ಭಾರತದ ಪ್ರಾಚೀನ ನಾಗರಿಕತೆಗಳು

ಭಾರತದ ಪ್ರಾಚೀನ ನಾಗರಿಕತೆಗಳು, ವೇದಗಳ ಕಾಲ.

* 1906 ರಲ್ಲಿ ಲಾರ್ಡ್ ಕರ್ಜನ್ ಭಾರತೀಯ ಪುರಾತತ್ವ ಇಲಾಖೆ ಸ್ಥಾಪಿಸಿದನು.

* ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ನ ನನ್ನು ಭಾರತೀಯ ಪುರಾತತ್ವ ಇಲಾಖೆಯ ಪಿತಾಮಹ ಎನ್ನುವರು.

* ನಾಗರಿಕತೆಯ ಕಾಲವನ್ನು ಪತ್ತೆಹಚ್ಚಲು ಕಾರ್ಬನ್ – 14 ಮತ್ತು ಪೊಟ್ಯಾಸಿಯಂ ಅನ್ನು ಬಳಸುತ್ತಾರೆ.

* 1784ರಲ್ಲಿ ಸರ್ ವಿಲಿಯಂ ಜೋನ್ಸ್ ನು ” ದಿ ರಾಯಲ್ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೊದಲ ನಿರ್ದೇಶಕನಾದನು.ಈ ಸಂಸ್ಥೆಯ ಪ್ರಕಟಿಸಿದ ಪತ್ರಿಕೆ ಜನರಲ್ ಆಫ್ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್.

* ಸಾಮಾನ್ಯ ಶಕ 1921 ರಲ್ಲಿ ಡಾ. ಆರ್. ಬಿ.ದಯರಾಮ್ ಸಹಾನಿಯವರು ಹರಪ್ಪ ನಿವೇಶನವನ್ನು ಕಂಡುಹಿಡಿದರು.

* 1922 ರಲ್ಲಿ ಡಾ.ಆರ್. ಮೆಹೆಂಜೋದಾರೋ ನಗರವನ್ನು ಕಂಡುಹಿಡಿದರು.

* ಹಿಂದಿ ಭಾಷೆಯಲ್ಲಿ ಮೆಹೆಂಜೋದಾರೋ ಎಂದರೆ ” ಮಡಿದವರ ದಿಬ್ಬ (Mound of Dead) ಎಂದರ್ಥ.

* ಮೆಹೆಂಜೋದಾರೋ ಎಂದರೆ ಸತ್ತವರ ದಿಬ್ಬ ಎಂದರ್ಥ.

* ಇದು ಪ್ರಸಿದ್ಧ ಹಡಗು ಕಟ್ಟೆ ಬಂದರ ಆಗಿತ್ತು.

ಸಿಂಧೂ ನಾಗರಿಕತೆಯ ಪ್ರಮುಖ ಲಕ್ಷಣಗಳು.

1. ನಗರ ಯೋಜನೆ

2. ಒಳ ಚರಂಡಿ ವ್ಯವಸ್ಥೆ

3. ಸಾರ್ವಜನಿಕ ಕೊಳ

ಸಿಂಧೂ ನಾಗರಿಕತೆಯ ನಾಶ.

* ಆರ್ಯರ ದಾಳಿ

* ಸಿಂಧೂ ನದಿಯ ಉಪನದಿಯಾದ ಸರಸ್ವತಿ ನದಿಯು ಗೊತ್ತುವಿಕೆ

* ಪ್ರವಾಹಗಳು

* ಸಾಂಕ್ರಾಮಿಕ ರೋಗಗಳು

* ಅರಣ್ಯ ನಾಶ

* ನೈಸರ್ಗಿಕ ವಿಕೋಪಗಳು

   -: ವೇದಗಳು :-

ಆರ್ಯ ಎಂದರೆ ” ಕುಲೀನ” ಅಥವಾ ” ಒಡೆಯ” ಅಥವಾ ” ಕೃಷಿ ಅವಲಂಬಿತ ವ್ಯಕ್ತಿ” ಅಥವಾ ” ಶ್ರೇಷ್ಠ ” ಅಥವಾ ” ಸುಸಂಸ್ಕೃತಿಯುಳ್ಳ ವಿಚಾರಯುತ ಜನ” ಎಂದರ್ಥ.

* ಉತ್ತರ ಭಾರತದ ಬಹುಭಾಗವನ್ನಾವರಿಸಿದ ಆರ್ಯಾವರ್ತ ಅಂದರೆ ಆರ್ಯರ ನಾಡು ಎಂದು ಕರೆಯಲಾಗಿದೆ.

* ಇಂಡೋ ಯುರೋಪಿಯನ್ ಬುಡಕಟ್ಟಿಗೆ ಸೇರಿದ ಕೆಲವು ಗುಂಪುಗಳು ಅಪಘಾನಿಸ್ತಾನ್ ಅವನ್ನು ದಾಟಿ ಪಂಜಾಬ್ ಪ್ರದೇಶಕ್ಕೆ ವಲಸೆ ಬಂದು ನೆಲೆಸಿದವು – ಭಾರತೀಯ ವಿದ್ಯಾಭವನ ಪ್ರಕಟಿಸಿರುವ ” ದಿ ಹಿಸ್ಟರಿ ಅಂಡ್ ಕಲ್ಚರ್ ಆಫ್ ದಿ ಇಂಡಿಯನ್ ಪೀಪಲ್” ಪುಸ್ತಕಗಳ  ಶ್ರೇಣಿಯಲ್ಲಿನ ಮೊದಲ ಸಂಪುಟದಲ್ಲಿ ಖ್ಯಾತ ಇತಿಹಾಸಕಾರ ‘ ಬಿ.ಕೆ. ಘೋಷ್ ‘ ಅಭಿಪ್ರಾಯಪಟ್ಟಿದ್ದಾರೆ.

-: ಸಪ್ತಸಿಂಧೂ: ಏಳು ನದಿಗಳ ಪ್ರದೇಶ :-

1. ವಿತಸ್ತಾ (ಝಿಲಂ)

2. ಅಸಿಕ್ನೀ (ಚಿನಾಬ್)

3. ವಿಪಾಶಾ ( ಬಿಯಾಸ್)

4. ಪಹಷ್ಣೀ ( ರಾವಿ)

5. ಶುತುದ್ರಿ ( ಸಟ್ಟೇಜ್ )

6. ಸರಸ್ವತಿ

7. ದ್ರಿಷದ್ವತಿ

ವೈದಿಕ ಸಾಹಿತ್ಯ – ಭಾಷೆ : ಸಂಸ್ಕೃತ ( ಸಾ.ಶ.ಪೂ 1500 ರಿಂದ ಸಾ.ಶ.ಪೂ 700 ರ ನಡುವಿನ ಅವಧಿ ).

ವೇದ ಶಬ್ದವನ್ನು ಸಂಸ್ಕೃತ ಮೂಲದ ” ವಿದ್ ” ಎಂಬುವುದರಿಂದ ಪಡೆಯಲಾಗಿದೆ. ವಿದ್ ಎಂದರೆ ಜ್ಞಾನ ಎಂದರ್ಥ.

* ವೈದಿಕ ಸಾಹಿತ್ಯವನ್ನು ಪ್ರಧಾನವಾಗಿ ಶೃತಿ ( ವೇದಗಳು ) ಮತ್ತು ಸ್ಮೃತಿಗಳಾಗಿ ವಿಂಗಡಿಸಲಾಗಿದೆ.

* ವೇದಗಳನ್ನು ” ಸಂಹಿತೆಗಳು ” ಎಂತಲೂ ಕರೆಯುತ್ತಾರೆ. ಮೊದಲ ಭಾಗ,ಋಗ್ವೇದದ ಕಾಲ ಅಥವಾ ಆರಂಭಿಕ ವೈದಿಕ ಕಾಲ ( ಸಾ.ಶ.ಪೂ 1500 ರಿಂದ ಸಾ.ಶ.ಪೂ 1000 ರವರೆಗೆ) ಎರಡನೇ ಭಾಗ, ಉತ್ತರ ಋಗ್ವೇದ ಕಾಲ ಅಥವಾ ನಂತರದ ವೈದಿಕ ಕಾಲ ( ಸಾ.ಶ.ಪೂ 1000 ದಿಂದ 700 ).

 ಋಗ್ವೇದ ಕಾಲ/ ಆರಂಭಿಕ ವೈದಿಕ ಕಾಲ.

* ಋಗ್ವೇದ: ಭಾಷೆ ಇಂಡೋ-ಯುರೋಪಿಯನ್

* ರಚನೆ ಸಾ.ಶ.ಪೂ 2000 – 1500

* ಮೊದಲ ಹಾಗೂ ಅತ್ಯಂತ ಪುರಾತನ ವೇದ

* 1028 ಶ್ಲೋಕಗಳು ಮತ್ತು 10 ಮಂಡಲಗಳು

* ಗಾಯತ್ರಿ ಮಂತ್ರ ಇರುವುದು

       -:ಸಾಮಾಜಿಕ ವ್ಯವಸ್ಥೆ :-

* ಋಗ್ವೇದದ ಹತ್ತನೆಯ ಮಂಡಲದಲ್ಲಿ ಬರುವ ಪುರುಷಸ್ತೂಕದಲ್ಲಿ ಹೊಸ ಸಾಮಾಜಿಕ ವ್ಯವಸ್ಥೆ ರೂಪುಗೊಳುತ್ತಿದ್ದ ಚಿತ್ರಣ ಸಿಗುತ್ತದೆ.

       -: ಅರ್ಥವ್ಯವಸ್ಥೆ :-

* ಪಶುಸಂಗೋಪನೆ

* ಸಂಪತ್ತು ಎಂದರೆ ಪ್ರಧಾನವಾಗಿ ಕುದುರೆಗಳು ಹಸುಗಳು ಒಂಟೆಗಳು ಮತ್ತು ಕುರಿಗಳು

* ಸಾಗುವಳಿ ಮಾಡಿದ ಭೂಮಿಯನ್ನು ಸಂಪತ್ತಿನ ಒಂದು ಭಾಗವನ್ನು ಪರಿಗಣಿಸಲಾಗಿತ್ತು.

* ಪ್ರಾಣಿಗಳು ( ಶ್ರೀಮಂತವಾಗಿದ್ದ ಸ್ಥಳೀಯ ಬುಡಕಟ್ಟು )

* ಸಾಗುವಳಿ ಮಾಡಿದ ಗದ್ದೆಯನ್ನು ಕ್ಷೇತ್ರವೆಂದು ಕರೆಯುತ್ತಿದ್ದರು.

       -: ರಾಜಕೀಯ ವ್ಯವಸ್ಥೆ :-

* ಬುಡಕಟ್ಟಿನ ಮುಖ್ಯಸ್ಥ – ರಾಜನ್/ ರಾಜ, ರಾಜನ ಸ್ಥಾನ ವಂಶಪಾರಂಪರ್ಯವಾಗಿ ಇತ್ತು. ಉದಾ: ಪುರು ವಂಶಾವಳಿಯ ತೃಕ್ಷ ಮತ್ತು ಭರತ ವಂಶಾವಳಿಯ ಸುಧಾಸ

* ಸಭಾ ( ಹಿರಿಯರ ಸದನ ) ಮತ್ತು ಸಮಿತಿ ಎಂಬ ಶಬ್ದಗಳ ಉಲ್ಲೇಖ.

* ಜನರ ಮೇಲೆ ಅಧಿಕಾರ ನಡೆಸುವವರನ್ನು ಕ್ಷತ್ರ ಎನ್ನಲಾಗುತ್ತಿತ್ತು.

        -: ಧಾರ್ಮಿಕ ವ್ಯವಸ್ಥೆ :-

* ಪ್ರಾಣಿಬಲಿ

* ಧಾರ್ಮಿಕ ವ್ಯವಸ್ಥೆಯ ಕೇಂದ್ರಬಿಂದು ಯಜ್ಞ

* ಯಜ್ಞಗಳನ್ನು ನಡೆಸಿಕೊಡುವ ಪ್ರರೋಹಿತನನ್ನು ” ಹೊತರ್” ಎಂದು ಕರೆಯಲಾಗುತ್ತಿತ್ತು.

* ಬೆಂಕಿಗೆ ಪ್ರಾಮುಖ್ಯತೆ, ಅಗ್ನಿಯ ಕುರಿತು 200 ಶ್ಲೋಕಗಳು. ಅಗ್ನಿ – ಇಂದ್ರ – ವಿಷ್ಣು.

* ಉಳುಮೆ ಮಾಡಿದ ಕಿರುದೇವತೆ ಕ್ಷೇತ್ರಸ್ಯ ಪತಿ, ನೇಗಿಲ ದೇವಿ ಸೀತಾ, ಮನೆಯ ಕಿರು ದೇವತೆ ವಾಸ್ತೋಷ್ಯ – ಪತಿ.

ಉತ್ತರ ಋಗ್ವೇದ ಕಾಲ/ ನಂತರದ ವೈದಿಕ ಕಾಲ.

1. ಯಜುರ್ವೇದ

2. ಸಾಮವೇದ/ಗಾನವೇದ

3. ಅಥರ್ವಣ ವೇದ

ಮೂರು ವಿಭಿನ್ನ ರೀತಿಯ ಯತ್ನಗಳನ್ನು ನಡೆಸುವ ಪುರೋಹಿತರು.

* ಯಜ್ಞಗಳನ್ನು ನಡೆಸುವವ ಪುರೋಹಿತ ಸಾಮನ್ ( ಉದ್ಗಾತ್ರಿ = ಹಾಡುಗಾರ)

* ಅಥರ್ವನ್ – ಅಂಗಿರ = ಅಗ್ನ ಪ್ರರೋಪಿತ

         -: ಸಾಮಾಜಿಕ ವ್ಯವಸ್ಥೆ :-

* ವರ್ಣವ್ಯವಸ್ಥೆ

* ಆಹಾರ ಸಂಗ್ರಹ ಸಮುದಾಯಗಳು ” ನಿಷಾದರು” ಮತ್ತು ” ಚಂಡಾಲರನ್ನು ” ಅಸ್ಪ್ರಶ್ಯ ಜಾತಿಗಳೊಂದಿಗೆ ಸೇರಿಸಲಾಗಿದೆ.

* ಮಹಿಳೆಯರನ್ನು ಅಸತ್ಯದ ಮೂರ್ತ ರೂಪವೆಂದು ಪರಿಗಣಿಸಲಾಗಿತ್ತು.

           -: ಅರ್ಥವ್ಯವಸ್ಥೆ :-

* ಸಿಂಧೂ ನದಿ ಪ್ರದೇಶದಿಂದ ಗಂಗಾನದಿ ಪ್ರದೇಶಕ್ಕೆ ಆರ್ಯ ಬುಡಕಟ್ಟುಗಳು ಬಂದು ನೆಲೆಸಿದರು.

* ಕೃಷಿಯ ಪ್ರಾಮುಖ್ಯತೆ – ಕೃಷಿ ಮತ್ತು ವಾಣಿಜ್ಯದಲ್ಲಿ ತೊಡಗಿಕೊಂಡಿಲ್ಲದೆ ಹೋದರೆ ಅವರನ್ನು ವ್ಯಾತ್ರರು ಅಂದರೆ ಪರಕೀಯರು ಎಂದು ಕರೆಯಲಾಯಿತು.

ಕಬ್ಬು= ಇಕ್ಷು, ಕುಲ್ಥಿ = ಹುರುಳಿ, ಚೀನ=ಸಾಮಾನ್ಯರಾಗಿ, ಸಾನ್ವ= ಬಡವನ ರಾಗಿ

       -: ರಾಜಕೀಯ ವ್ಯವಸ್ಥೆ :-

* ಕುರು,ಪಾಂಚಾಲ, ವಶ, ಉಸೀನ ಬುಡಕಟ್ಟುಗಳು ವಾಸವಿದ್ದವು.

* ಕುರುಕ್ಷೇತ್ರ ಎಂದು ಕರೆಯಲಾಗುವ ಇಂದಿನ ಪ್ರದೇಶವು ಆಗಿನ ಕುರು ಬುಡಕಟ್ಟಿನ ವಾಸ ಸ್ಥಳವಾಗಿತ್ತು.

* ಇನ್ನೂ ಪೂರ್ವದಲ್ಲಿದ್ದ ಪುಂಡ್ರರನ್ನು ಮತ್ತು ದಕ್ಷಿಣದ ಆಂಧ್ರರನ್ನು ಬಯಷ್ಕೃತರೆಂದು ಹೇಳಲಾಗಿತ್ತು.

* ಅಥರ್ವವೇದದಲ್ಲಿ ಎಲ್ಲಾ ಜನರನ್ನು ಆಳುವವನು ನರರೊಳಗೆ ದೇವನಿದ್ದ ಹಾಗೆ ಎಂದು ರಾಜನನ್ನು ವರ್ಣಿಸಲಾಗಿದೆ.

       -: ಧಾರ್ಮಿಕ ವ್ಯವಸ್ಥೆ :-

* ವಿಷ್ಣು ಮತ್ತು ರುದ್ರ ಇಬ್ಬರು ದೇವತೆಗಳು ಪ್ರಮುಖ ಸ್ಥಾನವನ್ನು ಹೊಂದಿದ್ದರು.

* ಉಪನಿಷತ್ತುಗಳಲ್ಲಿ ಕರ್ಮ ಮತ್ತು ಆತ್ಮಗಳ ಪುನರ್ಜನ್ಮ ಎಂಬ ಹೊಸ ಕಲ್ಪನೆಗಳನ್ನು ಹುಟ್ಟು ಹಾಕಲಾಯಿತು.

I. ಸ್ಮೃತಿಗಳು.

1. ವೇದಾಂಗಗಳು.

* ಕಲ್ಪ – ಧಾರ್ಮಿಕ ಆಚರಣೆಗಳು, ಶಿಕ್ಷಾ – ಉಚ್ಚಾರಣೆ, ವ್ಯಾಕರಣ, ನಿರುಕ್ತ – ಭಾಷಾಶಾಸ್ತ್ರ, ಛಂದಸ್ಸು, ಜ್ಯೋತಿಷ್ಯಗಳು.

2. ಉಪ ವೇದಗಳು.

* ಆಯುರ್ವೇದ – ಔಷಧಿ, ಧನುರ್ ವೇದ – ಯುದ್ಧ, ಗಂಧರ್ವ ವೇದ – ಸಂಗೀತ, ಶಿಲ್ಪ ವೇದ – ಶಿಲ್ಪಕಲೆ.

3. ಪುರಾಣಗಳು.

* 18 ಪುರಾಣುಗಳು ಅವುಗಳಲ್ಲಿ ಮುಖ್ಯವಾಗಿ ಭಾಗವತ,ವಾಯು, ಮತ್ಸ್ಯ, ವಿಷ್ಣು, ಬ್ರಹ್ಮಾಂಡ.

4. ಅರಣ್ಯಕಗಳು.

* ಇವು ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದೆ.

ಉದಾಹರಣೆಗೆ:- ಕೌಶಿತಕ, ತೈತೆರಿಯ, ಐತ್ತರೇಯ

5. ಉಪನಿಷತ್ತುಗಳು/ ವೇದಾಂತಗಳು.

* ಉಪನಿಷತ್ತು ಎಂದರೆ ಗುರುವಿನ ಹತ್ತಿರ ಕುಳಿತುಕೋ ಎಂದರ್ಥ.

* ಉದಾಹರಣೆ:- ಛಾಂದೋಗ್ಯ, ಕೇನ, ಬೃಹದಾರಣ್ಯಕ, ಕಥೆಶ್ವೇತೇಶ್ವರ, ಮುಂಡಕ, ಮಾಂಡ್ಯೂಕ್.

WhatsApp Group Join Now
Telegram Group Join Now