-: ಗಾಂಧಿ ಯುಗ (1919-1947):-
* ಗಾಂಧೀಜಿಯವರು ಸಾಮಾನ್ಯ ಶಕ 1869 ರ ಅಕ್ಟೋಬರ್ 2 ರಂದು ಗುಜರಾತ್ ರಾಜ್ಯದ ಪೋರ್ಬಂದರ್ ಎಂಬಲ್ಲಿ ಕರಮ್ ಚಂದ್ ಗಾಂಧಿ ಮತ್ತು ಪುತಲೀಬಾಯಿ ಅವರ ಮಗನಾಗಿ ಜನಿಸಿದರು.
-: ಗಾಂಧೀಜಿಯವರ ಜೀವನದ ಮೇಲೆ ಪ್ರಭಾವ ಬೀರಿದ ಕೃತಿಗಳು :-
* ಭಗವದ್ಗೀತೆ
* ಜಾನ್ ರಸ್ಕಿನ್ ನ ಕೊನೆಯ ತನಕ (Unto this last).
* ಟಾಲ್ ಸ್ಟಾಯ್ ಅವರ ನಿನ್ನಂತರಂಗವೇ ದೇವರ ರಾಜ್ಯ (The kingdom of God is within you).
* ಸತ್ಯ ಹರಿಶ್ಚಂದ್ರ ನಾಟಕ.
-: ಮಹಾತ್ಮ ಗಾಂಧೀಜಿ ಅವರು ದಾದಾ ಅಬ್ದುಲ್ಲಾ ಕಂಪನಿಯ ಆಹ್ವಾನದ ಮೇರೆಗೆ ಕಾನೂನು ಸಲಹೆಗಾರರಾಗಿ ದಕ್ಷಿಣ ಆಫ್ರಿಕಕ್ಕೆ ತೆರಳಿದರು. :-
* ಮಹಾತ್ಮ ಗಾಂಧೀಜಿ ಅವರು 1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿದರು.
* ಮಹಾತ್ಮ ಗಾಂಧಿಯವರು ಅಹಮದಾಬಾದ್ ಬಳಿ ಸಾಬರಮತಿ ಆಶ್ರಮವನ್ನು ಸಾಮಾನ್ಯ ಶಕ 1916 ರಲ್ಲಿ ಸ್ಥಾಪಿಸಿದರು.
* ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರು ” ಗೋಪಾಲ ಕೃಷ್ಣ ಗೋಖಲೆ ”
-: ಚಂಪಾರಣ್ಯ ಸತ್ಯಾಗ್ರಹ:-
* ಬಿಹಾರ ರೈತರ ಪ್ಲಾಂಟರ್ಗಳ ವಿರುದ್ಧ ಹೊಂದಿರುವ ಅಸಮಾಧಾನ ಮತ್ತು ಪ್ರತಿಭಟನೆಗೆ ಸುದೀರ್ಘ ಇತಿಹಾಸವಿದೆ. ಪ್ಲಾಂಟರ್ಗಳು ಬಲವಂತವಾಗಿ ನೀಲಿ ಬೆಳೆಯುವಂತೆ ರೈತರನ್ನು ಒತ್ತಾಯಿಸುತ್ತಿದ್ದರು. ಗಾಂಧೀಜಿ ಅವರ ವಿರುದ್ಧ ಸಾಮಾನ್ಯ ಶಕ 1917 ರಲ್ಲಿ ಚಂಪಾರಣ್ಯ ಸತ್ಯಾಗ್ರಹವನ್ನು ಆರಂಭಿಸಿದರು. ಕೊನೆಯಲ್ಲಿ ರೈತರ ಸಮಸ್ಯೆ ಪರಿಹಾರ ಕಂಡಿತು.
-: ಖೇಡಾ ರೈತ ಹೋರಾಟ:-
* ಖೇಡಾ ಗುಜರಾತ್ ರಾಜ್ಯದ ಪ್ರಮುಖ ಜಿಲ್ಲೆ ಸಾಮಾನ್ಯ ಶಕ 1918 ರ ಸಂದರ್ಭದಲ್ಲಿ ಬೆಳೆಗಳು ವಿಫಲವಾಗಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದರು. ಈ ಹಿನ್ನೆಲೆಯಲ್ಲಿ ಅವರು ಕಂದಾಯ ಕಟ್ಟುವುದರಿಂದ ವಿನಾಯಿತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸರ್ಕಾರ ಇವರ ಮನವಿಯನ್ನು ತಿರಸ್ಕರಿಸಿದ್ದರಲ್ಲಾದೆ ಕಂದಾಯ ಸಂಗ್ರಹಣೆಗೆ ಒತ್ತಾಯಿಸಿತು. ಅಂತಿಮವಾಗಿ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡು ಸರ್ಕಾರ ಜಾರಿಗೆ ಸಾಧ್ಯವಾಗುತ್ತದೆಯೋ ಅಂತ ರೈತರು ಕಂದಾಯವನ್ನು ಕಟ್ಟಬಹುದೆಂದು ತಿಳಿಸಿತು. ಇದನ್ನು ಒಪ್ಪಿದ ಗಾಂಧೀಜಿಯವರು ಈ ಚಳುವಳಿಯನ್ನು ಕೈ ಬಿಡಲು ಒಪ್ಪಿದರು.
* ಈ ಹೋರಾಟದ ಮೂಲಕ ರಾಜಕೀಯವಾಗಿ ಬೆಳೆದ ನಾಯಕರೆಂದರೆ ” ಸರ್ದಾರ್ ವಲ್ಲಬಾಯ್ ಪಟೇಲ್ ”
-: ಖಿಲಾಫತ್ ಚಳುವಳಿ :-
* 1919ರಲ್ಲಿ ಕಮಲ್ ಪಾಶಾ ಎಂಬ ನಾಯಕನು ಟರ್ಕಿಯ ಖಲೀಫರ ಅರಸೊತ್ತಿಗೆಯನ್ನು ಮೂಲೆಗೊತ್ತಿ ಅಧಿಕಾರಕ್ಕೆ ಏರಿದನು. ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ಮುಸ್ಲಿಮರು ಖಲೀಫರ ಪರವಾಗಿಯೂ ಬ್ರಿಟನ್ನಿನ ವಿರುದ್ಧವಾಗಿಯೂ ಆಂದೋಲನವನ್ನು ನಡೆಸಿದರು ಇದನ್ನು ಖಿಲಾಪತ್ ಚಳುವಳಿ ಎನ್ನುವರು.
* ಗಾಂಧೀಜಿಯವರು ಚಳುವಳಿಯ ಮುಂದಾಳತ್ವವನ್ನು ವಹಿಸಿದರು.
* ಖಿಲಾಫತ್ ಚಳುವಳಿಯ ಪ್ರಮುಖ ನಾಯಕರು ಮೊಹಮ್ಮದ್ ಅಲಿ ಮತ್ತು ಶೌಕತ್ ಅಲಿ ಇವರನ್ನು ಸಹೋದರರು ಎನ್ನುವರು.
-: ಅಸಹಕಾರ ಚಳುವಳಿ (1920-1922):-
* ರವೀಂದ್ರನಾಥ್ ಟ್ಯಾಗೋರ್ ಪ್ರಶಸ್ತಿಯನ್ನು ಮತ್ತು ಗಾಂಧೀಜಿಯವರು ತಮ್ಮ ಕೈಸರ್-ಐ-ಹಿಂದ್ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿದರು.
* ಸಾಮಾನ್ಯ ಶಕ 1922 ರಲ್ಲಿ ಉತ್ತರ ಪ್ರದೇಶದ ಚೌರಿ ಚೌರದಲ್ಲಿ ಉದ್ರಿಕ್ತ ಜನಸ್ತೋಮ ಹಿಂಸಾ ಕೃತ್ಯದಲ್ಲಿ ತೊಡಗಿ ಅಲ್ಲಿನ ಠಾಣೆಯ 22 ಜನ ಪೊಲೀಸರನ್ನು ಸಜೀವವಾಗಿ ಸುಟ್ಟಿತು. ಗಾಂಧೀಜಿಯವರು ಇದರಿಂದ ಮನನೊಂದು ಅಸಹಕಾರ ಚಳುವಳಿಯನ್ನು ಹಿಂತೆ ತೆಗೆದುಕೊಂಡರು.
-: ಗಾಂಧೀಜಿ ಅವರ ಪ್ರಮುಖ ಕೃತಿಗಳು ಮತ್ತು ಪತ್ರಿಕೆಗಳು :-
* ಸತ್ಯದೊಂದಿಗೆ ನನ್ನ ಪ್ರಯೋಗಗಳು.
* ಹಿಂದೂ ಸ್ವರಾಜ್ಯ.
* ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ.
-: ಪತ್ರಿಕೆಗಳು:-
* ಹರಿಜನ.
* ಯಂಗ್ ಇಂಡಿಯಾ.
-: ನೆಹರು ವರದಿ -1927.
-: ಸೈಮನ್ ನಿಯೋಗ-1928.
* ಬ್ರಿಟಿಷ್ ಸರ್ಕಾರ ಸಾಮಾನ್ಯ ಶಕ 1919 ರ ಸುಧಾರಣೆಗಳು ಭಾರತದ ಪ್ರಾಂತ್ಯಗಳಲ್ಲಿ ಹೇಗೆ ಕಾರ್ಯ ಕೈಗೊಂಡಿದೆ ಎಂದು ಅಧ್ಯಯನ ಮಾಡಿ ವರದಿ ನೀಡಲು ಸಂಯೋಗವನ್ನು 1928 ರಲ್ಲಿ ಭಾರತಕ್ಕೆ ಕಳುಹಿಸಿತು. ಆದರೆ ಆ ನಿಯೋಗದಲ್ಲಿ ಎಲ್ಲಾ ಸದಸ್ಯರು ಇಂಗ್ಲಿಷ ಆಗಿದ್ದರು. ಭಾರತೀಯರಿಗೆ ಇದರಲ್ಲಿ ಪ್ರಾತಿನಿಧ್ಯ ಇರಲಿಲ್ಲ. ಆದ್ದರಿಂದ ಭಾರತೀಯರು ” ಸೈಮನ್ ರೆ ಹಿಂತಿರುಗಿ” ಎಂಬ ಘೋಷಣೆಯನ್ನು ಕೂಗಿದರು.
* ಲಾಹೋರಿನಲ್ಲಿ ನಡೆದ ಬಹಿರಂಗ ಪ್ರತಿಭಟನೆಯು ತೀವ್ರ ಸ್ವರೂಪವನ್ನು ಪಡೆದಿದ್ದಲ್ಲದೆ, ಲಾಟಿ ಪ್ರಯೋಗದಲ್ಲಿ ಲಾಲಾ ಲಜಪತ್ ರಾಯ್ ಅವರು ಚೇತರಿಸಿಕೊಳ್ಳಲಾಗದೆ ಮರಣ ಹೊಂದಿದರು.