರ

ಗೋವಾ & ಮಹಾರಾಷ್ಟ್ರ – ಕೊಂಕಣತೀರ

ಕರ್ನಾಟಕ – ಕರ್ನಾಟಕ ಅಥವಾ ಕೆನಡಾ

ಕೇರಳ – ಮಲಬಾರ್ ತೀರ

ತಮಿಳುನಾಡು & ಆಂಧ್ರಪ್ರದೇಶ -ಕೋರಮಂಡಲ ತೀರ

ಒಡಿಶಾ & ಪಶ್ಚಿಮ ಬಂಗಾಳ – ಉತ್ಕಲ ತೀರ

————————————

 

4. ಭಾರತದ ಅತಿ ಎತ್ತರ ಪ್ರಸ್ಥಭೂಮಿ ಯಾವುದು?

1) ಮಾಳ್ವ

2) ಛೋಟಾ ನಾಗ್ಪುರ

3) ಲಡಾಖ್

4) ದಖ್ಖನ್

ಉತ್ತರ: (3)

=>(3) ” ಲಡಾಖ್ “ ಭಾರತದಲ್ಲಿ ಅತಿ ಎತ್ತರದ ಪ್ರಸ್ಥಭೂಮಿ

ಉತ್ತರದ ಪರ್ವತಗಳು ಪ್ರಾಕೃತಿಕ ವಿಭಾಗದಲ್ಲಿ ಕಂಡುಬರುವ ಮಹಾಹಿಮಾಲಯ (ಹಿಮಾದ್ರಿ) ದಲ್ಲಿರುವ ‘ಲಡಾಖ್’ ಪ್ರಸ್ಥಭೂಮಿಯು ಭಾರತದ ಅತಿ ಎತ್ತರದ ಪ್ರಸ್ಥಭೂಮಿಯಾಗಿದೆ.

ಪರ್ಯಾಯ ಪ್ರಸ್ಥಭೂಮಿಯು ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು.

—————————————————-

 5. ಸಿಯಾಚಿನ್ ಹಿಮನದಿ ಈ ಕೆಳಗಿನ ಯಾವ ಕಣಿವೆಯ ಸಮೀಪದಲ್ಲಿದೆ?

1) ನುಬ್ರಾ ವ್ಯಾಲಿ

2) ಡೂನ್ ವ್ಯಾಲಿ

3) ಸೈಲೆಂಟ್ ವ್ಯಾಲಿ

4) ನೀಲಂ ವ್ಯಾಲಿ

ಉತ್ತರ:(1)

=> ನುಬ್ರಾ ವ್ಯಾಲಿ

ಸಿಯಾಚಿನ್ ಹಿಮನದಿ ಹಿಮಾಲಯದ ಪೂರ್ವ ಕಾರಕೊರಂ ಶ್ರೇಣಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆಯು ಕೊನೆಗೊಳ್ಳುವ ಬಿಂದುವಿನ ಈಶಾನ್ಯದಲ್ಲಿದೆ. ಪ್ರಸ್ತುತ ಇದು ಲಡಾಖ್ ಕೇಂದ್ರಾಡಳಿತ ಪ್ರದೇಶದ ಭಾಗವಾಗಿದೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿದ್ದು, 31ನೇ ಅಕ್ಟೋಬರ್, 2019ರಂದು.

____________________________

6. ‘ಲೋಕ್ಟಕ್’ ಒಂದು :

1) ಕಣಿವೆ

2) ಸರೋವರ

3) ನದಿ

4) ಪರ್ವತ ಶ್ರೇಣಿ

ಉತ್ತರ: (2)

=>  ಲೋಕ್ಟಕ್ ಸರೋವರ

 

ತೇಲುವ ಸರೋವರವಾಗಿದ್ದು, ಮಣಿಪುರದಲ್ಲಿದೆ. ಇದು ಈಶಾನ್ಯ ಭಾರತದ ಅತಿ ದೊಡ್ಡ ಸಿಹಿನೀರಿನ ಸರೋವರವಾಗಿದೆ.

ಕೈಬುಲ್ ಲಾಮಾವೊ ರಾಷ್ಟ್ರೀಯ ಉದ್ಯಾನವನವು (Keibul Lamjan National Park) ಲೋಕ್ಟಕ್ ಸರೋವರದ ಆಗ್ನೆಯ ತೀರದಲ್ಲಿದೆ.

ಇದು ವಿಶ್ವದ ಏಕೈಕ ತೇಲುವ ರಾಷ್ಟ್ರೀಯ ಉದ್ಯಾನವನವಾಗಿದೆ.

ಅಳಿವಿನಂಚಿನಲ್ಲಿರುವ ಸಂಖ್ಯೆ ಜಿಂಕೆಗಳ (Sangaideer) ಕೊನೆಯ ನೈಸರ್ಗಿಕ ಆಶ್ರಯವಾಗಿದೆ.

————————————————-

7. ಈ ಕೆಳಗಿನ ಯಾವ ರಾಜ್ಯವು ಅತಿ ಉದ್ದದ ಕರಾವಳಿಯನ್ನು ಹೊಂದಿದೆ?

1) ಮಹಾರಾಷ್ಟ್ರ

2) ತಮಿಳುನಾಡು

3) ಗುಜರಾತ್

4) ಆಂಧ್ರಪ್ರದೇಶ

ಉತ್ತರ: (3)

=> ಗುಜರಾತ್ 

ಗುಜರಾತ್ -1214.7  ಕಿ.ಮೀ

ಆಂಧ್ರಪ್ರದೇಶ – 973.7 ಕಿ.ಮೀ

ತಮಿಳುನಾಡು – 906.9 ಕಿ.ಮೀ.

 ಮಹಾರಾಷ್ಟ್ರ – 652.6 ಕಿ.ಮೀ

•  ಕೇರಳ -569.7 ಕಿ.ಮೀ

 ಓಡಿಶಾ – 476.4 ಕಿ. ಮೀ

•  ಕರ್ನಾಟಕ -280  ಕಿ.ಮೀ

 ಪಶ್ಚಮ ಬಂಗಾಳ -157.5 ಕಿ.ಮೀ

ಗೋವಾ -101  ಕಿ.ಮೀ

ಪುದುಚರಿ – 47.6 ಕಿ.ಮೀ

•  ಲಕ್ಷದ್ವೀಪ -132  ಕಿ.ಮೀ

• ಅಂಡಮಾನ್& ನಿಕೋಬಾರ್ – 1962 ಕಿ.ಮೀ

•  ದಾದ್ರಾ ನಗರ ಹವೇಲಿ ಮತ್ತು ದಿಯು ಮತ್ತು ದಾಮನ್   -42.50 ಕಿ.ಮೀ.

ಕರ್ನಾಟಕದ ಕರಾವಳಿ ತೀರ- ದಕ್ಷಿಣದಲ್ಲಿ ಮಂಗಳೂರಿನಿಂದ . ಉತ್ತರದಲ್ಲಿ ಕಾರವಾರದವರೆಗೆ 320 ಕಿ.ಮೀ. ಉದ್ದ, 12-64 ಕಿ.ಮೀ ಅಗಲವಾಗಿದೆ.

—————————————————

 8. ಹಿಮಾಚಲ ಪ್ರದೇಶದಲ್ಲಿ ಇರುವ ಪಾಸ್ ಯಾವುದು?

1) ಶಿಷ್ಕಲಾ

2) ಜೋಜಿಲಾ

3) ನಾಥುಲಾ

4) ಜೆಲೆಪ್ಲಾ

ಉತ್ತರ: (1)

=> ಶಿಷ್ಕಲಾ

 

(1) ಹಿಮಾಚಲ ಪ್ರದೇಶದಲ್ಲಿರುವ ಕಣಿವೆಮಾರ್ಗ – ಶಿಷ್ಕಲಾ ಪಾಸ್

ಹಿಮಾಚಲ ಪ್ರದೇಶದಲ್ಲಿ ಬರುವ ಪ್ರಮುಖ ಪಾಸ್‌ಗಳು

•ಶಿಷ್ಕಲಾ ಪಾಸ್: ಇದು ಹಿಮಾಚಲ ಪ್ರದೇಶ ಮತ್ತು ಟಿಬೆಟ್ (ಚೀನಾ) ವನ್ನು ಸಂಪರ್ಕಿಸುತ್ತದೆ. ಸಟ್ಲಜ್ ನದಿಯು ಟಿಬೇಟ್‌ನಿಂದ ಭಾರತಕ್ಕೆ ಈ ಪಾಸ್ ಮಾರ್ಗವಾಗಿ ಹರಿಯುತ್ತದೆ.

ಬಾರಾಲಚಲಾ ಪಾಸ್ (Bara Lacha La Pass): ಇದು ಲೇಪ್‌ನಿಂದ ಮನಾಲಿ ಮಾರ್ಗವಾಗಿ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡುಬರುತ್ತದೆ.

•  ರೊಹ್ವಾಂಗ್ ಪಾಸ್ (Rohtang Pass) : ಇದು ಹಿಮಾಲಯದ ಪೀರ್ ಪಂಜಾಲ್ ಶ್ರೇಣಿಯ ಪೂರ್ವ ತುದಿಯಲ್ಲಿರುವ ಎತ್ತರದ ಪರ್ವತ ಮಾರ್ಗವಾಗಿದೆ. ಇದು ಕುಲುಕಣಿವೆಯನ್ನು ಲಾಹೌಲ ಮತ್ತು ಸ್ಥಿತಿ ಕಣಿವೆಗಳೊಂದಿಗೆ ಸಂಪರ್ಕಿಸುತ್ತದೆ.

ವಿಶೇಷತೆ : ಅಟಲ್ ಸುರಂಗವನ್ನು (ರೊಹ್ವಾಂಗ್ ಟನಲ್) ರೊಹ್ವಾಂಗ್ ಪಾಸ್‌ನಲ್ಲಿ ನಿರ್ಮಿಸಲಾಗಿದೆ.

______________________________

9. ವಿಶ್ವದ ಅತಿದೊಡ್ಡ ನದಿ ದ್ವೀಪವಾದ ಮಜೂಲಿ ಯಾವ ರಾಜ್ಯದಲ್ಲಿದೆ?

1) ಅರುಣಾಚಲ ಪ್ರದೇಶ

2) ಅಸ್ಸಾಂ

3) ತ್ರಿಪುರ

4) ಮಿಜೋರಾಂ

ಉತ್ತರ: (2)

=> ಅಸ್ಸಾಂ

  ಅಸ್ಸಾಂ :ಮಜೂಲಿದ್ವೀಪ : ಇದು ಅಸ್ಸಾಂನಲ್ಲಿ ಹರಿಯುವ ಬ್ರಹ್ಮಪುತ್ರ ನದಿಗೆ ಸೃಷ್ಟಿಯಾಗಿದೆ. ಇದು 2016ರಲ್ಲಿ ಭಾರತದಲ್ಲಿ ಜಿಲ್ಲೆಯಾಗಿ ಮಾಡಿದ ಮೊದಲ ದ್ವೀಪವಾಗಿದೆ. (8 ಸಪ್ಟೆಂಬರ್ 2016ರಂದು ಔಪಚಾರಿಕವಾಗಿ ಜಿಲ್ಲೆಯೆಂದು ಘೋಷಣೆ) ಇಲ್ಲಿ ಕಂಡುಬರುವ ಜನಾಂಗೀಯ

 ಗುಂಪು : ಮಿಶಿಂಗ್, ದಿಯೋರಿ, ಸೋನೋವಾಲ್ ಕಚಾರಿಸ್, ಚುಟಿಯಾ.

_______________________________

10. ಥಾರ್ ಎಕ್ಸ್‌ಪ್ರೆಸ್ ಹಾದು ಹೋಗುವುದು ______

1) ಅಫ್ಘಾನಿಸ್ತಾನ

2) ಬಾಂಗ್ಲಾದೇಶ

3) ಪಾಕಿಸ್ತಾನ

4) ಮಯನ್ಮಾರ್

ಉತ್ತರ: (3)

 

• ಥಾರ್ ಎಕ್ಸ್‌ಪ್ರೆಸ್ : ಅಂತರಾಷ್ಟ್ರೀಯ ಪ್ರಯಾಣಿಕ ರೈಲು. ಭಾರತದ ರಾಜಸ್ಥಾನದ ಜೋಧಪುರದ ಭಗತ್ ಕಿ ಕೋಠಿಯಿಂದ ಪಾಕಿಸ್ತಾನ ಪ್ರಾಂತ್ಯದ ಸಿಂದ್‌ ನಲ್ಲಿರುವ ಕರಾಚಿಯ ಕರಾಚಿ ಕಂಟೋನ್ಸೆಂಟ್ ನಡುವೆ ಚಾಲ್ತಿಯಲ್ಲಿತ್ತು.

• ಸಂಜೋತಾ ಎಕ್ಸ್‌ಪ್ರೆಸ್: ಭಾರತ ಮತ್ತು ಪಾಕಿಸ್ತಾನ

ಮೈತ್ರಿ ಎಕ್ಸ್‌ಪ್ರೆಸ್: ಭಾರತದ ಕೋಲ್ಕತ್ತಾದಿಂದ ಬಾಂಗ್ಲಾದೇಶದ ಢಾಕಾ ಮಧ್ಯೆ.

ಬಂಧನ್ ಎಕ್ಸ್‌ಪ್ರೆಸ್ : ಕೊಲ್ಕತ್ತಾದಿಂದ ಬಾಂಗ್ಲಾದೇಶದ ಖುಲ್ನಾವರೆಗೆ.

_______________________________

INTRODUCTION TO INDIA:ಭಾರತದ ಪರಿಚಯ(INTRODUCTION TO INDIA) ಕನ್ನಡದಲ್ಲಿ ವಿವರಣೆ ಸಹಿತ ಮಾಹಿತಿ-2025.

INTRODUCTION TO INDIA

11. ಕಾಂಚನಜುಂಗಾ ಎಲ್ಲಿ ಕಂಡುಬರುತ್ತದೆ ?

1) ನೇಪಾಳ

2) ಸಿಕ್ಕಿಂ

3) ಪಶ್ಚಿಮ ಬಂಗಾಳ

4) ಹಿಮಾಚಲ ಪ್ರದೇಶ

ಉತ್ತರ: (2)

=> ಸಿಕ್ಕಿಂ

ಭಾರತದ ಸಿಕ್ಕಿಂ ರಾಜ್ಯದಲ್ಲಿ ಕಂಡುಬರುವ ಕಾಂಚನ ಜುಂಗಾ ವಿಶ್ವದ 3ನೇ ಅತಿ ಎತ್ತರದ ಪರ್ವತವಾಗಿದೆ. ಇದು 8598 ಮೀಟರ್ ಎತ್ತರವಾಗಿದೆ.

ಇದು, ಮಹಾಹಿಮಾಲಯ (ಹಿಮಾದ್ರಿ) ಸರಣಿಗಳಲ್ಲಿ ಕಂಡುಬರುತ್ತದೆ.

ಮೌಂಟ್ ಎವರೆಸ್ಟ್ ಶಿಖರ-8848 ಮೀ (ನಿಖರವಾಗಿ 8848.86 ಮೀ)

ಗಾಡ್ರಿನ್ ಆಸ್ಟಿನ್ ಅಥವಾ K-8611 ಮೀಟರ್ (ಭಾರತದಲ್ಲಿ ಅತಿ ಎತ್ತರವಾದ ಶಿಖರವಾಗಿದೆ. POK).

______________________________

12. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಅತಿ ಎತ್ತರದ ಶಿಖರ ಯಾವುದು?

1) ಮೌಂಟ್ ಕೋಯಾ

2) ಮೌಂಟ್ ಡಿಯಾವೊಲೊ

3) ಸ್ಯಾಡಲ್ ಶಿಖರ

4) ಮೌಂಟ್ ಥುಯಿಲ್ಲರ್

ಉತ್ತರ: (3)

=> ಸ್ಯಾಡಲ್ ಶಿಖರ

ಅತಿ ಎತ್ತರದ ಶಿಖರ ಸ್ಯಾಡಲ್ ಶಿಖರ – 738 ಮೀ ಇದರ ಎತ್ತರ (NCERT)

ಮೌಂಟ್ ದಿಯಾವೋಲೋ – ಮಧ್ಯ ಅಂಡಮಾನ್ – 515 ಮೀಟರ್

ಮೌಂಟ್ ಕೊಯೋಬೋ (Koyobo) – ದಕ್ಷಿಣ ಅಂಡಮಾನ್ – 460 ಮೀಟರ್

ಮೌಂಟ್ ಹ್ಯಾರಿಯಟ್ (Harriet) ದಕ್ಷಿಣ ಅಂಡಮಾನ್   -450 ಮೀಟರ್

ಮೌಂಟ್ ಥುಯಿಲ್ಲರ್ (Mt. Thullier) – ಗ್ರೇಟ್ ನಿಕೋಬಾರ್ 642 ಮೀಟರ್

ಮುಂದುವರಿಯುತ್ತದೆ……..

 

 

 

 

 

 

 

 

WhatsApp Group Join Now
Telegram Group Join Now