-: ನಾಗರಿಕ ಸೇವೆಗಳು :-
* ಲಾರ್ಡ್ ಕಾರ್ನ್ ವಾಲಿಸ್ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದನು.
* 1800ರಲ್ಲಿ ನಾಗರಿಕ ಸೇವೆಗೆ ಸೇರ ಬಯಸುವವರಿಗಾಗಿ ಶಿಕ್ಷಣವನ್ನು ನೀಡಲು ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದರು.
* ” ಹಿಂದುಸ್ಥಾನದಲ್ಲಿ ಇರುವ ಪ್ರತಿಯೊಬ್ಬ ಮೂಲ ನಿವಾಸಿ ಭ್ರಷ್ಟ ” – ಲಾರ್ಡ್ ಕಾರ್ನ್ ವಾಲಿಸ್ .
-: ನ್ಯಾಯಾಂಗ ವ್ಯವಸ್ಥೆ :-
* 1772ರಲ್ಲಿ ವಾರ್ನಿಂಗ್ ಹೇಸ್ಟಿಂಗ್ಸ್ ಜಾರಿಗೆ ತಂದ ಯೋಜನೆ ಪ್ರತಿ ಜಿಲ್ಲೆಯ ಎರಡು ನೆಲೆಗಳನ್ನು ಹೊಂದುವುದು ಅವುಗಳೆಂದರೆ ದಿವಾನಿ ಅದಾಲತ್ ( ನಾಗರಿಕ ನ್ಯಾಯಾಲಯ), ಫೌಜುದಾರಿ ಅದಾಲತ್ ( ಅಪರಾಧ ನ್ಯಾಯಾಲಯ).
-: ಪೊಲೀಸ್ ವ್ಯವಸ್ಥೆ :-
* ಜಾರಿಗೆ ತಂದವರು ಲಾರ್ಡ್ ಕಾರ್ನ್ ವಾಲಿಸ್ .
* ಇವನು ಸುಪ್ರಿಡೆಂಟೆಂಟ್ ಆಫ್ ಪೊಲೀಸ್ (SP) ಹುದ್ದೆಯನ್ನು ಸೃಷ್ಟಿಸಿದನು.
* ಪೋಲಿಸ್ ಕಾಯ್ದೆ ಜಾರಿಗೆ ಬಂದದ್ದು 1861.
* ಸೈನ್ಯ ವ್ಯವಸ್ಥೆ – ಭಾರತೀಯ ಸೈನಿಕರಿಗೆ ಲಭಿಸುತ್ತಿದ್ದ ತಿನ್ನುತ ಹುದ್ದೆ ಸುಬೇದಾರ್.
-: ಭೂ ಕಂದಾಯ ನೀತಿಗಳು:-
1. ಖಾಯಂ ಜಮೀನ್ದಾರಿ ಪದ್ಧತಿ – ಲಾರ್ಡ್ ಕಾರ್ನ್ ವಾಲೀಸ್ 1793ರಲ್ಲಿ ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದನು.
2. ಮಹಲ್ವಾರಿ ಪದ್ಧತಿ – ಮಹಲ್ ಎಂದರೆ ತಾಲೂಕು ಎಂದರ್ಥ. ಆರ್.ಎಂ ಬರ್ಡ್ ಮತ್ತು ಜೇಮ್ಸ್ ಥಾಮ್ಸನ್ ಪ್ರಯೋಗಿಸಿದರು.
3. ರೈತವಾರಿ ಪದ್ಧತಿ – ಮೊದಲ ಬಾರಿಗೆ 1792ರಲ್ಲಿ ಅಲೆಕ್ಸಾಂಡರ್ ರೀಡ್ ಎಂಬುವನು ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಗೊಳಿಸಿದನು. ನಂತರದಲ್ಲಿ ಥಾಮಸ್ ಮನ್ರೋ ಮದ್ರಾಸು ಮತ್ತು ಮೈಸೂರು ಪ್ರಾಂತಗಳಲ್ಲಿ 1801 ರ ನಂತರ ಜಾರಿಗೆ ತಂದನು.
* ” ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ ಸಾಲದಲ್ಲೇ ಸತ್ತರು ” – ಚಾರ್ಲ್ಸ್ ಮೆಟಾ ಕಾಫ್ .
-: ಬ್ರಿಟಿಷರ ಕಂದಾಯ ನೀತಿಯ ಪರಿಣಾಮಗಳು :-
* ಜಮೀನ್ದಾರರ ವರ್ಗದ ಸೃಷ್ಟಿ
* ರೈತರು ನಿರ್ಗತಿಕರಾದರು
* ಭೂಮಿ ಮಾರಾಟದ ವಸ್ತುವಾಯಿತು
* ಕಂದಾಯದ ಹೊರೆ
* ಕೃಷಿ ಕ್ಷೇತ್ರ ವಾಣಿಜ್ಯ ಕರಣಗೊಂಡಿತು
* ಲೇವಾದೇವಿಗಾರರು ಬಲಿಷ್ಠರಾದರು
-: ಆಧುನಿಕ ಶಿಕ್ಷಣದ ಆರಂಭ :-
* ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ – ವಾರ್ನ್ ಹೇಸ್ಟಿಂಗ್ಸ್ .
* ಇವನು 1781ರಲ್ಲಿ ಕಲ್ಕತ್ತಾ ಮದರಸಾವನ್ನು ಪ್ರಾರಂಭಿಸಿದನು.
* 1792 ರಲ್ಲಿ ಬನಾರಸ್ ನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವನು – ಜೊನಾಥನ್ ಡಂಕನ್
* ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವರು – ಚಾರ್ಲ್ಸ್ ಗ್ರಾಂಟ್
* 1835 ಮೆಕಾಲೆ ವರದಿ.
* ರಕ್ತ ಮಾಂಸಗಳಲ್ಲಿ ಭಾರತೀಯರಾಗಿ, ಅಭಿರುಚಿ, ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲೀಷರಾಗುವ ಸಾರವನ್ನು ಹೊಂದಿತ್ತು.
* 1857ರಲ್ಲಿ ಕಲ್ಕತ್ತಾ ಬಾಂಬೆ ಮತ್ತು ಮದ್ರಾಸುಗಳಲ್ಲಿ ನೂತನ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು – ಲಾರ್ಡ್ ಡಾಲ್ ಹೌಸಿ.
* ಚಾಲ್ಸ್ ವುಡ್ ವರದಿ – 1854.
-: ಬ್ರಿಟಿಷ್ ಶಿಕ್ಷಣದ ಪರಿಣಾಮಗಳು :-
* ರಾಷ್ಟ್ರೀಯವಾದಿ ದೃಷ್ಟಿಕೋನ
* ಸಾಹಿತ್ಯ ರಚನೆಗೆ ಪ್ರೋತ್ಸಾಹ
* ವಿಮರ್ಶಾತ್ಮಕ ಅಭಿಪ್ರಾಯದ ಬೆಳವಣಿಗೆ
* ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು
* ಆಲೋಚನಾ ಕ್ರಮದಲ್ಲಿ ನಾವಿನ್ಯತೆ
* ಸ್ವಾತಂತ್ರ್ಯ ಚಳುವಳಿಯ ಮೇಲೆ ಪ್ರಭಾವ
* ಸಮೃದ್ಧ ಸಾಂಸ್ಕೃತಿಕ ಪರಂಪರೆ
-: ಸಂವಿಧಾನಾತ್ಮಕ ಬೆಳವಣಿಗೆ – ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ಅವಧಿಯಲ್ಲಿ ಜಾರಿಗೊಂಡ ಕಾಯ್ದೆಗಳು :-
-: ಕಾಯ್ದೆಗಳು :-
1. ರೇಗ್ಯುಲೇಟಿಂಗ್ ಕಾಯ್ದೆ- 1773 .
ಬ್ರಿಟಿಷರ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು ಅಪರಾಧ ತೆರಿಗೆ ಎಂದು ಟೀಕಿಸಿದವರು – ಎಡ್ಮಂಡ್ ಬರ್ಕ್
1773ರ ಕಾಯ್ದೆಯ ಪ್ರಮುಖ ಲಕ್ಷಣಗಳು.
* ಬಂಗಾಳದ ಪ್ರಸಿಡೆನ್ಸಿ ಮತ್ತು ಮದ್ರಾಸುಗಳಲ್ಲಿ ಅಧಿಕಾರ ಪಡೆಯಿತು.
* ಬಂಗಾಳದ ಗವರ್ನರ್ 3 ಪ್ರೆಸಿಡೆನ್ಸಿಗಳಿಗೆ ಗೌರ್ನರ್ ಜನರಲ್ ಆದನು.
* ಪ್ರೆಸಿಡೆನ್ಸಿಗಳ ಮೇಲೆ ನಿಯಂತ್ರಣ ಮಾಡುವ ಅಧಿಕಾರ.
* ನಿರ್ದೇಶಕ ಮಂಡಳಿಯ ಸ್ಥಾಪನೆ.
* ಸುಪ್ರೀಂ ಕೋರ್ಟ್ ಸ್ಥಾಪನೆ.
2. ಪಿಟ್ಸ್ ಇಂಡಿಯಾ ಕಾಯ್ದೆ-1784.
* ನಿಯಂತ್ರಣ ಮಂಡಳಿ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿತು.
* ಇಂಗ್ಲೆಂಡಿನ ಸರ್ಕಾರವೇ ಅಂತಿಮ ಹಾಗೂ ಸಾರ್ವಭೌಮ.
* ಭಾರತೀಯರು ತಮ್ಮ ಸಾರ್ವಭೌಮತ್ವವನ್ನು ಬ್ರಿಟಿಷ್ ರಾಜಸತ್ತೆಯ ಹೆಸರಿನಲ್ಲಿ ಪಡೆದಿದ್ದಾರೆ ವಿನ: ಅವರದ್ದೇ ಸ್ವಂತ ಹಕ್ಕಲ್ಲ.
3. ಚಾರ್ಟರ್ ಕಾಯ್ದೆಗಳು 1813,1833,
1813 ರ ಕಾಯ್ದೆಯ ಮುಖ್ಯಾಂಶಗಳು.
* ಮುಕ್ತ ವ್ಯಾಪಾರದ ಹೊಸ ಶಕೆ
* ಅನುಮತಿ ಮತ್ತು ಪರವಾನಿಗೆಯ ಹೊಸ ಕಾಲ
* ನಿರ್ದೇಶಕ ಮಂಡಳಿಗೆ ಗವರ್ನರ್ ಜನರಲ್ ನೇಮಿಸುವ ಅಧಿಕಾರ
* ಚರ್ಚುಗಳು ಪ್ರವೇಶ
1833 ರ ಕಾಯ್ದೆಯ ಮುಖ್ಯಾಂಶಗಳು.
* ಬಂಗಾಳದ ಗವರ್ನರ್ ಜನರಲ್ ಭಾರತದ ಗವರ್ನರ್ ಜನರಲ್ ಆಗಿ ನಾಮಕರಣ.
* ಗೌರ್ನರ್ ಜನರಲ್ ನಿಗೆ ವಿಶೇಷ ಅಧಿಕಾರ.
* ಕೇಂದ್ರ ಸರ್ಕಾರದ ತೀರ್ಮಾನ.
* ತಾರತಮ್ಯದ ನಿಷೇಧ.
* ನ್ಯಾಯಾಂಗ ಪರಿಣಿತನ ನೇಮಕ.
* ಎಲ್ಲಾ ಬ್ರಿಟಿಷ್ ವ್ಯಾಪಾರಿ ಕಂಪನಿಗಳು ಭಾರತಕ್ಕೆ ಬರಲು ಮುಕ್ತ ಅವಕಾಶ.
-: ಬ್ರಿಟಿಷರ ಸರ್ಕಾರದ ನೇರ ಆಳ್ವಿಕೆಯಲ್ಲಿ ಜಾರಿಗೊಂಡ ಕಾಯ್ದೆಗಳು :-
* ಭಾರತ ಸರ್ಕಾರದ ಕಾಯ್ದೆ – 1858:-
ಪ್ರಮುಖ ಅಂಶಗಳು.
* ಕಂಪನಿ ಆಡಳಿತ ಅಂತ್ಯ.
* ಗವರ್ನರ್ ಜನರಲ್ ಹುದ್ದೆಯ ಪದನಾಮದ ಬದಲಾವಣೆ ವೈಸ್ ರಾಯ್.
* ಮೊದಲ ವೈಸ್ರಾಯ್ ಲಾರ್ಡ್ ಕ್ಯಾನಿಂಗ್.
* ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ಸ್ಥಾನದ ಸೃಷ್ಟಿ.
* ಕೌನ್ಸಿಲ್ ಆಫ್ ಇಂಡಿಯಾ ಅಸ್ತಿತ್ವ.
* ಭಾರತೀಯ ಪರಿಷತ್ ಕಾಯ್ದೆ – 1861 ( policy of Assertion).
* ವೈಸರಾಯ್ ಕೌನ್ಸಿಲ್ ಗೆ ಭಾರತೀಯರ ನೇಮಕ.
* ತುರ್ತು ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಗವರ್ನರ್ ಜನರಲ್ ಗೆ ಅಧಿಕಾರ.
* ಭಾರತೀಯ ಪರಿಷತ್ ಕಾಯ್ದೆ -1892.
* ಕೇಂದ್ರ ಹಾಗೂ ಪ್ರಾಂತೀಯ ಶಾಸನಸಭೆಗಳಲ್ಲಿ ಹೆಚ್ಚುವರಿ ಸದಸ್ಯರ ಸಂಖ್ಯೆಯ ಹೆಚ್ಚಳ.
* ಬಜೆಟ್ ಬಗ್ಗೆ ಚರ್ಚಿಸುವ ಅಧಿಕಾರ.
* ಸಾರ್ವಜನಿಕ ಆಸಕ್ತಿಯ ವಿಷಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕು.
* 1909 ಭಾರತೀಯ ಪರಿಷತ್ ಕಾಯ್ದೆ ( ಮಿಂಟೋ ಮಾರ್ಲೆ ಸುಧಾರಣೆ ಕಾಯಿದೆ).
* ಕೇಂದ್ರ ಸಾಹಸನ ಸಭೆಯ ಸಂಖ್ಯೆ ಹೆಚ್ಚಳ 16 ರಿಂದ 60
* ಪ್ರಾಂತ್ಯಗಳಲ್ಲಿಯೂ ಹೆಚ್ಚಳ.
* ಚುನಾವಣೆ ಮೂಲಕ ಆಯ್ಕೆಯಾಗಲು ಅವಕಾಶ.
* ಮುಸ್ಲಿಮರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ನೀಡುವ ಪ್ರತ್ಯೇಕ ಚುನಾವಣಾ ಮತಗಟ್ಟೆ ಜಾರಿಗೆ ತರಲಾಯಿತು.
* 1919 ಭಾರತ ಸರ್ಕಾರ ಕಾಯ್ದೆ ( ಮಾಂಟೆಗೊ ಚೆಮ್ಸ್ ಫರ್ಡ್ ಸುಧಾರಣೆ ಕಾಯ್ದೆ).
ಭಾರತೀಯರಿಗೆ ಹಂತ ಹಂತವಾಗಿ ಜವಾಬ್ದಾರಿ ಸರ್ಕಾರವನ್ನು ನೀಡುವುದೇ ಬ್ರಿಟಿಷ್ ಸರ್ಕಾರದ ಗುರಿ.
* ಕೇಂದ್ರದಲ್ಲಿ ದ್ವಿ ಸದನ ಶಾಸಕಾಂಗ ರಚನೆಗೆ ಅವಕಾಶ.
* ಪ್ರಾಂತ್ಯಗಳಲ್ಲಿ ದ್ವಿ ಸರ್ಕಾರ ಪದ್ಧತಿಗೆ ಅವಕಾಶ.
* ಭಾರತಕ್ಕೆ ಒಬ್ಬ ಹೈ ಕಮಿಷನರ್ ನೇಮಕ.
* ಸ್ವಯಂ ಆಡಳಿತಗಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯ ಭರವಸೆ.
* ಕೇಂದ್ರದ ಬಜೆಟ್ ನಿಂದ ಪ್ರಾಂತ್ಯಗಳ ಬಜೆಟ್ ಬೇರ್ಪಡಿಸುವುದು.
* ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ಮುಸ್ಲಿಂ, ಸಿಖ್ ಮತ್ತು ಆಂಗ್ಲೋ ಭಾರತೀಯರು ಮತ್ತು ಯುರೋಪಿಯನ್ನರಿಗೆ ವಿಸ್ತರಿಸಲಾಯಿತು.
* 1935 ಭಾರತ ಸರ್ಕಾರ ಕಾಯ್ದೆ ( 1928 ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ತಯಾರಾದ ವರದಿಯ ಸಾರಾಂಶ ).
* ಅಖಿಲ ಭಾರತ ಒಕ್ಕೂಟ ವನ್ನು ರಚಿಸಲು ಅವಕಾಶ.
* ಕೇಂದ್ರದಲ್ಲಿ ದ್ವಿ ಸರ್ಕಾರ ಸ್ಥಾಪನೆ.
* ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ.
* ಪ್ರಾಂತ್ಯಗಳಲ್ಲಿ ದ್ವಿ ಸರ್ಕಾರ ಪದ್ಧತಿಯ ರದ್ದು ಮತ್ತು ಪ್ರಾಂತ್ಯಗಳಿಗೆ ಸ್ವಾಯತ್ತತೆ.
* ಭಾರತದಲ್ಲಿ ಫೆಡರಲ್ ಕೋರ್ಟ್ ಸ್ಥಾಪನೆಗೆ ಅವಕಾಶ.