-: ವಿಷಯ :-
ಕೇಂದ್ರ ಗ್ರಾಹಕರ ವ್ಯವಹಾರಗಳ ಇಲಾಖೆಯು ಡಾರ್ಕ್ ಪ್ಯಾಟರ್ನ್ಸ್ ನಿಯಂತ್ರಣ ಮತ್ತು ನಿಯಾಮವಳಿಗಳ ಮಾರ್ಗಸೂಚಿಯನ್ನು ರೂಪಿಸಿದ್ದರೂ ಆನ್ಲೈನ್ ವ್ಯವಹಾರ ಮಾಡುವ ಪ್ರತಿ ಹತ್ತರಲ್ಲಿ 6 ಮಂದಿ ಡಾರ್ಕ್ ಪ್ಯಾಟರ್ನ್ಸ್ ಗೆ ಒಳಗಾಗುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ.
-: ಡಾರ್ಕ್ ಪ್ಯಾಟರ್ನ್ಸ್ ಬಗ್ಗೆ ತಿಳಿಯಿರಿ :-
* ಇದೊಂದು ಗ್ರಾಹಕರನ್ನು ಮೊಸಗೊಳಿಸುವ ಒಂದು ರೀತಿಯ ಸಂಪರ್ಕ ಕೊಂಡಿಯಾಗಿದ್ದು ಇದನ್ನು ಉದ್ದೇಶ ಪೂರ್ವಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ಬಳಕೆದಾರರು ಕೆಲವು ತಪ್ಪು ಆಯ್ಕೆಗಳನ್ನು ಅಥವಾ ತಮಗೆ ಇಷ್ಟವಿಲ್ಲದಿದ್ದರೂ ಕೆಲವು ಆಯ್ಕೆಗಳನ್ನು ಮಾಡಲು ಕುಶಲತೆಯಿಂದ ಡಾರ್ಕ್ ಪ್ಯಾಟರ್ನ್ಸ್ ಗಳು ಪ್ರೇರೇಪಿಸುತ್ತವೆ.
* ಹಲವು ವೆಬ್ ಸೈಟ್ ಗಳು ಅಥವಾ ಅಪ್ಲಿಕೇಶನ್ ಗಳು ಬಳಕೆದಾರರನ್ನು ಮೊಸಗೊಳಿಸಲು ಹಾಗೂ ಅದರಿಂದ ತಾವು ಲಾಭ ಪಡೆಯಲು ಬಳಸುವ ತಂತ್ರಗಾರಿಕೆಯನ್ನು 2010 ರಲ್ಲಿ ಹ್ಯಾರಿ ಬ್ರಿಗ್ನಲ್ ರವರು ಡಾರ್ಕ್ ಪ್ಯಾಟರ್ನ್ಸ್ ಎಂಬ ಪದದ ಮೂಲಕ ಗುರುತಿಸಿದರು.
* ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಅಥವಾ ಕಂಪನಿಗಳ ಸೇವೆಗಳಿಗೆ ಸೈನ್ ಆಫ್ ಮಾಡುವಂತೆ ಬಳಕೆದಾರರನ್ನು ಪ್ರೋತ್ಸಾಹಿಸಲು ಈ ರೀತಿಯ ಡಾರ್ಕ್ ಪ್ಯಾಟರ್ನ್ಸ್ ಗಳನ್ನು ಬಳಸಲಾಗುತ್ತದೆ.
* ಡಾರ್ಕ್ ಪ್ಯಾಟರ್ನ್ಸ್ ಗಳು ಬಳಕೆದಾರರ ವರ್ತನೆಯ ಮೇಲೆ ಪ್ರಭಾವ ಬೀರಲು ಬಳಕೆದಾರರ ಅರಿವಿನ ಮೇಲೆ ಅವರಿಗೆ ಗೊಂದಲ ವಾಗುವಂತೆ ಮಾಡುವುದು ಹಾಗೂ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುವ ಕೆಲವು ಮಾನಸಿಕ ತತ್ವಗಳನ್ನು ಬಳಸುವುದು ಮಾಡುತ್ತದೆ.
* ಬಳಕೆದಾರರನ್ನು ಸೂಕ್ಷ್ಮ ಅಥವಾ ಸ್ವಲ್ಪ ತಪ್ಪುದಾರಿಗೆ ಎಳೆಯುವ ತಂತ್ರದಿಂದ ಹಿಡಿದು ಬಗೆ ಬಗೆಯ ಅಕ್ರಮಣಕಾರಿ ತಂತ್ರಗಳಿಂದ ಮೋಸಗೊಳಿಸುವವರೆಗೂ ಡಾರ್ಕ್ ಪ್ಯಾಟರ್ನ್ಸ ಗಳು ಬಳಸಲಾಗುತ್ತದೆ.