ಕ್ರಾಂತಿಗಳು ಮತ್ತು ರಾಷ್ಟಗಳ ಉದಯ.(TET,GPSTR,HSTR,PDO,FDA,SDA All Competative exam notes).

-: ಉತ್ತರ ಅಮೆರಿಕದ 13 ಇಂಗ್ಲಿಷ್ ವಸಾಹಾತುಗಳು :-

1. ನ್ಯೂಯಾರ್ಕ್

2. ನ್ಯೂ ಹ್ಯಾಂಪ್ಶೈರ್

3. ಪೆನ್ಸಿಲ್ವೇನಿಯಾ

4. ಮಸ್ಸಾಚುಸೆಟ್ಸ್

5. ರೋಡ್ಸ್ ಐಲೆಂಡ್

6. ಕನೆಕ್ಟಿಕಟ್

7. ನ್ಯೂಜೇರ್ಸಿ

8. ದಿಲಾವೇರ್

9. ಮೇರಿಲ್ಯಾಂಡ್

10. ವರ್ಜಿನಿಯಾ

11. ಉತ್ತರ ಕೆರೋಲಿನ್

12. ದಕ್ಷಿಣ ಕೆರೋಲಿನ್

13. ಜಾರ್ಜಿಯಾ

-: ಸಪ್ತವಾರ್ಷಿಕ ಯುದ್ಧ(1756-1763) :-

* ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು.

* 1760 ರಲ್ಲಿ ನೌಕಾ ಕಾಯಿದೆಯು, 1760 ರಲ್ಲಿ ಜಾರಿಯಾಯಿತು.

* 1764 ರಲ್ಲಿ ಜಾರಿಗೆ ತಂದ ” ಮೇಲಾಸಿಸ್ ( ಕಾಕಂಬಿ) ” ಕಾಯಿದೆಯು ಅಮೆರಿಕದ ಮಧ್ಯ ತಯಾರಿಕರಿಗೆ ಕಾಕಂಬಿ ಸಾಗಿಸಲು ಅನುಕೂಲ ಒದಗಿಸಿತು.

* 1774ರ ಕ್ಯೂಬೆಕ್ ಕಾಯ್ದೆಯು ವಸಾಹತುಗಳ ಅಸಹನೆಗೆ ಕಾರಣವಾಯಿತು.

* 1765ರಲ್ಲಿ ಸ್ಟಾಂಪ್ ಕಾಯ್ದೆ ಜಾರಿಗೆ ಬಂದು 1767 ರಲ್ಲಿ ಚಹಾ, ಕಾಗದ, ಗಾಜು ಮುಂತಾದ ವಸ್ತುಗಳ ಮೇಲೆ ತೆರಿಗೆ ಹಾಕಲು ಸಾಧ್ಯವಾಯಿತು.

-: ಬಾಸ್ಟನ್ ಚಹಾಕೂಟ (1773) :-

* ವಿರೋಧವಿದ್ದರೂ ಬ್ರಿಟನ್, ಚಹಾ ಪುಡಿ ತುಂಬಿದ ಹಣವನ್ನು ‘ ಬಾಸ್ಟ್ ನ ‘ ಬಂದರಿಗೆ ಕಳುಹಿಸಿತು ಇದು ವಸಾಹಾತುಗಾರರನ್ನು ಕೆರಳಿಸಿತು.50 ಜನರ ಗುಂಪೊಂದು ರೆಡ್ ಇಂಡಿಯನ್ ರ ವೇಷ ಧರಿಸಿಕೊಂಡು ಚಹಾ ತುಂಬಿದ ಹಡಗನ್ನು ಪ್ರವೇಶಿಸಿ ಅದರಲ್ಲಿದ್ದ 340 ಚಹಾ ಪೆಟ್ಟಿಗೆಗಳನ್ನು ಸಮುದ್ರಕ್ಕೆ ಎಸೆದರು.

-: ಅಮೆರಿಕದ ಸ್ವಾತಂತ್ರ್ಯ ಘೋಷಣೆ :-

* 1775 ಏಪ್ರಿಲ್ 19 ರಂದು ” ಲೆಕ್ಸಿಂಗಟನ್ ” ಎಂಬಲ್ಲಿ ವಸಹಾತುಗಾರರ ಒಂದು ಸೈನ್ಯದ ತುಕಡಿಯು ಬ್ರಿಟಿಷರ ಮೇಲೆ ದಾಳಿ ಮಾಡಿದಾಗ, ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು.

* ಫಿಲಿಡೆಲ್ಫಿಯಾ ಸಭೆಯು ಆಗ ಜಾರ್ಜ್ ವಾಸಿಂಗ್ ಟರ್ನನ್ನು ವಸಾಹತುಗಾರರ ಸೈನ್ಯದ ದಂಡನಾಯಕನನ್ನಾಗಿ ನೇಮಿಸಿತು.

ಜಾರ್ಜ್ ವಾಷಿಂಗ್ಟನ್.

* ಇವನು ವರ್ಜಿನಿಯಾದ ತೋಟಗಾರ

* 1776 ಜುಲೈ 4ರಂದು ಫಿಲಿಡೆಲ್ಫಿಯಾದ ರಾಷ್ಟ್ರೀಯ ಸಭೆಯು ಪ್ರಖ್ಯಾತವಾದ ಸ್ವಾತಂತ್ರ ಘೋಷಣೆಯನ್ನು ಅಂಗೀಕರಿಸಿತು.

* ಜಾರ್ಜ್ ವಾಷಿಂಗ್ಟನ್ ” ಸಾರಟೋಗ ” ಯುದ್ಧದಲ್ಲಿ ಬ್ರಿಟಿಷ್ ಸೈನ್ಯವನ್ನು ಸೋಲಿಸಿದನು.

* ಫ್ರೆಂಚರ ಸೇನೆಯ ಸಹಾಯದಿಂದ ವಾಷಿಂಗ್ಟನ್ ” ಯಾರ್ಕ್ ಟೌನ್ ” ಕದನದಲ್ಲಿ ಬ್ರಿಟಿಷರ ಸೇನೆಯನ್ನು ಸಂಪೂರ್ಣವಾಗಿ ಸೋಲಿಸಿದನು.

* ಬ್ರಿಟಿಷ್ ಸೇನಾನಿ ” ಕಾರ್ನ್ ವಾಲೀಸ್ ” ತನ್ನ ಪಡೆಗಳೊಂದಿಗೆ ಶರಣಾದನು.

* 1783ರ ಪ್ಯಾರಿಸ್ ಒಪ್ಪಂದದಂತೆ 13 ವಸಾಹತುಗಳನ್ನು ಬ್ರಿಟನ್ ಸ್ವತಂತ್ರವೆಂದು ಅಂಗೀಕರಿಸಿತು.

* ಜುಲೈ 4ರಂದು ಸ್ವಾತಂತ್ರ ಘೋಷಣೆ ಮಾಡಿದ್ದರಿಂದ ಅಮೆರಿಕನರಿಗೆ ಅದು ಮಹತ್ವದ ದಿನವಾಯಿತು.

* 1787ರಲ್ಲಿ ಫಿಲಿಡೆಲ್ಫಿಯಾದಲ್ಲಿ ಸ್ವಾತಂತ್ರ ಪಡೆದ ಎಲ್ಲಾ ವಸಾಹತುಗಳ ಪ್ರತಿನಿಧಿಗಳು ಸಭೆ ಸೇರಿ ‘ ಜಾರ್ಜ್ ವಾಷಿಂಗ್ಟನ್ ‘ USA ದ ಅಧ್ಯಕ್ಷನನ್ನಾಗಿ ಆರಿಸಿದರು. ಅವರುಗಳು ಒಂದು ಸಂವಿಧಾನವನ್ನು ರಚಿಸಿದರು. ಅದೇ ಜಗತ್ತಿನ ಪ್ರಥಮ ಲಿಖಿತ ಸಂವಿಧಾನ.

-: ಫ್ರಾನ್ಸಿನ ಮಹಾ ಕ್ರಾಂತಿ :-

* ಫ್ರಾನ್ಸಿನ ಕ್ರಾಂತಿ ಘಟಿಸುವುದರೊಂದಿಗೆ ಯುರೋಪಿನ ಇತಿಹಾಸವು, ಒಂದು ರಾಷ್ಟ್ರ, ಒಂದು ಘಟನೆ ಮತ್ತು ಒಬ್ಬ ವ್ಯಕ್ತಿಯಲ್ಲಿ ಲೀನವಾಯಿತು ಆ ರಾಷ್ಟ್ರವೇ ಫ್ರಾನ್ಸ್, ಆ ಘಟನೆಯೇ ” ಫ್ರೆಂಚ್ ಕ್ರಾಂತಿ” ಮತ್ತು ಆ ವ್ಯಕ್ತಿಯೇ ” ನೆಪೋಲಿಯನ್ ಬೋನಾಪಾರ್ಟೆ “.

-: ಫ್ರಾನ್ಸ್ ಕ್ರಾಂತಿಗೆ ರಾಜಕೀಯ ಕಾರಣಗಳು :-

* ಫ್ರಾನ್ಸ್ ಅನ್ನು ” ಬೂರಬನ್ ” ಮನೆತನದವರು ಆಳುತ್ತಿದ್ದರು ಈ ಸಂತತಿ 16ನೇ ಲೂಯಿ ಭವ್ಯ ಅರಮನೆಯಲ್ಲಿ ರಾಜಮನೆತನದವರೊಂದಿಗೆ ಅವನು ಆರಾಮಾಗಿ ದುಂಡುಗಾರಿಕೆ ಜೀವನವನ್ನು ನಡೆಸುತ್ತಿದ್ದ.

* 16ನೇ ಲೂಯಿಯ ರಾಣಿ ” ಮೇರಿ ಅಂಟಾಯನೆಟ್ ” ಆಸ್ಟ್ರೀಯನ್ ದೇಶದ ರಾಜಕುಮಾರಿ ತನ್ನ ಸುಖ-ಭೋಗಗಳಿಗೆ, ಹಬ್ಬಗಳಿಗೆ ದುಂಡು ವೆಚ್ಚ ಮಾಡುತ್ತಿದ್ದಳು.

* ಮೇರಿ ಅಂಟಾಯನೆಟ್ ಗೆ ಜನರ ಸಂಕಷ್ಟದ ಕಡೆಗೆ ಚಿಂತೆ ಇರಲಿಲ್ಲ, ಅವಳು ದೇಶದ ಆಡಳಿತ ವ್ಯವಹಾರಗಳಲ್ಲಿ ತಲೆ ಹಾಕುತ್ತಿದ್ದಳು. ರಾಜನು ಇವಳನ್ನು ನಿಯಂತ್ರಿಸಲಾಗಲಿಲ್ಲ ಕ್ರಮೇಣ ಪರಿಸ್ಥಿತಿ ಅವನ ಕೈಮೀರಿ ಕ್ರಾಂತಿಯಾಗಿ ಪರಿಣಮಿಸಿತು.

-: ಫ್ರೆಂಚ್ ಪ್ರಸಿದ್ಧ ಚಿಂತಕರು:-

* ಮಾಂಟೆಸ್ಕೋ – ಕೃತಿ – Spirit of low

* ರೂಸೋ – social contract ( ಸಾಮಾಜಿಕ ಒಪ್ಪಂದ )

* ವಾಲ್ಟೈರ್ – ಇವನು ಫ್ರಾನ್ಸಿನಲ್ಲಿ ಪ್ರಚಲಿತ ವಿದ್ದ ಸಾಂಪ್ರದಾಯ, ಏಕಾಚರಣೆ ಹಾಗೂ ಅಂದ ಶ್ರದ್ದೆಯನ್ನು ಖಂಡಿಸಿದನು.ಅಲ್ಲದೆ ರೋಮನ್ ಕ್ಯಾಥೋಲಿಕ್ ಚರ್ಚ್ ನ ಖಂಡಿಸಿದನು.

* ಮಾಂಟೆಸ್ಕೋ ತನ್ನ ಸ್ಪಿರಿಟ್ ಆಫ್ ಲಾಸ್ ಕೃತಿಯಲ್ಲಿ ರಾಜರ ದೈವದತ್ತ ಅಧಿಕಾರ ನಿರಾಧಾರವೆಂದು ಟೀಕಿಸಿ ಸಂವಿಧಾನಿಕ ರಾಜ ಪ್ರಭುತ್ವಕ್ಕೆ ಬೆಂಬಲ ನೀಡಿದನು.

* ರುಸೋ :- ಇವನು ತನ್ನ ಕೃತಿ ಸಾಮಾಜಿಕ ಒಪ್ಪಂದದಲ್ಲಿ  “ಮಾನವ ಸ್ವತಂತ್ರವಾಗಿ ಜನಿಸಿದ, ಆದರೆ ಎಲ್ಲೆಲ್ಲೂ ಸರಪಳಿಯಿಂದ ಬಂದಿಸಲ್ಪಟ್ಟಿದ್ದಾನೆ ” ಎಂದು ಹೇಳಿದ್ದಾನೆ.

* ಅಮೆರಿಕ ಸ್ವಾತಂತ್ರ್ಯ ಸಂಗ್ರಾಮ ಕೂಡ ಫ್ರೆಂಚರ ಮೇಲೆ ಅಗಾಧ ಪ್ರಭಾವವನ್ನುಂಟು ಮಾಡಿತು. ಅಮೆರಿಕಾದಲ್ಲಿ ಇಂಗ್ಲೀಷರ ವಿರುದ್ಧ ಹೋರಾಡಿದ್ದ ಅನೇಕ ಪ್ರಾನ್ಸ್ ಸೈನಿಕರು ತಾಯಿನಾಡಿಗೆ ಹಿಂದಿರುಗಿ ಕ್ರಾಂತಿಕಾರಿಗಳಿಗೆ ಅವಶ್ಯಕವಾದ ಬಲ ಮತ್ತು ಉತ್ಸಾಹಗಳನ್ನು ಒದಗಿಸಿ ಕ್ರಾಂತಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.

* ಈ ಎಲ್ಲಾ ಘಟನೆಗಳಿಂದಾಗಿ ಫ್ರೆಂಚ್ ರಾಜನು 175 ವರ್ಷಗಳಿಂದ ಕರೆಯದಿದ್ದ ” States General ” ಎಂಬ ಫ್ರಾನ್ಸಿನ ಶಾಸಕಾಂಗ ಸಭೆಯನ್ನು ಕರೆಯಬೇಕಾಯಿತು.

* 1789 ಜುಲೈ 14ರಂದು ” ಬ್ಯಾಸ್ಟೈಲ್ ” ಎಂಬ ರಾಜ್ಯ ಮಂದಿ ಖಾನೆಯ ಮೇಲೆ ದಾಳಿ ಮಾಡಿ ಕೈದಿಗಳನ್ನೆಲ್ಲ ಬಿಡುಗಡೆ ಮಾಡಿ ನಿರಂಕುಶ ಪ್ರಭುತ್ವಕ್ಕೆ ಅಂತ್ಯ ಹಾಡಿದರು.

* 1789 ಆಗಸ್ಟ್ 27ರಂದು ಮಾನವನ ಮತ್ತು ಪೌರನ ಹಕ್ಕುಗಳ ಘೋಷಣೆಗಳನ್ನು ಅಂಗೀಕರಿಸಿತು.ರಾಜತ್ವವನ್ನು ತೆಗೆದುಹಾಕಿ ಗಣರಾಜ್ಯವನ್ನು ಸ್ಥಾಪಿಸಿತು.

* ಫ್ರಾನ್ಸಿನಲ್ಲಿ ತೀವ್ರವಾದ ಸುಧಾರಣೆಗಳನ್ನು ಬಯಸುವ ” ಜಾಕೋಬಿಯನ್ನರು ” ಎಂಬ ಗುಂಪು ಅಧಿಕಾರಕ್ಕೆ ಬಂದಿತ್ತು. ಇದರ ನಾಯಕ ” ರೊಬೋಸ್ವಿಯರ್ ” ಪ್ರಭುತ್ವದ ಪರ ಇದ್ದ ಮತ್ತು ಸಂಗೀತ ವ್ಯಕ್ತಿಗಳನ್ನು ಹತ್ಯೆಗಾಗಿಯೇ ಆವಿಷ್ಕರಿಸಿದ್ಧ ” ಗಿಲೋಟಿನ್ ” ಯಂತ್ರಕ್ಕೆ ಬಲಿ ನೀಡಿದನು.

-: ಇಟಲಿ ಏಕೀಕರಣ :-

* ಇಟಲಿಯ ಏಕೀಕರಣದ ಶಿಲ್ಪಿಗಳು :- ಜೋಸೆಫ್ ಮ್ಯಾಜಿನಿ, ಕೌಂಟ್ ಡಿ ಕವೂರ್, ಗ್ಯಾರಿಬಾಲ್ಡಿ

* ಜೋಸೆಫ್ ಮ್ಯಾಜಿನಿ ತನ್ನ ಗ್ರಂಥದಲ್ಲಿ ” ಇಟಲಿ, ಆಸ್ಟ್ರೀಯ, ಪ್ಯಾಪಸಿ” ಯಲ್ಲಿನ ಲೇಖನಗಳಿಂದ ಇಟಲಿ ದೇಶದ ಯುವಕರನ್ನು ಪ್ರಚೋದಿಸಿದನು.

* ಮ್ಯಾಜಿನಿ ” ತರುಣ ಇಟಲಿ”(young Italy) ಎಂಬ ಪಕ್ಷ ಕಟ್ಟಿದ.

* ಕೆಂಪಂಗಿ ದಳ (Red shirts) ಸ್ಥಾಪಕ- ಗ್ಯಾರಿಬಾಲ್ಡಿ

* ” ರಿಸಾರ್ಜಿ ಮೆಂಟೋ ” ಪತ್ರಿಕೆಯನ್ನು ಆರಂಭಿಸಿದವನು – ಕೌಂಟ್ ಡಿ ಕವೂರ್

* ಇಟಲಿಯ ರಾಜಧಾನಿ – ರೋಮ್

-: ಜರ್ಮನಿಯ ಏಕೀಕರಣ :-

* ಜರ್ಮನಿ ಏಕೀಕರಣದ ಪ್ರಧಾನ ಶಿಲ್ಪಿ – ಬಿಸ್ಮಾರ್ಕ್

* ಬಿಸ್ಮಾರ್ಕ್ ರಷ್ಯಾ ರಾಜ್ಯದ ದೊರೆ ಒಂದನೇ ವಿಲಿಯಂ ನ ಮುಖ್ಯಮಂತ್ರಿ ಆಗಿದ್ದನು.

* ರಕ್ತ ಮತ್ತು ಕಬ್ಬಿಣದ ನೀತಿ.

* ರಕ್ತ ಮತ್ತು ಕಬ್ಬಿಣದ ತತ್ವ ಎಂದರೆ ಯುದ್ಧ ನೀತಿ.

* ಬಿಸ್ಮಾರ್ಕ್ ಆಸ್ಟ್ರೀಯವನ್ನು ಸೋಲಿಸಿ 1866 ರಲ್ಲಿ ” ಉತ್ತರ ಜರ್ಮನ್ ರಾಜ್ಯಗಳ ಸಂಘವನ್ನು ರಚಿಸಿದನು” ಪ್ರಷ್ಯಾದ ದೊರೆಯನ್ನು ವಂಶ ಪಾರಂಪರಿಕವಾಗಿ ಈ ರಾಜ್ಯ ಸಂಘದ ಮುಖ್ಯಸ್ಥನನ್ನಾಗಿ ಮಾಡಲಾಯಿತು.

* ಜರ್ಮನ್ ಏಕೀಕರಣಗೊಂಡಾಗ ಪ್ರಷ್ಯಾದ ಒಂದನೇ ವಿಲಿಯಂ ” ಜರ್ಮನ್ ಚಕ್ರವರ್ತಿ ” ಎಂಬ ಬಿರುದು ಧರಿಸಿದನು.

 

WhatsApp Group Join Now
Telegram Group Join Now