-: ಅಕ್ಷಾಂಶಗಳು :-
* ಇವು ನಿರ್ದಿಷ್ಟ ಸ್ಥಳವನ್ನು ಸೂಚಿಸುತ್ತದೆ.
* ಭೂಮಧ್ಯೆ ರೇಖೆಯಿಂದ ಉತ್ತರ ಮತ್ತು ದಕ್ಷಿಣಕ್ಕೆ ಇರುವ ಕೋನಾಂತರವೇ ” ಅಕ್ಷಾಂಶ ”
* ಇವು ಕಾಲ್ಪನಿಕ ರೇಖೆಗಾಗಿದ್ದು , ಇವುಗಳನ್ನು ಡಿಗ್ರಿಗಳಲ್ಲಿ ಅಳೆಯಲಾಗುತ್ತದೆ.
* ಉತ್ತರ ಮತ್ತು ದಕ್ಷಿಣ ಧ್ರುವಗಳ ಮಧ್ಯದಲ್ಲಿ ಭೂ ಅಕ್ಷಕ್ಕೆ ಲಂಬವಾಗಿ ಎಳೆದ ಕಾಲ್ಪನಿಕ ರೇಖೆ ” ಸಮಭಾಜಕ ವೃತ್ತ “.
* ಈ ಸಮಭಾಜಕ ವೃತ್ತಕ್ಕೆ ಸಮನಾಂತರವಾಗಿರುವಂತೆ ಗೋಳದ ಮೇಲೆ ಪೂರ್ವ ಪಶ್ಚಿಮವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳನ್ನು ಅಕ್ಷಾಂಶಗಳು Latitudes ಎಂದು ಕರೆಯುತ್ತಾರೆ.
* ಸಮಭಾಜಕ ವೃತ್ತವು 0° ಮಹಾ ವೃತ್ತವಾಗಿದ್ದು ಅದು ಭೂ ಸುತ್ತಳತೆಗೆ ಸಮನಾಗಿದೆ. ಅಲ್ಲಿಂದ ಉತ್ತರ ಹಾಗೂ ದಕ್ಷಿಣಕ್ಕಿರುವ ಅಕ್ಷಾಂಶ ವೃತ್ತಗಳು ಉದ್ದದಲ್ಲಿ ಚಿಕ್ಕದಾಗುತ್ತದೆ. ಎಲ್ಲಾ ಅಕ್ಷಾಂಶ ವೃತ್ತಗಳು ಭೂಮಧ್ಯ ರೇಖೆಗೆ ಸಮನಾಂತರವಾಗಿರುವುದರಿಂದ ಅವುಗಳನ್ನು ಸಮನಾಂತರ ರೇಖೆಗಳು ಎಂದು ಕರೆಯುತ್ತಾರೆ.
* ಸಮಭಾಜಕ ವೃತ್ತದಿಂದ ಉತ್ತರ ಗೋಳಾರ್ಧದಲ್ಲಿ 90° ಹಾಗೂ ದಕ್ಷಿಣ ಗೋಳಾರ್ಧದಲ್ಲಿ 90° ಅಕ್ಷಾಂಶಗಳನ್ನು ರಚಿಸಲಾಗಿದೆ.
* ಒಂದು ಅಕ್ಷಾಂಶದಿಂದ ಮತ್ತೊಂದು ಅಕ್ಷಾಂಶಕ್ಕೆ ಇರುವ ಭೂಮಿಯ ಮೇಲಿನ ಅಂತರ 110.4 ಕಿಲೋ ಮೀಟರ್.
* 0° ಅಕ್ಷಾಂಶ ಅಥವಾ ಭೂಮಧ್ಯ ರೇಖೆ ಸೇರಿಕೊಂಡು 181 ಅಕ್ಷಾಂಶಗಳಾಗುತ್ತವೆ.
-: ಪ್ರಮುಖ ಅಕ್ಷಾಂಶಗಳು :-
1. 0° ಅಕ್ಷಾಂಶ – ಸಮಭಾಜಕ ವೃತ್ತ.
2. 23 1/2° ಉತ್ತರ ಅಕ್ಷಾಂಶ – ಕರ್ಕಾಟಕ ಸಂಕ್ರಾಂತಿ ವೃತ್ತ.
3. 23 1/2° ದಕ್ಷಿಣ ಅಕ್ಷಾಂಶ – ಮಕರ ಸಂಕ್ರಾಂತಿ ವೃತ್ತ .
4. 66 1/2° ಉತ್ತರ ಅಕ್ಷಾಂಶ – ಉತ್ತರ ಧ್ರುವ ವೃತ್ತ ( ಆರ್ಕ್ಟಿಕ್ ).
5. 66 1/2° ದಕ್ಷಿಣ ಅಕ್ಷಾಂಶ – ದಕ್ಷಿಣ ಧ್ರುವ ವೃತ್ತ ( ಅಂಟಾರ್ಕ್ಟಿಕ್ ವೃತ್ತ).
6. 90° ಉತ್ತರ ಅಕ್ಷಾಂಶ – ಉತ್ತರ ಧ್ರುವ.
7. 90° ದಕ್ಷಿಣ ಅಕ್ಷಾಂಶ – ದಕ್ಷಿಣ ಧ್ರುವ.
-: ರೇಖಾಂಶಗಳು :-
* ಸಮಭಾಜಕ ವೃತ್ತವನ್ನು ಸಮಕೋನದಲ್ಲಿ ಛೇದಿಸಿ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸಂಧಿಸುವ ಕಾಲ್ಪನಿಕ ರೇಖೆಗಳನ್ನು ರೇಖಾಂಶಗಳು ಎನ್ನುವರು.
* ಗೋಳದ ಮೇಲೆ ರೇಖಾಂಶಗಳು ಅರ್ಧ ವೃತ್ತಗಳ ಸರಣಿಗಳಂತೆ ಕಂಡುಬರುತ್ತವೆ.
* ಇವು ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಸಂಧಿಸುತ್ತವೆ ಹಾಗೂ ಸಮಭಾಜಕ ವೃತ್ತದ ಮೂಲಕ ಹಾದು ಹೋಗುತ್ತವೆ.
* ಎಲ್ಲಾ ರೇಖಾಂಶಗಳ ಉದ್ದ ಒಂದೇ ಆಗಿದೆ. ರೇಖಾಂಶಗಳನ್ನು ಮಧ್ಯಾಹ್ನ ಅಥವಾ ಮೆರೇಡಿಯನ್ ರೇಖೆಗಳು ಎನ್ನುವರು.
* ಇದರಲ್ಲಿ ಮೀರಿ ಎಂದರೆ ಮಧ್ಯ ಡಿಯನ್ ಎಂದರೆ ದಿನ ಎಂದರ್ಥ.
* ಏಕೆಂದರೆ ಯಾವುದೇ ರೇಖಾಂಶದ ನೆತ್ತಿಯ ಮೇಲೆ ಸೂರ್ಯನು ಬಂದಾಗ ಆ ರೇಖಾಂಶ ದುದ್ದಕ್ಕೂ ಎಲ್ಲಾ ಸ್ಥಳಗಳಲ್ಲಿಯೂ ಒಂದೇ ಸಮಯದಲ್ಲಿ ಮಧ್ಯಾಹ್ನ ವಾಗಿರುತ್ತದೆ.
* ಇಂಗ್ಲೆಂಡಿನ ಗ್ರೀನ್ ವಿಚ್ ನ ಮೇಲೆ ಹಾದುಹೋಗುವ ರೇಖಾಂಶವನ್ನು ಪ್ರಧಾನ ರೇಖಾಂಶ ಎಂದು ಕರೆಯಲಾಗುತ್ತದೆ ಇದನ್ನು 0° ಎಂದು ಗುರುತಿಸಲಾಗಿದೆ.
* ಗ್ರೀನ್ ವಿಚ್ ರೇಖಾಂಶದ ಪೂರ್ವಕ್ಕೆ 180° ಹಾಗೂ ಪಶ್ಚಿಮಕ್ಕೆ 180° ರೇಖಾಂಶಗಳಿವೆ. ಒಟ್ಟು 360° ರೇಖಾಂಶ ರೇಖೆಗಳು ಇರುತ್ತವೆ.
* ಸಮಭಾಜಕ ವೃತ್ತದಿಂದ ಧ್ರುವದ ಕಡೆಗೆ ಹೋದಂತೆ ಎರಡು ರೇಖಾಂಶಗಳ ನಡುವಿನ ಅಂತರ ಕಡಿಮೆಯಾಗುತ್ತ ಹೋಗುತ್ತದೆ. ಇದಕ್ಕೆ ಕಾರಣ ಎಲ್ಲಾ ರೇಖಾಂಶಗಳು ಎರಡು ಧ್ರುವಗಳಲ್ಲಿ ಸಂಧಿಸುವುದು.
* ಸಮಭಾಜಕ ವೃತ್ತದ ಮೇಲೆ ಎರಡು ರೇಖಾಂಶಗಳ ನಡುವಿನ ಅಂತರ ಅತಿ ಹೆಚ್ಚು ಎಂದರೆ ಸುಮಾರು 111 ಕಿಲೋಮೀಟರ್ ಗಳಾಗಿರುತ್ತದೆ.
-: ರೇಖಾಂಶ ಮತ್ತು ವೇಳೆ :-
* ಒಂದು ರೇಖಾಂಶದಿಂದ ಮತ್ತೊಂದು ರೇಖಾಂಶಕ್ಕೆ ಇರುವ ವೇಳೆಯ ವ್ಯತ್ಯಾಸ 4 ನಿಮಿಷ. ಹಾಗಾದರೆ ಇಲ್ಲಿ ಪ್ರತಿ 15 ರೇಖಾಂಶಗಳಿಗೆ ಒಂದು ಗಂಟೆ ಅಥವಾ 10 ನಿಮಿಷಗಳಾಗಿರುತ್ತದೆ.(360×4=1440/60=24 ಗಂಟೆಗಳು).
* ನಾವು ಗ್ರೀನ್ ವಿಚ್ ನಿಂದ ಪಶ್ಚಿಮದಿಂದ ಪೂರ್ವದ ಕಡೆಗೆ ಚಲಿಸುವಾಗ ವೇಳೆಯೂ ಹೆಚ್ಚಾಗುತ್ತದೆ ( EGA-East Gain Add) ಹಾಗೂ ಪೂರ್ವದಿಂದ ಪಶ್ಚಿಮದ ಕಡೆಗೆ ಚಲಿಸುವಾಗ ವೇಳೆಯೂ ಕಡಿಮೆಯಾಗುತ್ತ ಹೋಗುತ್ತದೆ.(WLS- West Lose Subscriptions).
-: ಸ್ಥಾನಿಕ ವೇಳೆ :-
* ಒಂದು ಸ್ಥಳದ ರೇಖಾಂಶ ಅಥವಾ ಸೂರ್ಯನ ಸ್ಥಾನ ಕ್ಕನಸಾರವಾಗಿ ನಿರ್ಧರಿಸುವ ವೇಳೆಯನ್ನು ಸ್ಥಾನಿಕ ವೇಳೆ ಎನ್ನುವರು.
* ಸ್ಥಾನಿಕ ವೇಳೆಯು ಸ್ಥಳದ ಸ್ಥಳೀಯ ರೇಖಾಂಶವನ್ನು ಅಂದರೆ ಸ್ಥಳೀಯ ಮಧ್ಯಾಹ್ನದ ರೇಖೆಯನ್ನು ಆಧರಿಸಿರುತ್ತದೆ.
* ಆ ಸ್ಥಳಗಳ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ ಮಧ್ಯಾಹ್ನ 12 ಗಂಟೆ ಆಗಿರುತ್ತದೆ. ಆ ಮಧ್ಯಾಹ್ನ ರೇಖೆ ಹಾದು ಹೋಗುವ ಎಲ್ಲಾ ಸ್ಥಳಗಳಲ್ಲಿ ಒಂದೇ ಸ್ಥಾನಿಕ ವೇಳೆ ಇರುತ್ತದೆ. ಪ್ರತಿ ರೇಖಾಂಶವನ್ನು ತನ್ನದೇ ಆದ ಸ್ಥಾನಿಕ ವೇಳೆ ಹೊಂದಿದೆ.
-: ಆದರ್ಶ ವೇಳೆ :-
* ಸ್ಥಾನಿಕ ವೇಳೆಯೂ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ. ಇದನ್ನು ಆದರ್ಶ ವೇಳೆ ಅಥವಾ ಪ್ರಮಾಣ ವೇಳೆ ಎಂದು ಕರೆಯುತ್ತಾರೆ.
* ಭಾರತದಲ್ಲಿ 82 1/2° ದೇಶದ ಆದರ್ಶ ರೇಖೆ ಎಂದು ಗುರುತಿಸಲಾಗಿದೆ.
* ಇದು ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ ನಗರದ ಮೂಲಕ ಹಾದು ಹೋಗಿದೆ.
* ಭಾರತದ ವೇಳೆ ಈ ರೇಖಾಂಶವನ್ನು ಅನುಸರಿಸುವುದರಿಂದ ಇದನ್ನು ಭಾರತದ ಆದರ್ಶ ವೇಳೆ IST ಎಂದು ಕರೆಯಲಾಗುತ್ತದೆ.
* ಇದು ಗ್ರೀನ್ ವಿಚ್ 5 ಗಂಟೆ 30 ನಿಮಿಷಗಳಷ್ಟು ಮುಂದಿರುತ್ತದೆ.
-: ವೇಳಾ ವಲಯಗಳು :-
* ಇಡೀ ಭೂಗೋಳವನ್ನು 24 ವೇಳಾ ವಲಯಗಳನ್ನಾಗಿ ವಿಂಗಡಿಸಲಾಗಿದೆ.
ಅತಿ ಹೆಚ್ಚು ವೇಳಾ ವಲಯಗಳನ್ನು ಹೊಂದಿರುವ ದೇಶಗಳು.
* ರಷ್ಯಾ 11 ವೇಳಾ ವಲಯಗಳು.
* ಯು ಎಸ್ ಎ ಮತ್ತು ಕೆನಡಾ 5 ವೇಳಾ ವಲಯ.
* ಆಸ್ಟ್ರೇಲಿಯಾ 3 ವೇಳಾ ವಲಯ.
-: ಅಂತರಾಷ್ಟ್ರೀಯ ದಿನಾಂಕ IDL- international date line.
* ಗ್ರೀನ್ ವಿಚ್ ರೇಖಾಂಶದ ವಿರುದ್ಧವಾದ ದಿಕ್ಕಿನಲ್ಲಿರುವ 180° ಪ್ರಪಂಚದ ಪರ್ಯಟನೆ ಮಾಡುವವರು ತಮ್ಮ ಸಂದರ್ಭಕ್ಕೆ ದಿನಾ ಮತ್ತು ದಿನಾಂಕವನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ. ಇದು ಪೆಸಿಫಿಕ್ ಸಾಗರದ ಮೂಲಕ ಹಾದುಹೋಗುವ 180° ರೇಖಾಂಶದ ಮೇಲೆ ಇದ್ದರೂ ಕೆಲವೇಡೆ ಭೂಭಾಗಗಳನ್ನು ತಪ್ಪಿಸಲು ಅಲ್ಲಲ್ಲೇ ಅಂಕುಡೊಂಕಾಗಿ ಎಳೆಯಲಾಗಿದೆ. ಇದನ್ನೇ ಅಂತರಾಷ್ಟ್ರೀಯ ದಿನಾಂಕ ಎನ್ನುವರು.
* ಹಡಗು ಮತ್ತು ವಿಮಾನದಲ್ಲಿ ಪ್ರಯಾಣಿಸುವವರು ಈ ರೇಖೆಯನ್ನು ದಾಟುವ ದಿನಾಂಕ ಮತ್ತು ದಿನಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
* ಯಾವುದೇ ಹಡಗು ಈ ರೇಖೆಯನ್ನು ಪಶ್ಚಿಮದಿಂದ ಪೂರ್ವಕ್ಕೆ ದಾಟಿದಾಗ ( ದೇಶದಿಂದ ಉತ್ತರ ಅಮೆರಿಕ) ಒಂದೇ ದಿನವನ್ನು ಎರಡು ಬಾರಿ ಗಣನೆಗೆ ತೆಗೆದುಕೊಳ್ಳಬೇಕು. ಅದೇ ರೀತಿ ಈ ರೇಖೆಯನ್ನು ಪೂರ್ವದಿಂದ ಪಶ್ಚಿಮದ ಕಡೆಗೆ ಹಾದು ಹೋಗುವಾಗ ( ಉತ್ತರ ಅಮೆರಿಕದಿಂದ ಏಷ್ಯಾ) ಒಂದು ದಿನವನ್ನು ಕಳೆದುಕೊಳ್ಳಬೇಕಾಗುತ್ತದೆ.