-: ಭಕ್ತಿ ಸಂತರು ಮತ್ತು ಪ್ರತಿಪಾದನೆಗಳು :-
* ಭಕ್ತಿಯೆಂದರೆ ದೇವರಲ್ಲಿ ಶುದ್ಧ ನಂಬಿಕೆಯನ್ನು ಇಡುವುದು.
* ಭಕ್ತಿಪಂಥದ ಸಾರ – ಭೇದಭಾವದ ಖಂಡನೆ, ಕಂದಾಚಾರದ ವಿರೋಧ, ಜನರ ಹೃದಯ ಬೆಸೆಯುವಿಕೆ, ಪ್ರೇಮ ಹಾಗೂ ಮಾನವ ಸೇವೆ.
-: ರಮಾನಂದರು :-
* ಜನನ – ರಮಾನಂದರು ” ಪ್ರಯಾಗದ” ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು.
* ರಾಮಾನುಜರ ತತ್ವದ ಅನುಯಾಯಿಗಳಾಗಿದ್ದರು.
-: ಪ್ರತಿಪಾದನೆಗಳು :-
ಜಾತಿ ಪದ್ಧತಿಯ ಖಂಡನೆ , ರಾಮ – ಸೀತೆಯರ ಪೂಜೆಯ ಭಕ್ತಿ ಆರಾಧನಾ ಸಿದ್ಧಾಂತದ ಪ್ರತಿಪಾದನೆ, ಭಕ್ತಿ ಮತ್ತು ಪ್ರೀತಿಗಳ ಆಧಾರದ ಮೇಲೆ ವೈಷ್ಣವ ಧರ್ಮದ ಶಾಲೆಯ ಪ್ರಾರಂಭ.
-: ಕಬೀರ್ ( 1440-1510).:-
* ರಮಾನಂದರ ಶಿಷ್ಯರು.
-: ಪ್ರತಿಪಾದನೆಗಳು :-
ಜಾತಿ ವ್ಯವಸ್ಥೆ ಮತ್ತು ಬಹುಮೂರ್ತಿಗಳ ಪೂಜೆಯ ಖಂಡನೆ, ದೇವರು ಒಬ್ಬನೇ, ಇಂದು ಮತ್ತು ಮುಸಲ್ಮಾನರಿಗೆ ಆ ಒಬ್ಬ ದೇವರೇ ಹೊರತು, ಬೇರೆ ಬೇರೆ ದೇವರಿಲ್ಲ.
* ಈ ಎರಡು ಮತಿಯರಲ್ಲೂ ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಲು ಯತ್ನಿಸಿದರು.
* ಕಬೀರರು ” ದೋಹಗಳೆಂಬ” ಪದ್ಯಗಳನ್ನು ರಚಿಸಿದರು.
-: ಚೈತನ್ಯ (1486-1533).:-
* ಜನನ – ಬಂಗಾಳದ ನಾಡಿಯದಲ್ಲಿ ಜನಿಸಿದರು.
* ಬ್ರಾಹ್ಮಣ ಕುಟುಂಬ.
* ಕೃಷ್ಣನ ಆರಾಧನೆ ಮಾಡಿದರು.
* ಜಾತಿ ಪದ್ಧತಿಯ ವಿರೋಧ, ಬಾತೃತ್ವ ಭಾವನೆಯ ಪ್ರತಿಪಾದನೆ, ಚೈತನ್ಯರ ಆಧ್ಯಾತ್ಮಿಕ ಚಿಂತನೆಯ ಬೋಧನೆಗಳನ್ನು ” ಚೈತನ್ಯ ಚರಿತಾಮೃತ” ಎಂಬುದರಲ್ಲೇ ಸಂಗ್ರಹಿಸಲಾಗಿದೆ.
-: ಗುರುನಾನಕ್(1469-1539) :-
* ಜನನ – ಪಾಕಿಸ್ತಾನದ ತಳವಂಡಿ.
* ಲಂಗರ್ ಎನ್ನುವ ಭೋಜನ ಶಾಲೆಯನ್ನು ಪ್ರಾರಂಭಿಸಿದರು.
* ಸಿಖ್ಖರ ಪವಿತ್ರ ಗ್ರಂಥ ” ಗುರು ಗ್ರಂಥ ಸಾಹಿಬ್ ”
-: ಪ್ರತಿಪಾದನೆಗಳು :-
ಮೂರ್ತಿ ಪೂಜೆಯ ಖಂಡನೆ, ಸತ್ಕಾರ್ಯ ಮತ್ತು ಪರಿಶುದ್ಧ ಹಾಗೂ ನೀತಿಯುಕ್ತ ಜೀವನಕ್ಕೆ ಹೆಚ್ಚಿನ ಮಹತ್ವ.
-: ಶ್ರೀಮಂತ ಶಂಕರ ದೇವ ಹಾಗೂ ಮಾಧವ ದೇವ :-
* ಅಸ್ಸಾಂನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಶ್ರೀಮಂತ ಶಂಕರ್ ದೇವನ ಪಾತ್ರ ಪ್ರಮುಖವಾದದ್ದು.
* ಶಂಕರದೇವನ ಭಾಗವತವು ಸಂಸ್ಕೃತ, ಅಸ್ಸಾಮಿ ಮತ್ತು ಬೃಜಾವಲಿ ಭಾಷೆಗಳಲ್ಲಿದೆ.
* ಶಂಕರದೇವ ಅಸ್ಸಾಂನಲ್ಲಿ ಪ್ರಾರಂಭ ಮಾಡಿದ ಭಕ್ತಿ ಚಳುವಳಿಯನ್ನು ” ಏಕಸರಣ ಧರ್ಮ ವೈಷ್ಣವ ಚಳವಳಿ ” ಎಂದು ಕರೆಯುತ್ತಾರೆ.
* ಇವರ ತಮ್ಮ ಪಂಥದಲ್ಲಿ ” ಸರಣಿಯ ” ಎಂಬ ಪದ್ಧತಿಯನ್ನು ಪ್ರಾರಂಭಿಸಿದರು.
* ಇವರ ಶಿಷ್ಯರಾದ ಮಾಧವ ದೇವರು ಶಾಕ್ತರ ಗುಂಪಿಗೆ ಸೇರಿರುತ್ತಾರೆ. ಬಹುಮುಖ ಪ್ರತಿಭೆ ಹೊಂದಿದ ಮಾಧವ ದೇವರು ಭಕ್ತಿ ಚಳುವಳಿಯಲ್ಲಿ ಅತ್ಯಂತ ಪ್ರಖ್ಯಾತಿಗಳಿಸಿದರು.
-: ಮೀರಾಬಾಯಿ :-
* ಮೇವಾಡದ ರಾಜಕುಮಾರಿ.
* ಗುರು – ರಾಯಿ ದಾಸ್
* ಕಲಿಯುಗದ ರಾಧೆ
* ಶ್ರೀ ಕೃಷ್ಣನ ಆರಾಧನೆಗೆ ತನ್ನ ಬದುಕನ್ನು ಮೀಸಲಿಟ್ಟು ಕೀರ್ತನೆಗಳನ್ನು ರಚಿಸಿದರು.
* ಜಾತಿ ಶ್ರೇಷ್ಠತೆಯ ಮನೋ ಧರ್ಮವನ್ನು ವಿಡಂಬಿಸಿದಳು.
* ಕೃಷ್ಣನನ್ನು ಕುರಿತು ಭಕ್ತಿ ಪುರತವಾದ ಕೀರ್ತನೆಗಳನ್ನು ಬರೆದು ಈ ಕೀರ್ತನೆಗಳನ್ನು ” ಭಜನೆಗಳು” ಎಂದು ಜನಪ್ರಿಯವಾದವು.
-: ಆಂಡಾಳ್ :-
* ಪೆರಿಯಾಳ್ವರ್
* ಗ್ರಂಥ – ತಿರುಪ್ಪಾಮೈ
* ಮೂಲ ಹೆಸರು – ಗೋದಾದೇವಿ
-: ಸೂಫಿ ಸಂತರು :-
* ಪರ್ಶಿಯಾದಿಂದ ಭಾರತಕ್ಕೆ ಬಂದು ನೆಲೆಸಿದರು.
* ಇವರನ್ನು ” ಪೀರ( ಗುರು )” ಎಂದು ಕರೆಯುತ್ತಿದ್ದರು.
* ಸೂಫ್ ಎಂಬ ಸಾದಾ ಉಣ್ಣೆಯ ಅಂಗಿ ತೊಡುತ್ತಿದ್ದರಿಂದ ಮುಸ್ಲಿಂ ಸಂತರನ್ನು ಸೂಫಿ ಎಂದು ಕರೆದರು.
-: ಬೋಧನೆಗಳು :-
ಪ್ರೇಮ ಮತ್ತು ಭಕ್ತಿಯಿಂದ ಪರಮಾತ್ಮನನ್ನು ಅಥವಾ ಅಲ್ಲಾನನ್ನು ಸೇರಲು ಸಾಧ್ಯ, ಭಕ್ತಿಯಿಂದ ಕೂಡಿದ ನರ್ತನ ಮತ್ತು ಸಂಗೀತವು ನಮ್ಮನ್ನು ದೇವರ ಕಡೆ ಕೊಂಡೊಯ್ಯುತ್ತದೆ.
-: ಪ್ರಮುಖ ಸೂಫಿ ಸಂತರು :-
* ಮೋಯಿನ್- ಉದ್-ದಿನ್-ಚಿಸ್ತಿ
* ಬಾಬಾ ಪರೀದ್
* ನಿಜಾಮ್-ಉದ್-ದೀನ್ ಔಲಿಯ
* ಮಲಿಕ್ ಮಹಮ್ಮದ್
* ಖ್ವಾಜ್ ಬಂದೇ ನವಾಜ್
-: ಪ್ರಮುಖ ಕೃತಿಗಳು :-
* ಕುತುಬನ್ – ಮೃಗಾವತಿ
* ಮಲ್ಲಿಕ್ ಮೊಹಮ್ಮದ್ ಜಾಯಿಸಿ – ಪದ್ಮಾವತ್
-: ಶಿಶುನಾಳ ಶರೀಫ(1819-1889):-
* ಶರಿಫ್ ಪಾರ್ಸಿ ಶಬ್ದ, ಉದಾತ್ತ ದೇಹಗಳ ಅಥವಾ ಉತ್ತಮ ಶೀಲ ಸ್ವಭಾವ ಹೊಂದಿದ ವ್ಯಕ್ತಿ ಎಂದರ್ಥ.
* ರಿವಾಯತ ಸಾಹಿತ್ಯದ ಹರಿಕಾರರು.
* ಬಿರುದು – ಕರ್ನಾಟಕದ ಕಬೀರ
-: ಪುರಂದರದಾಸರು (1484-1564):-
* ಆತ್ಮ ಶೋಧನೆಗೆ ಪ್ರಾಮುಖ್ಯತೆ, ಅಂತರಂಗಶುದ್ಧಿಗೆ ಮಹತ್ವ, ಡಾಂಬಿಕ ಭಕ್ತಿಯ ವಿಡಂಬನೆ.
* ಈಸಬೇಕು ಇದ್ದು ಜೈಸಬೇಕು.
* ” ಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ”
* ಗುರುಗಳಿಂದ ” ದಾಸರೆಂದರೆ ಪುರಂದರದಾಸಯ್ಯ ” ಎಂದು ಹೊಗಳಿಕೆ ಪಡೆದರು.
* ಬಿರುದು – ಕರ್ನಾಟಕ ಸಂಗೀತ ಪಿತಾಮಹ
* ಅಂಕಿತನಾಮ – ಪುರಂದರವಿಠಲ
-: ಕನಕದಾಸರು :-
* ಜನನ – ಹಾವೇರಿ ಜಿಲ್ಲೆಯ ಬಾಡ
* ಡಾಂಬಿಕ ಭಕ್ತಿಯ ತೆಗಳಿಕೆ, ಸಮಾಜದಲ್ಲಿದ್ದ ಮೇಲು-ಕೀಳು, ಉಚ್ಚ-ನೀಚ ಪರಿಭಾವನೆಯ ವಿಡಂಬನೆ, ಭಕ್ತಿಮಾರ್ಗದ ಬೋಧನೆ.
* ಅಂಕಿತನಾಮ – ಕಾಗಿನೆಲೆ ಆದಿಕೇಶವ
-: ಕೃತಿಗಳು :-
* ಮೋಹನ ತರಂಗಿಣಿ
* ನಳಚರಿತ್ರೆ
* ರಾಮಧ್ಯಾನ ಚರಿತೆ
* ಹರಿಭಕ್ತಿಸಾರ
-: ಭಕ್ತಿ ಚಳವಳಿಯ ಪರಿಣಾಮ :-
ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮೌಢ್ಯಾಚರಣೆಗಳ ಅರ್ಥಹೀನತೆಯನ್ನು ಸಾರಿತು, ಇಬ್ಬರಲೂ ಸೌಹಾರ್ದಯುತ ಭಾವನೆ ಮೂಡಿತು, ಭಾರತದ ಪ್ರಾದೇಶಿಕ ಭಾಷೆಗಳು ವಿಕಾಸಗೊಂಡವು.
-: ಪ್ರಮುಖ ಕೃತಿಗಳು :-
* ಸೂರದಾಸ – ಸೂರ್ ಸಾಗರ್
* ತುಳಸೀದಾಸ್ – ರಾಮಚರಿತಮಾನಸ
* ಜ್ಞಾನದೇವರ – ಜ್ಞಾನೇಶ್ವರಿ