-: ಭಾರತದ ಭೂ ರಚನೆ :-
1. ಹಿಮಾಲಯ ಪರ್ವತ ಶ್ರೇಣಿಗಳು
2. ಸಿಂಧೂ ಗಂಗಾ ನದಿ ಬಯಲು ಪ್ರದೇಶ
3. ದಖನ್ ಪ್ರಸ್ಥಭೂಮಿ
4. ಪೂರ್ವ ಮತ್ತು ಪಶ್ಚಿಮ ಘಟ್ಟಗಳು
5. ಕರಾವಳಿ ತೀರ ಪ್ರದೇಶ
* ಪಶ್ಚಿಮದ ಅರಬ್ಬಿ ಸಮುದ್ರ, ಪೂರ್ವದ ಬಂಗಾಳ ಕೊಲ್ಲಿ ಹಾಗೂ ದಕ್ಷಿಣದ ಹಿಂದೂ ಮಹಾಸಾಗರ ಗಳಿಂದ ಸುತ್ತುವರೆದು 7516 ಕಿಲೋಮೀಟರ್ ಉದ್ದದ ತೀರ ಪ್ರದೇಶವಿದೆ.
* ಪೂರ್ವ ಕರಾವಳಿಯನ್ನು ಕೋರಮಂಡಲ ಎನ್ನುವರು.
* ಪಶ್ಚಿಮ ಕರಾವಳಿಯನ್ನು ಕೊಂಕಣ ಮತ್ತು ಮಲಬಾರ್ ಎಂದು ಕರೆಯುವರು.
ಇತಿಹಾಸವನ್ನು ಮೂರು ಪ್ರಧಾನ ಕಾಲಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ.
1. ಪ್ರಾಗೈತಿಹಾಸಿಕ ಕಾಲ(Pre Historic period).
* ಪ್ರಾಗೈತಿಹಾಸಿಕ ಕಾಲದ ಪಿತಾಮಹ – ರಾಬರ್ಟ್ ಬ್ರೂಸ್ ಫೂಟ್.
* ಅಕ್ಷರ ಪರಿಚಯವೇ ಇಲ್ಲದ ಕಾಲಘಟ್ಟವನ್ನು ಪ್ರಾಗೈತಿಹಾಸಿಕ ಕಾಲ ಎಂದು ಕರೆಯುವರು.
ಉದಾಹರಣೆ:- ಶಿಲಾಯುಗ
2. ಪೂರ್ವಭಾವಿ ಇತಿಹಾಸ ಕಾಲ(Proto Historic period).
* ಯಾವ ಕಾಲದಲ್ಲಿ ಅಕ್ಷರಗಳ ತಿಳುವಳಿಕೆ ಇದ್ದು ಅವುಗಳನ್ನು ಇಂದು ಓದಲು ಸಾಧ್ಯವಾಗಿಲ್ಲವೋ ಆ ಕಾಲಘಟ್ಟವನ್ನು ಪೂರ್ವಭಾವಿ ಇತಿಹಾಸ ಕಾಲ.
ಉದಾಹರಣೆ:- ಹರಪ್ಪ ನಾಗರಿಕತೆಯ ಕಾಲ
3. ಇತಿಹಾಸ ಕಾಲ ( Historic period).
* ಯಾವ ಕಾಲಘಟ್ಟದಲ್ಲಿ ಅಕ್ಷರ ಪರಿಚಯ ಇದ್ದು ಆ ಅಕ್ಷರಗಳನ್ನು ಇಂದು ಓದಲಾಗುವುದೋ ಆ ಕಾಲವನ್ನು ಇತಿಹಾಸ ಕಾಲ ಎನ್ನುವರು
ಪ್ರಾಗೈತಿಹಾಸಿಕ ಕಾಲದಲ್ಲಿ ಮೂರು ಹಂತಗಳಿವೆ.
1. ಹಳೆಯ ಶಿಲಾಯುಗ ( 5 ಲಕ್ಷ ವರ್ಷಗಳಿಂದ 12 ಸಾವಿರ ವರ್ಷಗಳವರೆಗೆ).
* ಮಾನವರ ಇತಿಹಾಸದ ಆರಂಭಿಕ ಪುರಾತತ್ವಿಕ(Archaeological) ಹಂತವಾಗಿದೆ.
ಹಳೆಯ ಶಿಲಾಯುಗದ ಪ್ರಮುಖ ನೆಲೆಗಳು.
* ಮಧ್ಯಪ್ರದೇಶದ ಬೋಲಾನ್ ಕಣಿವೆ
* ಕರ್ನಾಟಕದ ಹುಣಸಗಿ ಮತ್ತು ಬೈಚಬಾಳ ಪ್ರದೇಶ
* ಆಂಧ್ರ ಪ್ರದೇಶದ ಕರ್ನೂಲ್,ಅಮರಾವತಿ
* ತಮಿಳುನಾಡಿನ ಅತ್ತಿರಂಪಕ್ಕಂ
2. ಮಧ್ಯ ಶಿಲಾಯುಗ (12 ಸಾವಿರ ವರ್ಷಗಳಿಂದ ಒಂಬತ್ತು ಸಾವಿರ ವರ್ಷಗಳವರೆಗೆ).
* ಇದು ಹಳೇ ಶಿಲಾಯುಗ ಮತ್ತು ನವಾಶಿಲಾಯುಗದ ನಡುವಿನ ಸ್ಥಿತ್ಯಂತರ ಕಾಲ.
* ಮಾನವರು ದೊಡ್ಡ ದೊಡ್ಡ ಶಿಲಾ ಉಪಕರಣಗಳ ಬದಲು ಕೌಶಲ್ಯ ಭರಿತ ಕಿರು ಶಿಲಾಯುಗಗಳನ್ನು ಬಳಸಿದರೂ ಆದ್ದರಿಂದ ಈ ಕಾಲವನ್ನು ಸೂಕ್ಷ್ಮ ಶಿಲಾಯುಗ ಎಂದು ಕರೆಯುತ್ತಾರೆ.
ಮಧ್ಯ ಶಿಲಾಯುಗದ ಪ್ರಮುಖ ನೆಲೆಗಳು.
* ಮಧ್ಯಪ್ರದೇಶದ ಭಾಂಬೆಟ್ಕ್, ಆದಮಘರ್, ಕರ್ನಾಟಕದ ಬ್ರಹ್ಮಗಿರಿ,ಕಗನಹಳ್ಳಿ, ರಾಜಸ್ಥಾನದ ಬಾಗೊರ್
3. ನವ ಶಿಲಾಯುಗ ( 9000 ಸಾವಿರ ವರ್ಷಗಳಿಂದ 5000 ಸಾವಿರ ವರ್ಷಗಳವರೆಗೆ ).
* ಭಾರತ ಉಪಖಂಡದಲ್ಲಿ ಕೃಷಿಯ ಆರಂಭಿಕ ಕುರುವುಗಳು ಪಾಕಿಸ್ತಾನದ ಮೆಹರ್ ಗರ್ ನೆಲೆಯಲ್ಲಿ ಕಂಡು ಬಂದಿವೆ.
* ಕಾಶ್ಮೀರದ ಬುರ್ಜ್ ಹೋಮ್ ಪ್ರದೇಶದ ಜನರು ನೆಲದೊಳಗೆ ಗುಹೆಗಳನ್ನು ನಿರ್ಮಿಸಿಕೊಂಡಿದ್ದರು.
* ಬಳ್ಳಾರಿ ಸಮೀಪದ ಸಂಗನಕಲ್ಲು ಆಯುಧ ಉತ್ಪಾದನಾ ನೆಲೆಯಾಗಿತ್ತು.
ನವ ಶಿಲಾಯುಗದ ನೆಲೆಗಳು.
* ಕರ್ನಾಟಕದ ಬನಹಳ್ಳಿ, ಬ್ರಹ್ಮಗಿರಿ, ಬೂದಿಹಾಳ, ಹಳ್ಳೂರು, ಪಿಕ್ಲಿಹಾಳ, ಟಿ ನರಸೀಪುರ, ಉತ್ನೂರು,ಬಿಹಾರದ ಚಿರಾಂಡ್.
ಲೋಹಗಳ ಯುಗ
* ಮೊದಲು ಮಾನವರು ಬಳಸಿದ ಲೋಹ – ತಾಮ್ರ
ತಾಮ್ರ ಮತ್ತು ಕಂಚಿನ ಶಿಲಾಯುಗ
* ತಾಮ್ರ ಶಿಲಾಯುಗ ಅಥವಾ ಚಾಲ್ಕೋಲಿಥಿಕ್ ಯುಗ
* ಚಾಲ್ಕೋಲಿಥಿಕ್ ಎಂದರೆ ತಾಮ್ರದಶಿಲೆ ಎಂದರ್ಥ. ಇದು ಹರಪ್ಪ ಪೂರ್ವ ಸಂಸ್ಕೃತಿಗೆ ಸಂಬಂಧಿಸಿದ.
* ಮಾನವನಿಗೆ ಮೊದಲು ಗೊತ್ತಾದ ಲೋಹ – ತಾಮ್ರ
* ಮೊಟ್ಟಮೊದಲು ಉಪಯೋಗಿಸಿದ ಲೋಹ – ಬಂಗಾರವಾಗಿದೆಬಂಗಾರವಾಗಿದೆ.
ಕಬ್ಬಿಣ ಶಿಲಾಯುಗ
* ಕಬ್ಬಿಣ ಅತ್ಯಂತ ಹಗುರವಾದ ಲೋಹ ಇದು ದಕ್ಷಿಣ ಭಾರತದಲ್ಲಿ ತಾಮ್ರಕ್ಕೆ ಮೊದಲೇ ಬಳಕೆಯಲ್ಲಿತ್ತು.
* ಈ ಕಾಲವನ್ನು ಬೃಹತ್ ಶಿಲಾ ಸಂಸ್ಕೃತಿಯ ಕಾಲವೆಂದು ಕರೆಯುತ್ತಾರೆ.