ಭಾರತದ ಪರಿಚಯ ಭಾಗ – 3

27. ಹಿಮಾಲಯ ನದಿಗಳ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ನಿಜವಲ್ಲ?

1) ವರ್ಷದುದ್ದಕ್ಕೂ ನೀರು ಹರಿಯುತ್ತದೆ

2) ಅವುಗಳು ಮಳೆಯಿಂದ ಮಾತ್ರ ನೀರನ್ನು ಪಡೆಯುತ್ತವೆ.

3) ಮಳೆಯಿಂದ ಮತ್ತು ದೀರ್ಘಕಾಲಿಕ ಕರಗಿದ ಹಿಮದ ಕಾರಣ ನೀರನ್ನು ಪಡೆಯುತ್ತವೆ.

4) ಮೇಲಿನ ಯಾವುದು ಅಲ್ಲ

ಉ) ಅವುಗಳು ಮಳೆಯಿಂದ ಮಾತ್ರ ನೀರನ್ನು ಪಡೆಯುತ್ತವೆ

* ಹಿಮಾಲಯದ ನದಿಗಳನ್ನು ಉತ್ತರ ಭಾರತದ ನದಿಗಳೆಂತಲೂ ಕರೆಯಲಾಗಿದೆ.

* ಈ ನದಿಗಳು ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ಹಿಮ ಕರಗುವಿಕೆಯಿಂದ ಹುಟ್ಟಿ ಜೀವಂತ ನದಿಗಳಾಗಿ ವರ್ಷವಿಡೀ ತುಂಬಿ ಹರಿಯುತ್ತವೆ.

* ಪ್ರಮುಖ ನದಿಗಳೆಂದರೆ – ಸಿಂಧೂ, ಗಂಗಾ ಮತ್ತು ಬ್ರಹ್ಮಪುತ್ರ ಆದರೆ ಪರ್ಯಾಯ ಪ್ರಸ್ಥಭೂಮಿಯ ನದಿಗಳು ಋತುಕಾಲಿಕ ನದಿಗಳಾಗಿವೆ.

* ಮಾನ್ಸೂನ್ ಕಾಲದಲ್ಲಿ ಸುರಿಯುವ ಮಳೆಯಿಂದಾಗಿ ಉಕ್ಕಿ ಹರಿಯುತ್ತವೆ.

28. ಭಾರತದ ಅತ್ಯುನ್ನತ ಶಿಖರ ಯಾವುದು ?

1) ಕಾಮೆತ್

2) ನಂದಕೋಟ್

3) ನಂದಾದೇವಿ

4) ಕೆ2(ಗಾಡ್ವಿನ ಆಸ್ಟೆನ)

ಉ) ಕೆ2( ಗಾಡ್ವಿನ ಆಸ್ಟೆನ್)

* K2 ಅಥವಾ ಮೌಂಟ್ ಗಾಡ್ವಿನ ಆಸ್ಟಿನ (8611ಮೀಟರ್) ಭಾರತದ ಅತ್ಯಂತ ಎತ್ತರವಾದ (pok) ಮತ್ತು ಪ್ರಪಂಚದ 2ನೆಯ ಎತ್ತರವಾದ ಶಿಖರ ವಾಗಿದ್ದು, ಕಾರಕೋರಂ ಶ್ರೇಣಿಯಲ್ಲಿದೆ.

* ಇದನ್ನು ಸ್ಥಳಿಯವಾಗಿ ದಪಾಸಂ ಅಥವಾ ಚೋಗೋರಿ ಎಂದು ಕರೆಯಲಾಗುತ್ತದೆ.

29. ‘ಸ್ಯಾಡಲ್ ಶಿಖರ’ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅತ್ಯುನ್ನತ ಶಿಖರವು ಎಲ್ಲಿ ಕಂಡು ಬರುವುದು?

1) ಗ್ರೇಟ್ ನಿಕೋಬಾರ್

2) ಮಧ್ಯ ಅಂಡಮಾನ್

3) ಲಿಟಲ್ ಅಂಡಮಾನ್

4) ಉತ್ತರ ಅಂಡಮಾನ್

ಉ) ಉತ್ತರ ಅಂಡಮಾನ್

* ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿ ಕಂಡುಬರುವ 204 ದ್ವೀಪಗಳ ಸಾಮೂಹವಾಗಿದೆ.

* ಇವು ಭೂ ಅಂತಜನಿತ ಶಕ್ತಿಗಳು ಮತ್ತು ಜ್ವಾಲಾಮುಖಿ ಗಳಿಂದ ಉಂಟಾಗಿವೆ.

* ಇದರ ರಾಜಧಾನಿಯಾದ ಪೋರ್ಟ್ ಬ್ಲೇರ್ ದಕ್ಷಿಣ ಅಂಡಮಾನ್ ನಲ್ಲಿದೆ.

* ಬ್ಯಾರೆನ್ ಮತ್ತು ನಾರ್ಕೊಂಡಮ್ ಜ್ವಾಲಾಮುಖಿ – ಅಂಡಮಾನ್ ನಲ್ಲಿ ಕಂಡುಬರುತ್ತವೆ.

* ಇದು ಭಾರತದ ಏಕೈಕ ಸಜೀವ ಜ್ವಾಲಾಮುಖಿಯಾಗಿದೆ.

* ಭಾರತವು ಒಟ್ಟು 247 ದ್ವೀಪಗಳನ್ನು ಹೊಂದಿದೆ

* ಅವುಗಳಲ್ಲಿ 204 ಬಂಗಾಳ ಕೊಲ್ಲಿಯಲ್ಲಿ( ಅಂಡಮಾನ್ ಮತ್ತು ನಿಕೋಬಾರ್) ಮತ್ತು ಉಳಿದ 43 ದ್ವೀಪ ಅರಬ್ಬಿ ಸಮುದ್ರದಲ್ಲಿವೆ.

* ಅರಬ್ಬಿ ಸಮುದ್ರದಲ್ಲಿರುವ ದ್ವೀಪಗಳನ್ನು ಲಕ್ಷ ದ್ವೀಪಗಳೆಂದು ಕರೆಯುವರು.

* ಇವು ಕೇರಳಕ್ಕೆ ಅತಿ ಸಮೀಪದಲ್ಲಿವೆ.

* ಲಕ್ಷ ದ್ವೀಪಗಳು ಅವಳ ಜೀವಿಗಳಿಂದ ನಿರ್ಮಿತವಾದ  ಅವಳ ದಿಬ್ಬಗಳಿಂದ ಸುತ್ತುವರಿದಿವೆ.

* ಕವರಟ್ಟಿ ಲಕ್ಷದ್ವೀಪಗಳ ರಾಜಧಾನಿಯಾಗಿದೆ.

* ಮಿನಿಕಾಯ್ ಮತ್ತು ಅಮೀನ್ದಿವಿ ದ್ವೀಪಗಳು ಲಕ್ಷ ದ್ವೀಪಗಳಲ್ಲಿರುವ ಪ್ರಮುಖ ದ್ವೀಪ ಸಮೂಹಗಳು.

30. ಭಾರತದ ವಿಸ್ತೀರ್ಣ ಸುಮಾರು______ ರಷ್ಟು ಪಾಕಿಸ್ತಾನಕ್ಕಿಂತ ದೊಡ್ಡದಾಗಿದೆ?

1) 3

2) 4

3) 6

4) 9

ಉ) 4

* ಭಾರತದ ಭೌಗೋಳಿಕ ವಿಸ್ತೀರ್ಣ 32.87.263 ಚದರ ಕಿಲೋ ಮೀಟರ್ ಪ್ರದೇಶವು ಪಾಕಿಸ್ತಾನದ 7.96.095 ಚದರ ಕಿಲೋಮೀಟರುಗಳಿಗಿಂತ 4.12 ಪಟ್ಟು ದೊಡ್ಡದಾಗಿದೆ.

* ಜನಸಂಖ್ಯೆಯ ಪ್ರಕಾರ ಭಾರತವು ಪಾಕಿಸ್ತಾನಕ್ಕಿಂತ 6.5 ಪಟ್ಟು ದೊಡ್ಡದಾಗಿದೆ.

31. ಶಬರಿಮಲೆ ಸ್ಥಳ ಯಾವ ರಾಜ್ಯದಲ್ಲಿದೆ?

1) ಆಂಧ್ರಪ್ರದೇಶ

2) ತಮಿಳುನಾಡು

3) ಕೇರಳ

4) ಕರ್ನಾಟಕ

ಉ) ಕೇರಳ

* ಶಬರಿಮಲೆ ದೇವಾಲಯ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪೆರಿನಾಡು ಗ್ರಾಮದಲ್ಲಿ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ಒಳಗೆ ಶಬರಿಮಲೆ ಬೆಟ್ಟದಲ್ಲಿದೆ.

* ಈ ದೇವಾಲಯವು 18 ಬೆಟ್ಟಗಳ ನಡುವೆ ಬೆಟ್ಟದ ತುದಿಯಲ್ಲಿದೆ ಮತ್ತು ಪರ್ವತಗಳು ಮತ್ತು ದಟ್ಟವಾದ ಕಾಡುಗಳಿಂದ ಆವೃತವಾಗಿದೆ.

* ದೇವಾಲಯದ ಸುತ್ತ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ದಟ್ಟವಾದ ಅರಣ್ಯವನ್ನು’ ಪೊಂಗವನಂ’ ಎಂದು ಕರೆಯಲಾಗುತ್ತದೆ.

32. ಯಾವ ಹಿಮಾಲಯ ಶಿಖರವನ್ನು ‘ಸಾಗರ್ ಮಾತಾ’ಎಂದು ಕರೆಯುತ್ತಾರೆ?

1) ನಂಗ ಪರ್ವತ

2) ಧೌಲಗಿರಿ

3) ಮೌಂಟ್ ಎವರೆಸ್ಟ್

4) ಕಾಂಚನಜುಂಗಾ

ಉ) ಮೌಂಟ್ ಎವರೆಸ್ಟ್

* ಮೌಂಟ್ ಎವರೆಸ್ಟ್ -8848.86ಮೀಟರ್.ಇದನ್ನು ನೇಪಾಳದಲ್ಲಿ ಸಾಗರ ಮಾತಾ ಎಂದು ಮತ್ತು ಚೀನಾದಲ್ಲಿ – ಚೊಮೊಲುoಗ್ಮಾ ಅಥವಾ ಕ್ಯೂಮೊಲುoಗ್ಮಾ ಎಂದು ಕರೆಯುವರು.

* ಈ ಪರ್ವತವನ್ನು ಮೊಟ್ಟಮೊದಲಿಗೆ ಪರ್ವತಾರೋಹಣ ಮಾಡಿದವರು- ತೆನ್ಸಿಂಗ್ ಮತ್ತು ಹಿಲರಿ

* ಇದನ್ನು ಏರಿದ ಭಾರತದ ಪ್ರಥಮ ಮಹಿಳೆ:ಬಚೇಂದ್ರಿ ಪಾಲ್.

33. ಸುಣ್ಣದ ಅಸ್ತಿ ಪಂಜರಗಳನ್ನು ಹೊಂದಿರುವ ಸಣ್ಣಸಮುದ್ರ ಪ್ರಾಣಿಗಳನ್ನು______ಎಂದು ಕರೆಯಲಾಗುತ್ತದೆ.

1) ಕ್ಯಾಮಿಟೊಮೋನಸ್

2) ಪೋರಮಿನಿಫೆರಾ

3) ಹವಳದ ದಿಬ್ಬಗಳು

4) ಡಯಾಟಮಗಳು

ಉ) ಹವಳದ ದಿಬ್ಬಗಳು

* ಇವು ಸಾಗರಗಳಲ್ಲಿ ಕಂಡು ಬರುತ್ತವೆ, ಸಣ್ಣ ಜೀವಿಗಳ ವಸಾಹತುಗಳಾಗಿವೆ.

* ಇವು ಕ್ಯಾಲ್ಸಿಯಂ ಕಾರ್ಬೋನೇಟ್ ನಿಂದ ಕೂಡಿದ ಹವಳದ ಪಾಲಿಪ್ಗಳಿಂದ ರೂಪಗೊಂಡು ನೀರೊಳಗಿನ ರಚನೆಗಳಾಗಿವೆ.

* ಹವಳದ ಬಂಡಗಳನ್ನು ಸಮುದ್ರದ ಉಷ್ಣವಲಯದ ಮಳೆ ಕಾಡು ಎಂದು ಪರಿಗಣಿಸಲಾಗುತ್ತದೆ ಮತ್ತು ಸಮುದ್ರದ ಮೇಲ್ಮೈಯಲ್ಲಿನ ಕೇವಲ0.1%ನಷ್ಟ ಭಾಗವನ್ನು ಆಕ್ರಮಿಸಿಕೊಂಡಿದೆ ಮತ್ತು25% ಸಮುದ್ರ ಪ್ರಭೇದಗಳಿಗೆ ನೆಲೆಯಾಗಿದೆ.

* ಇವು ಸಾಮಾನ್ಯವಾಗಿ 150 ಅಡಿಗಳಿಗಿಂತ ಕಡಿಮೆ ಆಳವಿಲ್ಲದ ಪ್ರದೇಶಗಳಲ್ಲಿ ಕಂಡು ಬರುತ್ತವೆ.

* ಆದರೂ ಕೆಲವು ಅವಳದ ಬಂಡೆಗಳು ಇನ್ನೂ ಆಳವಾಗಿ ಸುಮಾರು 450 ಅಡಿಗಳ ವರೆಗೆ ವಿಸ್ತರಿಸುತ್ತವೆ.

* ಭಾರತದಲ್ಲಿನ ಪ್ರಮುಖ ಹವಳದ ಬಂಡೆಗಳು ಪಾಕ್ ಕೊಲ್ಲಿ,ಮನ್ನಾರ್ ಕೊಲ್ಲಿ,ಕಚ್ ಕೊಲ್ಲಿ,ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷ ದ್ವೀಪಗಳನ್ನು ಒಳಗೊಂಡಿದೆ.

* ಇವುಗಳಲ್ಲಿ ಲಕ್ಷ ದ್ವೀಪವು ಹವಳಗಳಿಂದ ರಚನೆಯಾಗಿದೆ.

34. ಭಾರತದ ಪರ್ಯಾಯ ದ್ವೀಪ ಭಾಗದ ಅತಿ ಎತ್ತರದ ಪರ್ವತ ಶಿಖರ ?

1) ಅನೈಮುಡಿ

2) ದೊಡ್ಡಬೆಟ್ಟ

3) ಮಹೇಂದ್ರಗಿರಿ

4) ನೀಲಗಿರಿ

ಉ) ಅನೈಮುಡಿ

* ಭಾರತದ ಪರ್ಯಾಯ ದ್ವೀಪ ಭಾಗದ ಅತಿ ಎತ್ತರದ ಪರ್ವತ ಶಿಖರ ಅನೈಮುಡಿ(2695ಮೀಟರ್)ಯಾಗಿದೆ.

* ಪಶ್ಚಿಮ ಘಟ್ಟಗಳ ಎತ್ತರವಾದ ಶಿಖರಗಳೆಂದರೆ ಅನೈಮುಡಿ(2696ಮೀಟರ್),ಮುಳ್ಳಯ್ಯನಗಿರಿ(1923ಮೀಟರ್),ಕುದುರೆಮುಖ(1882ಮೀಟರ್),ಪುಷ್ಪಗಿರಿ(1714ಮೀಟರ್), ಕಾಲ್ಸುಬಾಯಿ(1646ಮೀಟರ್), ಸಾಲೇಹರ(1567ಮೀಟರ್)ಇತ್ಯಾದಿ.

* ಪೂರ್ವ ಘಟ್ಟಗಳ ಪ್ರಮುಖ ಶಿಖರಗಳೆಂದರೆ: ಆರ್ಮಕೊಂಡ(1680ಮೀಟರ್),ಸಿಂಗರಾಜು(1516ಮೀಟರ್),ನಿಮಲಗಿರಿ(1515ಮೀಟರ್),ಮಹೇಂದ್ರಗಿರಿ(1501ಮೀಟರ್)

* ಆರ್ಮಕೊಂಡ(ಆಂಧ್ರಪ್ರದೇಶ)ಪೂರ್ವ ಘಟ್ಟಗಳ ಅತ್ಯಂತ ಎತ್ತರವಾದ ಶಿಖರವೆಂದು ಪರಿಗಣಿಸಲಾಗಿದೆ.

35. ಗ್ರೇಟರ್ ಹಿಮಾಲಯವನ್ನು_____ಎಂದು ಕರೆಯಲಾಗುತ್ತದೆ.

1) ಹಿಮಾದ್ರಿ

2) ಸಹ್ಯಾದ್ರಿ

3) ಅಸ್ಸಾಂ ಹಿಮಾಲಯ

4) ಶಿವಾಲಿಕ್

ಉ) ಹಿಮಾದ್ರಿ

* ಎತ್ತರ ಮತ್ತು ಅಕ್ಷಾಂಶಗಳನ್ನಾಧರಿಸಿ ಹಿಮಾಲಯ ಪರ್ವತಗಳನ್ನು ಮೂರು ಸಮಾನಾಂತರ ಸರಣಿಗಳಾಗಿ ವಿಂಗಡಿಸಲಾಗಿದೆ.

* ಮಹಾ ಹಿಮಾಲಯ ಅಥವಾ ಹಿಮಾದ್ರಿ: ಇದು ಅತ್ಯಂತ ಒಳಭಾಗದಲ್ಲಿರುವ ಎತ್ತರವಾದ ಮತ್ತು ಅವಿಚ್ಛಿನ್ನವಾಗಿ ಹಬ್ಬಿರುವ ಸರಣಿಗಳು,(ಹಿಮಾದ್ರಿ – ದೇವರ ವಾಸಸ್ಥಾನ).ಮಹಾ ಹಿಮಾಲಯದ ಸರಾಸರಿ ಎತ್ತರವು 6100 ಮೀಟರ್ ಗಳಾಗಿದ್ದು 120-190 ಕಿಲೋ ಮೀಟರ್ ಅಗಲವಾಗಿದೆ.

* ಕೆಳ ಹಿಮಾಲಯ ಅಥವಾ ಹಿಮಾಚಲ: ಇವುಗಳ ಸರಾಸರಿ ಎತ್ತರವು ಸುಮಾರು 1500 ರಿಂದ 4500 ಮೀಟರ್ ಗಳಾಗಿದ್ದು,ಸುಮಾರು 60 ರಿಂದ 80 ಕಿಲೋಮೀಟರ್ಗಳಷ್ಟು ಅಗಲವಾಗಿದೆ.

* ಹೊರ ಹಿಮಾಲಯ ಅಥವಾ ಶಿವಾಲಿಕ್:ಇವುಗಳ ಸರಾಸರಿ ಎತ್ತರ 600 ರಿಂದ 1500 ಮೀಟರ್ಗಳಾಗಿದ್ದು ಅಗಲವು 15 ರಿಂದ 50 ಕಿಲೋ ಮೀಟರ್ ಗಳಾಗಿರುವುದು. ಶಿವಾಲಿಕ್ ಬೆಟ್ಟಗಳ ಕೆಳ ಹಿಮಾಲಯ ಮತ್ತು ಮಹಾ ಹಿಮಾಲಯಗಳಿಂದ ಅರಿದು ಬರುವ ನದಿಗಳು ಒತ್ತು ತಂದ ಸಂಚಯಿಸಿದ ಮೆಕ್ಕಲು ಮಣ್ಣಿನಿಂದ ನಿರ್ಮಿತವಾಗಿದೆ.

ಗೊತ್ತಿರಲಿ:ಶಿವಾಲಿಕ್ ಮತ್ತು ಕೆಳ ಹಿಮಾಲಯಗಳ ಮಧ್ಯದಲ್ಲಿ ಸಮತಟ್ಟಾದ ತಳವನ್ನು ಹೊಂದಿದ ಕಣಿವೆಗಳಿದ್ದು,ಅವುಗಳನ್ನು” ಡೂನ್ಸ್”ಗಳೆಂದು ಕರೆಯುವರು.

* ಸಹ್ಯಾದ್ರಿ-ಪಶ್ಚಿಮ ಘಟ್ಟಗಳು

* ಅಸ್ಸಾಂ ಹಿಮಾಲಯ- ಪೂರ್ವಾಂಚಲ ಅಥವಾ ಪೂರ್ವದ ಬೆಟ್ಟಗಳ ಭಾಗವಾಗಿದೆ.

36. ಈ ಕೆಳಗಿನವುಗಳಲ್ಲಿ ಯಾವುದನ್ನು” ಇತ್ತಿಚಿನ ಮಡಿಕೆ ಪರ್ವತ ಗಳು” ಎಂದು ಕರೆಯಲಾಗುತ್ತದೆ?

1) ಅರಾವಳಿ

2) ನೀಲಗಿರಿ

3) ಹಿಮಾಲಯ

4) ವಿಂಧ್ಯಾ

ಉ) ಹಿಮಾಲಯ

* ಹಿಮಾಲಯ ಪರ್ವತಗಳು : ಪ್ರಪಂಚದ ಅತ್ಯಂತ ಎತ್ತರವಾದ ಹಿಮಾವೃತಗೊಂಡ ಅವಿಚ್ಛಿನ್ನವಾಗಿ ಹಬ್ಬಿರುವ ಇತ್ತೀಚಿನ ಮಡಿಕೆ ಪರ್ವತಗಳಾಗಿವೆ.ಇವು ಇತ್ತೀಚೆಗೆ ಭೂ ಅಂತರಿಕ ಶಕ್ತಿಗಳಿಂದ ಶಿಲಾಪದರುಗಳ ಮಡಚುವಿಕೆಯಿಂದ ನಿರ್ಮಾಣಗೊಂಡಿರುವುದರಿಂದ ಇವುಗಳನ್ನು “ಇತ್ತೀಚೆಗೆ ಮಡಿಕೆ ಪರ್ವತ’ಗಳೆಂದು ಕರೆಯುವರು. ಈ ಪರ್ವತಗಳು ಸುಮಾರು 2400 ಕಿಲೋ ಮೀಟರ್. ಉದ್ದ, 240 ರಿಂದ 320 ಕಿಲೋ ಮೀಟರ್. ಅಗಲವಾಗಿದೆ.ಸರಾಸರಿ ಎತ್ತರವು 6000 ಮೀಟರ್.

* ಅರಾವಳಿ ಬೆಟ್ಟಗಳು: ಪ್ರಪಂಚದ ಅತ್ಯಂತ ಹಳೆಯ ಪರ್ವತಗಳು ಈ ಬೆಟ್ಟಗಳು ಬೆಣಚುಕಲ್ಲು, ನೀಸ್ ಮತ್ತು ಶಿಸ್ಟ್ ಶಿಲೆಗಳಿಂದ ಸಂಯೋಜನೆಗೊಂಡಿವೆ.

* ನೀಲಗಿರಿ ಬೆಟ್ಟಗಳು: ಇದು ದಖ್ಖನ್ ಪ್ರಸ್ಥಭೂಮಿ ಹಂತ ಹಂತವಾಗಿ ಮೇಲೆಕ್ಕೆತ್ತುವ ಮೂಲಕ ರೂಪುಗೊಂಡಿವೆ.

* ವಿಂಧ್ಯಾ ಮತ್ತು ಸತ್ಪುರ ಶ್ರೇಣಿಗಳು: ಪದರು(Sedimentary) ಶಿಲೆಗಳಿಂದ ರೂಪಿಸಲ್ಪಟ್ಟಿದೆ.

37. ಭಾರತದ ಅತಿ ಎತ್ತರದ ಪ್ರಸ್ಥಭೂಮಿ ಯಾವುದು?

1) ದಖ್ಖನ ಪ್ರಸ್ಥಭೂಮಿ

2) ಛೋಟಾನಾಗ್ಪುರ್ ಪ್ರಸ್ಥಭೂಮಿ

3) ಲಡಾಖ್ ಪ್ರಸ್ಥಭೂಮಿ

4) ಬಾಗೆಲಖಂಡ ಪ್ರಸ್ಥಭೂಮಿ

ಉ) ಲಡಾಖ್ ಪ್ರಸ್ಥಭೂಮಿ

* ಲಡಾಖ್ ಪ್ರಸ್ಥಭೂಮಿಯು ಭಾರತದ ಅತಿ ಎತ್ತರದಲ್ಲಿರುವ ಪ್ರಸ್ಥಭೂಮಿಯಾಗಿದೆ.

* ದಖ್ಖನ ಪ್ರಸ್ಥಭೂಮಿ ಭಾರತದ ಅತಿದೊಡ್ಡ ಪ್ರಸ್ಥಭೂಮಿಯಾಗಿದ್ದು,8ರಾಜ್ಯಗಳಲ್ಲಿ ವಿಸ್ತರಿಸಿದೆ.

* ಪ್ರಸ್ಥಭೂಮಿ(Plateaux): ಸಮತಟ್ಟಾದ ಅಥವಾ ಏರು ತಗ್ಗಿನ ಮೇಲ್ಮೈ ಹಾಗೂ ಕಡಿದಾದ ಅಂಚುಗಳನ್ನು ಒಳಗೊಂಡ ಹೆಚ್ಚು ಎತ್ತರವಾದ ಭೂ ಭಾಗಗಳನ್ನು ಪ್ರಸ್ಥಭೂಮಿ ಅಥವಾ ಪೀಠಭೂಮಿ ಎಂದು ಕರೆಯುವರು.

* ಅತ್ಯಂತ ಎತ್ತರದ ಪ್ರಸ್ಥಭೂಮಿ ಪ್ರದೇಶ(Highest Plateau region)ವೆಂದರೆ ದಖ್ಖನ್ ಪ್ರಸ್ಥಭೂಮಿ – ಇದು ಮಹಾರಾಷ್ಟ್ರ,ಕರ್ನಾಟಕ, ಆಂಧ್ರಪ್ರದೇಶ, ಛತ್ತಿಸ್ಗಡ್, ಓಡಿಸಾ, ತಮಿಳುನಾಡು, ಕೇರಳ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಹರಡಿದೆ. ಭಾರತದಲ್ಲಿ ಇದು ಉತ್ತರದಲ್ಲಿ ಸುಮಾರು 100 ಮೀಟರ್ ಮತ್ತು ದಕ್ಷಿಣದಲ್ಲಿ ಸಾವಿರ ಮೀಟರ್ ಎತ್ತರದಲ್ಲಿದೆ.

  1. * ವಿಶ್ವದ ಅತಿ ಎತ್ತರದ ಪ್ರಸ್ಥಭೂಮಿ- ಟಿಬೆಟ್ ಪ್ರಸ್ಥಭೂಮಿಯಾಗಿದೆ ಇದು ಮಧ್ಯ ಏಷ್ಯಾ ಮತ್ತು ಹಿಮಾಲಯದ ಉತ್ತರದ ಸುತ್ತಲಿನ ಪ್ರದೇಶವನ್ನು ಒಳಗೊಂಡಿದೆ ಇದು ಸರಿ ಸುಮಾರು 4500 ಮೀಟರ್ ಎತ್ತರವಿದೆ.