ಜಲ ಜೀವನ್ ಮಿಷನ್

        -: ವಿಷಯ :-

ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆ ಹೊಸ ದಾಖಲೆ ಬರೆದಿದೆ.ಇಲ್ಲಿಯವರೆಗೆ ಈ ಯೋಜನೆ ಮೂಲಕ ದೇಶಾದ್ಯಂತ 14.5 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗಿದೆ.

 -: ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ತಿಳಿಯಿರಿ :-

* ಗ್ರಾಮೀಣ ಭಾಗದಲ್ಲಿ ಹಲವು ಕಡೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಪಡೆಯುವುದಕ್ಕೆ ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಮಹತ್ವಕಾಂಕ್ಷಿ ಯೇ ಯೋಜನೆಯೇ ಜಲಜೀವನ್ ಮಿಷನ್ ಯೋಜನೆ.

* 2024ರ ವೇಳೆಗೆ ಗ್ರಾಮೀಣ ಭಾರತದ ಪ್ರತಿಯೊಂದು ಮನೆಗೆ ನಲಿಯ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸಲು ಈ ಯೋಜನೆಯನ್ನು ಆರಂಭಿಸಲಾಗಿದೆ. ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ನೀರು ಪೂರೈಕೆ ಗುರಿಯನ್ನು ಇದು ಹೊಂದಿದೆ.

* ಜಲಜೀವನ್ ಮಿಷನ್ ಯೋಜನೆ ಅನ್ನು ಆಗಸ್ಟ್ 15 2019 ರಂದು ಆರಂಭಿಸಲಾಯಿತು.

* ‘ ಹರ್ ಘರ್ ಜಲ್ ‘( ಪ್ರತಿ ಮನೆಗೂ ನೀರಿನ ಸೌಲಭ್ಯ ) ಎಂಬ ತತ್ವವನ್ನು ಈ ಮಿಷನ್ ಆಧರಿಸಿದೆ.

* ಪ್ರತಿಯೊಬ್ಬರಿಗೂ ಶುದ್ಧ,ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮೂಲಕ ಗ್ರಾಮೀಣ ಜನರ ಜೀವನ ಮತ್ತು ಆರೋಗ್ಯದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸುತ್ತದೆ.

* ಈ ಯೋಜನೆಯನ್ನು ಜಲ ಶಕ್ತಿ  ಇಲಾಖೆ ಅನುಷ್ಠಾನ ಮಾಡುತ್ತಿದೆ.

-: ಜಲ ಜೀವನ್ ಮಿಷನ್ನಿನ ಪ್ರಮುಖ ಘಟಕಾಂಶಗಳು :-

* ಪ್ರತಿ ಮನೆಗೂ ನಳ ಸಂಪರ್ಕ

* ಸುಸ್ಥಿರ ಜಲ ಮೂಲಗಳ ಅಭಿವೃದ್ಧಿ

* ನೀರಿನ ಗುಣಮಟ್ಟ ಮೇಲ್ವಿಚಾರಣೆ

* ಬೂದು ನೀರು ನಿರ್ವಹಣೆ

* ಅನುಷ್ಠಾನ ನೆರವು ಚಟುವಟಿಕೆಗಳು

     -: ಅನುದಾನ :-

* ಈ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಶೇಕಡ 50ರಷ್ಟು ಅನುದಾನ ನೀಡಿದರೆ.ರಾಜ್ಯ ಸರ್ಕಾರವು ಕೂಡ ಶೇಕಡ 50ರಷ್ಟು ಹಣವನ್ನು ನೀಡುತ್ತದೆ.ಈಶಾನ್ಯ ರಾಜ್ಯಗಳಿಗೆ ಈ ಅನುಪಾತ 90:10 ಇದೆ.ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆಗೆ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರವು ಒದಗಿಸುತ್ತದೆ.

WhatsApp Group Join Now
Telegram Group Join Now