ಕೇಂದ್ರ ಸರ್ಕಾರ,ರಾಜ್ಯ ಸರ್ಕಾರ,ನ್ಯಾಯಾಂಗ. TET, GPSTR, HSTR, FDA, SDA, PDO All Competative exam notes.

* ಭಾರತವು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟ.

* ಶಾಸಕಾಂಗ – ಶಾಸನ ಮಾಡುವುದು.

* ಕಾಯಾಂಗ – ಶಾಸನಗಳನ್ನು ಕಾರ್ಯರೂಪಕ್ಕೆ ತರುವುದು.

* ನ್ಯಾಯಾಂಗ – ನ್ಯಾಯ ನಿರ್ಣಯ ಮಾಡುವುದು.

* ಕೇಂದ್ರ ಶಾಸಕಾಂಗವನ್ನು ಸಂಸತ್ತು/ ಪಾರ್ಲಿಮೆಂಟ್ ಎನ್ನುವರು.

* ಭಾರತದ ಸಂಸತ್ತು ರಾಷ್ಟ್ರಪತಿ, ಲೋಕಸಭೆ, ಮತ್ತು ರಾಜ್ಯಸಭೆಯನ್ನು ಒಳಗೊಂಡಿದೆ.

* ಭಾರತದ ಸಂವಿಧಾನದ 5ನೇ ಭಾಗದ 2 ನೇ ಅಧ್ಯಾಯದಲ್ಲಿ ಸಂಸತ್ತಿನ ಬಗ್ಗೆ ಪ್ರಸ್ತಾಪಿಸಲಾಗಿದೆ.

Table of Contents

    -: ಲೋಕಸಭೆ :-

ಲೋಕಸಭೆಯನ್ನು ಸಂಸತ್ತಿನ ಕೆಳಮನೆ ಎನ್ನುವರು. ಗರಿಷ್ಠ ಸದಸ್ಯರ ಸಂಖ್ಯೆ 522. ( ಪ್ರಸ್ತುತ ಲೋಕಸಭಾ ಸದಸ್ಯರ ಸಂಖ್ಯೆ 543).

ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ 79 ಸ್ಥಾನಗಳನ್ನು ಪರಿಶಿಷ್ಟ ಜಾತಿಗಳಿಗೆ, 41 ಸ್ಥಾನಗಳನ್ನು ಪರಿಶಿಷ್ಟ ವರ್ಗಗಳಿಗೆ ಮೀಸಲಿಡಲಾಗಿದೆ.

-: ಲೋಕಸಭಾ ಸದಸ್ಯರ ಅರ್ಹತೆಗಳು ( ಅಧಿಕಾರವಧಿ ಐದು ವರ್ಷ ) :-

* ಭಾರತದ ಪ್ರಜೆಯಾಗಿರಬೇಕು.

* ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.

* ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಒಳಗಾಗಿರಬಾರದು.

* ದಿವಾಳಿ ಆಗಿರಬಾರದು.

      -: ರಾಜ್ಯಸಭೆ :-

ಇದನ್ನು ಮೇಲ್ಮನೆ ಎಂದು ಕರೆಯುತ್ತಾರೆ. ರಾಜ್ಯಸಭೆಯ ಗರಿಷ್ಠ ಸದಸ್ಯರ ಸಂಖ್ಯೆ 250. ಇದರಲ್ಲಿ 238 ಸದಸ್ಯರು ಎಲ್ಲಾ ರಾಜ್ಯಗಳ ವಿಧಾನಸಭಾ ಸದಸ್ಯರಿಂದ ಆಯ್ಕೆಯಾಗುತ್ತಾರೆ. ಉಳಿದ 12 ಸದಸ್ಯರನ್ನು ರಾಷ್ಟ್ರಪತಿಯವರು ನಾಮಕರಣ ಮಾಡುತ್ತಾರೆ.

 -: ರಾಜ್ಯಸಭಾ ಸದಸ್ಯರ ಅರ್ಹತೆಗಳು ( ಅಧಿಕಾರವಧಿ ಆರು ವರ್ಷ ) :-

* ಕನಿಷ್ಠ 30 ವರ್ಷ ವಯಸ್ಸಾಗಿರಬೇಕು.

* ಲೋಕಸಭಾ ಸದಸ್ಯರು ಹೊಂದಿರುವ ಇನ್ನಿತರ ಅರ್ಹತೆಗಳನ್ನು ಪಡೆದಿರಬೇಕು.

=> ಭಾರತದ ಉಪರಾಷ್ಟ್ರಪತಿಯವರು ರಾಜ್ಯಸಭೆಯ ಸಭಾಧ್ಯಕ್ಷರಾಗಿರುತ್ತಾರೆ.

-: ಪ್ರತಿ ಪಕ್ಷ ನಾಯಕರ ಪಾತ್ರ ಮತ್ತು ಕಾರ್ಯ :-

ಆಡಳಿತ ಸರಕಾರ ತಪ್ಪು ಎಸಗುವುದನ್ನು ಎತ್ತಿ ತೋರಿಸುವುದು ಮತ್ತು ಸರ್ಕಾರದ ನೀತಿಗಳನ್ನು ಪರಾಮರ್ಶಿಸುವುದು ಹಾಗೂ ಸರ್ಕಾರ, ಮಂತ್ರಿಮಂಡಲ, ಅಧಿಕಾರಿಗಳನ್ನು ಎಚ್ಚರಗೊಳಿಸುವುದು.

-: ಸಂಸತ್ತಿನ ಅಧಿಕಾರ ಹಾಗೂ ಕಾರ್ಯಗಳು :-

1. ಶಾಸನೀಯ ಅಧಿಕಾರಗಳು.

ಲೋಕಸಭೆ ಶಾಸನ ರಚನೆಯಲ್ಲಿ ಹೆಚ್ಚು ಅಧಿಕಾರ ಹೊಂದಿದೆ. ಆದರೆ ಯಾವುದೇ ಸಾಮಾನ್ಯ ಮಸೂದೆಗಳಿಗೂ ಉಭಯ ಸದನಗಳ ಅನುಮೋದನೆ ಅಗತ್ಯ.

2. ಆಡಳಿತದ ಮೇಲೆ ನಿಯಂತ್ರಣ.

ಪ್ರತಿಯೊಬ್ಬ ಮಂತ್ರಿಯೂ ತನ್ನ ಇಲಾಖೆಯ ಆಡಳಿತ ನಿರ್ವಹಣೆಯಲ್ಲಿ ಸಂಪೂರ್ಣ ಹೊಣೆಯಾಗಿರುತ್ತಾನೆ. ಸರ್ಕಾರದ ನೀತಿ ಹಾಗೂ ಕಾರ್ಯಕ್ರಮಗಳನ್ನು ಪ್ರಶ್ನಿಸುವ ಮೂಲಕ ಲೋಕಸಭಾ ಮಂತ್ರಿ ಮಂಡಲವನ್ನು ನಿಯಂತ್ರಿಸುತ್ತದೆ.

3. ಹಣಕಾಸಿನ ಅಧಿಕಾರ.

ರಾಷ್ಟ್ರದ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭೆ ಸಂಪೂರ್ಣ ಅಧಿಕಾರ ಹೊಂದಿದೆ. ಹಣಕಾಸು ಮಸೂದೆಯನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬೇಕು (107ನೇ ವಿಧಿ).

4. ನ್ಯಾಯಿಕ ಅಧಿಕಾರ .

ಲೋಕಸಭೆಯು ರಾಷ್ಟ್ರಪತಿಗಳನ್ನು ಮಹಾಭಿಯೋಗ ಪ್ರಕ್ರಿಯೆಯ ಮೂಲಕ ಪದಚ್ಯುತಿಗೊಳಿಸುವ ಅಧಿಕಾರ ಹೊಂದಿದೆ. ಸಂಸದರ, ಸುಪ್ರೀಂ ಮತ್ತು ಹೈಕೋರ್ಟುಗಳ ನ್ಯಾಯಾಧೀಶರ, ರಾಷ್ಟ್ರಪತಿ, ಉಪರಾಷ್ಟ್ರಪತಿಯ ವೇತನ ನಿರ್ಧರಿಸುವ ಮೊದಲಾದ ಅಧಿಕಾರಗಳನ್ನು ಹೊಂದಿದೆ.

   -: ಕೇಂದ್ರ ಕಾರ್ಯಾಂಗ :-

ಕೇಂದ್ರ ಕಾರ್ಯಾಂಗ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಅವರ ಮಂತ್ರಿ ಮಂಡಲವನ್ನು ಒಳಗೊಂಡಿದೆ.

   -: ರಾಷ್ಟ್ರಪತಿ 52ನೇ ವಿಧಿ :-

ರಾಷ್ಟ್ರದ ಪ್ರಥಮ ಪ್ರಜೆ, ಇವರ ಅಧಿಕೃತ ನಿವಾಸ ರಾಷ್ಟ್ರಪತಿ ಭವನ, ರಾಷ್ಟ್ರಪತಿ ಆಗಬೇಕಾದರೆ ಕನಿಷ್ಠ 35 ವರ್ಷ ವಯಸ್ಸಾಗಿದ್ದು ಲೋಕಸಭಾ ಸದಸ್ಯರು ಹೊಂದಿರುವ ಎಲ್ಲಾ ಅರ್ಹತೆಗಳನ್ನು ಪಡೆದಿರಬೇಕು. ಇವರ ಅಧಿಕಾರ ಅವಧಿ ಐದು ವರ್ಷ.

-: ರಾಷ್ಟ್ರಪತಿಗಳ ಅಧಿಕಾರಗಳು :-

* ಪ್ರಧಾನ ಮಂತ್ರಿ ಮತ್ತು ಇತರ ಮಂತ್ರಿಗಳ ನೇಮಕ.

* ಕರಡು ಶಾಸನ ರೂಪಿಸಲು ಅಂಕಿತ .

* ರಕ್ಷಣಾ ಪಡೆಗಳ ಸರ್ವೋಚ್ಚ ಅಧಿಕಾರ.

* ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕ.

* ಅಪರಾಧಿಗಳಿಗೆ ಕ್ಷಮಾದಾನ ನೀಡುವ ಮತ್ತು ಶಿಕ್ಷೆಯನ್ನು ಕಾಯಂಗೊಳಿಸುವ ಅಧಿಕಾರ.

     -: ಉಪರಾಷ್ಟ್ರಪತಿ:-

ಸಂವಿಧಾನದ 63 ನೇ ವಿಧಿಯಲ್ಲಿ ಉಪರಾಷ್ಟ್ರಪತಿ ಅವರ ಬಗ್ಗೆ ಪ್ರಸ್ತಾಪಿಸಲಾಗಿದೆ.

ಕೇಂದ್ರ ಸಂಸತ್ತಿನ ಎರಡು ಸದನಗಳು ಉಪರಾಷ್ಟ್ರಪತಿ ಅವರನ್ನು ಚುನಾಯಿಸುತ್ತಾರೆ. ಉಪರಾಷ್ಟ್ರಪತಿ ಆಗಬೇಕಾದರೆ ಕನಿಷ್ಠ 35 ವರ್ಷ ವಯಸ್ಸು ಹಾಗೂ ರಾಷ್ಟ್ರಪತಿ ಹೊಂದಿರುವ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು. ಇವರ ಅಧಿಕಾರವಧಿ ಐದು ವರ್ಷ.

-: ಪ್ರಧಾನ ಮಂತ್ರಿ ( ಪ್ರಧಾನಮಂತ್ರಿಯವರ ಪಾತ್ರ ) :-

* ಲೋಕಸಭೆಯ ನಾಯಕ.

* ಖಾತೆಗಳ ಹಂಚಿಕೆಯ ಅಧಿಕಾರ.

* ಸಚಿವ ಸಂಪುಟದ ಪುನರ್ ರಚನೆ ಅಧಿಕಾರ.

* ವಿವಿಧ ಇಲಾಖೆಗಳಿಗೆ ಸಚಿವರನ್ನು ನೇಮಕ ಮಾಡುವಂತೆ ರಾಷ್ಟ್ರಪತಿಗೆ ಶಿಫಾರಸು.

* ಸಚಿವರನ್ನು ಪದಚುತಿಗೊಳಿಸುವ ರಾಷ್ಟ್ರಪತಿಯವರಿಗೆ ಶಿಫಾರಸು.

ರಾಷ್ಟ್ರಪತಿ ಭವನದಲ್ಲಿ 340 ಕೊಠಡಿಗಳಿವೆ ಇದು 1929 ರಲ್ಲಿ ಪೂರ್ಣಗೊಂಡಿತು.

   -: ರಾಜ್ಯ ಸರ್ಕಾರ :-

* ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಒಳಗೊಂಡಿದೆ.

* ರಾಜ್ಯ ಶಾಸಕಾಂಗ – ರಾಜ್ಯಪಾಲ, ವಿಧಾನಸಭೆ ಮತ್ತು ವಿಧಾನ ಪರಿಷತ್ ಒಳಗೊಂಡಿದೆ.

   -: ವಿಧಾನಸಭೆ ( ವಿಧಿ 170 ):-

ಇದನ್ನು ಕೆಳಮನೆ ಎಂದು ಕರೆಯುತ್ತಾರೆ. ಕರ್ನಾಟಕದ ವಿಧಾನ ಸಭೆಯ ಸದಸ್ಯರ ಸಂಖ್ಯೆ 224. ಇವರ ಅಧಿಕಾರ ಅವಧಿ ಐದು ವರ್ಷ.

 -: ವಿಧಾನಸಭೆ ಸದಸ್ಯರ ಅರ್ಹತೆಗಳು :-

* ಭಾರತದ ಪ್ರಜೆಯಾಗಿರಬೇಕು.

* ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.

* ಸರ್ಕಾರದ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.

* ದಿವಾಳಿಯಾಗಿರಬಾರದು.

-: ವಿಧಾನಸಭೆಯ ಅಧಿಕಾರ ಮತ್ತು ಕಾರ್ಯಗಳು :-

* ಇದು ರಾಜ್ಯ ಶಾಸಕಾಂಗ.

* ಹಣಕಾಸು ವಿಷಯದಲ್ಲಿ ವಿಧಾನಸಭೆಯ ನಿರ್ಣಯವೇ ಅಂತಿಮ.

* ಮಂತ್ರಿಮಂಡಲದ ಮೇಲೆ ನಿಯಂತ್ರಣ.

* ರಾಷ್ಟ್ರ ಅಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸುವಿಕೆ.

   -: ವಿಧಾನ ಪರಿಷತ್ :-

ಇದನ್ನು ಕೆಳಮನೆ ಎಂದು ಕರೆಯುತ್ತಾರೆ. ಇದರ ಒಟ್ಟು ಸದಸ್ಯರ ಸಂಖ್ಯೆ ವಿಧಾನಸಭೆಯ ಒಟ್ಟು ಸದಸ್ಯರ 1/3 ಕ್ಕಿಂತ ಹೆಚ್ಚಿರಬಾರದು. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರ ಬಲ 75 . ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರ ಅವಧಿ ಆರು ವರ್ಷಗಳು ಮತ್ತು ಇವರಿಗೆ 30 ವರ್ಷ ವಯಸ್ಸಾಗಿರಬೇಕು.

  -: ರಾಜ್ಯ ಕಾರ್ಯಂಗ :-

ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಹಾಗೂ ಮಂತ್ರಿ ಮಂಡಲವನ್ನು ಒಳಗೊಂಡಿದೆ.

-: ರಾಜ್ಯಪಾಲರ ಅರ್ಹತೆಗಳು :-

* ಭಾರತದ ಪ್ರಜೆಯಾಗಿರಬೇಕು.

* ಕನಿಷ್ಠ 35 ವರ್ಷ ವಯಸ್ಸಾಗಿರಬೇಕು.

* ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಸದಸ್ಯರಾಗಿರಬಾರದು.

-: ರಾಜ್ಯಪಾಲರ ಅಧಿಕಾರಗಳು :-

* ಮಂತ್ರಿಮಂಡಲದ ನೇಮಕ.

* ವಿಧೇಯಕ ಜಾರಿಗೆ ಬರಬೇಕಾದರೆ ರಾಜ್ಯಪಾಲರ ಅಂಕಿತ.

* ರಾಜ್ಯ ಸರ್ಕಾರವನ್ನು ವಜಾ ಮಾಡುವ ಅಧಿಕಾರ.

    -: ಮುಖ್ಯಮಂತ್ರಿ:-

ಸರ್ಕಾರದ ಮುಖ್ಯಸ್ಥರಾಗಿದ್ದು, ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಿಸುತ್ತಾರೆ.

-: ಮುಖ್ಯಮಂತ್ರಿ ಅವರ ಅಧಿಕಾರ ಮತ್ತು ಕರ್ತವ್ಯಗಳು :-

* ರಾಜ್ಯಪಾಲರ ಸಲಹೆ ಮೇರೆಗೆ ಮಂತ್ರಿಗಳನ್ನ ನೇಮಕ.

* ಖಾತೆಗಳನ್ನು ನೀಡುವ ಮತ್ತು ಬದಲಾಯಿಸುವ ಅಧಿಕಾರ.

* ಮಂತ್ರಿಗಳನ್ನು ಪದಚ್ಯುತಿಗೊಳಿಸುವ ಅಧಿಕಾರ.

* ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪರ್ಕ ಸೇತುವೆ.

  -: ನ್ಯಾಯಾಂಗ :-

1. ಸರ್ವೋಚ್ಚ ನ್ಯಾಯಾಲಯ.

ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ. ಸರ್ವೋಚ್ಚ ನ್ಯಾಯಾಲಯ ನವದೆಹಲಿಯಲ್ಲಿದೆ. ( ಪ್ರಸ್ತುತವಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು – 27 ಜನವರಿ ಒಂದು 2022 ಎನ್. ವಿ.ರಮನ್ .)

2. ಉಚ್ಚ ನ್ಯಾಯಾಲಯ.

ಪ್ರಸ್ತುತ ಉಚ್ಚ ನ್ಯಾಯಾಲಯಗಳು – 25 ( ಪ್ರಸ್ತುತವಾಗಿ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು Ritu Raj Awasthi).

-: ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅರ್ಹತೆಗಳು :-

* ಭಾರತದ ಪ್ರಜೆಯಾಗಿರಬೇಕು.

* ಕನಿಷ್ಠ 10 ವರ್ಷಗಳ ಕಾಲ ಭಾರತದ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿರಬೇಕು ಅಥವಾ ಹತ್ತು ವರ್ಷಗಳ ಕಾಲ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿರಬೇಕು.

 -: ಅಧೀನ ನ್ಯಾಯಾಲಯಗಳು :-

ಜಿಲ್ಲಾ ನ್ಯಾಯಾಲಯ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಕಿರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಲೋಕ ಅದಾಲತ್ .

 

 

WhatsApp Group Join Now
Telegram Group Join Now