ತಿಂಗಳಾದರೂ ಅರ್ಜಿ ಸಲ್ಲಿಸಲು ಅವಕಾಶವಿಲ್ಲ!

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ| ಲಿಂಕ್ ಬಿಡುಗಡೆ ಮಾಡದ ಕೆಇಎ

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA) ಅಧಿಸೂಚನೆ ಹೊರಡಿಸಿ ತಿಂಗಳಾದರೂ ಅರ್ಜಿ ಸಲ್ಲಿಸುವ ಲಿಂಕ್ ಬಿಡುಗಡೆ ಮಾಡಿಲ್ಲ. ಇದರಿಂದ ಅಭ್ಯರ್ಥಿಗಳಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಫೆಬ್ರವರಿ 20 ರಂದು ಅಧಿಸೂಚನೆ ಹೊರಡಿಸಿದೆ. ಮಾರ್ಚ್ 4 ರಿಂದಲೇ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು.ಆದರೆ,ಒಂದು ತಿಂಗಳು ಕಳೆದರೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿಲ್ಲ. ಇದರಿಂದ ಅರ್ಜಿ ಸಲ್ಲಿಸಬೇಕೆಂದು ಕಾದು ಕುಳಿತ ಸಾವಿರಾರು ಅಭ್ಯರ್ಥಿಗಳು ಹತಾಶರಾಗಿದ್ದಾರೆ.

ಶುಲ್ಕ ಪಾವತಿಯ ಇಂಟರ್‌ಫೇಸ್ ಸಿದ್ಧಪಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.ಆದ್ದರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾರ್ಚ್ 7 ರಂದು ತಿಳಿಸಿದ ಕೆಇಎ, ಅಲ್ಲಿಂದಿಚೆಗೆ ನೇಮಕಾತಿ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ತಯಾರಿ ಇಲ್ಲದೆ  ಅಧಿಸೂಚನೆ ಹೊರಡಿಸಿತೆ ಕೆಇಎ ?

ಶುಲ್ಕ ಪಾವತಿಸಲು ಇಂಟರ್ ಫೇಸ್ ಸಿದ್ಧಪಡಿಸದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೊದಲ ಅಧಿಸೂಚನೆ ಹೊರಡಿಸಿತೆ? ನೇಮಕಾತಿಗೆ ಅಧಿಸೂಚನೆ ಹೊರಡಿಸುವ ಮುನ್ನ ಪೂರ್ವ ತಯಾರಿಯನ್ನು ಮಾಡಿಕೊಳ್ಳದೆ ಇದ್ದುದ್ದು ಏಕೆ ಎಂದು ಉದ್ಯೋಗ ಆಕಾಂಕ್ಷಿಗಳು ಪ್ರಶ್ನಿಸುತ್ತಿದ್ದಾರೆ.

ಕೋವಿಂಡ್ ನಿಂದ ನೇಮಕಾತಿಯೇ ಆಗಿಲ್ಲ:

ಕೋವಿಡ್ ಕಾರಣ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದವು.ಈ ಮುಂಚೆ ಈ ಹುದ್ದೆಗಳು ಪಿಯುಸಿ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯುತ್ತಿತ್ತು .ಕೋವಿಡ್ ನಲ್ಲಿ ಎಲ್ಲರೂ ಹೆಚ್ಚು ಅಂಕ ಪಡೆದ ಹಿನ್ನೆಲೆಯಲ್ಲಿ ನೇಮಕಾತಿಗೆ ತೊಂದರೆಯಾಗಿತ್ತು. ಇದರಿಂದ ಸರ್ಕಾರ ಈಗ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.ಇದರಿಂದ ಹಲವು ವರ್ಷಗಳಿಂದ ಈ ಹುದ್ದೆಗಳೇ ನೇಮಕಾತಿ ಆಗಿಲ್ಲ.

WhatsApp Group Join Now
Telegram Group Join Now