RTE: 2025- 26ನೇ ಶೈಕ್ಷಣಿಕ ಸಾಲಿಗೆ RTE ಅಡಿ ಪ್ರವೇಶಾತಿ ಅರ್ಜಿಗೆ ವೇಳಾಪಟ್ಟಿ ಪ್ರಕಟ.

RTE: 2025- 26ನೇ ಶೈಕ್ಷಣಿಕ ಸಾಲಿಗೆ RTE ಅಡಿ ಪ್ರವೇಶಾತಿ ಅರ್ಜಿಗೆ ವೇಳಾಪಟ್ಟಿ ಪ್ರಕಟ.

RTE

RTE Karnataka Admission 2025-26 Application Open Date: ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಣ ಹಕ್ಕು ಕಾಯ್ದೆ (RTE) ಮೂಲಕ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶಕ್ಕೆ ಸಂಬಂಧ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಹಲವಾರು ಮಾರ್ಗಸೂಚಿಗಳು, ಅರ್ಹತೆಗಳ ವಿವರ, ಇದಕ್ಕೆ ಬೇಕಾದ ಮಾಹಿತಿಗಳನ್ನು ಸಹ ತಿಳಿಸಲಾಗಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಪ್ರಮುಖ ವೇಳಾಪಟ್ಟಿ ಇಲ್ಲಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

ಅಲ್ಪಸಂಖ್ಯಾತವಲ್ಲದ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ LKG ಮತ್ತು 1ನೇ ತರಗತಿಯಿಂದ 8ನೇ ತರಗತಿವರೆಗೆ, 2025-26ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆ-2009 ರ ಸೆಕ್ಷನ್ 12(1) (ಬಿ) ಮತ್ತು ಸೆಕ್ಷನ್ 12 (1) (ಸಿ) ಅಡಿ ಪ್ರವೇಶ ಪ್ರಕ್ರಿಯೆಗೆ ಸಂಬಂಧ, ಇದೀಗ ಮಾರ್ಗಸೂಚಿ, ವೇಳಾಪಟ್ಟಿ ಸಹಿತ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಆರ್‌ಟಿಇ( RTE) ಅಡಿ ಪ್ರವೇಶ ಪಡೆಯಲು ಬಯಸಿದಲ್ಲಿ, ಈ ಮಾಹಿತಿಗಳನ್ನು ತಪ್ಪದೇ ಓದಿಕೊಳ್ಳಿ.

ಅನುದಾನಿತ ಶಾಲೆಗಳು ಸೇರಿದಂತೆ RTE ಅಡಿ ದಾಖಲಾತಿ ಕೋರಿ ಪೋಷಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೆಳಗಿನಂತೆ ದಿನಾಂಕಗಳನ್ನು ನಿಗದಿ ಮಾಡಲಾಗಿದೆ.

• ನೆರೆಹೊರೆ ಶಾಲೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೊನೆ ದಿನಾಂಕ-03-04-2025.
• ಆರ್‌ಟಿಇ(RTE) ಪ್ರವೇಶಕ್ಕೆ ಅರ್ಜಿ ಸ್ವೀಕಾರಕ್ಕೆ ನಿಗದಿಪಡಿಸಿದ ಆರಂಭಿಕ ದಿನಾಂಕ-15-04-2025.
•  EID ಮೂಲಕ ಸಲ್ಲಿಸಿದ ಅರ್ಜಿಗಳ ದತ್ತಾಂಶದ ನೈಜತೆ ಪರಿಶೀಲನೆ-ಏಪ್ರಿಲ್ 16 ರಿಂದ ಮೇ 14, 2025.
•ವಿಶೇಷ ಪ್ರವರ್ಗಗಳು ಮತ್ತು ಕ್ರಮಬದ್ದವಲ್ಲದ ಅರ್ಜಿಗಳ ಪರಿಶೀಲನೆ-16-04-2025 ರಿಂದ 14-05-2025.
• ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ-17-05-2025.
• ಆನ್‌ಲೈನ್‌ ತಂತ್ರಾಂಶದ ಮೂಲಕ 1 ಸುತ್ತಿನ ಸೀಟು ಹಂಚಿಕೆ-21-05-2025.
• ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ-22-05-2025 ರಿಂದ 31-05-2025.
• ಶಾಲೆಗಳಲ್ಲಿ ದಾಖಲಾದ 1 ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡುವುದು-22-05-2025 ರಿಂದ 04-06-2025.
• ಆನ್‌ಲೈನ್‌ ತಂತ್ರಾಂಶದ ಮೂಲಕ 2ನೇ ಸುತ್ತಿನ ಸೀಟು ಹಂಚಿಕೆ-09-06-2025.
• 2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಅವಧಿ-ಜೂನ್ 10 ರಿಂದ 20, 2025.
• ಶಾಲೆಗಳಲ್ಲಿ ದಾಖಲಾದ 2ನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸುವುದು-11-06-2025 ರಿಂದ 25-06-2025.

ಪೋಷಕರು ನೆರೆಹೊರೆ ಶಾಲೆಗಳನ್ನು ಚೆಕ್‌ ಮಾಡಿಕೊಂಡು, ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಬಹುದು. ಸಾಫ್ಟ್‌ವೇರ್‌ ಡೆವಲಪ್ಮೆಂಟ್ ಸೆಂಟರ್ ಮತ್ತು ಸಂಬಂಧಿಸಿದ ಉಪನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬಹುದು.

ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ ಎಲ್‌ಕೆಜಿ(LKG) ಮತ್ತು 1ನೇ ತರಗತಿಗೆ ಅನುದಾನರಹಿತ ಶಾಲೆಗಳಲ್ಲಿ ಶಾಲಾವಾರು ಶೇಕಡ.25ರ ಪ್ರಮಾಣದಲ್ಲಿ ಲಭ್ಯವಿರುವ ಸೀಟುಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಕನಿಷ್ಠ ಲಭ್ಯವಿರುವ ಶಾಲಾವಾರು ಸೀಟುಗಳ ಸಂಖ್ಯೆಯನ್ನು ಜಿಲ್ಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಕಚೇರಿಯ ನೋಟಿಸ್‌ ಬೋರ್ಡ್‌ನಲ್ಲಿ ದಿನಾಂಕ 08-04-2025 ರಂದು ಪ್ರಕಟಿಸಲಾಗುವುದು.

ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಪ್ರಾರಂಭಿಕ ತರಗತಿಗಳಿಗೆ ಮಕ್ಕಳ ಪ್ರವೇಶಕ್ಕೂ ವಯಸ್ಸು ನಿಗದಿಪಡಿಸಲಾಗಿದೆ. ಎಲ್‌ಕೆಜಿ(LKG) ಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 4 ವರ್ಷ ಆಗಿರಬೇಕು, 1 ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 5 ವರ್ಷ 5 ತಿಂಗಳು ಹಾಗೂ ಗರಿಷ್ಠ 7 ವರ್ಷ ನಿಗದಿ ಪಡಿಸಲಾಗಿದೆ.

RTE ಮೂಲಕ ಪ್ರವೇಶಾತಿಗೆ ನೆರೆಹೊರೆ ಶಾಲೆಗಳನ್ನು ಚೆಕ್‌ ಮಾಡುವುದು ಹೇಗೆ?

ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್‌ಸೈಟ್‌ http://www.schooleducation.kar.nic.in/ ಗೆ ಭೇಟಿ ನೀಡಿ.
• ಓಪನ್ ಆದ ಹೋಮ್‌ ಪೇಜ್‌ನಲ್ಲಿ’ Neighbourhood School List for RTE 2025 (Provisional) – Know My School’ ಎಂದಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ.
• ಮತ್ತೊಂದು ಹೊಸ ವೆಬ್‌ಪೇಜ್‌ ಓಪನ್‌ ಆಗುತ್ತದೆ. ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಆಯ್ಕೆ ಮಾಡಿ.
• ನಂತರ ‘View in GIS-MAP’ ಎಂಬಲ್ಲಿ ಕ್ಲಿಕ್ ಮಾಡಿ.
• ಗ್ರಾಮದ ಅಕ್ಕಪಕ್ಕದ ಶಾಲೆಗಳ ಬಗ್ಗೆ ಮಾಹಿತಿಯು ಜಿಐಎಸ್‌ ಮ್ಯಾಪ್‌ನಲ್ಲಿ, ಮತ್ತೊಂದು ಹೊಸ ಪೇಜ್‌ನಲ್ಲಿ ಓಪನ್‌ ಆಗುತ್ತದೆ.
ಚೆಕ್‌ ಮಾಡಿಕೊಂಡು ನಂತರ ಅರ್ಜಿ ಸಲ್ಲಿಸಿ.

WEBSITE LINK – CLICK HERE
WhatsApp Group Join Now
Telegram Group Join Now