ಕ್ರೈಸ್ತ ಧರ್ಮ ಸ್ಥಾಪನೆ ( ಸಾಮಾನ್ಯ ಶಕ 25 ).
* ಏಸುಕ್ರಿಸ್ತ ಇದರ ಸ್ಥಾಪಕ.ಇವರ ಅನುಯಾಯಿಗಳನ್ನು ಕ್ರೈಸ್ತರು ಎನ್ನುವರು. ಶಿಲುಬೆ ಇದರ ಚಿಹ್ನೆ.
-: ಯೇಸು ಕ್ರಿಸ್ತ ( ಸಾಮಾನ್ಯ ಶಕ ಪೂರ್ವ 4 – ಸಾಮಾನ್ಯ ಶಕ 30 ):-
* ಯೇಸು ಕ್ರಿಸ್ತನು ಸಾಮಾನ್ಯ ಶಕ ಪೂರ್ವ 4 ಡಿಸೆಂಬರ್ 25ರಂದು ಪ್ಯಾಲೆಸ್ಟೈನ್ ನಲ್ಲಿದ್ದ ಜೇರುಸಲೆಂನ ಉತ್ತರಕ್ಕೆ ಐದು ಮೈಲಿ ದೂರದ ಬೆತ್ಲೆಹೆಮ್ ಎಂಬ ಹಳ್ಳಿಯ ಒಂದು ದನದ ಹಟ್ಟಿಯಲ್ಲಿ ಜನಿಸಿದನು.
* ಯೇಸು ತನ್ನ 30ನೇ ವಯಸ್ಸಿನಲ್ಲಿ ಜಾನ್ ಬ್ಯಾಪ್ಟಿಸ್ಟ್ ಎಂಬುವವರ ಪ್ರಭಾವಕ್ಕೆ ಒಳಗಾಗಿ ಅವರಿಂದ ದೀಕ್ಷಾಸ್ನಾನ ದೀಕ್ಷೆಯನ್ನು ನೀಡಿದ ಜಾನ್ ಜೀಸಸ್ ರನ್ನು ಮಸೀಹ ಅಥವಾ ಮಹಾರಕ್ಷಕನೆಂದು ಕರೆದರು. ದೀಕ್ಷೆಯ ಸ್ವೀಕಾರದ ನಂತರ ಕಷ್ಟದಲ್ಲಿದ್ದ ಜನರಿಗೆ ದಿವ್ಯಜ್ಞಾನವನ್ನು ಬೋಧಿಸಿ ಅವರಿಗೆ ಮಾನಸಿಕ ನೆಮ್ಮದಿಯನ್ನು ತಂದುಕೋಡುತ್ತಿದ್ದರು.
* ಜೀಸಸರನ್ನು ಗೋಲ್ಗೋಥ ಎಂಬ ಬೆಟ್ಟದಲ್ಲಿ ಒಂದು ಶುಕ್ರವಾರ ದಿನ ಶಿಲುಬೆಗೇರಿಸಿದರು. ಈ ದಿನವನ್ನು ಕ್ರೈಸ್ತ ಸಮುದಾಯದವರು ಗುಡ್ ಫ್ರೈಡೇ ಎಂದು ಆಚರಿಸುತ್ತಾರೆ.
-: ಬೋಧನೆಗಳು :-
1. ದೇವರು ಒಬ್ಬನೇ, ದಯಾಮಯನಾದ ದೇವರು ಸರ್ವ ಜೀವರಾಶಿಗಳ ತಂದೆ.
2. ಪ್ರತಿಯೊಬ್ಬರಲ್ಲಿ ಸಹೋದರತ್ವ ಭಾವನೆ ಇರಬೇಕು.
3. ಪರರಿಂದ ಯಾವುದನ್ನು ಬಯಸದೆ ನಾವು ಅವರ ಸೇವೆಯನ್ನು ಮಾಡಬೇಕು.
4. ಮಾನವನ ಸೇವೆಯು ದೇವರ ಸೇವೆಗೆ ಸಮನಾದದ್ದು.
5. ಮಾನವನು ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟರೆ ಅದರಿಂದ ದೇವರಿಂದ ಕ್ಷಮಾಪಣೆ ಇದೆ.
-: ಕ್ರೈಸ್ತ ಧರ್ಮದ ಪ್ರಚಾರ :-
ಜೀಸಸ್ ರು ಬದುಕಿದ್ದಾಗ ತನ್ನ ತತ್ವಗಳನ್ನು ಪ್ರಪಂಚದ ಎಲ್ಲಾ ಭಾಗಗಳಿಗೂ ತಲುಪಿಸಿ. ಆ ಮೂಲಕ ಕಷ್ಟದಲ್ಲಿರುವವರನ್ನು ರಕ್ಷಿಸಬೇಕೆಂದು ಜವಾಬ್ದಾರಿಯನ್ನು ಮತ್ತು ದೀಕ್ಷೆಯನ್ನು ತನ್ನ 12 ಜನ ಶಿಷ್ಯರಿಗೆ ವಹಿಸಿದರು. ಅವರನ್ನು ಅಪೋಸಲ್ಸ್ ಎಂದು ಕರೆಯಲಾಗಿದೆ.
* ಕ್ರೈಸ್ತ ಧರ್ಮದ ಪವಿತ್ರ ಗ್ರಂಥ – ಬೈಬಲ್.
-: ಕ್ರೈಸ್ತ ಧರ್ಮದ ಕೊಡುಗೆಗಳು :-
1. ಕ್ರೈಸ್ತ ಧರ್ಮ ಪ್ರಪಂಚಕ್ಕೆ ಶಾಂತಿ ಮತ್ತು ಸಹೋದರತೆ ತತ್ವಗಳನ್ನು ನೀಡಿದೆ.
2. ಚರ್ಚೆಗಳು ಹಾಗೂ ಕೆಲವು ಧರ್ಮಪ್ರಚಾರಕರು ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ ಶಿಕ್ಷಣದ ಬೆಳವಣಿಗೆಗೆ ಕಾರಣರಾದರು.
3. ಕ್ರೈಸ್ತ ಧರ್ಮವು ಕಟ್ಟಡಗಳ ನಿರ್ಮಾಣ ವಿನ್ಯಾಸಕ್ಕೆ ಗೋಥಿಕ್ ಶೈಲಿಯನ್ನು ಪರಿಚಯಿಸಿದೆ.
4. ಕ್ರೈಸ್ತ ಧರ್ಮ ಪ್ರಚಾರಕರು ವೈದ್ಯಕೀಯ ಸೇವೆಗಳನ್ನು ಪ್ರಪಂಚದಾದ್ಯಂತ ವಿಸ್ತರಿಸಿದರು.
5. ಸ್ತ್ರೀಯರು ಮತ್ತು ದುರ್ಬಲ ಸಮುದಾಯಗಳಿಗೆ ಶಿಕ್ಷಣವನ್ನು ನೀಡಿದ್ದರಿಂದ ಗುಣಾತ್ಮಕ ಸಾಮಾಜಿಕ ಬದಲಾವಣೆಗಳು ಆದವು. ಇದನ್ನೇ ಸಬಲಿಕರಣ ಎಂದು ಕರೆಯಲಾಗಿದೆ.
-: ಕ್ರೈಸ್ತ ಧರ್ಮ ಪಂಗಡಗಳು :-
1. ರೋಮನ್ ಕ್ಯಾಥೋಲಿಕ್ ಪಂಥ
2. ಪ್ರೊಟೆಸ್ಟೆಂಟ್ ಪಂಥ
3. ಕ್ಯಾಥ್ರೋ ಡಾಕ್ ಪಂಥ
-: ಇಸ್ಲಾಂ ಧರ್ಮ :-
ಮಹಮದ್ ಪೈಗಂಬರ್( ಸಾಮಾನ್ಯ ಶಕ 570-632).
* ಮಹಮದ್ ಪೈಗಂಬರ್ ಸಾಮಾನ್ಯ ಶಕ 570 ರಲ್ಲಿ ಮೆಕ್ಕಾದ ಖುರೈಸಿ ಪಂಗಡಕ್ಕೆ ಸೇರಿದ ಕುಟುಂಬದಲ್ಲಿ ಆಗಸ್ಟ್ 29 ರಂದು ಜನಿಸಿದರು. ತಂದೆ- ಅಬ್ದುಲ್ಲಾ ಹುಟ್ಟುವ ಮೊದಲೇ ತೀರಿಕೊಂಡಿದ್ದರು. ತಾಯಿ – ಅಮೀನಾ ಮಹಮ್ಮದರ 6ನೇ ವಯಸ್ಸಿನಲ್ಲಿ ತೀರಿಕೊಂಡರು ನಂತರ ಮಹಮ್ಮದರು ಅವನ ತಾತ ಅಬ್ದುಲ್ಲಾ ಮುತ್ತಾಲಿಬ್ ಮತ್ತು ಚಿಕ್ಕಪ್ಪ ಅಬುತಾಲಿಬ್ ರ ಆರೈಕೆಯಲ್ಲಿ ಬೆಳೆದರು. ಬಡತನವೇ ಕಾರಣವಾಗಿ ಮಹಮ್ಮದರು ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಿದೆ ಚಿಕ್ಕಪ್ಪನಿಗೆ ವ್ಯಾಪಾರದಲ್ಲಿ ಸಹಾಯಕರಾಗಿ ನಿಂತರು.
-: ಹಿಜರಾಶಕೆ :-
ಮೊಹಮ್ಮದರು ಮೆಕ್ಕಾದಿಂದ ಮದೀನಕ್ಕೆ ಸೆಪ್ಟೆಂಬರ್ 30, ಸಾಮಾನ್ಯ ಶಕ 622 ರಂದು ತನ್ನ 200 ಅನುಯಾಯಿಗಳೊಂದಿಗೆ ಪಲಾಯನ ಮಾಡಿದರು. ಈ ಘಟನೆಯನ್ನು ” ಹಿಜಿರಾ ” ಎನ್ನುವರು.
-: ಇಸ್ಲಾಂ ಧರ್ಮ ಬೋಧನೆಗಳು :-
ಇಸ್ಲಾಂ ಎಂದರೆ ಒಬ್ಬ ದೇವರಿಗೆ ಶರಣಾಗು, ಮುಸ್ಲಿಂ ಎಂದರೆ ದೇವರ ಅನುಯಾಯಿ ಎಂಬುದಾಗಿದೆ.
1. ದೇವರು ಒಬ್ಬನೇ. ಆತನೇ ಅಲ್ಲಾ. ಅಲ್ಲಾನನ್ನು ಒಲಿಸಿಕೊಳ್ಳಲು ಸರಳ ಪ್ರಾರ್ಥನೆಯೊಂದು ಸಾಕು.
2. ಪ್ರಾಮಾಣಿಕತೆ ಮತ್ತು ನೀತಿಯುತ ಜೀವನ ನಡೆಸಬೇಕು. ದುಶ್ಚಟಗಳಿಂದ ದೂರವಿರಬೇಕು.
3. ದೀನ ದುರ್ಬಲರ ಬಗ್ಗೆ ಕರುಣೆ ಹಾಗೂ ಸ್ತ್ರೀಯರ ಬಗ್ಗೆ ಗೌರವ ಇರಬೇಕು.
-: ಇಸ್ಲಾಂ ಧರ್ಮ ಆಚರಣೆಗಳು :-
ಇಸ್ಲಾಂ ಧರ್ಮದಲ್ಲಿ ಐದು ಪ್ರಮುಖ ಆಚರಣೆಗಳಿವೆ.
1. ಕಲೀಮಾ – ಅಲ್ಲಾನಲ್ಲಿ ಮಾತ್ರ ನಂಬಿಕೆ. ಮಹಮ್ಮದ್ ರು ಅವರು ಪ್ರವಾದಿಗಳು ಎಂದು ನಂಬುವುದು.
2. ನಮಾಜ್ – ಪ್ರತಿದಿನ ಐದು ಬಾರಿ ಕಾಬಾದ ಕಡೆಗೆ ಮುಖ ಮಾಡಿ ಅಲ್ಲಾಹನಿಗೆ ಪ್ರಾರ್ಥನೆ ಸಲ್ಲಿಸಬೇಕು.
3. ರೋಜಾ – ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವುದು.
4. ಜಕಾತ್ – ಆದಾಯದಲ್ಲಿ ನಿಗದಿಪಡಿಸಿದ ಭಾಗವನ್ನು ಬಡವರಿಗೆ ದಾನ ಮಾಡಬೇಕು.
5. ಹಜ್ – ಜೀವನದಲ್ಲಿ ಒಂದು ಬಾರಿ ಮೆಕ್ಕಾ ಯಾತ್ರೆ ಕೈಗೊಳ್ಳ ಬೇಕು
-: ಇಸ್ಲಾಂ ಧರ್ಮದ ಪ್ರಚಾರ :-
ಮಹಮ್ಮದ ಪೈಗಂಬರರ ಮರಣದ ತರುವಾಯ ಧರ್ಮ ಪ್ರಚಾರದ ಜವಾಬ್ದಾರಿಯನ್ನು ಖಲೀಫರು ತೆಗೆದುಕೊಂಡರು. ಇವರನ್ನು ಪೈಗಂಬರರ ಉತ್ತರಾಧಿಕಾರಿಗಳು ಎಂದೇ ಕರೆಯುತ್ತಾರೆ.ಇವರ ಪ್ರಾಮಾಣಿಕ ಪ್ರಯತ್ನದಿಂದ ಕೇವಲ ಒಂದು ಶತಮಾನದಲ್ಲಿ ಇಸ್ಲಾಂ ಧರ್ಮ ಪಶ್ಚಿಮ ಸ್ಪೇನ್ ಇಂದ ಪೂರ್ವದ ಭಾರತದವರಿಗೆ ಪ್ರಚಾರವಾಯಿತು.
-: ಇದಕ್ಕೆ ಕಾರಣವಾದ ಅಂಶಗಳು :-
1. ಇಸ್ಲಾಂ ಧರ್ಮದ ಸರಳತೆ
2. ಖಲೀಫರು ಧರ್ಮಪ್ರಚಾರದ ಕಾರ್ಯಚಟುವಟಿಕೆಗಳು
3. ಇಸ್ಲಾಂ ಧರ್ಮಿಯರ ಶ್ರದ್ಧೆ
4. ಸುಲ್ತಾನರುಗಳು ಧಾರ್ಮಿಕ ಆಸಕ್ತಿ
5. ಪೂರಕವಾಗಿ ಸೃಷ್ಟಿಯಾದ ರಾಜಕೀಯ ಸನ್ನಿವೇಶಗಳು
-: ಇಸ್ಲಾಂ ಧರ್ಮದ ಕೊಡುಗೆಗಳು :-
ವೈದ್ಯಕೀಯ,ವಿಜ್ಞಾನ, ಕಲೆ ಮತ್ತು ವಾಸ್ತುಶಿಲ್ಪ
-: ಇಸ್ಲಾಂ ಧರ್ಮದ ಪಂಗಡಗಳು :-
1. ಸುನ್ನಿ
2. ಶಿಯಾ