ಚೋಳರು ಮತ್ತು ಹೊಯ್ಸಳರು .TET,GPSTR,HSTR,PDO All Competative exam notes.

   -: ಚೋಳರು :-

* ದಕ್ಷಿಣದಲ್ಲಿ 9ನೇ ಶತಮಾನದಿಂದ 13 ನೇ ಶತಮಾನದವರೆಗೆ ಆಳಿದರು.

* ಚೋಳರ ಮನೆತನದ ಸ್ಥಾಪಕ – ಕರಿಕಾಲ ಚೋಳ

ಒಂದನೇ ಪರಾತಂಕ ಚೋಳ.

* ಇವನು ಚೋಳರ ಆಡಳಿತವನ್ನು ತಿಳಿಸುವ ” ಉತ್ತರ ಮೇರೂರು ” ಶಾಸನ ಹೊರಡಿಸಿದನು.

ಒಂದನೇಯ ರಾಜರಾಜ.

* ಚೋಳರ ಪ್ರಮುಖ ರಾಜ – ಒಂದನೇ ರಾಜರಾಜ.

* ಚೋಳ ರಾಜ್ಯದ ಶಿಲ್ಪಿಯಾಗಿ ಅದರ ತಳಹದಿಯನ್ನು ಮಾಡಿ ತನ್ನ ರಾಜ್ಯವನ್ನು ವಿಸ್ತರಿಸಿದನು.

* ಚೇರರನ್ನು, ಗಂಗರನ್ನು ಮತ್ತು ಪಾಂಡ್ಯರನ್ನು ಸೋಲಿಸಿದನು.

* ನೌಕಾ ಸೈನ್ಯವನ್ನು ನಿರ್ಮಿಸಿ ಶ್ರೀಲಂಕಾ ವನ್ನು ವಶಪಡಿಸಿಕೊಂಡನು.

* ಮಲೇಶಿಯಾ, ಸಿಂಗಾಪುರಗಳಲ್ಲಿ ಇಂದಿಗೂ ತಮಿಳರ ಪ್ರಾಬಲ್ಯವನ್ನು ಗಮನಿಸಬಹುದು.

* ಈತನು ಕಟ್ಟಿದ ತಾಂಜಾವೂರಿನ ಬೃಹದೇಶ್ವರ ದೇವಾಲಯವು ಅತ್ಯಂತ ಪ್ರಸಿದ್ಧವಾದದ್ದು.

ಒಂದನೇ ರಾಜೇಂದ್ರ ಚೋಳ.

* ಇವನು ರಾಜರಾಜ ಚೋಳನ ಮಗ.

* ಇವನು ಉತ್ತರದ ಗಂಗಾ ನದಿಯವರೆಗೆ ದಾಳಿ ಮಾಡಿ ಮಹಿಪಾಲನನ್ನು ಸೋಲಿಸಿದ ಗಂಗೈಕೊಂಡ ಎಂಬ ಬಿರುದನ್ನು ಧರಿಸಿದನು.

* ತನ್ನ ಆಸ್ಥಾನದಿಂದ ಚೀನಾ ದೇಶಕ್ಕೆ ರಾಯಭಾರಿಗಳನ್ನು ಕಳುಹಿಸಿದನು.

  -: ಚೋಳರ ಆಡಳಿತ :-

* ರಾಜ್ಯವನ್ನು ಮಂಡಲಂ, ಕೊಟ್ಟಂಗಿ , ನಾಡು, ಕುರ್ರಂ/ ಗ್ರಾಮ ಸಮುದಾಯ ಎಂದು ಭಾವಿಸಲಾಗಿತ್ತು.

* ಪ್ರತಿ ಗ್ರಾಮದಲ್ಲೂ ” ಊರ್ ” ಎಂಬ ಪ್ರಜೆಗಳ ಸಭೆ ಇತ್ತು.

* ಚೋಳರ ಆಳ್ವಿಕೆಯ ಪ್ರಮುಖ ಲಕ್ಷಣ ಗ್ರಾಮದ ಸ್ವಯಮಾಧಿಪತ್ಯದ ಬೆಳವಣಿಗೆ.

* ಗ್ರಾಮ ಸಭೆಗಳು ಪ್ರಥಮ ಸಭೆಗಳಾಗಿದ್ದವು. ತರ- ಕುರ್ರಂ ಒಂದು ಹಳ್ಳಿ. ಪ್ರತಿ ಕುರ್ರಂಗೂ ಮಹಾಸಭಾ ಎನ್ನುವರು ಗ್ರಾಮ ಸಭೆ ಇತ್ತು. ಇದನ್ನು ಪೆರುಂಗುರಿ ಎಂದು ಅದರ ಸದಸ್ಯರನ್ನು ಪೆರುಮಕ್ಕಳ್ ಎಂದು ಕರೆಯಲಾಗುತ್ತಿತ್ತು ಇದರ ಸದಸ್ಯರನ್ನು ಚುನಾವಣೆ ಮೂಲಕ ಹಾರಿಸಲಾಗುತ್ತಿತ್ತು.

      -: ಸಾಹಿತ್ಯ :-

* ಕಂಬನ್ – ಕಂಬನ್ ರಾಮಾಯಣ

* ಸೆಕ್ಕಿಲಾರ್ – ಪೆರಿಯಪುರಾಣ

* ತಿರುಕ್ಕಾದೇವನ – ಜೀವಕ ಚಿಂತಾಮಣಿ

  -: ಕಲೆ ಮತ್ತು ವಾಸ್ತು ಶಿಲ್ಪ :-

* ಚೋಳರು ಶೈವರಾಗಿದ್ದು ಅನೇಕ ಶಿವಾ ದೇವಾಲಯಗಳು ನಿರ್ಮಿಸಿದರು.

* ತಂಜಾವೂರಿನ ಬೃಹದೇಶ್ವರ ದೇವಾಲಯ 500 ಅಡಿ ಉದ್ದ 250 ಅಡಿ ಅಗಲದ ವಿಶಾಲ ಪ್ರಾಾಕಾರದಲ್ಲಿದೆ ಅದರ ಶಿಖರ 200 ಅಡಿ ಎತ್ತರವಾಗಿದೆ.

* ಅನೇಕ ಅಗ್ರಹಾರಗಳನ್ನು ಸ್ಥಾಪಿಸಿದರು ಇವು ಧಾರ್ಮಿಕ ಚಟುವಟಿಕೆ ಕೇಂದ್ರಗಳಾಗಿದ್ದವು.

-: ಹೊಯ್ಸಳರು ( ಸಾಮಾನ್ಯ ಶಕ 1000-1346).:-

* ಹೊಯ್ಸಳರ ಸಾಮ್ರಾಜ್ಯದ ಸ್ಥಾಪಕ – ಸಳ ಅಥವಾ ನೃಪಕಾಮ

* ರಾಜಧಾನಿ – ಸೊಸೆಯೂರು ಅಥವಾ ಶಶಕಪುರ

* ಲಾಂಛನ – ಹುಲಿಯನ್ನು ಕೊಲ್ಲುತ್ತಿರುವ ಸಳನ ಚಿತ್ರ

* ರಾಜ್ಯ ಸ್ಥಾಪನೆಗೆ ಕಾರಣವಾದ ಗುರುಗಳು – ಸುಧತ್ತಾಚಾರ್ಯ

ವಿನಯಾದಿತ್ಯ ( ಸಾಮಾನ್ಯ ಶಕ 1047-958).

* ಇವನು ತನ್ನ ರಾಜಧಾನಿಯನ್ನು ಸೊಸೆಯು ರಿಂದ ಹಳೇಬೀಡಿಗೆ ವರ್ಗಾಯಿಸಿದನು.

ವಿಷ್ಣುವರ್ಧನ ( ಸಾಮಾನ್ಯ ಶಕ -1108-1152).

* ಇವನ ಮೂಲ ಹೆಸರು ಬಿಟ್ಟಿದೇವ.

* ಸಾಮಾನ್ಯ ಶಕ 1114-1116 ಅವಧಿಯಲ್ಲಿ ಚೋಳರಿಂದ ತಲಕಾಡು, ಕೋಲಾರಗಳನ್ನು ಪಡೆದುಕೊಂಡನು.

* ವಿಷ್ಣುವರ್ಧನನ ಪಟ್ಟ ಧರಿಸಿ ನಾಟ್ಯರಾಣಿ ಶಾಕುಂತಲೆಯು ನೃತ್ಯದಲ್ಲಿ ಪರಿಣಿತಿ ಹೊಂದಿದ್ದಕ್ಕಾಗಿ ನಾಟ್ಯ ಸರಸ್ವತಿ ಎಂದು ಕರೆಯಲಾಗುತ್ತಿತ್ತು.

* ವೈಷ್ಣವ ಆಚಾರ್ಯನಾದ ರಾಮಾನುಜಾಚಾರ್ಯರು ಶೈವನಾದ ಚೋಳ ಅರಸ ಕುಲೋತಗ ಚೋಳನ ಕಿರುಕುಳ ತಾಳದೆ ಕರ್ನಾಟಕಕ್ಕೆ ಬಂದು ವಿಷ್ಣುವರ್ಧನನ ಆಶ್ರಯದಲ್ಲಿ ಮೇಲುಕೋಟೆಯಲ್ಲಿ ನಡೆಸಿದನು.

ಒಂದನೇ ನರಸಿಂಹ ( ಸಾಮಾನ್ಯ ಶಕ 1142-1173).

* ಇವನ ಆಳ್ವಿಕೆ ಸಂದರ್ಭದಲ್ಲಿ ಕಲ್ಯಾಣದಲ್ಲಿ ಚಾಲುಕ್ಯರನ್ನು ಸೋಲಿಸಿದ ಬಿಜ್ಜಳ ಅರಸ ಕಲಚೂರಿ ಮನೆತನವನ್ನು ಸ್ಥಾಪಿಸಿದನು.

* ಎರಡನೇ ವೀರ ಬಲ್ಲಾಳ ಸಾಮಾನ್ಯ ಶಕ 1173-1220.

* ಎರಡನೇ ವೀರ ನರಸಿಂಹ ಸಾಮಾನ್ಯ ಶಕ 1220-1235.

* ವೀರಸೋಮೇಶ್ವರ ಸಾಮಾನ್ಯ ಶಕ 1225-1235.

ಮೂರನೇ ಬಲ್ಲಾಳ (ಸಾಮಾನ್ಯ ಶಕ1292-1342).

* ಹೊಯ್ಸಳ ಸಂತತಿಯ ಕೊನೆಯ ಪ್ರಸಿದ್ಧ ದೊರೆ.

  -: ಹೊಯ್ಸಳರ ಆಡಳಿತ :-

* ಪಂಚ ಪ್ರಧಾನರು ಎಂದು ಕರೆಯಲ್ಪಡುವ ಐದು ಜನ ಮಂತ್ರಿಗಳು ಆಡಳಿತದಲ್ಲಿ ನೆರವಾಗುತ್ತಿದ್ದರು.

1. ಮಾಹಾಸಂದಿ ವಿಗ್ರಹಿ – ಯುದ್ಧ ಮತ್ತು ವಿದೇಶಾಂಗ ವ್ಯವಹಾರ ಮಂತ್ರಿ

2. ಶ್ರೀ ಕರಣಿಕಾಧಿಕಾರಿ – ಕೋಶಾಧಿಕಾರಿ

3. ಹಿರಿಯ ಭಂಡಾರಿ – ಕೋಶಾಧಿಕಾರಿ

4. ಸೇನಾಧಿಪತಿ – ದಂಡ ನಾಯಕ

5. ಮಹಾಪಸಾಯತ – ರಾಜ್ಯಾಧಿಕಾರಿ

   -: ಸೇನಾಡಳಿತ :-

* ಗಜ ಪಡೆ – ಗಜ ಸಹಣಿ, ಕುದುರೆ ಪಡೆ – ತುರುಗ ಸಹಣಿ, ರಾಜನ ಅಂದರಕ್ಷಕರ ಪಡೆ – ಗರುಡ

* ಗರುಡರ ಪತ್ನಿಯನ್ನು ಲೆಂಕಿ ಎಂತಲೂ ಹಿಂಬಾಲಕರನ್ನು ಲೆಂಕ ಅಂತಲೂ ಕರೆಯುತ್ತಿದ್ದರು.

* ರಾಜನು ಸಾವನ್ನಪ್ಪಿದಾಗ ಗರುಡಪಡೆಯಲ್ಲಿದ್ದ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಈ ಪದ್ಧತಿಯನ್ನು ಕೇಳ್ಳುಂಟೆ ಎನ್ನುವರು.

* ಯುದ್ಧದಲ್ಲಿ ಸಾಹಸ ಮೇರದವರಿಗೆ ಸುಭಟ ಎಂಬ ಚಿನ್ನದ ತೋಡವನ್ನು ನೀಡಿ ಗೌರವಿಸಲಾಗುತ್ತಿತ್ತು.

    -: ನಾಣ್ಯಗಳು :-

* ಇವರ ಕಾಲದ ನಾಣ್ಯ ಮುದ್ರಿಸುವ ಟಂಕಶಾಲೆ ಲಕ್ಕುಂಡಿಯಲ್ಲಿ ಇತ್ತು.

* ಚಿನ್ನದ ನಾಣ್ಯ – ವರಾಹ , ಹೊನ್ನು, ಹಣ, ಗದ್ಯಾಣ

* ಬೆಳ್ಳಿ ನಾಣ್ಯ – ಹಗ, ಕಾಸು

      -: ಸಾಹಿತ್ಯ :-

* ನಾಗಚಂದ್ರ ( ಅಭಿನವ ಪಂಪ )- ರಾಮಚಂದ್ರಚರಿತ ಪುರಾಣ, ಮಲ್ಲಿನಾಥ ಪುರಾಣ

* ಹರಿಹರ ( ರಗಳೆ ಕವಿ )- ಗಿರಿಜಾ ಕಲ್ಯಾಣ, ಶಿವಶರಣರ ರಗಳೆಗಳು, ನಂಬಿಯಣ್ಣನ ರಗಳೆ, ಪಂಚಾಶತಕ.

* ರಾಘವಾಂಕ ( ಷಟ್ಪದಿಯ ಬ್ರಹ್ಮ ) – ಹರಿಚಂದ್ರ ಕಾವ್ಯ, ಸಿದ್ದರಾಮ ಪುರಾಣ, ಸೋಮನಾಥ ಚರಿತೆ, ಶರಬ ಚರಿತೆ, ವೀರೇಶ್ವರ ಚರಿತೆ, ಹರಿಹರ ಮಹಾತ್ಮೆ .

* ಜನ್ನ ( ಕವಿ ಚಕ್ರವರ್ತಿ )- ಯಶೋಧರ ಚರಿತೆ, ಅನಂತನಾಥ ಪುರಾಣ.

* ನೇಮಿಚಂದ್ರ – ನೇಮಿನಾಥ ಪುರಾಣ.

* ಕೇಶಿರಾಜ – ಶಬ್ದಮಣಿ ದರ್ಪಣ ( ಕನ್ನಡ ವ್ಯಾಕರಣ ಗ್ರಂಥ).

   -: ಕಲೆ ಮತ್ತು ವಾಸ್ತು ಶಿಲ್ಪ :-

* ಇವರ ಶೈಲಿಯನ್ನು ಹೊಯ್ಸಳರ ಶೈಲಿ ಅಥವಾ ವೇಸರ ಶೈಲಿ ಎನ್ನುವರು.

    -: ಲಕ್ಷಣಗಳು :-

* ಪ್ರದಕ್ಷಿಣಾಪಥ ದೇವಾಲಯದ ಹೊರಭಾಗದಲ್ಲಿ ಇದೆ.

* ದೇವಾಲಯದ ಪ್ರಮುಖ ಭಾಗ ಗರ್ಭಗೃಹ, ಸುಖನಾಸಿ, ಸ್ತಂಭಗಳ ಮಂಟಪ, ಮುಖ ಮಂಟಪ.

* ದೇವಾಲಯವನ್ನು 4-6 ಅಡಿ ಎತ್ತರದಲ್ಲಿ ನಿರ್ಮಿಸಿರುವ ನಕ್ಷತ್ರಾಕಾರದ ಜಗುಲಿಯ ಮೇಲೆ ನಿರ್ಮಾಣ.

* ದೇವಾಲಯಗಳು ಗೋಡೆಗಳು ಸೂಕ್ಷ್ಮ ಮತ್ತು ವೈವಿಧ್ಯಮಯ ಕೆತ್ತನೆ.

* ಮುಖ್ಯ ದ್ವಾರದ ಎರಡು ಪಾಶ್ವಗಳಲ್ಲಿ ಸುಂದರವಾಗಿ ಕೆತ್ತಿರುವ ದ್ವಾರ ಪಾಲಕರನ್ನು ನಿಲ್ಲಿಸಲಾಗಿದೆ.

* ಚಾವಣಿಗಳು ಸೇರುವ ಕಂಬಗಳ ತೊಲೆಗಳ ಮೇಲೆ ಮನಮೋಹಕವಾದ ಮದನಿಕೆಯರ ಕೆತ್ತನೆ.

WhatsApp Group Join Now
Telegram Group Join Now