* ಸಾಮಾನ್ಯ ಶಕ 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು. ಮೆಹಮತ್ ಅಲಿ ನಾಯಕತ್ವದಲ್ಲಿ.
ಭಾರತಕ್ಕೆ ಜಲಮಾರ್ಗದ ಅನ್ವೇಷಣೆ.
* ವಾಸ್ಕೋಡಿಗಾಮನು ಸಾಮಾನ್ಯ ಶಕ 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದ. ಯುರೋಪಿಯನ್ನರಲ್ಲಿ ಸಮುದ್ರಮಾರ್ಗ ಹಾಗೂ ಭೂ ಆವಿಷ್ಕಾರಗಳಲ್ಲಿ ಮೊದಲು ತೊಡಗಿದವರು ಪೋರ್ಚುಗೀಸ್ ರು. ರಾಜಕುಮಾರ” ಹೆನ್ರಿ” ಲಿಸ್ಬನ್ ನಲ್ಲಿ ಒಂದು ನೌಕಾ ಶಾಲೆಯನ್ನು ತೆರೆದನು. ಆದ್ದರಿಂದ ಇವನನ್ನು ” ದಿ ನ್ಯಾವಿಗೇಟರ್ ” ಎಂದು ಕರೆಯುತ್ತಾರೆ. ಸಾಮಾನ್ಯ ಶಕ 1487 ರಲ್ಲಿ ಬಾರ್ಥೋ ಲೋಮಿಯೋ ಡಯಾಸ್ ನು ಗುಡ್ ಹೋಪ್ ಭೂಶಿರವನ್ನು ತಲುಪಿದನು. ವಾಸ್ಕೋ ಡಿ ಗಾಮನು ರಾಜ ಎ ಮ್ಯಾನ್ಯುವೆಲ್ ನೆರವು ಪಡೆದು ಡಯಾಸನ ಮಾರ್ಗವನ್ನು ಅನುಸರಿಸಿ ಗುಡ್ ಹೋಪ್ ಭೂಶಿರವನ್ನು ದಾಟಿ ಭಾರತೀಯ ಗುಜರಾತಿನ ನಾವಿಕನಾದ ಇಬ್ನ ಮಜೀದ್ ನ ಸಹಾಯದಿಂದ 1498 ಮೇ 17ರಂದು ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಾಡ್ ಎಂಬಲ್ಲಿಗೆ ಬಂದು ತಲುಪಿದನು.
* ಈ ಅವಧಿಯನ್ನು ಸ್ಥಿತ್ಯಂತರದ ಆರಂಭ ಘಟನೆ ಎನ್ನುವರು.
* ಕಾನ್ಸ್ಟಾಂಟಿನೋಪಲ್ ಈಗಿನ ಹೆಸರು ಇಸ್ತಾಂಬುಲ್.
* ಪೋರ್ಚುಗೀಸರು, ಡಚ್ಚರು, ಡೇನರು,ಇಂಗ್ಲೀಷರು, ಫ್ರೆಂಚರು.
ಭಾರತದಲ್ಲಿ ಪೋರ್ಚುಗೀಸರು ( ಸಾಮಾನ್ಯ ಶಕ 1498 – 1961 ).
* ರಾಜಧಾನಿ – ಗೋವಾ
* ಭಾರತಕ್ಕೆ ಬಂದ ಪ್ರಥಮ ಐರೋಪ್ಯರು ಹಾಗೂ ಭಾರತವನ್ನು ಬಿಟ್ಟು ಹೋದ ಕೊನೆಯ ಐರೋಪ್ಯರು.
-: ವಾಸ್ಕೋಡಿಗಾಮ :-
* 1498 ಮೇ 17ರಂದು ಭಾರತಕ್ಕೆ ಜಲಮಾರ್ಗ ಕಂಡು ಹಿಡಿದು ಮರಳಿ ಹೋಗುವಾಗ ಅಪಾರ ಸಂಪತ್ತಿನೊಂದಿಗೆ ಹಿಂತಿರುಗಿದನು ಅಪಾರ ಸಂಪತ್ತಿನೊಂದಿಗೆ ಹಿಂತಿರುಗಿದನು.
* 1501ರಲ್ಲಿ ಎರಡನೇ ಬಾರಿ ವಾಸ್ಕೋಡಿಗಾಮ ಭಾರತಕ್ಕೆ ಬಂದನು.
* 1524ರಲ್ಲಿ ಮೂರನೇ ಬಾರಿಗೆ ವಾಸ್ಕೋಡಿಗಾಮ ಪೋರ್ಚುಗೀಸರು ವೈಸ್ರಾಯ್ ಆಗಿ ಭಾರತಕ್ಕೆ ಬಂದನು.
ಪೋರ್ಚುಗೀಸರ ಮೊದಲ ವೈಸ್ರಾಯ್ – “ಫ್ರಾನ್ಸಿಸ್ಕೋ ಡಿ ” ( ಸಾಮಾನ್ಯ ಶಕ 1505 – 1509).
* ಈತ ಭಾರತಕ್ಕೆ ಬಂದ ಮೊದಲ ಪೋರ್ಚುಗೀಸರ ವೈಸರಾಯ್.
* ಇವನು ನಾವು ಸಮುದ್ರದ ಮೇಲೆ ಹಿಡಿತ ಸಾಧಿಸುವುದಕ್ಕಾಗಿ ” ಬ್ಲೂ ವಾಟರ್ ಪಾಲಿಸಿ ” ಜಾರಿಗೆ ತಂದನು ನೀಲಿ ನೀರಿನ ನೀತಿ ಎಂದು ಕರೆಯುತ್ತಾರೆ.
ಅಲ್ಫಾನ್ಸೋ – ಡಿ – ಅಲ್ಬುಕರ್ಕ್ ( ಸಾಮಾನ್ಯ ಶಕ 1509 – 1515).
* ಭಾರತದಲ್ಲಿ ಪೋರ್ಚುಗೀಸರ ರಾಜ್ಯದ ನಿಜವಾದ ಸ್ಥಾಪಕ.
* ಸಾಮಾನ್ಯ ಶಕ 1510 ರಲ್ಲಿ ವಿಜಾಪುರದ ಶಾಹೀ ಸುಲ್ತಾನರ ವಶದಲ್ಲಿದ್ದ ಗೋವಾ ಗೆದ್ದುಕೊಂಡನು ಇದು ಇವರ ಭಾರತದ ಪ್ರಥಮ ರಾಜಧಾನಿ ಭಾರತದ ಪ್ರಥಮ ರಾಜಧಾನಿ.
* ಪೋರ್ಚುಗೀಸರ ಪ್ರಮುಖ ವ್ಯಾಪಾರಸ್ಥಳಗಳು – ಕೊಚ್ಚಿನ್( ಕೇರಳ), ಕಣ್ಣಾನೂರು(ಕೇರಳ), ಸೆಂಟ್ ಥೋಮ( ತಮಿಳುನಾಡಿನ ಪೂರ್ವ ಕರಾವಳಿಯಲ್ಲಿರುವ ಏಕೈಕ ಹೊಸತು ಕೇಂದ್ರ) , ಹೂಗ್ಲಿ( ಕಲ್ಕತ್ತಾ), ಮುಂಬೈ, ಬೆಸ್ಸಿನ್( ಮಹಾರಾಷ್ಟ್ರ).
-: ವಿಶೇಷ ಅಂಶಗಳು :-
* ಸಾಮಾನ್ಯ ಶಕ 1556 ರಲ್ಲಿ ಪ್ರಥಮ ಬಾರಿಗೆ ಗೋವಾಕ್ಕೆ ಮುದ್ರಣ ಯಂತ್ರವನ್ನು ತಂದಿದ್ದರು.
ಡಚ್ಚರು ( ಸಾಮಾನ್ಯ ಶಕ 1596 – 1792).
* ಇವರ ಪ್ರಥಮ ರಾಜಧಾನಿ ಪುಲಿಕಾಟ್
* ಡಚ್ಚರು ಮೊದಲು ತಮ್ಮ ಗಮನವನ್ನು ಸಾಂಬಾರು ದೀಪಗಳಾದ ಜಕಾರ್ತ, ಮಲಕ್ಕ, ಸಿಲೋನ್ ಮತ್ತು ಗೋವಾದ ಕಡೆಗೆ ಹರಿಸಿದರು.
* ಡಚ್ಚರ ಪ್ರಮುಖ ವ್ಯಾಪಾರ ಕೇಂದ್ರಗಳು – ಪುಲಿಕಾಟ್ ಇದು ಡಚ್ಚರ ರಾಜಧಾನಿ, ಸೂರತ್, ನಾಗಪಟ್ಟಣಂ , ಕಣ್ಣಾನೂರು, ಕಾರೈಕಲ್, ಕಾಸಿಂ ಬಜಾರ್, ಟುಟಿಕೊರಿನ್, ಮುಂತಾದವು.
* ಡಚ್ಚರು ಬ್ರಿಟಿಷರೊಡನೆ ಪೈಪೋಟಿ ನಡೆಸಲು ಸಾಧ್ಯವಾಗದೆ 1759ರಲ್ಲಿ ರಾಬರ್ಟ್ ಕ್ಲೈವ್‌ನಿಂದ ಬಿದ್ರಾ ಕದನದಲ್ಲಿ ಸೋತು ಭಾರತದಿಂದ ನಿರ್ಗಮಿಸಿದರು.
ಡೇನರು ( ಸಾಮಾನ್ಯ ಶಕ 1606).
* ಸಾಮಾನ್ಯ ಶಕ 1620 ಅಲ್ಲಿ ತಮಿಳುನಾಡಿನ ತಿರುವಾಂಕೂರಿನಲ್ಲಿ ಮೊದಲ ವ್ಯಾಪಾರಿ ಕೋಟೆಯನ್ನು ಸ್ಥಾಪಿಸಿದರು.
* 1854 ರಲ್ಲಿ ತಮ್ಮ ಎಲ್ಲಾ ನೆಲೆಗಳನ್ನು ಬ್ರಿಟಿಷರಿಗೆ ಮಾರಿದರು.
ಬ್ರಿಟಿಷರು ( ಸಾಮಾನ್ಯ ಶಕ 1600 – 1947).
* ಇವರ ರಾಜಧಾನಿ ಕಲ್ಕತ್ತಾ.
* ಸಾಮಾನ್ಯ ಶಕ 1600 ಡಿಸೆಂಬರ್ 31 ರಂದು ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ ಆಯಿತು.
* ಸರ್ ಥಾಮಸ್ ರೋ – 1 ಜೇಮ್ಸ್ ನ ಅಧಿಕೃತ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನದಲ್ಲಿ ಸುಮಾರು ಮೂರು ವರ್ಷಗಳ ಕಾಲ ಇದ್ದನು ಇಲ್ಲಿ ಸೇಂಟ್ ಜಾರ್ಜ್ ಪೋರ್ಟ್ ( ಫ್ರಾನ್ಸಿಸ್ ಡೇ) ಸ್ಥಾಪನೆಯಾಯಿತು.
* ಮುಂಬೈ :-
ರಾಜಕುಮಾರಿಯಾದ ಪೋರ್ಚುಗಲ್ ನ ಕ್ಯಾಥೆರಿನಾ ಬ್ರಿಗೇಂಜ್ ಮದುವೆಯ ಸಾಮಾನ್ಯ ಶಕ 1661 ರಲ್ಲಿ ಬ್ರಿಟಿಷ್ ರಾಜಕುಮಾರನಾದ ಎರಡನೇ ಚಾಲ್ಸ್ ಮಧ್ಯ ಏರ್ಪಟ್ಟಾಗ ವರದಕ್ಷಿಣೆ ರೂಪವಾಗಿ ಪೋರ್ಚುಗೀಸರು ಮುಂಬೈಯನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟರು.
* ಕಲ್ಕತ್ತಾ :-
1698 ರಲ್ಲಿ ಬ್ರಿಟಿಷ್ ಹೂಗ್ಲಿ ನದಿ ತೀರದಲ್ಲಿದ್ದ ಸುತನತಿ, ಕಾಲಿಕಟ್, ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಜಮೀನ್ದಾರರಿಂದ ಕಂಡುಕೊಂಡಿತು. ಮುಂದೆ ಇದರ ಸುತ್ತ ಕಲ್ಕತ್ತಾ ನಗರ ಬೆಳೆಯಿತು. ಜಾಬ್ ಚಾರ್ನ್ ಕ್ ಎಂಬಾತ ಈ ಮೂರು ಹಳ್ಳಿಗಳ ಸುತ್ತ ಪ್ರಖ್ಯಾತವಾದ ಪೋರ್ಟ್ ವಿಲಿಯಂ ಕೋಟೆಯನ್ನು ನಿರ್ಮಿಸಿದನು.
* ಕಂಪನಿಯ ಮ್ಯಾಗ್ನಾಕಾರ್ಟ್ ( ಸಾಮ್ಯಾನ ಶಕ 1717).
* ಪಾರುಕ್ ಸಿಯಾರ್ ಬ್ರಿಟಿಷ್ ರಿಗೆ ಬಂಗಾಳದಲ್ಲಿ ತೆರಿಗೆ ರಹಿತ ವ್ಯಾಪಾರಕ್ಕೆ ಅನುಮತಿ ನೀಡಿದನು. ಇದನ್ನೇ ಕಂಪನಿಯ ಮ್ಯಾಗ್ನಾಕಾರ್ಟ್ ಎನ್ನುವರು.
* ಬ್ರಿಟಿಷರು ಪ್ರಮುಖ ವಸಾಹತು ಕೇಂದ್ರಗಳು – ಬಾಂಬೆ, ಮದ್ರಾಸ್, ಕಲ್ಕತ್ತಾ, ಆಗ್ರಾ, ದೆಹಲಿ , ಸೂರತ್ , ಸಾಲೈಟ್ , ಮಚಲಿಪಟ್ಟಣ , ಬೆಸ್ಸಿನ್ , ಬ್ರೂಚ್ .
ಫ್ರೆಂಚರು ( ಸಾಮಾನ್ಯ ಶಕ 1664 – 1954 ).
* ರಾಜಧಾನಿ – ಪಾಂಡಿಚೇರಿ
* 1664 ರಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು.
* ಪಾಂಡಿಚೇರಿ ಭಾರತದಲ್ಲಿ ಫ್ರೆಂಚರ ರಾಜಧಾನಿಯಾಗಿತ್ತು.
ಕರ್ನಾಟಿಕ್ ಯುದ್ಧಗಳು .
* ಕರ್ನಾಟಿಕ ಪ್ರದೇಶ ಎಂದರೆ ” ಕೋರಮಂಡಲ ತೀರ ಮತ್ತು ಅದರ ಹಿನ್ನಡೆ ಪ್ರದೇಶ. ಇದರ ರಾಜಧಾನಿ ” ಅರ್ಕಾಟ”.
* ಹೈದರಾಬಾದ್ ಸಂಸ್ಥಾನದ ಸ್ಥಾಪಕ ಅಸಫ್ ಜಾ, ಅರ್ಕಾಟ್ ಪ್ರದೇಶವನ್ನು ದೋಸ್ತ್ ಅಲಿ ಆಳುತ್ತಿದ್ದನು. ಸಾ.ಶ. 1740 ರಲ್ಲಿ ಮರಾಠರು ದೋಸ್ತ ಅಲಿಯನ್ನು ಕೊಂದು ಅಳಿಯನಾದ ಅಂತಹ ಚಂದಾ ಸಾಹೇಬರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ದೊಸ್ತ್ ಅಲಿಯ ಮಗ ಸಬ್ದರ್ ಜಂಗ್ ಮರಾಠರಿಗೆ ಹಣ ಕೊಟ್ಟು ಅರ್ಕಾಟ್ ಅನ್ನು ಪಡೆದನು.
* ಇದೇ ಸಂದರ್ಭದಲ್ಲಿ ಅಸಫ್ ಜಾ ತನ್ನ ಸೇನಾ ನಾಯಕ ಅನ್ವರುದ್ವಿ ನನನ್ನು ಅರ್ಕಾಟಿನ ನವಾಬನನ್ನಾಗಿ ಮಾಡಿದನು. ಮತ್ತೊಂದು ಕಡೆ ಮರಾಠರ ಬಂಧನದಿಂದ ಬಿಡುಗಡೆಯಾದ ಚಂದಾ ಸಾಹೇಬ್ ನವಾಬ ಹುದ್ದೆಗಾಗಿ ಪೈಪೋಟಿಗಿಳಿದನು.
* ಹೈದರಾಬಾದಿನ ನಿಜಾಮನ ಹುದ್ದೆಗಾಗಿ ಅಸಫ್ ಜಾನ ಮರಣದ ನಂತರ ಅವನ ಮಗ ನಾಸೀರ್ ಜಂಗ್ ಮತ್ತು ಮೊಮ್ಮಗ ಮುಜಾಫರ್ ಜಂಗ್ ಆಂತರಿಕ ಕಲಹದಲ್ಲಿ ತೊಡಗಿದರು.
ಮೊದಲನೇ ಕರ್ನಾಟಿಕ್ ಯುದ್ಧ ( ಸಾ.ಶ 1746-1748).
* ಕಾರಣ.
ಆಸ್ತ್ರೀಯಾ ದೇಶಕ್ಕಾಗಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ನಡೆದ ಯುದ್ಧ.
ಬ್ರಿಟಿಷರಲ್ಲಿ ಬಾರ್ನೆಟ್ ಮತ್ತು ಅನ್ವರುದ್ದಿನ್ ಹಾಗೂ ಫ್ರೆಂಚ್ ರಲ್ಲಿ ಡೂಪ್ಲೆ ಮತ್ತು ಮಾರಿಷನ್ ಗವರ್ನರ್ ಲಾ ಬೋರ್ಡಿನಾ
* ಯುದ್ಧದ ಗತಿ.
ಬಾರ್ನೆಟ್ ನೇತೃತ್ವದಲ್ಲಿ ಫ್ರೆಂಚ್ ಹಡಗುಗಳನ್ನು ಬ್ರಿಟಿಷರು ವಶಪಡಿಸಿಕೊಂಡಿದ್ದು, ಫ್ರೆಂಚ್ ಗವರ್ನರ್ ಜನರಲ್ ಡೂಪ್ಲೆ ಮದ್ರಾಸನ್ನು ಗೆದ್ದುಕೊಂಡಿದ್ದು .
ನಂತರದಲ್ಲಿ ಬ್ರಿಟಿಷರು ಮದ್ರಾಸನ್ನು ಬಿಡಿಸಿಕೊಡುವಂತೆ ಅನ್ವರುದ್ದಿ ನನಿಗೆ ಕೇಳಿದ ಸಂದರ್ಭದಲ್ಲಿ ಡೂಪ್ಲೆ ಸೆಂಟ್ ಥೋಮ್ ಬಳಿಯ ಅಡಿಯಾರ್ ಕದನದಲ್ಲಿ ಡೂಪ್ಲೆ ಅನ್ವರುದ್ದಿನನ್ನು ಸೋಲಿಸಿದನು.
* ಏಕ್ಸ್ ಲಾ ಚಾಪೆಲ್ ಒಪ್ಪಂದ – 1748
ಎರಡನೇ ಕರ್ನಾಟಿಕ್ ಯುದ್ಧ ( ಸಾ.ಶ. 1749 – 1745 ).
* ಕಾರಣ.
ನಿಜಾಮ ಮತ್ತು ನವಾಬ ಹುದ್ದೆಗಾಗಿ ನಡೆದ ಆಂತರಿಕ ಕಲಹಗಳು.
ಬ್ರಿಟಿಷರಲ್ಲಿ ರಾಬರ್ಟ್ ಕ್ಲೈವ್, ಅನ್ವರುದ್ದೀನ್, ಮಹಮದ್ ಅಲಿ, ನಾಸಿರ್ ಜಂಗ್, ಫ್ರೆಂಚರಲ್ಲಿ ಡ್ಯೂಪ್ಲೆ, ಚಂದ ಸಾಹೇಬ್, ಮುಜಫರ್ .
* ಪಾಂಡಿಚೆರಿ ಒಪ್ಪಂದ – ಸಾ.ಶ.1754
ಮೂರನೇ ಕರ್ನಾಟಕ ಯುದ್ಧ ( ಸಾ.ಶ 1756- 1763 ).
* ಕಾರಣ.
ಯುರೋಪಿನಲ್ಲಿ ನಡೆದ ಸಪ್ತ ವಾರ್ಷಿಕ ಕದನ ಬ್ರಿಟಿಷರಲ್ಲಿ ರಾಬರ್ಟ್ ಕ್ಲೈವ್, ಸರ್ ಐರ್ ಕೂಟ್, ಸಲಾ ಬತ್ ಜಂಗ್, ಮಹಮ್ಮದ್ ಅಲಿ, ಫ್ರೆಂಚರಲ್ಲಿ ಕೌಂಟ್ ಡಿ ಲ್ಯಾಲಿ ಮತ್ತು ಬುಸ್ಸಿ
-: ಪ್ರಮುಖ ಘಟನೆಗಳು :-
* ಬ್ರಿಟಿಷರು ಪ್ರೆಂಚರ ಕೇಂದ್ರವಾದ ಚಂದ್ರನಾಗೂರನ್ನು ಆಕ್ರಮಿಸಿದರು.
* ಜೂನ್ 22 ಸಾ . ಶ 1758ರಲ್ಲಿ ಕೌಂಟ್ ಡಿ ಲ್ಯಾಲಿ ಸೇಂಟ್ ಡೇವಿಡ್ ಕೋಟೆ ವಶಪಡಿಸಿಕೊಂಡನು.
* ಲಾಲಿ ಮದ್ರಾಸ್ ಅನ್ನು ವಶಪಡಿಸಿಕೊಳ್ಳಲು ಹೈದರಾಬಾದಿನಲ್ಲಿದ್ದ ದಳಪತಿ ಬುಸ್ಸಿಯನ್ನು ವಾಪಸ್ಸು ಕರೆಸಿಕೊಂಡು ಮಹಾಪರಾದ ಮಾಡಿದನು.
* ಸಲಾಬತ್ ಜಂಗ್ ಫ್ರೆಂಚರನ್ನು ತೊರೆದು ಇಂಗ್ಲಿಷರಿಗೆ ಸಹಾಯ ಮಾಡಿದ್ದು ಫ್ರೆಂಚರಿಗೆ ಮಹಾ ಮೋಸವಾಯಿತು.
ವಾಂಡಿ ವಾಷ್ ಕದನ – 1760.
* 1760 ಜನವರಿ 23ರಂದು ಇಂಗ್ಲಿಷ್ ಸೇನಾನಿ ಸರ್ ಐರ್ ಕೂಟ್ ಮತ್ತು ಕೌಂಟ್ ಡಿ ಲ್ಯಾಲಿ, ಬುಸ್ಸಿಯ ನಡುವೆ ಏರ್ಪಟ್ಟ ಬ್ರಿಟಿಷರಿಗೆ ಜಯವಾಯಿತು.
* ಪ್ಯಾರಿಸ್ ಒಪ್ಪಂದ – 1763