ಆಧುನಿಕ ಯುರೋಪ್.
ಸಾಮಾನ್ಯ ಶಕ 1453 ರಲ್ಲಿ ಸಂಭವಿಸಿದ ಕಾನ್ಸಟಾಂಟಿನೋಪಲ್ ನಗರದ ಪತನವನ್ನು ಜಾಗತಿಕ ಇತಿಹಾಸದಲ್ಲಿ ನವಯುಗದ ನಾಂದಿ ಹಾಗೂ ಸ್ಥಿತ್ಯಂತರ ಆರಂಭ ಘಟನೆ ಎಂದು ವರ್ಣಿಸಲಾಗಿದೆ.
ಪುನರುಜ್ಜೀವನ.
* ಲ್ಯಾಟಿನ್ ಭಾಷೆಯ ರಿನೆಸರೆ ಎಂಬ ಪದರಿಂದ ರಿನೈಸಾನ್ಸ್ ಎಂಬ ಇಂಗ್ಲಿಷ ಪದ ರೂಪುಗೊಂಡಿದೆ. ರಿನೈಸಾನ್ಸ್ ಎಂದರೆ ಪುನರ್ಜನ್ಮ ಅಥವಾ ಪುನರುಜ್ಜೀವನ ಅಥವಾ ನವೋದಯ ಎಂದರ್ಥ.
ಪುನರ ಜೀವನ ಚಳುವಳಿಯ ಪ್ರಮುಖ ಲಕ್ಷಣಗಳು.
* ಮಾನವೀಯತೆ
* ಪ್ರಶ್ನಾರ್ಥಕತೆ
* ವಿಚಾರ ಶೀಲತೆ
* ವಿಮರ್ಶಾ ಪ್ರವೃತ್ತಿ
* ಕುತೂಹಲತೆ
ಪುನರ್ ಜೀವನಕ್ಕೆ ಕಾರಣಗಳು.
1. ಕಾನ್ಸ್ ಸ್ಟಾಂಟಿನೋಪಲ್ ನಗರದ ಪತನ
2. ಧರ್ಮ ಯುದ್ದಗಳ ಪ್ರಭಾವ
3. ಭೌಗೋಳಿಕ ಸಂಶೋಧನೆಗಳು
4. ಚರ್ಚ್ ಪ್ರಭಾವದ ಪತನ
5. ರಾಷ್ಟ್ರ ರಾಜ್ಯಗಳ ಏಳಿಗೆ
6. ಮುದ್ರಣ ಯಂತ್ರದ ಸಂಶೋಧನೆ
7. ವೈಜ್ಞಾನಿಕ ಮನೋವೃತ್ತಿಯ ಬೆಳವಣಿಗೆ
8. ವಿಶ್ವವಿದ್ಯಾಲಯಗಳ ಉಗಮ
9. ರಾಜರ, ಪೋಪರ ಮತ್ತು ಸರದಾರರ ಪ್ರೋತ್ಸಾಹ
10. ಉಳಿಗಮಾನ್ಯ ಪದ್ಧತಿಯ ಅವನತಿ
ಪುನರ್ಜೀವನದ ತವರು ಮನೆ – ಇಟಲಿ.
ಪುನರು ಜೀವನದ ಕೊಡುಗೆಗಳು – ಮಾನವತವಾದ,ವೈಚಾರಿಕತೆ.
* ಪೆಟ್ರಾರ್ಕ್ ( ಸಾಮಾನ್ಯ ಶಕ 1304-1374).
* ಡಾಂಟೆ ( ಸಾಮಾನ್ಯ ಶಕ 1265-1321).
-: ಸಾಹಿತ್ಯ :-
* ಡಾಂಟೆ – ಇಟಲಿ
* ಡಿವೈನ್ ಕಾಮಿಡಿ, ದಿ ಮೊನಾರ್ಕಿ, ಕಾ ವಿಮೋ
* ಬಿರುದು – ಇಟಲಿಯ ಪದ್ಯದ ಪಿತಾಮಹ.
* ಪೆಟ್ರಾರ್ಕ್ – ಇಟಲಿ
* ಲೋರಾ ಸುನಿತಗಳು, ಲೈಫ್ ಆಫ್ ಇಲಸ್ಟ್ರಿಯಸ್ ಮೆನ್, ಆಫ್ರಿಕಾ ಫ್ಯಾಮಿಲಿಯರ್ಸ್ ಲೆಟರ್ಸ್
* ಬಿರುದು – ಪುನರ್ ಜೀವನದ ಪಿತಾಮಹ.
* ಎರಸ್ಮಸ್ – ಹಾಲೆಂಡ್
* ಪ್ರೈಸ್ ಆಫ್ ಪಾಲಿ ಮತ್ತು ನ್ಯೂ ಟೆಸ್ಟ್ ಮೆಂಟ್
* ಬಿರುದು – ಆಧ್ಯಾತ್ಮಿಕ ಗುರು.
* ಬೊಕಾಷಿಯೋ – ಇಟಲಿ
* ಡೆಕೆಮೆರಾನ್, ಲೈಫ್ ಆಫ್ ಡಾಂಟೆ
* ಸರ್. ಥಾಮಸ್ ಮೋರ್ – ಇಂಗ್ಲೆಂಡ್
* ಉಟೋಪಿಯ ( ಪ್ಲೇಟೋನ ರಿಪಬ್ಲಿಕ್ ಆಧಾರಿತ ಕೃತಿ ).
* ಸರ್ವೆಂಟಸ್ – ಸ್ಪೇನ್
* ಡಾನ್ ಕ್ವಿಕ್ಸೋಟ್ ( ಉಳಿಗಮಾನ್ಯ ಪದ್ಧತಿಯ ವೆಂಗ್ಯ ವಿಡಂಬನೆ)
* ಮೆಕೆವಲ್ಲಿ – ಇಟಲಿ
* ದಿ ಪ್ರಿನ್ಸ್ ( ರಾಜಕೀಯ ವಿಚಾರಗಳ ಅಭಿವ್ಯಕ್ತಿ ಯುದ್ಧ ಕಲೆ )
* ಅಂಧ ಕವಿ ಮಿಲ್ಟನ್ – ಇಂಗ್ಲೆಂಡ್
* ದಿ ಪ್ಯಾರಡೈಸ್ ಲಾಸ್ಟ್
* ಷೇಕ್ಸ್ ಪಿಯರ್ – ಇಂಗ್ಲೆಂಡ್
* ಹ್ಯಾಮ್ಲೆಟ್, ಮ್ಯಾಕಬೆತ್, ಕಿಂಗಲಿಯರ್, ಓಥೆ ಲೋ, ಜೂಲಿಯಸ್ ಸೀಸರ್, ಕಾಮಿಡಿ ಆಫ್ ಎರರ್ಸ್ ಯು ಲೈಕ್.
* ಲಿಯೋನಾ ರ್ಡೊ ಬ್ರೂನಿ – ಇಟಲಿ
* ಅರಿಸ್ಟಾಟಲ್ ಪ್ಲೇಟೋ ಪೆಟ್ರಾರ್ಕ್ ಕೃತಿಗಳನ್ನು ಇಟಲಿ ಭಾಷೆಗೆ .ಅನುವಾದಿಸಿದರು.
* ಜಫ್ರಿ ಚೌಸರ್ – ಇಂಗ್ಲೆಂಡ್
* ಕ್ಯಾಂಟರ್ಬರಿ ಟೇಲ್ಸ್
* ಆಂಗ್ಲ ಕಾವ್ಯದ ಜನಕ.
ಕಲೆ ಮತ್ತು ವಾಸ್ತು ಶಿಲ್ಪ.
* ಮೈಕಲ್ ಆಂಜಲೋ – ಆಡಂ ಮತ್ತು ಕೊನೆಯ ತೀರ್ಮಾನ
* ಲಿಯೋನಾರ್ಡ್ – ಡ- ವಿಂಚಿ – ಲಾಸ್ಟ ಸಪ್ಟರ್ ಮತ್ತು ಮೊನಾಲಿಸಾ
* ರಾಫೆಲ್ – ಸಿಸ್ಟೈನ್ ಮಾಡೋನ್ನ
* ಟಿಟಿಯನ್ – ಅಂಸಫ್ಫನ್ ಆಫ್ ದಿ ವರ್ಜಿನ್
ಪುನರುಜ್ಜೀವನ ಕಾಲದ ವಿಜ್ಞಾನ .
* ಕೋಪರ್ನಿಕಸ್ – ಗ್ರೀಸ್ ಟಾಲೆಮಿಯ ಭೂಕೇಂದ್ರಿತವಾದವು ಸುಳ್ಳೆಂದು ತೋರಿಸಿ ಗ್ರಹಗಳ ಸೂರ್ಯಕೇಂದ್ರಿತ ಸಿದ್ಧಾಂತವನ್ನು ಪ್ರತಿಪಾದಿಸಿದರು.
* ಫ್ರಾನ್ಸಿಸ್ ಬೇಕನ್ – ಪ್ರಾಚೀನ ವೈಜ್ಞಾನಿಕ ತೀರ್ಮಾನಗಳು ಪರಿಣಿತ ಜ್ಞಾನವನ್ನು ಪ್ರತಿನಿಧಿಸುವುದಿಲ್ಲ ಎಂದು ಘೋಷಿಸಿದನು.
* ಕೆಪ್ಲರ್
* ಜರ್ಮನಿಯ ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ.
* ಗ್ರಹಗಳು ಸೂರ್ಯನನ್ನು ಅಂಡಾಕೃತಿಯಲ್ಲಿ ಸುತ್ತುತ್ತವೆ ಎಂದು ತಿಳಿಸಿದನು.
* ಗೆಲಿಲಿಯೋ
* ದೂರದರ್ಶಕ ಯಂತ್ರವನ್ನು ಕಂಡುಹಿಡಿದನು.
* ಉಷ್ಣತಾ ಮಾಪಕ,ವಾಯು ಭಾರಮಾಪಕ, ಗಡಿಯಾರದ ನಿಯಮಗಳನ್ನು ಅನ್ವೇಷಣೆ ಮಾಡಿದನು.
* ಕೊಪರ್ನಿಕಸ್ ಅನಾ ಸೂರ್ಯಕೇಂದ್ರಿತ ಪರಿಕಲ್ಪನೆಯನ್ನು ಬೆಂಬಲಿಸಿದನು.
* ಇವನನ್ನು ಖಗೋಳ ವಿಜ್ಞಾನದ ಪಿತಾಮಹ ಎಂದು ಕರೆಯಲಾಗಿದೆ.
* ನ್ಯೂಟನ್
* ಇಂಗ್ಲೆಂಡ್ ದೇಶದ ಖ್ಯಾತ ಗಣಿತಶಾಸ್ತ್ರಜ್ಞ, ಖಗೋಳ ಮತ್ತು ಭೌತವಿಜ್ಞಾನಿ.
* ಭೂಮಿಯ ಗುರುತ್ವಾಕರ್ಷಣೆ ಸಿದ್ಧಾಂತವನ್ನು ನ್ಯೂಟನ್ ಶೋಧಿಸಿದನು.
* ಪ್ರತಿಯೊಂದು ವಸ್ತು ಭೂಮಿಯನ್ನು ತಲುಪಲು ಅದಕ್ಕೆ ಇರುವ ಆಕರ್ಷಣೀಯ ಶಕ್ತಿಯೇ ಕಾರಣವೆಂದು ಪ್ರತಿಪಾದಿಸಿದನು.
* ಚಲನೆಯ ಮೂರು ನಿಯಮಗಳನ್ನು ಕಂಡುಹಿಡಿದನು.
* ಆಂಡ್ಯೂ ವಸಾಲಯಸ್
* ಶರೀರದ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಅಸ್ತಿಪಂಜರ,ಮಾಂಸಖಂಡಗಳು, ಮೆದುಳು, ಜೀರ್ಣಾಂಗ ಮತ್ತು ಜನನೇಂದ್ರಿಯಗಳ ಪರಿಣಾಮಕಾರಿ ಚಿಕಿತ್ಸೆಯನ್ನು ಮಾಡಬಹುದು ಎಂಬುದರ ಬಗ್ಗೆ ಶರೀರ ಶಾಸ್ತ್ರದ ಮೇಲೆ ವೈಜ್ಞಾನಿಕ ಗ್ರಂಥವನ್ನು ಬರೆದರು. ವೆಸಲಿಯಸ್ ನ ಕೃತಿ- Book of Man Anotomy.
* ಪೋಪ 13ನೇ ಗ್ರೆಗೊರಿ 1582ರಲ್ಲಿ ಜೂಲಿಯನ್ ಕ್ಯಾಲೆಂಡರ್ ಅನ್ನು ಸುಧಾರಿಸಿ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಜಾರಿಗೆ ತಂದನು. ಈಗ ಜಗತ್ತಿನಲ್ಲಿ ಚಾಲ್ತಿಯಲ್ಲಿದೆ.
* ವೈದ್ಯಶಾಸ್ತ್ರದಲ್ಲಿ ವಿಲಿಯಂ ಹಾರ್ವೆ ಮಾನವನ ದೇಹದಲ್ಲಿ ರಕ್ತ ಪರಿಚಲನೆಯನ್ನು ಕಂಡುಹಿಡಿದನು. ರಚನಾ ಶಾಸ್ತ್ರದ ಪಿತಾಮಹ ಎಂದು ಇವನು ಹೃದಯ ಮತ್ತು ರಕ್ತ ಪರಿಚಲನೆ ಎಂಬ ಕೃತಿಯನ್ನು ಬರೆದನು.
ಪುನರ್ಜೀವನದ ಪರಿಣಾಮಗಳು.
* ಪುನರ್ಜೀವನವು ಮತ ಸುಧಾರಣೆಗೆ ನಾಂದಿ ಆಯಿತು.
* ಕ್ಯಾಥೋಲಿಕ್ ಚರ್ಚಿನ ಮೂಢನಂಬಿಕೆಗಳು ಮತ್ತು ದಬ್ಬಾಳಿಕೆಯನ್ನು ಕೊನೆಗಾಣಿಸಿತು.
* ಮಾನವೀಯ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕೆ ಒತ್ತು ನೀಡಿತು.
* ಪುನರ್ಜೀವನ ಕಾಲದ ಕಲೆ ಸಾಹಿತ್ಯ ಮತ್ತು ವಿಜ್ಞಾನ ಪ್ರಗತಿಯು ವಿಶಾಲವಾದ ಚಿಂತನೆಗಳ ಬೆಳವಣಿಗೆಗೆ ದಾರಿಯಾಯಿತು.
* ಪುನರುಜ್ಜೀವನ ಮಾನವನ ಸಹಜ ಕುತೂಹಲ ಮತ್ತು ಜ್ಞಾನದಾಹವನ್ನು ಹೆಚ್ಚಿಸಿ ಭೌಗೋಳಿಕ ಅನ್ವೇಷಣೆಗಳಿಗೆ ಕಾರಣವಾಯಿತು.
* ಯುರೋಪಿನ ದೇಶೀಯ ಭಾಷೆಗಳಾದ ಇಂಗ್ಲಿಷ್, ಜರ್ಮನ್, ಸ್ಪ್ಯಾನಿಶ್, ಫ್ರೆಂಚ್, ಇಟಾಲಿಯನ್ ಮತ್ತು ಇತರ ಭಾಷೆಗಳು ಅಪಾರ ಬೆಳವಣಿಗೆಯನ್ನು ಕಂಡವು.