ಬಾದಾಮಿ ಚಾಲುಕ್ಯರು ( ಸಾಮಾನ್ಯ ಶಕ 500-757).
* ಕರ್ನಾಟಕದ ಇತಿಹಾಸದಲ್ಲಿ ಪ್ರಬಲವಾಗಿ ಆಡಳಿತ ಮಾಡಿದ ಮನೆತನ.
* ರಾಜಧಾನಿ – ಬಾದಾಮಿ ಅಥವಾ ವಾತಾಪಿ ಈಗಿರುವ ಬಿಜಾಪುರ ಜಿಲ್ಲೆ.
* ಸ್ಥಾಪಕ – ಜಯಸಿಂಹ ಇವನು ಕದಂಬರ ಸಾಮಂತರನಾಗಿದ್ದನು.
* ಲಾಂಛನ – ವರಾಹ
* ಇವರ ಆರಂಭದ ರಾಜಧಾನಿ – ಐಹೊಳೆ.
ಮಂಗಳೇಶ( ಸಾಮಾನ್ಯ ಶಕ 596-609).
* ಮಹಾಕೂಟದಲ್ಲಿ ಮಹಾಕೂಟೇಶ್ವರ ಆಲಯ ಮತ್ತು ಮಹಾಕೂಟ ಸ್ತಂಭ ಶಾಸನ ನಿರ್ಮಿಸಿದನು.
* ಇವನನ್ನು ಚಾಲುಕ್ಯ ಕಲೆಯ ಪಿತಾಮಹ ಎಂದು ಕರೆಯಲಾಗಿದೆ.
* ತನ್ನ ಕೊನೆಯ ದಿನಗಳಲ್ಲಿ ತನ್ನ ಮಗನನ್ನು ಅಧಿಕಾರಕ್ಕೆ ತರುವ ಸಂಚಿನಲ್ಲಿ ಇದ್ದಾಗಲೇ ಕೀರ್ತಿವರ್ಮನ ಮಗನಾದ ಇಮ್ಮಡಿ ಪುಲಕೇಶಿಯಿಂದ ಕೊಲೆಯಾದ .
ಇಮ್ಮಡಿ ಪುಲಕೇಶಿ ( ಸಾಮಾನ್ಯ ಶಕ 610-642).
* ಐಹೊಳೆ ಶಾಸನ ಇವನ ದಿಗ್ವಿಜಯ ಮತ್ತು ಚಾಲುಕ್ಯರ ಸಂತತಿಯ ಪೂರ್ಣ ವಿವರ ತಿಳಿಸಲು ಸಹಕಾರಿಯಾಗಿದೆ.
* ಚಾಲುಕ್ಯರ ಪ್ರಸಿದ್ಧ ದೊರೆ.
* ಇವನ ಆಸ್ಥಾನದ ಕವಿ ರವಿ ಕೀರ್ತಿಯು ಮೇಗುತಿ ದೇವಾಲಯದ ಗೋಡೆ ಮೇಲೆ ಸಂಸ್ಕೃತದಲ್ಲಿ ಶಾಸನವನ್ನು ಕೆತ್ತಿಸಿದನು.
* ಪುಲಿಕೇಶಿ ತನ್ನ ರಾಯಭಾರಿಯನ್ನು ಪರ್ಶಿಯಾದ ದೊರೆ ಎರಡನೇ ಖುಸ್ರುವಿನ ಆಸ್ಥಾನಕ್ಕೆ ಕಳುಹಿಸಿದನು ಹಾಗೆಯೇ ಖುಸ್ರು ತನ್ನ ರಾಯಭಾರಿಯನ್ನು ಎರಡನೇ ಪುಲಿಕೇಶಿ ಆಸ್ಥಾನಕ್ಕೆ ಕಳುಹಿಸಿದನು.ಈ ಮಾಹಿತಿ ಅಜಂತಾದ ಒಂದನೇ ಗುಹೆಯ ಚಿತ್ರಗಳಲ್ಲಿ ಕಾಣಬಹುದು.
* ಈತನ ಆಸ್ಥಾನಕ್ಕೆ ಚೀನಾದ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಭೇಟಿ ನೀಡಿದನು .
ನರ್ಮದಾ ನದಿ ಕದನ ( ಸಾಮಾನ್ಯ ಶಕ 630-631).
* ಉತ್ತರಪಥೇಶ್ವರನಾದ ಹರ್ಷವರ್ಧನ ಮತ್ತು ದಕ್ಷಿಣ ಪಥೇಶ್ವರನಾದ ಇಮ್ಮಡಿ ಪುಲಕೇಶಿ ನಡುವೆ ನರ್ಮದಾ ನದಿ ದಂಡೆ ಮೇಲೆ ನಡೆದ ಈ ಕದನದಲ್ಲಿ ಇಮ್ಮಡಿ ಪುಲಕೇಶಿ ಜಯವಾಯಿತು ಎಂದು ತಿಳಿಸುವ ಶಾಸನ ಐಹೊಳೆ ಶಾಸನ ಇದನ್ನು ಹೊರಡಿಸಿದವರು ರವಿ ಕೀರ್ತಿ.
* ಈ ಕದನದಲ್ಲಿ ಗೆದ್ದಂತಹ ಪುಲಕೇಶಿ ಪರಮೇಶ್ವರ ಎಂಬ ಬಿರುದು ಧರಿಸಿದನು.
* ಕೌಮುದಿ ಮಹೋತ್ಸವ ಕೃತಿ ಬರೆದಿರುವ ವಿಜಯ ಭಟ್ಟಾರಿಕೆ ಪುಲಕೇಶಿಯ ಚಂದ್ರಾದಿತ್ಯನ ರಾಣಿಯಾಗಿದ್ದಳು.
* ಪುಲಕೇಶಿಯನ್ನು ಶಾಸನಗಳಲ್ಲಿ ಎದೆಯ, ಎರೆಯಮ್ಮ, ಎರೆಯತೀಡಗಳು ಎಂದು ಕರೆಯಲಾಗಿದೆ.ಇವು ಆತನ ಮೂಲ ಹೆಸರಾಗಿವೆ.
ಒಂದನೇ ವಿಕ್ರಮಾದಿತ್ಯ (ಸಾಮಾನ್ಯ ಶಕ 655-681).
* ಪಲ್ಲವರ ಅರಸ ಒಂದನೇ ನರಸಿಂಹವರ್ಮನನ್ನು ಕೊಲೆ ಮಾಡಿ ಬಾದಾಮಿಯನ್ನು ಪಡೆದುಕೊಂಡಿದ್ದಕ್ಕಾಗಿ ಇವನನ್ನು ಬಾದಾಮಿ ಚಾಲುಕ್ಯರ ಪುನರ್ ಸ್ಥಾಪಕ ಎನ್ನುವರು.
ವಿನಯಾದಿತ್ಯ ( ಸಾಮಾನ್ಯ ಶಕ 689-696).
* ಒಂದನೇ ವಿಕ್ರಮಾದಿತ್ಯನ ಮಗನಾದ ಇವನು ಕನೋಜದ ಯಶೋವರ್ಮನನ್ನು ಸೋಲಿಸಿದನು.
* ರನ್ನನು ವಿನಯಾದಿತ್ಯ ನನ್ನು ತನ್ನ ಕೃತಿಯಲ್ಲಿ ದುರ್ಧರ ಮಲ್ಲ ಎಂದು ಕರೆದಿದ್ದಾರೆ.
* ಇವನು ತನ್ನ ರಾಯಭಾರಿಯನ್ನು ಚೈನಾಗಿ ಕಳುಹಿಸಿದನು.
ಎರಡನೇ ವಿಕ್ರಮಾದಿತ್ಯ ( ಸಾಮಾನ್ಯ ಶಕ 734-744).
* ಆಡಳಿತ.
* ಶಾಸನಗಳಲ್ಲಿ ದೊರೆಯುವಂತೆ ಸಾಮ್ರಾಜ್ಯವನ್ನು ಮಂಡಲ, ವಿಷಯ, ನಾಡು, ಕಂಪಣ, ಗ್ರಾಮಗಳಾಗಿ ವಿಭಾಗಿಸಲಾಗಿತ್ತು.
* ಚಾಲುಕ್ಯರ ಸೈನ್ಯವನ್ನು” ಕರ್ನಾಟಕ ಬಲ ” ಎನ್ನುತ್ತಿದ್ದರು .
* ಪ್ರಾಂತ್ಯಗಳಿಗೆ ಪ್ರಾಂತ್ಯಾಧಿಕಾರಿ ನಾಡುಗಳಿಗೆ ನಾಡಗಾವುಂಡ ಗ್ರಾಮಗಳಿಗೆ ಗೌಂಡ ಮುಖ್ಯಸ್ಥರಾಗಿದ್ದರು.
-: ಆರ್ಥಿಕ ಸ್ಥಿತಿ :-
* ಭೂ ಕಂದಾಯ 1/6 ರಷ್ಟು ಇದನ್ನು ಸಿದ್ದಿಯ ಎನ್ನುತ್ತಿದ್ದರು.
* ಹೆರ್ಜೆಂಕ ಪೇರುಗಳ ಮೇಲಿನ ತೆರಿಗೆ .
* ಪನ್ನೆಯ – ವಿಳೆದೆಲೆ ಮೇಲಿನ ತೆರಿಗೆ.
* ಇವನ ಕಾಲದ ನಾಣ್ಯಗಳು ವರಹ, ಗದ್ಯಾಣ .
* ವಿಜ್ಜಿಕೆ ಅಥವಾ ವಿಜಯ ಭಟ್ಟಾರಿಗೆ – ಕೌಮುದಿ ಮಹೋತ್ಸವ.
* ಶಿವ ಭಟ್ಟಾರಕರ – ಹರಪಾರ್ವತಿಯ.
-: ಕಲೆ ಮತ್ತು ವಾಸ್ತು ಶಿಲ್ಪ :-
* ಇದರ ಪ್ರಮುಖ ಲಕ್ಷಣ ಎಂದರೆ ಎತ್ತರದ ಜಗುಲಿಯ ಮೇಲೆ ಕಟ್ಟಡ ನಿರ್ಮಾಣ.
* ದೇವಾಲಯಗಳ ಸುತ್ತ ಪ್ರದಕ್ಷಿಣೆ ಹಾಕುವ ಅವಕಾಶ, ಚೌಕಾಕಾರದ ಗರ್ಭಗುಡಿ ಮತ್ತು ಶಿಖರ, ಕೆಲವು ದೇವಾಲಯಗಳು ಲಾಳಾಕಾರದ ತಳ ವಿನ್ಯಾಸ ಹೊಂದಿವೆ. ( ಮುಖ ಮಂಟಪ, ಸುಖ ನಾಸಿನಿ ಬಂದಿದ್ದವು).
* ದೇವಾಲಯಗಳ ಸುತ್ತ ರಾಮಾಯಣ ಮತ್ತು ಮಹಾಭಾರತಗಳ ಕೆತ್ತನೆ.
-: ಬಾದಾಮಿ :-
* ಒಂದನೇ ಗುಹೆ ಶೈವ ಗುಹೆ.
* ಎರಡನೇ ಮತ್ತು ಮೂರನೇ ಗುಹೆಗಳು ವೈಷ್ಣವ ಗುಹೆಗಳು.
* ನಾಲ್ಕನೇ ಗುಹೆ ಜೈನ ಗುಹೆ.
-: ಐಹೊಳೆ :-
* ಇದನ್ನು ವಾಸ್ತುಶಿಲ್ಪದ ಬಯಲು ಪ್ರದೇಶನ ಶಾಲೆ ಮತ್ತು ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ಎನ್ನುವರು.
* ಇಲ್ಲಿ ಲಡಾಖಾನ್ ದೇವಾಲಯ, ದುರ್ಗ ದೇವಾಲಯ ( ಭಾರತ ಸಂಸತ್ ಮಾದರಿಯಲ್ಲಿದೆ) ಮೇಗುತಿ ದೇವಾಲಯ ( ಪೂರ್ವ ಗೋಡೆಯ ಮೇಲೆ ಐಹೊಳೆ ಶಾಸನವಿದೆ.)
-: ಪಟ್ಟದಕಲ್ಲು :-
* ಸಾಮಾನ್ಯ ಶಕ 1987 ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿತು.
* ಲೋಕ ಮಹಾದೇವಿ ನಿರ್ಮಿಸಿದ ವಿರೂಪಾಕ್ಷ ದೇವಾಲಯವಿದೆ. ಇದನ್ನು ಮಲ್ಲಿಕಾರ್ಜುನ ದೇವಾಲಯ ಎನ್ನುವರು. ಇದನ್ನು ಪರ್ಸಿ ಬ್ರೌನರು ದ್ರಾವಿಡ ವಾಸ್ತು ಶಿಲ್ಪದ ಅತ್ಯುತ್ತಮ ಕೃತಿ ಎಂದಿದ್ದಾರೆ.
-: ಪಲ್ಲವರು :-
* ಇವರು ತಮಿಳುನಾಡಿನ ಪ್ರಪ್ರಥಮ ರಾಜರುಗಳು.
* ಇವರು ಶಾತವಾಹನರ ಸಮಾಂತರವಾಗಿದ್ದರು.
* ಸ್ಥಾಪಕ – ಶಿವಸ್ಕಂದವರ್ಮ ( ಈ ಸಂತತಿಯ ಮೊದಲ ದೊರೆ).
* ರಾಜಧಾನಿ – ಕಂಚಿ.
ಒಂದನೇ ಮಹೇಂದ್ರವರ್ಮ.
* ಇಮ್ಮಡಿ ಪುಲಕೇಶಿ ಸೋಲಿಸಿದನು.
* ಈತನು ಮತ್ತವಿಲಾಸ, ಪ್ರಹಸನ, ಭಾಗವದ್ದಜುಕ ಎಂಬ ಗ್ರಂಥಗಳನ್ನು ರಚಿಸಿದನು.
ಒಂದನೇ ನರಸಿಂಹವರ್ಮ.
* ಪಲ್ಲವರ ಶ್ರೇಷ್ಠ ಅರಸ.
* ಕನ್ನಡ ಇಮ್ಮಡಿ ಪುಲಕೇಶಿ ಸೋಲಿಸಿ ವಾತಾಪಿಕೊಂಡ ಮತ್ತು ಮಹಾಯುದ್ಧ ಬಿರುದುಗಳನ್ನು ಪಡೆದನು.
* ಇವನ ಆಳ್ವಿಕೆ ಅವಧಿಯಲ್ಲಿ ಹ್ಯೂಯೆನ್ ತ್ಸಾಂಗ್ ಕಂಚಿಯನ್ನು ಸಂದರ್ಶಿಸಿದನು.
* ಕಂಚಿ ಬಳಿಯ ಸಮುದ್ರದ ತೀರದಲ್ಲಿ ಒಂದು ನಗರವನ್ನು ನಿರ್ಮಿಸಿ ಅದಕ್ಕೆ ಮಹಾಬಲಿಪುರಂ ಎಂಬ ಹೆಸರು ಇಟ್ಟನು.
* ಅನೇಕ ಏಕಶಿಲಾ ದೇವಾಲಯಗಳು ಇವನಿಂದ ನಿರ್ಮಿಸಲ್ಪಟ್ಟವು.
ಪಲ್ಲವರ ಸಾಮ್ರಾಜ್ಯವು ಚೋಳರ ಆದಿತ್ಯನಿಂದ ಕೊನೆಗೊಂಡಿತು.
-: ಪಲ್ಲವರ ಕೊಡುಗೆಗಳು :-
* ರಾಜ್ಯವನ್ನು ಮಂಡಲ, ನಾಡು ಮತ್ತು ಗ್ರಾಮಗಳಾಗಿ ವಿಭಾಗಿಸಿದ್ದರು.
* ಗ್ರಾಮ ಸಭೆಯು ಗ್ರಾಮದ ಸಮಸ್ಯೆಗಳನ್ನು ನೋಡಿಕೊಳ್ಳುತ್ತಿತ್ತು.
* ಗ್ರಾಮಭೋಜಕ ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದನು.
* ಪಲ್ಲವರು ಒಳ್ಳೆಯ ನೌಕಾಬಲವನ್ನು ಹೊಂದಿದ್ದರು.
* ಇಲ್ಲಿನ ವರ್ತಕರು ಮಲಯ, ಇಂಡೋನೇಷಿಯಾ ಹಾಗೂ ಇತರೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಜೊತೆ ವಾಣಿಜ್ಯ ಸಂಬಂಧವನ್ನು ಹೊಂದಿದ್ದರು.
-: ಸಾಹಿತ್ಯ :-
* ಭಾರವಿ – ಕಿರಾತಾರ್ಜುನೀಯ
* ದಂಡಿ – ದಶಕುಮಾರ ಚರಿತೆ
* ರಾಜ ಮಹೇಂದ್ರವರ್ಮ – ಮತ್ತ ವಿಲಾಸ ಪ್ರಹಸನ, ಭಾಗವದುಜ್ಜುಕ
-: ಕಲೆ ಮತ್ತು ವಾಸ್ತು ಶಿಲ್ಪ :-
* ಒಂದನೇ ನರಸಿಂಹವರ್ಮ ನಿರ್ಮಿಸಿದ ಕಂಚಿಯನ್ನು ಪಲ್ಲವರ ವಾಸ್ತುಶಿಲ್ಪದ ತವರು ಮನೆ ಎನ್ನುತ್ತಾರೆ.
* ಏಕಶಿಲೆಗಳಲ್ಲಿ ಅದ್ಭುತ ವಿಗ್ರಹಗಳನ್ನು ಕೆತ್ತಿ ಬಿಡಿಸಲಾಗಿದೆ ಇವುಗಳು ಮಹಾಭಾರತದ ಹಾಗೂ ಭಾಗವತದ ಕಥೆಗಳನ್ನು ಹೊಂದಿವೆ.
* ಇಲ್ಲಿನ ಪಂಚ ರಥಗಳು ಸುಪ್ರಸಿದ್ಧ ಏಕಶಿಲಾ ದೇವಾಲಯಗಳು.
* ಅರ್ಜುನನ ತಪಸ್ಸು ಎನ್ನುವ ಕೆತ್ತನೆ ದೃಶ್ಯವೂ ಅತ್ಯುತ್ತಮ ಕಲಾಕೃತಿಯಾಗಿದೆ.
* ಕಂಚಿಯಲ್ಲಿ ಕೈಲಾಸನಾಥ, ಏಕಾಂಬರನಾಥ ಮತ್ತು ವೈಕುಂಠ ಪೆರುಮಾಳರ ದೇವಾಲಯಗಳು, ಮಹಾಬಲಿಪುರದ ಕಡಲ ದಂಡೆಯ ದೇವಾಲಯ ಪ್ರಾಚೀನ ಭಾರತದ ವಾಸ್ತುಶಿಲ್ಪದ ಅತ್ಯುತ್ತಮ ನಿದರ್ಶನಗಳು.