ಜಗತ್ತಿನ ಪ್ರಾಚೀನ ನಾಗರಿಕತೆಗಳು

ಈ ಜಿಪ್ಟ್ ನಾಗರಿಕತೆ ( ಸಾಮಾನ್ಯ ಶಕ ಪೂರ್ವ 4000 – 525 )

*  ಈಜಿಪ್ಟ್ ನಾಗರಿಕತೆ ಜಗತ್ತಿನ ಮೊದಲ ಅತ್ಯಂತ ಪುರಾತನ ನಾಗರೀಕತೆಯ ತೊಟ್ಟಿಲು.

* ನೈಲ್ ನದಿಯು ಈ ಜಿಪ್ಟ್ ನಾಗರೀಕತೆಯ ತೊಟ್ಟಿಲಾಗಿದೆ.

* ನೈಲ್ ಜಗತ್ತಿನ ಅತ್ಯಂತ ಉದ್ದವಾದ ನದಿ.

* ಇದು ಆಫ್ರಿಕಾ ಖಂಡದಲ್ಲಿ ಉತ್ತರಾಭಿಮುಖವಾಗಿ ಹರಿದು ಮೆಡಿಟೇರಿಯನ್ ಸಮುದ್ರವನ್ನು ಸೇರುತ್ತದೆ.

      -: ರಾಜಕೀಯ ಚರಿತ್ರೆ :-

* ಈ ಜಿಪ್ಪಿನ ದೊರೆಗಳನ್ನು ” ಫೆರೋ” ಗಳೆಂದು ಕರೆಯುತ್ತಿದ್ದರು.

* ಫ್ಯಾರೋ/ ಫೆರೋ ಎಂದರೆ ದೊಡ್ಡ ಮನೆಯಲ್ಲಿ ವಾಸಿಸುವ ಮನುಷ್ಯ ಎಂದರ್ಥ.

* ತಾವು ಸೂರ್ಯ ದೇವರಿಗೆ ಸಮಾನ ಎಂದು ಭಾವಿಸಿ ಆಳುತ್ತಿದ್ದರು.

* ಅವರು ತಮ್ಮ ಸಮಾಧಿಗಳ ಮೇಲೆ ಪಿರಮಿಡ್ಡುಗಳನ್ನು ಕಟ್ಟುತ್ತಿದ್ದರು.

* ಈ ಜಿಪ್ಟಿನ ಮೊದಲ ಫೆರೋ ” ಮೀನಸ್ “.

* ಮೆಂಫಿಸ್ ಇವನ ರಾಜಧಾನಿಯಾಗಿತ್ತು.

* ಫೆರೋ ಆಗಿದ್ದ ಅಹಮೋಸ್ ನುಎಲ್ಲಾ ಅಧಿಕಾರವನ್ನು ಭದ್ರಪಡಿಸಿಕೊಂಡು ಸುಭದ್ರ ಸರ್ಕಾರ ಸ್ಥಾಪಿಸಿದನು.ಇವನ ರಾಜಧಾನಿ ಥಿಬ್ಸ್.

* ಪ್ರಸಿದ್ಧ ಫೆರೋ ತುಟ್ಮೋಸ್.

-: ಹಟ್ಸೆಪ್ಸೆಟ್ ( ಸಾಮಾನ್ಯ ಶಕ ಪೂರ್ವ 1501 – 1479) :-

* ಇವಳನ್ನು ವಿಶ್ವ ಇತಿಹಾಸದ ಪ್ರಥಮ ಮಹಿಳಾ ರಾಣಿ. ಈ ಜಿಪ್ಟನ್ನು ಆಳಿದ ಪ್ರಥಮ ರಾಣಿ, ಈ ಜಿಫ್ಟನ ಮೊದಲ ರಾಜ ಕಾರ್ಯಕರ್ತೆ ಎಂದು ಕರೆಯಲಾಗುತ್ತದೆ.

-: 3 ನೇ ಥುಟ್ ಮೋಸ್ ( ಸಾಮಾನ್ಯ ಶಕ ಪೂರ್ವ 1479 -1447) :-

* ಹಟ್ಸೆಪ್ಸೆಳ ಸೋದರ ಸಂಬಂಧಿಯಾದ ಈತ ಮಹಾಸಾಮ್ರಾಜ್ಯದ ನಿರ್ಮಾಪಕ.

           -: ಅವನತಿ :-

* ಫೆರೋಗಳ ಅಸಮರ್ಥತೆ ಹಾಗೂ ದುಂದುವೆಚ್ಚ,ಪ್ರಕೃತಿ ವೈಫಲ್ಯ ಮತ್ತು ವಿದೇಶಿಯರ ದಾಳಿಗಳು ಇವು ಈಜಿಪ್ಟ್ ನಾಗರಿಕತೆಯ ಅವನತಿಗೆ ಪ್ರಮುಖ ಕಾರಣಗಳು.

* ಟಾಲೆಮಿ ವಂಶಕ್ಕೆ ಸೇರಿದ ವಿಶ್ವದ ಪ್ರಥಮ ಸುಂದರಿ ಕ್ಲಿಯೋಪಾತ್ರಳು ಈಜಿಪ್ಟ್ ಅನ್ನು ಆಳಿದಳು ಆನಂತರ ಈ ಜಿಪ್ಟ್ ರೋಮನ್ ಸಾಮ್ರಾಜ್ಯದಲ್ಲಿ ವಿಲೀನವಾಯಿತು.

ಈಜಿಪ್ಟ್ ನಾಗರಿಕತೆಯ ಕೊಡುಗೆಗಳು.

* ಅವರು ಹುಟ್ಟಹಾಕಿದ ಕ್ಯಾಲೆಂಡರ ಸಮಯ ಮಾಪನ ಮಾಡಲು ಅತ್ಯಂತ ಉಪಯುಕ್ತವಾಗಿತ್ತು.

* ಇದೆಲ್ಲದಕ್ಕೂ ಮಿಗಿಲಾಗಿ ಅವರು ಬರವಣಿಗೆಯ ಕಲೆಯನ್ನು ರೂಪಿಸಿಕೊಂಡಿದ್ದರು. ಇದು ಸಂಕೇತಗಳ ಭಾಷೆಯಾಗಿತ್ತು.ಸಣ್ಣ ಚಿತ್ರಗಳು ಒಳಗೊಂಡ ಇದನ್ನು ಹಿರೋ ಗ್ಲೈಫಿಕ್ಸ್ ( ಪವಿತ್ರ ಬರವಣಿಗೆ ಎಂದು ಕರೆಯುತ್ತಾರೆ )

* ಬರವಣಿಗೆ ಇದ್ದ ಹಾಳೆಗಳನ್ನು ಪಪಿರಸ್ ಎಂದು ಕರೆಯುತ್ತಿದ್ದರು.

* ಸತ್ತ ದೇಹವನ್ನು ವಿವಿಧ ರಾಸಾಯನಿಕಗಳಿಂದ ಲೇಪಿಸಿ ತೆಳುವಾದ ಬಟ್ಟೆಯಿಂದ ಸುತ್ತಿ ಇಡುತ್ತಿದ್ದರು. ಇಡೀ ದೇಹವನ್ನೆಲ್ಲ ಆವರಿಸುವಂತೆ ಅವುಗಳನ್ನು ಸಂರಕ್ಷಿಸಲಾಯಿತು. ಹೀಗೆ ಸಂಕಕ್ಷಿಸಲ್ಪಟ್ಟ ದೇಹವನ್ನು ಮಮ್ಮಿ ಎಂದು ಕರೆಯಲಾಗಿದೆ.

      -: ಸಾಮಾಜಿಕ ಪರಿಸ್ಥಿತಿ :-

ಸಮಾಜ ಪ್ರಮುಖವಾಗಿ ವರ್ಗಗಳನ್ನು ಒಳಗೊಂಡಿತ್ತು ಅವುಗಳೆಂದರೆ.

* ಕುಲೀನ ವರ್ಗ – ರಾಜಮನೆತನದವರು, ಜಮೀನ್ದಾರರು, ಶ್ರೀಮಂತ ಸರದಾರರು ಹಾಗೂ ಪುರೋಹಿತರು.

* ಮಧ್ಯಮ ವರ್ಗ – ವರ್ತಕರು, ವೈದ್ಯರು, ಕಲಾಕಾರರು, ಕುಶಲಕರ್ಮಿಗಳು.

* ಗುಲಾಮರು ಮತ್ತು ಜೀತದಾಳುಗಳು.

        -: ಧರ್ಮ :-

ಬಹುದೇವತಾರಾಧನೆ

       -: ಮುಖ್ಯಾಂಶಗಳು :-

* ಈಜಿಪ್ಟ್ ನಾಗರಿಕತೆ ನೈಲ್ ನದಿ ತೀರದಲ್ಲಿ ಹುಟ್ಟಿತು.

* ಗಿಜ್ಹೆ  ಎಂಬಲ್ಲಿ ಜಗತ್ತಿನ ದೊಡ್ಡ ಪಿರಮಿಡ್ ಕಟ್ಟಿಸಿದ ಫರೋ ಖುಪು ಗಿಜ್ಹೆ.

* ಜಗತ್ತಿನ ಮೊಟ್ಟಮೊದಲ ಸಾಮ್ರಾಜ್ಞೆ ಹ್ಯಾಷೆಪ್ ಸುಟ್

* ಸಿಂಹ ದೇಹ, ಮನುಷ್ಯ ಮುಖವನ್ನು ಹೊಂದಿರುವ ಈಜಿಪ್ಟ್ ನ ಶಿಲ್ಪವನ್ನು  ಸ್ಫಿಂಕ್ಸ್ ಎಂದು ಕರೆಯುತ್ತಾರೆ.

* ಹೈರೋಗ್ಲಿಪ್ ಎಂದರೆ ಪವಿತ್ರ ಲಿಪಿ ಅಂದರ್ಥ.

ಮೇಸಪಟೋಮಿಯಾ ನಾಗರಿಕತೆ ( ಸಾಮಾನ್ಯ ಶಕ ಪೂರ್ವ 3500 – 539).

* ಈಗಿನ ಇರಾಕಿನ ದೇಶವೇ ಮೆಸಪಟೋಮಿಯಾ.ಇದು ಏಷ್ಯಾದ ನೈರುತ್ಯಕ್ಕಿದೆ.

* ಎರಡು ನದಿಗಳ ನಡುವಿನ ಕಣಿವೆ ಪ್ರದೇಶ.

* ಸುಮೇರಿಯನ್ನರಿಂದ ಮೊಟ್ಟಮೊದಲು ಇಲ್ಲಿ ನಾಗರಿಕತೆಯೆಂದು ಏಳಿಗೆಗೆ ಬಂದಿತು. ಉರ್( ಗಡಿ), ಕಿಶ್, ಲಗಾ ಶ್ ಮೊದಲಾದ ನಗರ ರಾಜ್ಯಗಳು ಆರಂಭವಾದವು. ಸುಮೇರಿಯನ್ನರು ಕ್ಯೂನಿಫಾರಂ ಲಿಪಿಗಳಲ್ಲಿ ಹಸಿ ಜೆಡಿ ಮಣ್ಣಿನ ಫಲಕಗಳ ಮೇಲೆ ಬರೆಯುತ್ತಿದ್ದರು.

* ಸುಮೇರಿಯನ್ನರ ನಂತರ ಅಕ್ಕಾಡಿಯನ್ನುರು ಬಂದರು. ನಂತರದಲ್ಲಿ ಅಮೊರೈಟರು ಬ್ಯಾಬಿಲಾನ್ ಎಂಬ ಪಟ್ಟಣದಿಂದ ಆಳುತ್ತಿದ್ದರು.

* ಗ್ರೀಕ್ ಭಾಷೆಯಲ್ಲಿ ಮೆಸಪೋಟಮಿಯ ಎಂದರೆ ” ಎರಡು ನದಿಗಳ ನಡುವಿನ ನಾಡು ” ಎಂದರ್ಥ.

* ಮೆಸಪಟೋಮಿಯಾದ ಮೊಟ್ಟ ಮೊದಲ ಬರವಣಿಗೆಯನ್ನು ಅಭಿವೃದ್ಧಿ ಪಡಿಸಿದರು ” ಸುಮೇರಿಯನ್ನರು ” .

* ಈ ಲಿಪಿಯನ್ನು ” ಕ್ಯೂನಿಫಾರಂ” ಎಂದು ಕರೆಯುತ್ತಾರೆ.

* ಈ ನಾಗರಿಕತೆಯ ಕೇಂದ್ರಸ್ಥಳ ” ಯುಪ್ರಿಟೀಸ್ ಮತ್ತು ಟೈಗ್ರಿಸ್ ” ನದಿಗಳ ನಡುವಿನ ಕಣಿವೆ ಪ್ರದೇಶದ ದಕ್ಷಿಣ ಭಾಗ. ಪ್ರಾಚೀನ ಕಾಲದಿಂದಲೂ ಇದನ್ನು ಬ್ಯಾಬಿಲೋನಿಯಾ ಎಂದು ಕರೆಯುತ್ತಿದ್ದರು.

* ಬ್ಯಾಬಿಲೋನಿಯಾದ ಉತ್ತರ ಭಾಗವನ್ನು ‘ ಅಖಡ್’ ಎಂದು ಹಾಗೂ ದಕ್ಷಿಣ ಭಾಗವನ್ನು ‘ ಸುಮೇರ್ ‘ ಎಂದು ಗುರುತಿಸಲಾಗುತ್ತಿತ್ತು.

* ಮೆಸಪಟೋಮಿಯಾದ ಉತ್ತರ ಭಾಗವನ್ನು ” ಅಸ್ಸಿರಿಯಾ ” ಎಂದು ಕರೆಯುತ್ತಿದ್ದರು.

* ಅವುಗಳನ್ನು  ” ಜಿಗ್ಗುರಾತ್” ಎಂದು ಕರೆಯುತ್ತಾರೆ.

 -: ಬ್ಯಾಬಿಲೋನಿಯಾದ ತೂಗುವ ಉದ್ಯಾನ :-

* ಇದು ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು.

* ಬಹುತೇಕ ವಿದ್ವಾಂಸರು ತೂಗುವ ಉದ್ಯಾನವನ್ನು ಕಟ್ಟಿದವನು ದೊರೆ ” ಎರಡನೇ ನೆಬುಕಡ್ನಿಜರ್ ” ಎಂದು ಅಭಿಪ್ರಾಯಪಟ್ಟಿದ್ದಾರೆ.

        -: ಹಮ್ಮೂರಬಿ :-

* ಸಂಹಿತೆಯ ನಿಯಮಗಳಿಗೆ ಮುಖ್ಯ ಆಧಾರವೆಂದರೆ ಸಾಮಾನ್ಯ ಶಕ ಪೂರ್ವ 1901 ರಲ್ಲಿ ಪತ್ತೆ ಮಾಡಲಾದ ಶಿಲಾಶಾಸನ.

* ಇದನ್ನು ಇಂದು ಪ್ಯಾರಿಸ್‌ನ ಲೋರ್ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ.

          -: ಹಮ್ಮುರಬಿಯ ಸಂಹಿತೆ :-

” ಕಣ್ಣಿನ ಬದಲು ಕಣ್ಣು ಮತ್ತು ಹಲ್ಲಿನ ಬದಲು ಹಲ್ಲು ” ಎನ್ನುವ ತರ್ಕವನ್ನು ಪ್ರತಿಪಾದಿಸುತಿತ್ತು. ( ಮುಯ್ಯಿಗೆ ಮುಯ್ಯಿ )

          -: ಅಸುರ್ ಬನಿಪಾಲ್ :-

* ಹಿಟ್ಟೈಟರ ನಂತರ ಮೆಸಪೋಟೆಮಿಯಾವನ್ನು ಅಸ್ಸೀರಿಯನ್ನರು ಆಳಿದರು.ಅಸ್ಸೀರಿಯನ್ನರ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಎಂದರೆ ಅಸುರ್ ಬನಿಪಾಲ್. ಇವನು ಮಹಾನ್ ಕಲಿಯೂ ಮತ್ತು ಕವಿಯೂ ಆಗಿದ್ದನು.

* ನಿನೆವ್ಹ ನಗರದಲ್ಲಿ ಉತ್ತಮ ಗ್ರಂಥಾಲಯವನ್ನು ನಿರ್ಮಿಸಿದನು.

     ಇನ್ನೀತರ ಅಂಶಗಳು.

* ಅಮೊರೈಟರ ಸುಪ್ರಸಿದ್ಧ ದೊರೆ ” ಹಮ್ಮುರಬಿ ”

* ಸಾಮಾನ್ಯ ಶಕ ಪೂರ್ವ ಏಳನೆಯ ಶತಮಾನದಲ್ಲಿ ಮತ್ತೊಂದು ಸೆಮೆಟಿಕ್ ಬುಡಕಟ್ಟಾದ ಚಾಲ್ಡಿಯನ್ನರು ಬ್ಯಾಬಿಲೋನ್ ಅನ್ನು ಮರುಸ್ಥಾಪಿಸಿ ಅದನ್ನು ಆ ಕಾಲದ ಅತ್ಯಂತ ಪ್ರಮುಖ ರಾಜಧಾನಿಯನ್ನಾಗಿ ಮಾಡಿದರು ಇವರಲ್ಲಿ ಸರ್ವ ಶ್ರೇಷ್ಠ ದೊರೆ ನೇಬುಕಡ್ನೆಜರ್.

 -: ಚೀನಾ ದೇಶದ ನಾಗರಿಕತೆ :-

* ಚೀನಾ ನಾಗರಿಕತೆಗೆ ಕಾರಣವಾದ ನದಿ ” ಹವಾಂಗ್ ಹೋ/ ಹ್ವಾಂಗ್ ಹೋ ” ಇದನ್ನು ಚೀನಾದ ದುಗುಡ ಎಂದು ಕರೆಯುತ್ತಾರೆ.

* ಪ್ರಾಕ್ತನ ಶಾಸ್ತ್ರದ ಆಧಾರದ ಮೇಲೆ ಚೀನಾದಲ್ಲಿ ಕಂಡು ಬಂದಿರುವ ನಾಗರಿಕತೆಯ ಪ್ರಥಮ ರಾಜಮನೆತನ ” ಶಾಂಗ್ “.

* ಭಾರತದ ಈಶಾನ್ಯ ದಿಕ್ಕಿನಲ್ಲಿರುವ ದೇಶವೇ ಚೀನಾ.

* ಇಲ್ಲಿನ ಜನರು ಮಂಗೋಲಿಯನ್ ಎಂಬ ಹಳದಿ ಮೈಬಣ್ಣದ ಬುಡಕಟ್ಟಿಗೆ ಸೇರಿದವರು.

* ಯಾಂಗತ್ಸ ಮತ್ತು ಹ್ವಾಂಗ್ ಹೋ ಇಲ್ಲಿನ ಪ್ರಮುಖ ನದಿಗಳಾಗಿವೆ.

* ಚೌ ಮನೆತನದ ಪ್ರಸಿದ್ಧ ರಾಜ ಹೂವಾಂಗ್ .ಪ್ರಸಿದ್ಧ ಚೀನಿ ತತ್ವಜ್ಞಾನಿಗಳಾದ ಕನ್ ಫ್ಯೂಶಿಯಸ್, ಲಾವೋತ್ಸೆ ಅವರು ಚೌ ಮನೆತನದ ಕಾಲದಲ್ಲಿಯೇ ಇದ್ದರು. ಚೌ ಮನೆತನದ ಆಳ್ವಿಕೆಯನ್ನು ಕೊನೆಗೊಳಿಸಿ ಚಿನ್ ಮನೆತನ ಅಧಿಕಾರಕ್ಕೆ ಬಂದಿತು. ಚಿನ್ ಮನೆತನದಿಂದಲೇ ಆ ದೇಶಕ್ಕೆ ಚೀನಾ ಎಂಬ ಹೆಸರು ಬಂದಿತು.

      -: ಚೀನಾದ ಮಹಾ ಗೋಡೆ :-

* ಮಹಾಗೋಡೆಯನ್ನು ಸಾಮಾನ್ಯ ಶಕ ಪೂರ್ವ 7ನೇ ಶತಮಾನದಲ್ಲಿ ಕಟ್ಟಲು ಪ್ರಾರಂಭಿಸಲಾಯಿತು. ಇದನ್ನು ಸಾಮಾನ್ಯ ಶಕ 16ನೇ ಶತಮಾನದ ವರೆಗೆ ಕಟ್ಟಲಾಯಿತು.

    -: ಷಿ- ಹ್ವಾಂಗ್-ತಿ :-

* ಚಿನ್ ಮನೆತನದ ಪ್ರಸಿದ್ಧ ರಾಜ.

* ಇವನು ಚೀನಾವನ್ನು ಒಗ್ಗೂಡಿಸಿ ಒಂದೇ ರೀತಿಯ ಕಾನೂನು ಜಾರಿಗೆ ತಂದನು.

* ಇವನ ಕಾಲವನ್ನು ಚೀನಾದ ಸುವರ್ಣ ಯುಗ ಎಂದು ಕರೆಯುತ್ತಾರೆ.

        -: ವು-ತಿ :-

* ಹಾನ್ ವಂಶದ ಪ್ರಸಿದ್ಧ ದೊರೆ ವು-ತಿ .

* ಚೀನಾ ಮತ್ತು ರೋಮ್ ನಗರದ ವ್ಯಾಪಾರ ಮಾರ್ಗವು ರೇಷ್ಮೆ ಮಾರ್ಗವೆಂದು ಪ್ರಸಿದ್ಧಿ ಪಡೆದಿದೆ.

* ಸುಂಗ್ ಮನೆತನದ ಕಾಲದಲ್ಲಿ ಮುದ್ರಣ ಯಂತ್ರ ಹಾಗೂ ಪಿಂಗಾಣಿ ತಯಾರಿಕೆ ಆರಂಭವಾಯಿತು.

WhatsApp Group Join Now
Telegram Group Join Now