ಭಾರತೀಯ ನೌಕಾದಳದಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸುವವರಿಗೆ ಸುವರ್ಣಾವಕಾಶ ಒದಗಿ ಬಂದಿದ್ದು , ಅವಿವಾಹಿತ ಮಹಿಳೆಯರು ಮತ್ತು ಪುರುಷರು ಈ ಅವಕಾಶವನ್ನು ಉಪಯೋಗಿಸಿಕೋಳ್ಳಬಹುದು. ಭಾರತೀಯ ನೌಕಾದಳವು ಪ್ರಸುತ್ತ 2024ರ ಬ್ಯಾಚ್‌ಗೆ ಅಗ್ನಿವೀರರ ನೇಮಕಾತಿಗೆ ಮುಂದಾಗಿದೆ.
-: ವಿದ್ಯಾರ್ಹತೆ :-
ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಾನ್ಯತೆ ಹೊಂದಿರುವ ಯಾವುದಾದರು ಶಿಕ್ಷಣ ಮಂಡಳಿಯಿಂದ ಕನಿಷ್ಠ 50 ಶೇಕಡದೊಂದಿಗೆ 10 ನೇ ತರಗತಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತಿದೆ. ಅವಿವಾಹಿತ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಎಂದು ಸ್ಪಷ್ಟಪಡಿಸಲಾಗಿದೆ.
-: ಅರ್ಜಿ ಹೀಗೆ ಸಲ್ಲಿಸಿ :-
ಅಭ್ಯರ್ಥಿಗಳು ಅರ್ಜಿಯನ್ನು https:// agniveernavey.cdac.in ಮೂಲಕ ಸಲ್ಲಿಸಬೇಕಿದೆ.
-: ಕಡ್ಡಾಯ ಸೇವಾ ಅವಧಿ:-
ಆಯ್ಕೆಗೊಂಡ ಅಭ್ಯರ್ಥಿಗಳು ಜೂನಿಯರ್ ರಾಂಕ್ ನಲ್ಲಿ 4ನೇ ವರ್ಷದ ಅವಧಿಗೆ ನೇಮಕಗೊಳ್ಳಲಿದ್ದಾರೆ. ಈ ಸೇವಾ ಅವಧಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿರಲ್ಲಿದೆ.
-: ಅರ್ಜಿ ಸಲ್ಲಿಕೆಗೆ ಅಂತಿಮ ದಿನ :-
27-05-2024
-: ವಯೋಮಿತಿ :-
01-11-2003 ರಿಂದ 30-04-2007 ರ ನಡುವೆ ಜನಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
-: ವೇತನ :-
ಅಗ್ನಿವೀರರಿಗೆ ಮೊದಲ ವರ್ಷದಲ್ಲಿ ಪ್ರತಿ ತಿಂಗಳು 30.000 ರೂ , 2 ನೇ ವರ್ಷಕ್ಕೆ 33.೦೦೦ ರೂ , ಮೂರನೇ ವರ್ಷಕ್ಕೆ 36,500 ರೂ , ನಾಲ್ಕನೇ ವರ್ಷಕ್ಕೆ 40.000 ರೂ .ವೇತನ ನಿಗದಿಗೊಂಡಿದೆ.
-: ನಾವಿಕರಾಗಿ ಆಯ್ಕೆ ಸಾಧ್ಯತೆ :-
ನಾಲ್ಕು ವರ್ಷ ಅವಧಿಯಲ್ಲಿ ಅಗ್ನಿ ವೀರರ ಕಾರ್ಯವೈಖರಿಯನ್ನು ಪರಿಗಣಿಸಿ, ನೌಕಾದಳದ ಶಾಶ್ವತ ನಾವಿಕರಾಗಿ ಆಯ್ಕೆ ಯಾಗುವ ಅವಕಾಶ ಅಭ್ಯರ್ಥಿಗಳಿಗೆ ಇರಲಿದೆ.
-: ಆಯ್ಕೆ ಪ್ರಕ್ರಿಯೆ :-
ಎರಡು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ, ಕಂಪ್ಯೂಟರ್ ಆಧಾರಿತ ಇಂಡಿಯನ್ ನೇವಿ ಎಂಟ್ರೆನ್ಸ್ ಟೆಸ್ಟ್ ಗೆ ( ಐಎನ್ ಇಟಿ ) ಒಳಪಡಿಸಲಾಗುವುದು. ಮೊದಲ ಹಂತ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಎರಡನೆಯ ಹಂತದಲ್ಲಿ ಪಿಎಫ್ ಟಿ, ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಹಾಜರಾಗ ಬೇಕಿರುತ್ತದೆ.
-: ಅರ್ಜಿ ಶುಲ್ಕ :-
ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವೇಳೆ 550 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಿದೆ.
-: ತರಬೇತಿ ಪ್ರಾರಂಭ :-
ಒಡಿಶಾದ ಚಿಲ್ಕಾದಲ್ಲಿರುವ ಭಾರತೀಯ ನೌಕಾ ನೆಲೆಯಲ್ಲಿ 2024 ನವೆಂಬರ್ ನಿಂದ ತರಬೇತಿ ಪ್ರಾರಂಭವಾಗಲಿದೆ.