ಗ್ರಾಹಕ ವ್ಯವಹಾರಗಳ ಸಚಿವಾಲಯ ಗುರುತಿಸಿರುವ ಡಾರ್ಕ್ ಪ್ಯಾಟರ್ನ ಗಳ ವಿಧಗಳು
* ಸುಳ್ಳು ತುರ್ತು ಸ್ಥಿತಿ :-
ಒಂದು ಉತ್ಪನ್ನ ಬಹುತೇಕ ಖಾಲಿಯಾಗುತ್ತದೆ ಎಂದು ಸುಳ್ಳು ಹೇಳಿ ಗ್ರಾಹಕರನ್ನು ಆತುರ ಪಡಿಸುವ ಪ್ರಯತ್ನಗಳು ಈ ಗುಂಪಿಗೆ ಸೇರಿದೆ.
* ಬ್ಯಾಸ್ಕೆಟ್ ಸ್ನೀಕಿಂಗ್ ( ಬುಟ್ಟಿ ನುಸುಳುವಿಕೆ):-
ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಗ್ರಾಹಕ ಖರೀದಿಸಲು ಆಯ್ಕೆ ಮಾಡಿದ ಉತ್ಪನ್ನಗಳ ಬೆಲೆಯ ಜೊತೆಗೆ, ಅವರಿಗೆ ತಿಳಿಸದೆಯೇ ಬೇರೆ ಉತ್ಪನ್ನಗಳ ಬೆಳೆಯನ್ನು ಸೇರಿಸಿ ಅಂತಿಮ ಬಿಲ್ ಕೊಡುವುದು.
* ಕನ್ಫರ್ಮ್ ಶೇವಿಂಗ್ :-
ಬಳಕೆದಾರರನ್ನು ನಿಂದನೆಯೋ, ಬೆದರಿಕೆಯೋ ಇತ್ಯಾದಿ ಮೂಲಕ ಉತ್ಪನ್ನ ಖರೀದಿಸಲು ಬಲವಂತ ಪಡಿಸುವುದಕ್ಕೆ ಕನ್ಫರ್ಮ್ ಶೇವಿಂಗ್ ಎನ್ನುತ್ತಾರೆ.
* ಬಲವಂತದ ಕ್ರಮ :-
ನೀವು ಒಂದು ಉತ್ಪನ್ನ ಅಥವಾ ಸೇವೆಯನ್ನು ಪಡೆಯಬೇಕೆಂದಿದ್ದರೆ , ಅದನ್ನು ಗಳಿಸಲು ಬೇರಿನ್ನೊಂದು ಉತ್ಪನ್ನ ಅಥವಾ ಸೇವೆಯನ್ನು ಪಡೆಯಬೇಕು ಎಂದು ಹೇಳಿ , ಉತ್ಪನ್ನ ಮಾರಲು ಯತ್ನಿಸುವುದು.
* ಪದೇ ಪದೇ ಒತ್ತಡ :-
ಒಂದು ಉತ್ಪನ್ನವನ್ನು ಖರೀದಿಸಲು ಗ್ರಾಹಕ ಆಸಕ್ತಿ ತೋರದಿದ್ದರೂ ಪದೇ ಪದೇ ಮನವಿ ಮಾಡುವುದು,ಅಥವಾ ಮಾಹಿತಿ ತೋರಿಸುವುದರ ಮೂಲಕ ಒತ್ತಡ ಹಾಕುವುದು.
* ಇಂಟರ್ ಫೇಸ್ ಇಂಟರ್ಪಿಯರನ್ಸ :-
ಮಾಹಿತಿಯನ್ನು ಮಾತ್ರ ಉದ್ದೇಶ ಪೂರ್ವಕವಾಗಿ ಹೈ ಲೈಟ್ ಮಾಡಲಾಗುತ್ತದೆ. ಅಥವಾ ಕೆಲ ಮಾಹಿತಿಯನ್ನು ಕಣ್ಣಿಗೆ ಕಾಣದ ರೀತಿಯಲ್ಲಿ ಮರೆಮಾಚಲಾಗಿರುತ್ತದೆ. ಅಥವಾ ತನಗೆ ಬೇಕಿಲ್ಲದ ಕ್ರಿಯೆಗೆ ಒಳಪಡುವಂತೆ ತಪ್ಪು ಮಾಹಿತಿ ಕೊಡಲಾಗಿರುತ್ತದೆ.
* ಬೇಟ್ ಅಂಡ್ ಸ್ವಿಚ್:-
ಒಬ್ಬ ಬಳಿಕೆದಾರನಿಗೆ ಇಷ್ಟವಾದ ಜಾಹೀರಾತನ್ನು ತೋರಿಸಿ,ಅದನ್ನು ಕ್ಲಿಕ್ ಮಾಡಿದಾಗ ಬೇರೆ ಲಿಂಕ್ ಗೆ ಕರೆದೊಯ್ಯುವುದು.
* ರಹಸ್ಯ ವೆಚ್ಚಗಳು :-
ನೈಜ ಬೆಲೆಯನ್ನು ತೋರಿಸದೆ ಇರುವುದು ಅಥವಾ ರಹಸ್ಯವಾಗಿಡುವುದು ಇತ್ಯಾದಿ ಜಾಹೀರಾತುಗಳು ಡಾರ್ಕ್ ಪ್ಯಾಟರ್ನ್ ಎನಿಸುತ್ತದೆ.
* ನಕಲಿ ಜಾಹೀರಾತು :-
ಸುದ್ದಿ,,ಲೇಖನ, ಸುಳ್ಳು ಜಾಹೀರಾತು ಇತ್ಯಾದಿ ರೂಪದಲ್ಲಿ ನೈಜ ಜಾಹಿರಾತನ್ನು ಮರೆಮಾಚುವುದು.