ಬಾಹ್ಯ ಶಕ್ತಿಗಳು (Exogenic Forces). ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿ.

 -: ಬಾಹ್ಯ ಶಕ್ತಿಗಳು :-

ಬಾಹ್ಯ ಶಕ್ತಿಗಳು ಭೂಮಿಯ ಮೇಲಿನ ಪ್ರಾಕೃತಿಕ ಶಕ್ತಿಗಳು.

-: ಶೀತಲೀಕರಣ :-

* ಶಿಲೆಗಳು ಹೊಡೆದು ಚೂರಾಗುವ ಮತ್ತು ಕ್ಷೀಣಿಸುವ ಸ್ವಾಭಾವಿಕ ಪ್ರಕ್ರಿಯೆಯನ್ನು ಶಿತಲೀಕರಣ ಎಂದು ಕರೆಯುತ್ತಾರೆ.

* ಇದು ವಾಯುಗೋಳದಲ್ಲಿ ಉಷ್ಣಾಂಶ, ಮಳೆ, ಗಾಳಿ ಮುಂತಾದವುಗಳಿಂದ ನಡೆಯುತ್ತದೆ.

-: ಶೀತಲೀಕರಣದ ವಿಧಗಳು ಕೆಳಕಂಡಂತಿದೆ. :-

 1. ಭೌತಿಕ ಶೀತಲೀಕರಣ .

* ಶಿಲೆಗಳಲ್ಲಿ ಯಾವುದೇ ರಾಸಾಯನಿಕ ಬದಲಾವಣೆಯಾಗದೆ ಒಡೆದು ಚೂರಾಗುವ ಮತ್ತು ಕ್ಷಿಣೀ ಸುವ ಪ್ರಕ್ರಿಯೆಯನ್ನು ಭೌತಿಕ ಶಿತಲೀಕರಣ ಎನ್ನುವರು.

2. ರಾಸಾಯನಿಕ ಶೀತಲೀಕರಣ .

* ಮಳೆಯ ನೀರು ವಾಯುಮಂಡಲದ ಅನಿಲಗಳೊಡನೆ ವಿಲೀನಗೊಂಡು ಶಿಲೆಗಳನ್ನು ಶಿಥಿಲಗೊಳಿಸುವುದು.

* ಇದರಲ್ಲಿ ಪ್ರಮುಖವಾಗಿ ನಾಲ್ಕು ವಿಧಗಳಿವೆ ಅವುಗಳೆಂದರೆ.

ಎ. ಆಮ್ಲಜನಕ ಸಂಯೋಜನೆ ( Oxidation).

ಬಿ. ಇಂಗಾಲದ ಸಂಯೋಜನೆ (Carbonation).

ಸಿ. ಜಲ ಸಂಯೋಜನೆ ( Hydration).

ಡಿ. ದ್ರಾವಣೀಕರಣ ( Solutions).

 3. ಜೈವಿಕ ಶೀತಲಿಕರಣ .

* ಸಸ್ಯವರ್ಗ ಪ್ರಾಣಿ ವರ್ಗ ಮತ್ತು ಮಾನವನಿಂದ ಶಿಲೆಗಳು ಒಡೆದು ಚೂರಾಗುವ ಜೈವಿಕ ಶಿತಲೀಕರಣ ಎನ್ನುವರು.

-: ಭೂ ನಗ್ನಿಕರಣ (Denudation ):-

-: ಭೂ ನಗ್ನಿಕರಣದ ಕರ್ತೃಗಳು :-

*  ವಿವಿದ ರೀತಿಯ ನೈಸರ್ಗಿಕ ಶಕ್ತಿಗಳು ಭೂಮಿಯ ಮೇಲ್ಭಾಗವನ್ನು ಮಾರ್ಪಡಿಸುವ ಕಾರ್ಯವನ್ನು ಭೂ ನಗ್ನಿಕರಣ ಎನ್ನುವರು.

* ನಗ್ನಿಕರಣದ ಕರ್ತೃಗಳೆಂದರೆ :- ನದಿ, ಹಿಮನದಿ, ಅಂತರ್ಜಲ, ಮಾರುತ ಹಾಗೂ ಸಮುದ್ರದ ಅಲೆಗಳು.

  ಪ್ರತಿ ಹಂತದಲ್ಲಿಯೂ ನದಿಯ ಕಾರ್ಯ ಹಾಗೂ ಅದರಿಂದ ಉಂಟಾಗುವ ಭೂ ಸ್ವರೂಪಗಳು ವಿಶಿಷ್ಟವಾಗಿವೆ.

1. ಮೇಲ್ಕಣಿವೆ ಪಾತ್ರ:-

ಈ ಹಂತದಲ್ಲಿ ಎತ್ತರ ಭಾಗದಲ್ಲಿದ್ದು ನದಿಯು ಮುಖ್ಯವಾಗಿ ಸವೆತದ ಕಾರ್ಯವನ್ನು ನಿರ್ವಹಿಸುವುದು. ಅದರಲ್ಲಿಯೂ ತಳ ಸವೆತ ಹೆಚ್ಚು. ಅಂದರೆ ನದಿಯು ತನ್ನ ಕಣಿವೆಯನ್ನು ಆಳವಾಗಿ ಕೊರೆಯುವುದು. ಇದರಿಂದಆಳವಾದ ಕಂದರಗಳು, ಮಹಾ ಕಂದರ, “V” ಆಕಾರದ ಕಣಿವೆಗಳು, ಜಲಪಾತಗಳು ( ಏಂಜಲ್ ಜಲಪಾತ, ನಯಾಗರ ಜಲಪಾತ, ಜೋಗ ಜಲಪಾತ) ಮತ್ತು ಕುಂಭ ಕುಳಿಗಳು ಮೊದಲಾದ ಭೂ ಸ್ವರೂಪಗಳು ನಿರ್ಮಾಣವಾಗುತ್ತವೆ.

2.ಮಧ್ಯ ಕಣಿವೆ ಪಾತ್ರ.

3. ಕೆಳ ಕಣಿವೆ ಪಾತ್ರ.

        -: ಅಳಿವೆ :-

ನದಿಯ ಸಾಗರ ಅಥವಾ ಸಮುದ್ರವನ್ನು ಸೇರುವ ಭಾಗದಲ್ಲಿ ಹಗಲವಾಗಿ ಕಂಡುಬರುವ ಉಬ್ಬರವಿಳಿತ ಮುಖ ಭಾಗ.

   -: ಮುಖಜಭೂಮಿ :-

ನದಿಯು ಸಮುದ್ರ ಸೇರುವ ಅಂತಿಮ ಭಾಗದಲ್ಲಿ ಸಂಚನದಿಂದ ನಿರ್ಮಿತವಾಗಿರುವ ತ್ರಿಕೋನಾಕೃತಿಯ ಮೈದಾನಗಳು.

    -: ಹಿಮ ನದಿ :-

ಪರ್ವತಗಳು ಅತಿ ಎತ್ತರದ ಭಾಗಗಳು ಮತ್ತು ಧ್ರುವ ಪ್ರದೇಶಗಳಲ್ಲಿ ನೀರ್ಗಲ್ಲು ಮತ್ತು ಹಿಮ ರಾಶಿ ಕಂಡುಬರುತ್ತದೆ. ಹಿಮ ರಾಶಿಯು ಅದರ ಭಾರ ಹಾಗೂ ಗುರುತ್ವಾಕ್ಷಣ ಬಲದಿಂದ ಇಳಿಜಾರಿನಲ್ಲಿ ನಿಧಾನವಾಗಿ ಜಾರುವುದನ್ನು ಹಿಮಾ ನದಿ ಎನ್ನುವರು.

-: ಹಿಮ ನದಿಯ ವಿಧಗಳು:-

1. ಖಂಡಾಂತರ ಹಿಮನದಿ :-

ಧ್ರುವ ಪ್ರದೇಶಗಳಲ್ಲಿರುವ ವಿಸ್ತಾರವಾದ ಮಂಜುಗಡ್ಡೆಯ ಹಾಳೆಯನ್ನು ಖಂಡಾಂತರ ಹಿಮ ನದಿ ಎನ್ನುವರು.

* ಉದಾಹರಣೆ:- ಗ್ರೀನ್ಲ್ಯಾಂಡ್ ಮತ್ತು ಅಂಟಾರ್ಕ್ಟಿಕ್ .

2. ಪರ್ವತ ಅಥವಾ ಆಲ್ಮೈನ್ ಅಥವಾ ಕಣಿವೆ ಹಿಮ ನದಿಗಳು :-

* ಎತ್ತರದ ಪರ್ವತ ಪ್ರದೇಶಗಳಲ್ಲಿ ಇರುವ ಹಿಮನದಿಗಳನ್ನು ಪರ್ವತ ಅಥವಾ ಕಣಿವೆ ಹಿಮ ನದಿ ಎನ್ನುವರು.

 -: ಶಿಲಾನಿಚಯಗಳು :-

ಇವು ಹಿಮ ನದಿಯಿಂದ ಸಂಚರಿತವಾಗಿರುವ ವಿವಿಧ ಆಕಾರ, ಗಾತ್ರದ ಅಗಾಧ ಪ್ರಮಾಣದ ಶಿಲಾವಸ್ತುಗಳು, ಶೀಲಾನೀಚಯನಗಳು .

-: ಶಿಲಾನಿಚಯಗಳ ವಿಧಗಳು :-

a. ಪಾರ್ಶ್ವ ಶಿಲಾನಿಚಯ :-

ಹಿಮ ನದಿಯ ಕಣಿವೆ ಉದ್ದಕ್ಕೂ ಎರಡು ಬದಿಗಳಲ್ಲಿ ಶಿಲಾವಸ್ತುಗಳು ಸಂಚಯವಾಗುವುದನ್ನು ಪಾರ್ಶ್ವ ಶಿಲಾನಿಚಯ ಎನ್ನುವರು.

b. ಮಧ್ಯಶಿಲಾನಿಚಯ :-

ಎರಡು ಹಿಮನದಿಗಳು ಸಂಧಿಸಿದಾಗ ಅವುಗಳು ಪಾರ್ಶ್ವ ಶಿಲಾನಿಚಯ ಗಳು ಪರಸ್ಪರ ಒಗ್ಗೂಡುತ್ತವೆ. ಇವುಗಳನ್ನು ಮಧ್ಯಶಿಲಾನಿಚಯ ಎಂದು ಕರೆಯುವರು.

C. ತಳದ ಶಿಲಾನಿಚಯ :-

ಹಿಮನದಿ ಕಣಿವೆಯ ತಳ ಭಾಗದಲ್ಲಿ ಶಿಲಾವಸ್ತುಗಳು ಸಂಚಯ ವಾಗುವುದನ್ನು ತಳದ ಶಿಲಾನಿಚಯ ಎನ್ನುವರು.

d. ಅಂತ್ಯ ಶಿಲಾನಿಚಯ :-

ಹಿಮ ನದಿಯ ಅಂತ್ಯಭಾಗದಲ್ಲಿ ಸಂಚಯಗೊಂಡ ಶಿಲಾವಸ್ತುಗಳು.

  -: ಅಂತರ್ಜಲ :-

* ಭೂಮಿಯ ಮೇಲೆ ಬೀಳುವ ಮಳೆಯ ನೀರಿನ ಸ್ವಲ್ಪ ಭಾಗವೂ ಇಂಗಿ ಒಳಗೆ ಇರುವುದು ಹೀಗೆ ಒಳಪದರುಗಳಲ್ಲಿ ಸಂಗ್ರಹವಾಗಿರುವ ನೀರನ್ನು ಅಂತರ್ಜಲ ಎಂದು ಕರೆಯುವರು.

-: ಚಿಲುಮೆಯ ವಿಧಗಳು :-

* ನಿರಂತರ ಚಿಲುಮೆಗಳು

* ನಿಯತಕಾಲಿಕ ಚಿಲುಮೆಗಳು

* ಬಿಸಿನೀರಿನ ಚಿಲುಮೆಗಳು

* ಗೆಸರ್ ( ಯು ವಿ ಎಸ್ ಎ ನಲ್ಲಿರುವ ಓಲ್ಡ್ ಫೆತ್ ಫುಲ್ ಗೇಸರ್ )

* ಆರ್ಟಿಸಿಯನ್ ಬಾವಿ

 

WhatsApp Group Join Now
Telegram Group Join Now