ಭಾರತದ ಮುಂಗಾರಿನ ಮೇಲೆ ಹವಮಾನ ಬದಲಾವಣೆ ಪ್ರಭಾವ.

* ಜಾಗತಿಕ ತಾಪಮಾನದ ಹೆಚ್ಚಳದ ಕಾರಣದಿಂದ ಹವಮಾನ ಬದಲಾವಣೆಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿ ಮುಂಗಾರಿನಲ್ಲಿ ಹೆಚ್ಚಿನ ಪ್ರಮಾಣದ ವ್ಯತ್ಯಾಸಗಳು ಕಂಡು ಬರುತ್ತಿದ್ದು ಹವಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನದ ಹೆಚ್ಚಳದ ಕಾರಣದಿಂದ ಮಳೆಯ ಪ್ರಮಾಣ ಹೆಚ್ಚಳವಾಗಿದ್ದು ಹಾಗೆಯೇ ಒಣ ಋತುವಿನ ಅವಧಿಯು ಹೆಚ್ಚಳವಾಗಿದ್ದು ಇದರಿಂದ ಮಾನವ ಸಂಕುಲದ ಮೇಲೆ ದುಷ್ಟ ಪರಿಣಾಮ ಉಂಟಾಗುತ್ತಿದೆ.

  -: ಮುಖ್ಯಾಂಶಗಳು :-

* ಇತ್ತೀಚೆಗೆ ಜಾಗತಿಕ ತಾಪಮಾನದ ಹೆಚ್ಚಳದ ಕಾರಣದಿಂದ ಹವಮಾನ ಬದಲಾವಣೆಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿ ಭಾರತೀಯ ಮುಂಗಾರಿನ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿದೆ.

* ಮುಂಗಾರಿನ ಪ್ರವೃತಿಯಲ್ಲಿ ಬದಲಾವಣೆಗಳು ಉಂಟಾಗಿ ಖಾರಿಫ್ ಬೆಳೆಯ ಮೇಲೆ ದುಷ್ಟ ಪರಿಣಾಮ ಹೆಚ್ಚಳವಾಗಿದೆ.

* ಜಾಗತಿಕ ತಾಪಮಾನ ಹೆಚ್ಚಳವಾದ ಪರಿಣಾಮ ಹಿಮಾಲಯದ ಪ್ರದೇಶಗಳಲ್ಲಿ ಹಿಮ ನದಿಗಳು ಮುಂಗಾರಿಗೆ ಮುನ್ನವೇ ಕರಗುವ ಪ್ರವೃತ್ತಿಯನ್ನು ಪ್ರಾರಂಭಿಸಿದೆ.

* ಬಹುತೇಕ ವಾಯುಭಾರ ಕುಸಿತಗಳು ದಕ್ಷಿಣ ಭಾಗಕ್ಕೆ ಚಲಿಸುತ್ತವೆ.

-: ಹವಮಾನ ಬದಲಾವಣೆಯಿಂದ ಭಾರತೀಯ ಮುಂಗಾರಿನ ಮೇಲೆ ಪ್ರಭಾವ :-

* ಹವಮಾನ ಬದಲಾವಣೆ ಕಾರಣದಿಂದ ಮುಂಗಾರಿನ ದಿಕ್ಕು ಗಣನೀಯ ಬದಲಾವಣೆಯನ್ನು ಕಂಡಿದ್ದು ಕಡಿಮೆ ಒತ್ತಡದ ಪ್ರದೇಶಗಳು ಮತ್ತು ಅತಿ ಹೆಚ್ಚಿನ ಒತ್ತಡದ ಪ್ರದೇಶಗಳಲ್ಲಿಯೂ ಕೂಡ ಗಣನೀಯ ಬದಲಾವಣೆಯನ್ನು  ಕಳೆದ ಹಲವು ವರ್ಷಗಳಿಂದ ಕಂಡು ಬಂದಿದೆ.

* ಸ್ವಾಭಾವಿಕವಾಗಿ ಹಿಂದೂ ಮಹಾ ಸಾಗರದ ಉತ್ತರ ಭಾಗದಲ್ಲಿ ಹಾಗೂ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗುವ ಕಾರಣದಿಂದ ಈ ಪ್ರದೇಶಗಳಿಗೆ ಮುಂಗಾರಿನ ಸಂಚಾರ ವಾಗುತ್ತದೆ. ಆದರೆ ಕಡಿಮೆ ಒತ್ತಡದ ಪ್ರದೇಶದ ಬದಲಾವಣೆಯಾಗುತ್ತಿರುವ ಕಾರಣದಿಂದ ಮುಂಗಾರಿನ ಪ್ರವೃತಿಯಲ್ಲಿ ಕೂಡ ಬದಲಾವಣೆ ಕಾಣುವಂತದ್ದಾಗಿದೆ.

* ಜಾರ್ಖಂಡ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಸ್ವಾಭಾವಿಕವಾಗಿ ಪ್ರತಿ ವರ್ಷ ಬೀಳುವ ಮಳೆಗಿಂತ ಕಡಿಮೆ ಮಳೆ ಉಂಟಾಗಿದೆ.

* 2023ರಲ್ಲಿ ಬಂಗಾಳ ಕೊಲ್ಲಿಯಲ್ಲಿ ಮೂರು ಬಾರಿ ವಾಯುಭಾರ ಕುಸಿತ ಉಂಟಾಗಿ ಮಧ್ಯ ಭಾರತದಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದ ಮಳೆ ಉಂಟಾಗಿದೆ.

* 2022ರ ಅವಧಿಯಲ್ಲಿ ಅತಿ ಹೆಚ್ಚಿನ ಮಳೆಯಾಗಿದ್ದು, 1902ರ ನಂತರ ಅತಿ ಹೆಚ್ಚಿನ  ಮಳೆಯನ್ನು ಕಂಡ ವರ್ಷವಾಗಿದೆ.

 -: ಕಾರಣಗಳು :-

* ಹಿಂದೂ ಮಹಾಸಾಗರದ ಪೂರ್ವ ಭಾಗದಲ್ಲಿ ಸ್ವಾಭಾವಿಕ ಪ್ರಮಾಣಕ್ಕಿಂತ ತಾಪಮಾನ ಹೆಚ್ಚಳ ಉಂಟಾಗುತ್ತಿರುವುದು ಕೂಡ ಕಾರಣವಾಗಿದೆ.

* ಬಹುತೇಕ ವಾಯುಭಾರ ಕುಸಿತಗಳು ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾಗಕ್ಕೆ ಚಲಿಸುತ್ತಿರುವುದು ಇತ್ತೀಚಿನ ಪ್ರವೃತ್ತಿಯಲ್ಲಿ ಒಂದಾಗಿದೆ.

* ಜಾಗತಿಕ ತಾಪಮಾನದಿಂದ ಹಿಮಾಲಯದ ಪ್ರದೇಶಗಳಲ್ಲಿ ಹಿಮ ನದಿಗಳು ಮುಂಗಾರಿಗು ಮುನ್ನವೇ ಕರಗುವ ಪ್ರವೃತ್ತಿಯನ್ನು ಪ್ರಾರಂಭಿಸಿದೆ.

* ಅರಬ್ಬಿ ಸಮುದ್ರದ ಪಶ್ಚಿಮ ಭಾಗದಲ್ಲಿ ಹಾಗೂ ಹಿಂದೂ ಮಹಾಸಾಗರದ ಪೂರ್ವ ಭಾಗದಲ್ಲಿ ತಾಪಮಾನ ಗಣನೀಯವಾಗಿ ಬದಲಾವಣೆಗಳನ್ನು ಕಾಣುತ್ತಿರುವ ಕಾರಣದಿಂದ ಮುಂಗಾರಿನ ಪ್ರವೃತ್ತಿ ಬದಲಾಗುತ್ತಿದೆ.

* ಆಸ್ಟ್ರೇಲಿಯಾ ಮತ್ತು ಹಿಂದೂ ಮಹಾಸಾಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಪ್ರವೃತ್ತಿ ಗಣನೀಯ ಬದಲಾವಣೆಯಾಗುವ ಸಾಧ್ಯತೆಗಳು ಮತ್ತಷ್ಟು ಹೆಚ್ಚಳವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

-: ಪರಿಣಾಮಗಳು :-

* ಮುಂಗಾರಿನ ಪ್ರವೃತ್ತಿಯಲ್ಲಿ ಬದಲಾವಣೆಗಳು ಉಂಟಾದಂತೆಲ್ಲ ಖಾರಿಫ್ ಬೆಳೆಯ ಮೇಲೆ ದುಷ್ಟ ಪರಿಣಾಮ ಹೆಚ್ಚಳವಾಗುವ ಸಾಧ್ಯತೆ ಇದೆ.

* ಅದರಲ್ಲಿಯೂ ಅಕ್ಕಿಯ ಉತ್ಪಾದನೆಯ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

* ಖಾರಿಫ್ ಋತುವಿನ ಸಂದರ್ಭದಲ್ಲಿ ಶೇಕಡ 50 ಕ್ಕಿಂತ  ಹೆಚ್ಚಿನ ಪ್ರಮಾಣದ ಆಹಾರ ಧಾನ್ಯಗಳು ಉತ್ಪಾದನೆಯಾಗುತ್ತಿದ್ದು , ಮುಂಗಾರು ಪ್ರವೃತ್ತಿಯಲ್ಲಿ ಏರಿಳಿತ ಉಂಟಾದಂತೆಲ್ಲ ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ದುಷ್ಟ ಪರಿಣಾಮ ಉಂಟಾಗಿ ದರಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

* ಇದರಿಂದ ಹಣದುಬ್ಬರದ ಮೇಲೆ ಋಣಾತ್ಮಕ ಪರಿಣಾಮಗಳು ಬೀರುವ ಸಾಧ್ಯತೆ ಇರುತ್ತದೆ.

* ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಅಕ್ಕಿಯ ಉತ್ಪಾದನೆಯಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಶೇಕಡ 33ರಷ್ಟು  ಕೊಡುಗೆಯನ್ನು ನೀಡುತ್ತಿದ್ದು, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದರೂ ಕೂಡ ಬೆಳೆ ಹಾನಿಯ ಕಾರಣದಿಂದ ಅಕ್ಕಿಯ ಉತ್ಪಾದನೆಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿ ಕೊರತೆ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿದೆ.

* ಉತ್ಪಾದನೆಯ ಪ್ರಮಾಣದಲ್ಲಿ ಮಾತ್ರವಲ್ಲದೆ ಮಳೆ ಏರಿಳಿತದ ಕಾರಣದಿಂದ ಆಹಾರ ಧಾನ್ಯಗಳ ಗುಣಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಹಾಗೂ ಪೌಷ್ಟಿಕಾಂಶದ ಪ್ರಮಾಣದಲ್ಲಿಯೂ ವ್ಯತ್ಯಾಸಗಳು ಉಂಟಾಗುವ ಸಾಧ್ಯತೆಗಳಿವೆ.

* ಜಾಗತಿಕ ತಾಪಮಾನ ಹಾಗೂ ಹವಮಾನದ ಬದಲಾವಣೆ ಪ್ರಸ್ತುತ ದಿನದ ಸಮಸ್ಯೆಯಾಗಿರುವುದಿಲ್ಲ ಬದಲಾಗಿ ಈ ಸಮಸ್ಯೆಗೆ ಹಲವು ದಶಕಗಳಿಂದ ಪರಿಸರದ ಮೇಲೆ ಉಂಟಾಗಿರುವ ಋಣಾತ್ಮಕ ಪರಿಣಾಮಗಳಿಂದ ಪ್ರಸ್ತುತ ಈ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

* ಇನ್ನಾದರೂ ಜಾಗತಿಕ ಮಟ್ಟದಲ್ಲಿ , ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಸ್ಥಳೀಯ ಮಟ್ಟದಲ್ಲಿ ಪರಿಸರ ಹಾನಿಯನ್ನು ತಡೆಗಟ್ಟುವ ಮೂಲಕ ಹವಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದಂತಹ ಪರಿಸ್ಥಿತಿಗಳನ್ನು ಸೂಕ್ತವಾಗಿ ನಿರ್ವಹಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾಹುತಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

WhatsApp Group Join Now
Telegram Group Join Now