-: ಬಹಮನಿ ರಾಜ್ಯ:-
* ಬಹುಮನಿ ಸಾಮ್ರಾಜ್ಯ( ಸಾಮಾನ್ಯ ಶಕ 1347-1527).
* ರಾಜಧಾನಿ – ಕಲಬುರ್ಗಿ ಅಥವಾ ಹಸನಾಬಾದ್ ( ಸಾಮಾನ್ಯ ಶಕ 1347-1422), ಬೀದರ್ ( ಸಾಮಾನ್ಯ ಶಕ 1422-1527).
* ಸ್ಥಾಪಕ – ಅಲ್ಲಾವುದ್ದಿನ್ ಹಸನ್ ಗಂಗೂ ಬಹುಮನ್ ಷಾ.
-: ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ( ಸಾ.ಶ.1347-1358).
* ತನ್ನ ರಾಜ್ಯವನ್ನು ದೌಲತಾಬಾದ್, ಬಿರಾರ್, ಬೀದರ್, ಕಲಬುರ್ಗಿ ಎಂಬ ನಾಲ್ಕು ಪ್ರಾಂತ್ಯಗಳಾಗಿ ( ತರಫ್) ವಿಭಾಗಿಸಿ ಅವುಗಳನ್ನು ಮುಖ್ಯಸ್ಥರನ್ನಾಗಿ ತರಫವಾರರನ್ನು ನೇಮಿಸಿ ಅವರಿಗೆ ಜಹಗೀರುಗಳನ್ನು ನೀಡಿದನು.
-: ಒಂದನೇ ಮಹಮದ್ ಷಾ( ಸಾಮಾನ್ಯ ಶಕ1358-1357):-
* ಸಾಮಾನ್ಯ ಶಕ 1367 ರಲ್ಲಿ ಗುಲ್ಬರ್ಗದಲ್ಲಿ ಜಾಮಿಯಾ ಮಸೀದಿಯನ್ನು ನಿರ್ಮಿಸಿದನು.
* ಜಾಮಿಯಾ ಮಸೀದಿಯ ಶಿಲ್ಪಿ – ರಫಿ.
-: ಎರಡನೇ ಮಹಮದ್ ಷಾ ( ಸಾಮಾನ್ಯ ಶಕ 1378-1397):-
* ಶಾಂತಿಪ್ರಿಯ, ಸುಸಂಸ್ಕೃತ, ಮತ್ತು ಧರ್ಮ ನಿಷ್ಠೆ ಸುಲ್ತಾನ ಹಾಗೂ ವಿದ್ವಾಂಸನಾಗಿದ್ದ.
* ಸಾಮಾನ್ಯ ಶಕ 1387 ರಲ್ಲಿ ಉಂಟಾದ ಬರಗಾಲ ಕಾಲದಲ್ಲಿ ಗುಜರಾತಿನಿಂದ ಧಾನ್ಯಗಳನ್ನು ಧರಿಸಿ ಪ್ರಜೆಗಳಿಗೆ ಹಂಚಿದ.
-: ತಾಜ್ -ಉದ್- ದೀನ್ ಫಿರೋಜ್ ಷಾ ( ಸಾಮಾನ್ಯ ಶಕ 1397-1422):-
* ಬಹುಮಾನ ಸುಲ್ತಾನರಲ್ಲಿ ಅತ್ಯಂತ ಪ್ರಸಿದ್ಧ ಸುಲ್ತಾನ.
* ಮಹಾರಾಷ್ಟ್ರದ ದೌಲತಾಬಾದ್ ನಲ್ಲಿ ಒಂದು ನಕ್ಷತ್ರ ವೀಕ್ಷಣಾಲಯ ನಿರ್ಮಿಸಿದನು. ( ವಿಜ್ಞಾನಿ ಹಸನ್ ಗಿಲಾನಿ ನೇತೃತ್ವದಲ್ಲಿ).
* ಈತನ ಆಸ್ಥಾನದಲ್ಲಿ ಖ್ವಾಜಾ ಬಂದೇನವಾಜ್ ಎಂಬ ಸೂಫಿ ಸಂತಲಿದ್ದು ಆತನನ್ನು ಜನರು ಹಜಹರತ್ ಗೆಸದರಾಜ್ ಅಂದರೆ ಉದ್ದನೆಯ ಕೂದಲಿನವನ್ನು ಎನ್ನುತ್ತಿದ್ದರು.
-: 1ನೇ ಷಿಹಾಬ್ ಉದ್- ದೀನ್ – ಅಹಮದ್ ಷಾ( ಸಾ.ಶ 1422-1436):-
* ಈತ ಫಿರೋಜ್ ಷಾ ನ ಕಿರಿಯ ಸಹೋದರನ ಆಗಿದ್ದು ಕಲ್ಬುರ್ಗಿಯಲ್ಲಿದ್ದ ಪಿತೂರಿಗಳ ಕೊಲೆಗಳನ್ನು ಆಂತರಿಕ ಕಲಹಗಳು ಹಾಗೂ ನೆಚ್ಚಿನ ಸಂತ ಹಜರತ್ ಗೇಸದರಾಜ್ ಕೊಲೆಯಿಂದ ಬೇಸತ್ತು ಕಲಬುರ್ಗಿಯಿಂದ ಬೀದರ್ ಗೆ ರಾಜಧಾನಿಯನ್ನು ವರ್ಗಾಯಿಸಿದ.
* ಈತ ಬೀದರ್ ನಲ್ಲಿ ಪ್ರಸಿದ್ಧ ಸೋಲಾಖಾಂಬ್ ಮಸೀದಿ ಮತ್ತು ಸುಂದರವಾದ ತಖ್ತಮಹಲ್ ಅರಮನೆಯನ್ನು ನಿರ್ಮಿಸಿದನು.
-: ಎರಡನೆಯ ಅಲ್ಲಾವುದ್ದೀನ್ ಅಹಮ್ಮದ್ ಷಾ ( ಸಾಮಾನ್ಯ ಶಕ 1435-1458):-
* ಅಲ್ಲಾ-ಉದ್-ದಿನ್ ಹುಮಾಯೂನ್ ( ಸಾ.ಶ1458-1461).
-: ಮಹಮ್ಮದ್ ಗವಾನ್( ಸಾಮಾನ್ಯ ಶಕ 1458-1481):-
* ಈತನು ಮೂರನೇ ಮಹಮ್ಮದ್ ಷಾ ನ ಪ್ರಧಾನ ಮಂತ್ರಿ.
* ಸಾಮಾನ್ಯ ಶಕ 1405 ರಲ್ಲಿ ಪರ್ಷಿಯಾದ ಗಿಲಾನ್ ಪ್ರಾಂತ್ಯದ ಗಿಲಾನಿ ಎಂಬ ಹಳ್ಳಿಯಲ್ಲಿ ಜನಿಸಿದನು.
* ನಂತರ ತನ್ನ ಸಾಮರ್ಥ್ಯದಿಂದ ಪ್ರಧಾನಮಂತ್ರಿ ಹುದ್ದೆಗೆ ಏರಿದರು. ಸಾಮಾನ್ಯ ಶಕ 1441 ರಲ್ಲಿ ಬೀದರ್ ನಲ್ಲಿ ಮದರಸಾ ಕಾಲೇಜನ್ನು ನಿರ್ಮಿಸಿದನು.
* ಈತನ ಪ್ರಮುಖ ಬಿರುದುಗಳೆಂದರೆ :- ಖ್ವಾಜಾ- ಈ- ಜಹಾನ್, ಲಷ್ಕರಿ, ಮಲ್ಲಿಕ್, ಅಮಿರುಲ್ ಉಮ್ರಾ
-: ದಿಗ್ವಿಜಯಗಳು :-
* ವಿಜಯನಗರ ಹೊಸದಲ್ಲಿದ್ದ ಗೋವಾ ಗೆದ್ದುಕೊಂಡನು.
* ಒಡಿಶಾದ ಪುರುಷೋತ್ತಮ ಗಜಪತಿಯನ್ನು ಸೋಲಿಸಿದನು.
* ಇವನು ಸ್ವತಃ ಸಾಹಿತಿಯಾಗಿದ್ದು ರಿಯಾನ್-ಉಲ್-ಇನ್-ಷಾ ಮತ್ತು ದಿವಾನ್-ಇ-ಆಷರ್ ಎಂಬ ಕೃತಿಗಳನ್ನು ರಚಿಸಿದನು.
-: ಶಹಾಬುದ್ದೀನ್ ಮಹಮದ್ ಷಾ( ಸಾಮಾನ್ಯ ಶಕ1482-1517):-
ಸಾಮಾನ್ಯ ಶಕ 1489ರ ನಂತರ ಬಹಮನಿ ಸಾಮ್ರಾಜ್ಯವು 5 ಷಾಹಿ ಮನೆತನಗಳಾಗಿ ವಿಭಾಗವಾಯಿತು ಅವುಗಳೆಂದರೆ.
1. ಬಿಜಾಪುರದ ಆದಿಲ್ ಶಾಹಿಗಳು (1498-1686).
2. ಅಹಮದ್ ನಗರದ ನಿಜಾಂ ಶಾಹಿಗಳು(1490-1626).
3. ಗೋಲ್ಕೊಂಡದ ಕುತುಬ್ ಶಾಹಿಗಳು (1512-1687).
4. ಬೀದರ್ ನ ಬರೀದ್ ಶಾಹಿಗಳು(1526-1619).
5. ಬಿರಾರ್ ನ ಇಮಾದ್ ಶಾಹಿಗಳು (1490-1574).
-: ಬಹುಮನಿ ಸುಲ್ತಾನರ ಕೊಡುಗೆಗಳು :-
* ಷರಿಯತ್ ಎಂಬ ಇಸ್ಲಾಮಿಕ್ ಕಾನೂನುಗಳು ಜಾರಿಯಲ್ಲಿದ್ದವು.
-: ಇವರ ಕಾಲದ ಮಂತ್ರಿಗಳೆಂದರೆ :-
* ವಕೀಲ್- ಉಲ್- ಸುಲ್ತಾನತ್- ಪ್ರಧಾನ ಮಂತ್ರಿ
* ಅಮೀರ್-ಈ- ಜುಮ್ಲಾ- ಅರ್ಥ ಸಚಿವ
* ವಜೀರ್-ಇ-ಆಶ್ರಫ್ – ವಿದೇಶಾಂಗ ಮಂತ್ರಿ
* ಸದರ್- ಈ- ಜಹಾನ್-ನ್ಯಾಯಾಡಳಿತ ಮಂತ್ರಿ, ದಾನದತ್ತಿ ವ್ಯವಹಾರ
* ಅಮೀರ್-ಉಲ್-ಉಮ್ರಾ- ಮಹಾದಂಡನಾಯಕ
* ವಜೀರ್-ಇ-ಕುಲ್-ಉಪಪ್ರಧಾನಿ
* ಖಾಜಿ-ನ್ಯಾಯಾಧೀಶ
* ವಜೀರ್-ಮುಖ್ಯ ಲೆಕ್ಕಿಗ
* ಕೋತ್ವಾಲ್- ನಗರ ರಕ್ಷಕ, ಪೊಲೀಸ್ ಆಯುಕ್ತ
* ಮಕರಮ್- ಗ್ರಾಮಾಧಿಕಾರಿ
-: ಗುಲ್ಬರ್ಗದ ಸ್ಮಾರಕಗಳು :-
ಬಂದೇನವಾಜ್ ದರ್ಗಾ ( ಸಾಮಾನ್ಯ ಶಕ 1422).
* ಮುಸ್ಲಿಂ ಸಂತರ ಸಮಾಜಗಳಿಗೆ ದರ್ಗಾಗಳೆಂದು ಕರೆಯುತ್ತಾರೆ.
* ಕಲ್ಬುರ್ಗಿಯಲ್ಲಿ ಖ್ವಾಜಾ ಬಂದೇನವಾಜ್ ದರ್ಗಾ ಪ್ರಮುಖವಾದದ್ದು.
-: ವಿಜಯಪುರದ ಆದಿಲ್ ಶಾಹಿಗಳು ( ಸಾ.ಶ 1489-1686):-
* ಬಹುಮನಿ ಸಾಮ್ರಾಜ್ಯದ ಪತನದ ನಂತರ ಅಸ್ತಿತ್ವಕ್ಕೆ ಬಂದ ದಖ್ಖನಿನ 5 ಶಾಹಿಗಳ ಪೈಕಿ ವಿಜಯಪುರ ಆದಿಲ್ ಶಾಹಿಗಳು ಗಣ್ಯರಾಗಿದ್ದಾರೆ.
* ಸ್ಥಾಪಕ – ಯೂಸುಫ್ ಆದಿಲ್ ಶಾಹಿ
-: ಯೂಸುಫ್ ಆದಿಲ್ ಶಾಹಿ ( ಸಾಮಾನ್ಯ ಶಕ 1510-1534):-
* ಸಾಮಾನ್ಯ ಶಕ 1510 ರಲ್ಲಿ ಪೋರ್ಚುಗೀಸರ ಪ್ರಸಿದ್ಧ ವೈಸ್ರಾಯ್ ನಾದ ಅಲ್ಫಾನ್ಸೋ ಡಿ ಅಲ್ಬುಕರ್ಕ್ ನು ಈತನ ಹೊಸದಲ್ಲಿದ್ದ ಗೋವಾವನ್ನು ಪಡೆದುಕೊಂಡಿದ್ದನು.
* ಸಾಮಾನ್ಯ ಶಕ 1512ರಲ್ಲಿ ಶ್ರೀ ಕೃಷ್ಣದೇವರಾಯನ ರಾಯಚೂರಿನ ದೋ-ಅಬ್ ಪ್ರದೇಶಗಳನ್ನು ಪಡೆದುಕೊಂಡನು.
* ಒಂದನೇ ಇಬ್ರಾಹಿಂ ಆದಿಲ್ ಶಾಹಿ( ಸಾಮಾನ್ಯ ಶಕ1535-1557).
* ಒಂದನೇ ಆದಿಲ್ ಶಾಹಿ( ಸಾಮಾನ್ಯ ಶಕ 1558-1580).
-: ಎರಡನೇ ಇಬ್ರಾಹಿಂ ಆದಿಲ್ ಶಾ ( ಸಾಮಾನ್ಯ ಶಕ 1580-1626):-
* ಈತನಿಗೆ ಜಗದ್ಗುರು ಬಾದಶಾಹ ಎಂದು ಕರೆಯಲಾಗುತ್ತಿತ್ತು.
* ಈತ ದಖನ್ ಉರ್ದು ಭಾಷೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಕಿತಾಬ್- ಇ- ನವರಸ್ ಎಂಬ ಕೃತಿಯನ್ನು ರಚಿಸಿದನು.
-: ಇಬ್ರಾಹಿಂ ರೋಜಾ:-
* ಇಲ್ಲಿ ಜೀವನದಲ್ಲಿ ಅತಿ ಆಸಕ್ತಿ ಬೇಡ, ಅದು ಕ್ಷಣಿಕವಾಗಿದೆ. ಈ ಅನ್ಯರ ಜಗತ್ತಿನಲ್ಲಿ ಮಾನಸಿಕ ನೆಮ್ಮದಿ ಎಂಬುದು ಇಲ್ಲ ಎಂದು ಬರೆಯಲಾಗಿದೆ.
* ಇದನ್ನು ಎರಡನೇ ಇಬ್ರಾಹಿಂ ಆದಿಲ್ ಶಾ ಸಾಮಾನ್ಯ ಶಕ 1626 ರಲ್ಲಿ ವಿಜಯಪುರದಲ್ಲಿ ತನ್ನ ರಾಣಿ ತಾಜ್ ಸುಲ್ತಾನಳ್ ನೆನಪಿಗಾಗಿ ನಿರ್ಮಿಸಿದನು.
-: ಮಹಮ್ಮದ್ ಆದಿಲ್ ಶಾ( ಸಾಮಾನ್ಯ ಶಕ 1626-1656):-
-: ಗೋಳಗುಮ್ಮಟ:-
* ಮಹಮದ್ ಆದಿಲ್ ಶಾ ತನ್ನ ಹೆಂಡತಿ ಮಕ್ಕಳಿಗಾಗಿ ನಿರ್ಮಿಸಿದ ಸಮಾಧಿಗಳು ಇಲ್ಲಿವೆ. ಸಾಮಾನ್ಯ ಶಕ 1626ರಿಂದ 1656 ರವರಿಗೆ ಈ ಕಟ್ಟಡವನ್ನು ನಿರ್ಮಿಸಿದನು.
-: ಎರಡನೇ ಆದಿಲ್ ಶಾಹಿ ( ಸಾಮಾನ್ಯ ಶಕ 1656-1672):-
* ಇವನ ಸೇನಾಧಿಪತಿಯಾದ ಅಬ್ಜಲ್ ಖಾನ್ ನನ್ನು ಶಿವಾಜಿ ವ್ಯಾಘ್ರನಖ್ ಕೊಲೆ ಮಾಡಿದ.
-: ಸಿಕಂದರ್ ಆದಿಲ್ ಶಾಹಿ ( ಸಾಮಾನ್ಯ ಶಕ ( 1672-1686):-
* ವಿಜಯಪುರದ ಆದಿಲ್ ಶಾಹಿಗಳ ಕೊನೆಯ ಸುಲ್ತಾನ.
-: ವಿಜಯಪುರ ಸುಲ್ತಾನರ ಕಾಲದ ಸಾಹಿತ್ಯ :-
* ನರಹರಿ ಕವಿ- ತೊರವೆ ರಾಮಾಯಣ
* ಅಬ್ದುಲ್ ದೆಹಲ್ವಿ – ಇಬ್ರಾಹಿಂ ನಾಮ
* ಫೆರಿಸ್ತಾ – ತಾರೀಕ್-ಇ-ಫೆರಿಸ್ತಾ