ಈ ಏಪ್ರಿಲ್ 4 ,2024 ಕ್ಕೆ ನ್ಯಾಟೋ ಒಕ್ಕೂಟವು ಪ್ರಾರಂಭವಾಗಿ 75 ವರ್ಷವಾಗಿದೆ.
ನ್ಯಾಟೋ ಬಗ್ಗೆ ತಿಳಿಯಿರಿ.
* ನಾರ್ತ್ ಅಟ್ಲಾಂಟಿಕ್ ಟ್ರೀಟ್ ಆರ್ಗನೈಜೇಷನ್ ಎಂಬುದರ ಸಂಕ್ಷಿಪ್ತ ರೂಪವೇ ನ್ಯಾಟೋ ( NATO) ಉತ್ತರ ಅಟ್ಲಾಂಟಿಕ್ ಮೈತ್ರಿಕೂಟ ಅಥವಾ ಒಕ್ಕೂಟ ಕೂಡ ಕರೆಯಲಾಗುತ್ತದೆ.
* ಸ್ಥಾಪನೆ.
ಎರಡನೇ ಮಹಾಯುದ್ಧದ ನಂತರ ಯೂರೋಪ್ ಮತ್ತು ಉತ್ತರ ಅಮೇರಿಕದ ಹನ್ನೆರಡು ರಾಷ್ಟ್ರಗಳು ಏಪ್ರಿಲ್ 4,1949 ರಂದು ಉತ್ತರ ಅಟ್ಲಾಂಟಿಕ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನ್ಯಾಟೋ ಅಸ್ತಿತ್ವಕ್ಕೆ ಬಂದಿತು.
* ಪ್ರಮುಖ ಗುರಿ.
ಈ ಒಕ್ಕೂಟದ ಸದಸ್ಯ ರಾಷ್ಟ್ರಗಳು ಸ್ವಾತಂತ್ರ್ಯ, ಸಾರ್ವಭೌಮತೆ ಹಾಗೂ ಭದ್ರತೆಯನ್ನು ಕಾಪಾಡುವದು. ಇದಕ್ಕಾಗಿ ರಾಜಕೀಯ ಹಾಗೂ ಮಿಲಿಟರಿ ಶಕ್ತಿ ಸದ್ಬಳಕೆ ಮಾಡುವುದು.
* ಮಿಷನ್.
1949 ರಂದು ಮಾಡಿದ ಒಪ್ಪಂದದಲ್ಲಿರುವ ಆರ್ಟಿಕಲ್ 5 ರಲ್ಲಿ ವಿವರಿಸಿರುವಂತೆ ಈ ಒಕ್ಕೂಟದ ಎಲ್ಲ ಸದಸ್ಯ ರಾಷ್ಟ್ರಗಳ ರಕ್ಷಣೆ ಈ ಒಕ್ಕೂಟದ ಪ್ರಮುಖ ಧ್ಯೇಯವಾಗಿದೆ.
* ಈ ಒಕ್ಕೂಟದ ಒಂದು ರಾಷ್ಟ್ರದ ಮೇಲೆ ವಿಶ್ವದ ಇತರ ಯಾವುದೇ ರಾಷ್ಟ್ರ ದಾಳಿ ಮಾಡಿದರೂ ಆಗ ಇಡೀ ನ್ಯಾಟೋ ಒಕ್ಕೂಟ ಒಂದಾಗುತ್ತದೆ. ಅವೆಲ್ಲಾ ಆ ದಾಳಿ ಮಾಡಿದ ರಾಷ್ಟ್ರವನ್ನು ವೈರಿ ಎಂದು ಪರಿಗಣಿಸಿ ಯುದ್ಧ ಸನ್ನದ್ಧವಾಗುತ್ತದೆ.
* ಪ್ರಾಮುಖ್ಯತೆ.
ಇದು ಯುದ್ಧದ ಸಮಯವಲ್ಲದೆ ಶಾಂತಿ ಕಾಲದಲ್ಲಿ ರೂಪಿಸಿಕೊಂಡ ವಿಶ್ವದ ಅತಿ ದೊಡ್ಡ ಸೇನಾ ಮೈತ್ರಿಯಾಗಿದೆ.
* ಪ್ರಧಾನ ಕಚೇರಿ.
ಇದರ ಪ್ರಧಾನ ಕಚೇರಿಯು ಬೆಲ್ಜಿಯಂನ ಬ್ರಸೆಲ್ಸ್ ನಲ್ಲಿದೆ.ಆದರೆ ಸೇನಾ ಪ್ರಧಾನ ಕಛೇರಿಯು ಬೆಲ್ಜಿಯಂನ ವೋನ್ಸ್ ನಲ್ಲಿದೆ.
* ಸದಸ್ಯ ರಾಷ್ಟ್ರಗಳು.
ಸದ್ಯಕ್ಕೆ ಈ ಒಕ್ಕೂಟದಲ್ಲಿ 32 ರಾಷ್ಟ್ರಗಳಿವೆ. ಇತ್ತಿಚೆಗೆ, ಕೊನೆಯದಾಗಿ ಸ್ವೀಡನ್ ದೇಶವು ಈ ಮೈತ್ರಿಕೂಟದ 32 ನೇ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಗಿದೆ.
* ಸ್ಥಾಪಿತವಾದ ಉದ್ದೇಶ.
ಎರಡನೇಯ ಮಹಾಯುದ್ಧದ ನಂತರ ಯುರೋಪ್ ಖಂಡದಲ್ಲಿ ಸೋವಿಯೆತ್ ಒಕ್ಕೂಟದ ಪ್ರಾಬಲ್ಯವನ್ನು ತಡೆಯುವುದು ಮೂಲ ಉದ್ದೇಶವಾಗಿತ್ತು.
* ನ್ಯಾಟೋ ಪ್ಲಸ್.
ನ್ಯಾಟೋ ಒಕ್ಕೂಟದ ಜೊತೆಗೆ ಇದು 5 ದೇಶಗಳನ್ನು ಒಳಗೊಂಡಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ಇಸ್ರೇಲ್ ಮತ್ತು ದಕ್ಷಿಣ ಕೋರಿಯಾ.