ಆಧಾರ್ ಕೌಶಲ್ ವಿದ್ಯಾರ್ಥಿ ವೇತನ. ಪದವಿ ವಿದ್ಯಾರ್ಥಿಗಳಿಗೆ 50.000 ರೂ ಪ್ರೋತ್ಸಾಹ ಧನ .

ಆಧಾರ್ ಕೌಶಲ್ ಸಂಸ್ಥೆಯಿಂದ 50, 000 ವಿದ್ಯಾರ್ಥಿವೇತನ | Aadhaar Kaushal Scholarship 2024 .

Scholarship: ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (Aadhaar Kaushal Scholarship 2024) ವತಿಯಿಂದ ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್ ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ Aadhaar Kaushal ಸಂಸ್ಥೆಯು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಕಾಲರ್​ಶಿಪ್ ನೀಡುತ್ತದೆ. ಅರ್ಹ ವಿದ್ಯಾರ್ಥಿಗಳು ಇದರ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಿ, ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ ಓದಿ ಅರ್ಜಿ ಸಲ್ಲಿಸಬಹುದು.

ಈ ವಿದ್ಯಾರ್ಥಿ ವೇತನವು ಎಲ್ಲಾ ದೈಹಿಕ ವಿಶೇಷಚೇತನ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಅಪ್ಲೈ ಮಾಡಲು ಆಸಕ್ತಿ ಇರುವ ವಿದ್ಯಾರ್ಥಿಗಳ ಭೌಗೋಳಿಕ ಪ್ರದೇಶ, ಲಿಂಗ, ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಪರಿಗಣಿಸದೆ ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸಿಕೊಡುವ ಗುರಿಯಿಂದ 10,000 ರಿಂದ 50,000 ರೂ. ರವರೆಗೆ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಈ ಸ್ಕಾಲರ್ಶಿಪ್ ನೀಡಲಾಗುತ್ತಿದೆ.

Aadhaar Kaushal Scholarship 2024 .

ವಿದ್ಯಾರ್ಥಿವೇತನ ಮೊತ್ತ:-

10,000 ರಿಂದ 50,000 ರೂ. ವಾರ್ಷಿಕ ನೀಡಲಾಗುವುದು.

ವಿದ್ಯಾರ್ಥಿವೇತನಕ್ಕೆ ಯಾರು ಅರ್ಹರು:-

ಅಖಿಲ ಭಾರತದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಾಮಾನ್ಯ ಅಥವಾ ವೃತ್ತಿಪರ ಪದವಿಪೂರ್ವ ಕೋರ್ಸ್ ಗಳನ್ನು ಓದುತ್ತಿರುವ ದೈಹಿಕ ವಿಶೇಷಚೇತನ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 2.5 – 3 ಲಕ್ಷ ಗಿಂತ ಮೀರಿರಬಾರದು.
ಈಗಾಗಲೇ ಈ ವಿದ್ಯಾರ್ಥಿವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಪ್ರಮುಖ ದಾಖಲೆಗಳು:-

ಸದ್ಯದ ಪಾಸ್ ಪೋರ್ಟ್ ಅಳತೆ ಪೋಟೋ
ಆಧಾರ್ ಕಾರ್ಡ್
ಅಂಗವೈಕಲ್ಯ ಪ್ರಮಾಣಪತ್ರ
ಪ್ರಸ್ತುತ ಶೈಕ್ಷಣಿಕ ವರ್ಷದ ಪದವಿಪೂರ್ವ (ಸಾಮಾನ್ಯ ಮತ್ತು ವೃತ್ತಿಪರ) ಕೋರ್ಸ್‌ಗಳಲ್ಲಿ ಪ್ರಸ್ತುತ ದಾಖಲಾತಿಯ ಪುರಾವೆ, ಪ್ರವೇಶ ಶುಲ್ಕಗಳು ಸೇರಿದಂತೆ ಕೋರ್ಸ್ ಶುಲ್ಕಗಳಿಗೆ ಸಂಬಂಧಿಸಿದ ವೆಚ್ಚಗಳ ದಾಖಲಾತಿಗಳನ್ನು ಲಗತ್ತಿಸಬೇಕು.
ಹಿಂದಿನ ವರ್ಷದ ಮಾರ್ಕ್ ಶೀಟ್‌ಗಳು, ದ್ವೀತಿಯ ಪಿಯುಸಿ ಅಂಕಪಟ್ಟಿ.
ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:-
ಜುಲೈ 23, 2024

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ವಿದ್ಯಾರ್ಥಿಗಳು Buddy4Study ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಮ್ಮ ಹೆಸರಿನ ಇ-ಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ ಮೂಲಕ ಸೈನ್ ಇನ್ ಆದ ನಂತರ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು.

WhatsApp Group Join Now
Telegram Group Join Now