* ಭಾರತಕ್ಕೆ ಬಂದ ಮೊದಲ ಮುಸ್ಲಿಮರೆಂದರೆ ಅರಬ್ಬರು. ಅನಂತರ ಟರ್ಕರು, ಅಫ್ಘಾನ್ ರು, ಮಂಗೋಲರು ಮತ್ತು ಮೊಘಲರು ಭಾರತದ ಮೇಲೆ ದಾಳಿ ಮಾಡಿದರು.
* ಸಾಮಾನ್ಯ ಶಕ 712 ರಲ್ಲಿ ಅರಬ್ಬರು ಬಸ್ರಾದ ರಾಜ್ಯಪಾಲನಾಗಿದ್ದ ಮಹಮದ್ ಬಿನ್ ಖಾಸಿಂನ ನಾಯಕತ್ವದಲ್ಲಿ ಸಿಂಧ್ ಹಿಂದೂ ದೊರೆಯಾದ ದಾಹಿರ್ ನನ್ನು ರಾವೂರ್ ಕದನದಲ್ಲಿ ಸೋಲಿಸಿ ಸಿಂಧ್ ಪ್ರದೇಶವನ್ನು ಆಕ್ರಮಿಸಿದನು.
* ಭಾರತದ ಮೇಲೆ ದಾಳಿ ಮಾಡಿದ ಪ್ರಥಮ ಮುಸ್ಲಿಂ ದಾಳಿಕೋರ ” ಮಹಮ್ಮದ್ ಬಿನ್ ಖಾಸಿಂ ”
-: ಮಹಮದ್ ಘಜ್ನಿ ( ಸಾಮಾನ್ಯ ಶಕ 997-1030):-
* ಇವನು ಭಾರತದ ಮೇಲೆ 17 ಬಾರಿ ದಂಡಯಾತ್ರೆ ಮಾಡಿದನು. ( ಸಾಮಾನ್ಯ ಶಕ 1000-1027).
* ಸುಲ್ತಾನ್ ಎಂಬ ಬಿರುದು ಗಳಿಸಿದ ಪ್ರಪಂಚದ ಪ್ರಥಮ ಮುಸ್ಲಿಂ ದೊರೆ.
* ಮಹಮ್ಮದ್ ಘಜ್ನಿ 16ನೇ ದಂಡ ಯಾತ್ರೆ, ಸಾಮಾನ್ಯ ಶಕ 1026 ರಲ್ಲಿ ಗುಜರಾತಿನ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದನು.
* ಮಹಮ್ಮದ್ ಘಜ್ನಿಯೊಂದಿಗೆ ಭಾರತಕ್ಕೆ ಬಂದಿದ್ದ ಪರ್ಶಿಯಾದ ವಿದ್ವಾಂಸ ಅಲ್ಬೇರೋನಿ.
* ಅಲ್ಬೇರೊನಿ ಕೃತಿ – ಕಿತಾಬ್- ಉಲ್- ಹಿಂದ್
-: ಮಹಮ್ಮದ್ ಘೋರಿ ( ಸಾಮಾನ್ಯ ಶಕ 1149-1206):-
* ಸಾಮಾನ್ಯ ಶಕ 1191ರಲ್ಲಿ ದೆಹಲಿ ಮತ್ತು ಅಜ್ಮೀರ್ ಗಳನ್ನು ಆಳುತ್ತಿದ್ದ ರಜಪೂತ ದೊರೆ ಪೃಥ್ವಿರಾಜ್ ಚೌಹಾಣ್ ನಿಂದ ಮೊದಲ ತರೈನ್ ಕದನದಲ್ಲಿ ಸೋತು ಹೋದನು.
* ಸಾಮಾನ್ಯ ಶಕ 1192 ರಲ್ಲಿ ಎರಡನೇ ತರೈನ್ ಕದನದಲ್ಲಿ ಪೃಥ್ವಿರಾಜ್ ಚೌಹಾಣನನ್ನು ಸೋಲಿಸಿ ಹಾಗೂ ಮತ್ತು ಅಜ್ಮೀರ್ ಗಳನ್ನು ವಶಪಡಿಸಿಕೊಂಡು ಮುಸ್ಲಿಮರ ಆಳ್ವಿಕೆ ಸ್ಥಾಪಿಸಿದನು.
* ಅವನು ಹೆಚ್ಚು ಕಾಲ ಭಾರತದಲ್ಲಿ ನಿಲ್ಲಲಾಗದೆ ಭಾರತದಲ್ಲಿ ಗೆದ್ದ ಪ್ರದೇಶಗಳನ್ನು ತನ್ನ ಪ್ರೀತಿಯ ಗುಲಾಮನಿಗೆ ಒಪ್ಪಿಸಿ ಮಹಮದ್ ಘೋರಿ ಹಿಂದಿರುಗಿದನು.
-: ದೆಹಲಿಯನ್ನು ಕೆಳಕಂಡ ಐದು ಸುಲ್ತಾನ್ ಸಂತತಿಗಳು ಆಳಿದವು.:-
1. ಗುಲಾಮಿ ಸಂತತಿ(ಸಾಮಾನ್ಯ ಶಕ1206-1290).
2. ಖಿಲ್ಜಿ ಸಂತತಿ(ಸಾಮಾನ್ಯ ಶಕ1290-1320).
3. ತುಘುಲಕ್ ಸಂತತಿ(ಸಾಮಾನ್ಯ ಶಕ1320-1414).
4. ಸೈಯದ್ ಸಂತತಿ(ಸಾಮಾನ್ಯ ಶಕ1414-1451).
5. ಲೋದಿ ಸಂತತಿ(ಸಾಮಾನ್ಯ ಶಕ1451-1526).
ಗುಲಾಮಿ ಸಂತತಿ( ಸಾಮಾನ್ಯ ಶಕ1206-1290).
* ಕುತುಬುದ್ದಿನ್ ಐಬಕ್ ಗುಲಾಮಿ ಸಂತತಿಯ ಸ್ಥಾಪಿಸಿದನು.
* ಉದಾರವಾಗಿ ದಾನ ಮಾಡಿ ” ಲಾಖ್ ಭಕ್ಷ ” ಅಂದರೆ ಲಕ್ಷಗಳ ದಾನಿ ಎಂಬ ಬಿರುದು ಗಳಿಸಿದನು.
* ದೆಹಲಿಯ ಕುತುಬ್ ಮಿನಾರ್ ಸ್ತಂಭವನ್ನು ಕಟ್ಟಲು ಪ್ರಾರಂಭಿಸಿದನು.
* ಅಜ್ಮೀರದಲ್ಲಿ ಅಡ್ಡಾ- ಈ-ದಿನ್ ಕಾ ಜೋಂಪ್ರಾ ಎಂಬ ಮಸೀದಿಯನ್ನು ನಿರ್ಮಿಸಿದನು.ಅಜ್ಮೀರ್ ಅನ್ನು ಮಸೀದಿಗಳ ನಗರ ಎನ್ನುವರು.
* ಕುತ್ಬುದ್ದಿನ ಐಬಕ್ ಸಾಮಾನ್ಯ ಶಕ 1210 ರಲ್ಲಿ ಪೋಲೋ ಆಟವಾಡುತ್ತಿದ್ದಾಗ ಕುದುರೆ ಮೇಲಿದ್ದ ಬಿದ್ದು ಮೃತನಾದನು.
-: ಇಲ್ತಮಶ್:-
* ಕುತುಬ್ ಮಿನಾರ್ ಕಟ್ಟಡವನ್ನು ಪೂರ್ಣಗೊಳಿಸಿದನು. ಇದು ದೆಹಲಿಯಲ್ಲಿದೆ.
* ಸುಲ್ತಾನ್ ಎಂಬ ಬಿರುದು ಧರಿಸಿದ ಮೊದಲ ಭಾರತೀಯ ಮುಸಲ್ಮಾನ್ ದೊರೆ.
* ರಾಜಧಾನಿಯನ್ನು ಲಾಹೋರ್ ನಿಂದ ದೆಹಲಿಗೆ ವರ್ಗಾಯಿಸಿದನು.
* ಸುಪ್ರಸಿದ್ಧ ತುರ್ಕಿ ನೋಬಲರ 40 ರ ತಂಡವಾದ ಚಹಲ್ ಗನಿ ರಚಿಸಿದನು .
* ಆಡಳಿತದಲ್ಲಿ ದಕ್ಷತೆ ತರಲು ತನ್ನ ಸಾಮ್ರಾಜ್ಯವನ್ನು ಇಕ್ತಾಗಳಾಗಿ ವಿಭಾಗಿಸಿದನು.
-: ರಜಿಯಾ ಸುಲ್ತಾನಾ:-
* ಇಲ್ತಮಶನ ಮಗಳಾದ ಈಕೆ ದೆಹಲಿ ಸಿಂಹಾಸನ ಆಳಿದ ಮೊದಲ ರಾಣಿ.
-: ಘಿಯಾಸುದ್ದೀನ್ ಬಲ್ಬನ್ :-
* ಗುಲಾಮಿ ಸಂತತಿಯ ಅತ್ಯಂತ ಪ್ರಸಿದ್ಧ ಸುಲ್ತಾನ
* ರಕ್ತ ಮತ್ತು ಕಬ್ಬಿಣ ನೀತಿ ಅನುಸರಿಸಿ ಸುಲ್ತಾನನ ಪ್ರತಿಷ್ಠೆಯನ್ನು ಹೆಚ್ಚಿಸಿದನು.
* ನಲವತ್ತರ ತುರ್ಕಿ ಸರ್ದಾರರ ತಂಡ ಅಂದರೆ ಚಹಲ್ಗಾನಿಯನ್ನು ವಿಸರ್ಜಿಸಿದನು.
* ಭಾರತದ ಗಿಳಿ ಎಂದು ಕರೆದಿರುವ ಕವಿ ಅಮೀರ್ ಖುಸ್ರು ಗೆ ಆಶ್ರಯ ನೀಡಿದನು.
* ಇವನು ಸಿಜದಾ ಪದ್ಧತಿ ಮತ್ತು ಪೈ ಬೋಸ್ ಪದ್ಧತಿಗಳನ್ನು ಜಾರಿಗೆ ತಂದನ.
* ಸೈನ್ಯದ ಮೇಲ್ವಿಚಾರಣೆ ಮಾಡಲು ದಿವಾನ್- ಇ- ಅರಿಜ್ ( ಅರಿಜ್- ಈ-ಮಾಮೂಲಿಕ್) ಎಂಬ ಇಲಾಖೆಯನ್ನು ಸ್ಥಾಪಿಸಿ ಇಮ್ಮಾದ್ -ಉಲ್-ಮುಲ್ಕ್ ನನ್ನು ನೇಮಿಸಿದನು.
-: ಖಿಲ್ಜಿ ಸಂತತಿ ( ಸಾಮಾನ್ಯ ಶಕ1290-1320):-
* ಜಲಾಲುದ್ದೀನ್ ಫಿರೋಜ್ ಖಿಲ್ಜಿ ಸಂತತಿಯ ಸ್ಥಾಪಕ.
-: ಅಲ್ಲಾವುದ್ದೀನ್ ಖಿಲ್ಜಿ:-
* ಇವನನ್ನು ದ್ವಿತೀಯ ಅಲೆಕ್ಸಾಂಡರ್ ಮತ್ತು ಎರಡನೇ ಸಿಕಂದರ್ ಎಂದು ಕರೆಯುತ್ತಾರೆ.
* ದಕ್ಷಿಣ ಭಾರತದ ಮೇಲೆ ದಾಳಿ ಮಾಡಿದ ಮೊದಲ ಮುಸ್ಲಿಂ ದೊರೆ.
ಅಲ್ಲಾವುದ್ದೀನ್ ಖಿಲ್ಜಿಯ ಸಾಧನೆಗಳು.
ಉತ್ತರ ಭಾರತದ ದಿಗ್ವಿಜಯಗಳು.
1. ಗುಜರಾತ್ ಆಕ್ರಮಣ(ಸಾಮಾನ್ಯ ಶಕ 1297)- ರಜಪೂತ ದೊರೆ ಕರ್ಣದೇವನು ಗುಜರಾತ್ ಅನ್ನು ಆಳುತ್ತಿದ್ದನು.
2. ರಣತಂಬೋರ್ ಆಕ್ರಮಣ(ಸಾಮಾನ್ಯ ಶಕ1301)- ರಾಜ ಹಮ್ಮೀರ ದೇವನು ರಣತಂಬೂರನ್ನು ಆಳುತ್ತಿದ್ದನು.
3. ಮೇವಾರ್ ಅಥವಾ ಚಿತ್ತೂರು ಅಕ್ರಮಣ(ಸಾಮಾನ್ಯ ಶಕ1303)- ರಾಣಾ ರತನ್ ಸಿಂಗನ ಸುಂದರ ಪತ್ನಿ ಪದ್ಮಿನಿಯನ್ನು ಒತ್ತೊಯ್ಯಬೇಕೆಂಬ ಅಲ್ಲಾವುದ್ದೀನ್ ಖಿಲ್ಜಿಯ ಬಲವಾದ ಇಚ್ಛೆ ಇದಕ್ಕೆ ಕಾರಣ.
4. ಇತರೆ ಆಕ್ರಮಣಗಳು :- ಮಾಳ್ವ, ಉಜ್ಜೈನ್, ಮಂಡು, ದಾರ್, ಚಾಂದೇರಿ ಮತ್ತು ಜೋಲೂರ್ ರಾಜ್ಯಗಳನ್ನು ಗೆಲ್ಲುವುದರೊಂದಿಗೆ ಸಾಮಾನ್ಯ ಶಕ 1305 ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಉತ್ತರ ಭಾರತದ ದಿಗ್ವಿಜಯಗಳನ್ನು ಪೂರ್ಣಗೊಳಿಸಿದನು.
ದಕ್ಷಿಣ ಭಾರತದ ದಂಡಯಾತ್ರೆಗಳು.
* ಇವನು ತನ್ನ ಸಮರ್ಥ ಸೇನಾನಿಯಾಗಿದ್ದ ಮಲ್ಲಿಕಾಫರ್ನನ್ನು ದಕ್ಷಿಣ ಭಾರತದ ದಂಡಯಾತ್ರೆಗೆ ನಿಯೋಜಿಸಿದನು.
1. ದೇವಗಿರಿಯ ಮೇಲೆ ಆಕ್ರಮಣ(ಸಾಮಾನ್ಯ ಶಕ1307)- ದೇವಗಿರಿಯ ರಾಜ ರಾಮಚಂದ್ರದೇವನು ಕರುಣದೇವ ಮತ್ತು ಅವನ ಮಗಳು ದೇವಲ ದೇವಿಯರಿಗೆ ಆಶ್ರಯ ನೀಡಿದ್ದು ಮೂರು ವರ್ಷಗಳಿಂದಲೂ ಕಪ್ಪ ಕಾಣಿಕೆ ಕೊಟ್ಟಿಲ್ಲ ಈ ಕಾರಣದಿಂದಾಗಿ ಅಲ್ಲಾವುದ್ದೀನ್ ಖಿಲ್ಜಿ 30,000 ಸೈನಿಕರೊಂದಿಗೆ ಮಲ್ಲಿಕಾಫನನ್ನು ದೇವಗಿರಿಗೆ ಕಳುಹಿಸಿದನು.
2. ವಾರಂಗಲ್ ನಲ್ಲಿ ದಂಡ ಯಾತ್ರೆ(ಸಾಮಾನ್ಯ ಶಕ1309).
* ರಾಜ ಪ್ರತಾಪ ರುದ್ರನು ಇಲ್ಲಿ ಆಳುತ್ತಿದ್ದ ಅವನನ್ನು ಸೋಲಿಸಿ ಶಾಂತಿ ಒಪ್ಪಂದ ಮಾಡಿಕೊಂಡನು.
* ಯುದ್ಧದಲ್ಲಿ ಕೊಳ್ಳೆ ಹೊಡೆದ ಸಂಪತ್ತನ್ನು ಮಲ್ಲಿಕಾಪರ್ ನ್ನು ಸಾವಿರ ಒಂಟೆಗಳ ಮೇಲೆ ದೆಹಲಿಗೆ ಸಾಗಿಸುವಾಗ ಅವು ಭಾರದಿಂದ ನರಳಿದವು ಎಂದು ಅಮೀರ್ ಖಸ್ರೋ ಹೇಳಿದ್ದಾನೆ.
3. ದ್ವಾರಸಮುದ್ರದ ಮೇಲೆ ದಾಳಿ(ಸಾಮಾನ್ಯ ಶಕ1310).
* ಹೊಯ್ಸಳ ರಾಜ ಮೂರನೇ ವೀರಬಲ್ಲಾಳ ದ್ವಾರಸಮುದ್ರ ಆಳುತ್ತಿದ್ದನು.
* ವೀರ ಬಲ್ಲಾಳನು ಸೋಲಿಸಿ ವಾರ್ಷಿಕ ಕಪ್ಪ ಕಾಣಿಕೆ ನೀಡಲು ಒಪ್ಪಿಸಲಾಯಿತು.
4. ಮಧುರೈ ಆಕ್ರಮಣ(ಸಾಮಾನ್ಯ ಶಕ1311).
* ಮಧುರೈ ನಲ್ಲಿ ಸುಂದರಪಾಂಡೆ ಮತ್ತು ವೀರಪಾಂಡೆ ಎಂಬ ಇಬ್ಬರು ಸಹೋದರರ ಮಧ್ಯೆ ಕಲಹ ಏರ್ಪಟ್ಟಿತ್ತು.
5. ದೇವಗಿರಿಯ ಮೇಲೆ ಎರಡನೇ ಆಕ್ರಮಣ(ಸಾಮಾನ್ಯ ಶಕ1312).
* ಶಂಕರದೇವನು ಈ ಸಂದರ್ಭದಲ್ಲಿ ಆಳುತ್ತಿದ್ದನು ಕಪ್ಪ ಕಾಣಿಕೆಯನ್ನು ನೀಡದೆ ಇರುವುದರಿಂದ ಮಲ್ಲಿಕಾಫರ್ ಮತ್ತೊಮ್ಮೆ ಆಕ್ರಮಣ ಮಾಡಿ ಅವನನ್ನು ಸೋಲಿಸಿ ಸಾಯಿಸಿದನು.
-: ಅಲ್ಲಾವುದ್ದೀನ್ ಖಿಲ್ಜಿಯ ಸುಧಾರಣೆಗಳು :-
* ಅಲ್ಲಾವುದ್ದೀನ್ ಖಿಲ್ಜಿ ತನ್ನನ್ನು ತಾನು ” ಭೂಮಿಯ ಮೇಲೆ ದೇವರ ಪ್ರತಿನಿಧಿ ಅಥವಾ ದೇವರ ನೆರಳು” ಎಂದು ಹೇಳಿದನು.
* ಕುದುರೆಗಳಿಗೆ ಮುದ್ರೆ ಹಾಕುವ ಪದ್ಧತಿಯನ್ನು ಜಾರಿಗೊಳಿಸಿದನು. ಇದನ್ನು ” ದಾಘ” ಎನ್ನುವರು.
* ಸೈನಿಕರ ಚಹರೆಗಳನ್ನು ಗುರುತಿಸಿ ದಾಖಲು ಮಾಡಿಕೊಳ್ಳುವ ಪದ್ಧತಿ ” ಚಹರ/ಹುಲಿಯ” ಜಾರಿಗೊಳಿಸಿದನು.
* ರೈತರಿಂದ ಭೂ ಕಂದಾಯವನ್ನು ಸಂಗ್ರಹಿಸಲು ” ಮುಸ್ತ ಕರಾಜ” ಎಂಬ ವಿಶೇಷ ಅಧಿಕಾರಿಯ ಹುದ್ದೆಯನ್ನು ಸೃಷ್ಟಿಸಿದನು.
* ಮಾರುಕಟ್ಟೆಗಳನ್ನು ನಿಯಂತ್ರಿಸಲು ” ಸಹನಾ- ಇ- ಮಂಡಿ ” ಎಂಬ ಉನ್ನತ ಅಧಿಕಾರಿಯನ್ನು ನೇಮಕ ಮಾಡಿದನು.
* ” ದಿವಾನಿ ರಿಯಾಸತ್” ಎಂಬ ಇಲಾಖೆಯು ಮಾರುಕಟ್ಟೆ ನಿಯಂತ್ರಣದ ಮೇಲ್ವಿಚಾರಣೆ ಮಾಡುತ್ತಿತ್ತು.
-: ಸೈನಿಕ ಸುಧಾರಣೆಗಳು :-
* ತನ್ನ ಸಾಮ್ರಾಜ್ಯ ರಕ್ಷಿಸಿಕೊಳ್ಳಲು ಅಲ್ಲಾವುದ್ದೀನ್ ಖಿಲ್ಜಿ, ಪ್ರಬಲ ಮತ್ತು ಬೃಹತ್ ಸರ್ವಸನ್ನದ್ಧ ಸೈನ್ಯವನ್ನು ಇಟ್ಟುಕೊಂಡಿದ್ದನು.
* ಕುದುರೆಗಳಿಗೆ ಮುದ್ರೆ ಹಾಕುವ ಪದ್ಧತಿ, ಜಾರಿಗೊಳಿಸಿದನು ಸೈನಿಕರ ನಕಲಿ ಹಾಜರಾತಿಯನ್ನು ಮತ್ತು ಭ್ರಷ್ಟಾಚಾರವನ್ನು ತಡೆಯಲು ಅವರ ವಿವರ್ಣಾತ್ಮಕ ದಾಖಲೆಗಳ ನಿರ್ವಹಣೆಯನ್ನು ಜಾರಿಗೊಳಿಸಿದನು.
* ಅವನು ” ಜಾಗಿರ್ ಪದ್ಧತಿಯನ್ನು ” ರದ್ದುಪಡಿಸಿ ನಗದು ರೂಪದಲ್ಲಿ ವೇತನ ನೀಡಲಾರಂಬಿಸಿದನು.
* ಸೈನಿಕರಿಗೆ ವಾರ್ಷಿಕ 234 ಟಂಕಗಳ ವೇತನ ನಿಗದಿಗೊಳಿಸಿದನು ಅಲ್ಲದೆ ಎರಡು ಕುದುರೆಗಳನ್ನು ನಿರ್ವಹಿಸುತ್ತಿದ್ದ ಸೈನಿಕನಿಗೆ 78 ಟಂಕಗಳ ಹೆಚ್ಚುವರಿ ವೇತನ ನೀಡಲಾಗುತ್ತಿತ್ತು.
* ಅರೀಜ್-ಇ-ಮುಮಾಲಿಕ್ ಎಂಬ ಅಧಿಕಾರಿಯು ಸೈನಿಕರ ನೇಮಕಾತಿ ಅಧಿಕಾರವನ್ನು ಹೊಂದಿದ್ದನು.
-: ಕಂದಾಯ ಸುಧಾರಣೆಗಳು :-
* ವೈಜ್ಞಾನಿಕ ತಳಹದಿಯ ಮೇಲೆ ಭೂಮಾಪನ ಪದ್ದತಿಯನ್ನು ಆರಂಭಿಸಿ, ಭೂ ಕಂದಾಯವನ್ನು ನಿಗದಿಗೊಳಿಸಿದ.
* ಸರ್ದಾರರು, ಜಾಗೀರ್ ದಾರರು ಮತ್ತು ಒಲೆಮಾರ ಮೇಲೆ ಅವನು ಹೆಚ್ಚಿನ ತೆರಿಗೆಗಳನ್ನು ಹೇರಿದನು.
* ಮುಸ್ಲಿಮೇತರರ ಮೇಲೆ ” ಜೆಜಿಯಾ” ತಲೆ ಕಂದಾಯವನ್ನು ವಿಧಿಸಿದನು. ಅವರು ಯಾತ್ರಾತೆರಿಗೆ, ಸರಕು ತೆರಿಗೆ ಮುಂತಾದವುಗಳೊಂದಿಗೆ ಇದನ್ನು ಕೊಡಬೇಕಾಗಿತ್ತು.
* ಕಂದಾಯ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಲಂಚಗುಳಿತನವನ್ನು ತಡೆಯುವ ಉದ್ದೇಶದಿಂದ ಅವರು ವೇತನಗಳನ್ನು ಹೆಚ್ಚಿಸಿದನು.
* ರೈತರಿಂದ ಭೂ ಕಂದಾಯವನ್ನು ಸಂಗ್ರಹಿಸಲು ” ಮುಸ್ತಕ ರಾಜ್ ” ಎಂಬ ವಿಶೇಷ ಅಧಿಕಾರಿಯ ಹುದ್ದೆಯನ್ನು ಸೃಷ್ಟಿಸಿದನು.
-: ತುಘುಲಕ್ ಸಂತತಿ( ಸಾಮಾನ್ಯ ಶಕ1320-1414).:-
* ಘಿಯಾಸುದ್ದಿನ್ ತುಘುಲಕ್ ಈ ವಂಶದ ಸ್ಥಾಪಕ.
* ಘಿಯಾಸುದ್ದಿನ್ ತುಘುಲಕ್ ಕೃಷಿಗಾಗಿ ನೀರಾವರಿ ಕಾಲುವೆಗಳ ನಿರ್ಮಾಣ ಆರಂಭಿಸಿದ ಮೊದಲ ದೊರೆ.
* ಪ್ರಥಮ ಬಾರಿಗೆ ದೆಹಲಿಯಲ್ಲಿ ಅಂಚೆ ವ್ಯವಸ್ಥೆಯನ್ನು ಜಾರಿಗೆ ತಂದನು ಇದಕ್ಕಾಗಿ ಕುದುರೆಗಳನ್ನು ಬಳಸಿಕೊಂಡನು.
-: ಮಹಮ್ಮದ್ ಬಿನ್ ತುಘುಲಕ್ :-
* ಈತನನ್ನು ಪ್ರಪಂಚದ ಆಶ್ಚರ್ಯಕರ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
* ವಿ.ಎ ಸ್ಮಿತ್ ಎಂಬ ಇತಿಹಾಸಕಾರರ ಪ್ರಕಾರ ಈತ ಪರಸ್ಪರ ವಿರುದ್ಧ ಗುಣಗಳ ಮಿಶ್ರಣ.
ಆಡಳಿತಾತ್ಮಕ ಪ್ರಯೋಗಗಳು.
1. ಗಂಗಾ ಮತ್ತು ಯಮುನಾ ತೆರಿಗೆಗಳ ಹೆಚ್ಚಳ.
2. ರಾಜಧಾನಿ ವರ್ಗಾವಣೆ1327(ದೆಹಲಿ- ದೇವಗಿರಿ).
3. ಸಾಂಕೇತಿಕ ನಾಣ್ಯ ಪ್ರಯೋಗ.
4. ದಿವಾನ್-ಇ-ಕೋಹಿ ಎಂಬ ಹೊಸ ಕೃಷಿ ಇಲಾಖೆಯನ್ನು ಸ್ಥಾಪಿಸಿದನು.
-: ಫಿರೋಜ್ ಷಾ ತುಘುಲಕ್ :-
* ಇವನನ್ನು ಲೋಕೋಪಯೋಗಿ ಇಲಾಖೆಯ ಸುಲ್ತಾನ ಎಂದು ಕರೆಯುತ್ತಾರೆ.
-: ಸಯ್ಯದ್ ಸಂತತಿ( ಸಾಮಾನ್ಯ ಶಕ1414-1451):-
* ಖಿಜರ್ ಖಾನ್ ಈ ಸಂತತಿಯ ಸ್ಥಾಪಕ.
* ಈ ವಂಶದ ಕೊನೆಯ ದೊರೆ ಅಲ್ಲಾವುದ್ದೀನ್ ಆಲಂ ಷಾ
-: ಲೋದಿ ಸಂತತಿ ( ಸಾಮಾನ್ಯ ಶಕ1451-1526):-
* ಇಬ್ರಾಹಿಂ ಲೋದಿ ದೆಹಲಿ ಮತ್ತು ಲೋದಿ ಮನೆತನದ ಕೊನೆಯ ದೊರೆ.
* ಮೊದಲ ಪಾಣಿಪತ್ ಕದನ 1526 ರಲ್ಲಿ ಬಾಬರ್ ಮತ್ತು ಇಬ್ರಾಹಿಂ ಲೋದಿಯ ಮಧ್ಯ ಜರುಗಿತು.
* ಈ ಕದನದಲ್ಲಿ ಇಬ್ರಾಹಿಂ ಲೋದಿ ಮರಣ ಹೊಂದಿದನು.