-: ಸಂವಿಧಾನದ ಇತ್ತೀಚಿನ ತಿದ್ದುಪಡಿಗಳು :-
* 105 ನೇ ತಿದ್ದುಪಡಿ -2021
* 100 ನೇ ತಿದ್ದುಪಡಿ ಕಾಯ್ದೆ – 2015
ದಿನಾಂಕ – 2015 ಮೇ 6 ಮತ್ತು 7
* 119 ನೇ ತಿದ್ದುಪಡಿ ಮಸೂದೆ 100ನೇ ತಿದ್ದುಪಡಿ ಕಾಯ್ದೆಯಾಯಿತು.
ವಿಷಯ :- ಲ್ಯಾಂಡ್ ಬೌಂಡರಿ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಸಂವಿಧಾನದ ಮೊದಲ ಸೂಚಿಯನ್ನು ತಿದ್ದುಪಡಿ ಮಾಡಲಾಯಿತು. ಇದರ ಪ್ರಕಾರ ಬಾಂಗ್ಲಾದೇಶದಲ್ಲಿ ಇದ್ದ ಭಾರತದ 111 ಸುತ್ತುವರಿದ ಪ್ರದೇಶಗಳನ್ನು ಮತ್ತು ಭಾರತದಲ್ಲಿದ್ದ 51 ಸುತ್ತುವರಿದ ಪ್ರದೇಶಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು.
* 101 ನೇ ತಿದ್ದುಪಡಿ ಕಾಯ್ದೆ – 2017
ದಿನಾಂಕ-2017 ಜುಲೈ 1
ಇದು 122 ನೇ ಸಂವಿಧಾನ ತಿದ್ದುಪಡಿ ಮಸೂದೆ ಆಗಿದೆ. ಈ ಮಸೂದೆ 2017 ಏಪ್ರಿಲ್ ಒಂದರಿಂದ 101ನೇ ತಿದ್ದುಪಡಿ ಕಾಯ್ದೆಯಾಗಿ ಜಾರಿಗೆ ಬಂದಿದೆ.
ವಿಷಯ :- ಸಂಸತ್ತಿನ ಉಭಯ ಸದನಗಳು 2016ರಲ್ಲಿ ಸರಕು ಮತ್ತು ಸೇವೆಗಳ ತೆರಿಗೆ ಮಸೂದೆ ಅಂದರೆ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಗೆ ಅನುಮೋದನೆ ನೀಡಿವೆ.
* 102ನೇ ಸಂವಿಧಾನ ತಿದ್ದುಪಡಿ ಕಾಯ್ದೆ -2018.
ದಿನಾಂಕ – 2018 ಆಗಸ್ಟ್ 11
ವಿಷಯ:- ಈ ಕಾಯ್ದೆಯ 1993ರಲ್ಲಿ ಸಂಸತ್ತಿನ ಕಾಯ್ದೆ ಅಡಿಯಲ್ಲಿ ಸ್ಥಾಪನೆಯಾದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನೀಡಿದೆ. ಈ ಕಾಯ್ದೆಯು ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ನಿರ್ವಹಿಸಬೇಕಾದ ಕಾರ್ಯಗಳಿಂದ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವನ್ನು ಮುಕ್ತಗೊಳಿಸಿದೆ. ಈ ಕಾಯ್ದೆಯ ರಾಜ್ಯತ್ವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ನಿರ್ದಿಷ್ಟ ಪಡಿಸುವ ಅಧಿಕಾರವನ್ನು ರಾಶ್ಯಾಧ್ಯಕ್ಷರಿಗೆ ನೀಡಿದೆ.
* 103 ನೇ ಸಂವಿಧಾನ ತಿದ್ದುಪಡಿಗೆ ಕಾಯ್ದೆ- 2019
ದಿನಾಂಕ – 2019 ಜನವರಿ 12
ವಿಷಯ :- ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಶೇಕಡಾ 10 ರಷ್ಟು ಸ್ಥಾನಗಳನ್ನು ಮೀಸಲಿಡಲು ಅವಕಾಶ ಕಲ್ಪಿಸಿದೆ.
ಸಂವಿಧಾನಗಳ 15ನೇ ವಿಧಿಗೆ (6) ನೀ ಉಪವಿಧಿಯನ್ನು ಸೇರ್ಪಡೆ ಮಾಡಿ ಸಾರ್ವಜನಿಕ ಮತ್ತು ಖಾಸಗಿ ಅನುದಾನಿತ ಸಂಸ್ಥೆಗಳಲ್ಲಿ ( ಅಲ್ಪಸಂಖ್ಯಾತ ಸಂಸ್ಥೆಗಳನ್ನು ಹೊರತುಪಡಿಸಿ) ಶೇಕಡ 10 ಸ್ಥಾನಗಳನ್ನು ಮೀಸಲಿಡಲಾಗಿದೆ.
16ನೇ ವಿಧಿಗೆ (6) ನೆ ಉಪ ವಿಧಿಯನ್ನು ಸೇರ್ಪಡೆ ಮಾಡಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡ 10 ಸ್ಥಾನಗಳನ್ನು ಮೀಸಲಿಡಲು ಅವಕಾಶ ಕಲ್ಪಿಸಲಾಗಿದೆ.
* 104ನೇ ಸಂವಿಧಾನ ತಿದ್ದುಪಡಿ ಕಾಯ್ದೆ -2020
ದಿನಾಂಕ – 2020 ಜನವರಿ 25
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ಮೀಸಲಾತಿಯನ್ನು 2030 ರ ವರೆಗೆ ಮುಂದುವರಿಸಲಾಗಿದೆ. ಅದೇ ರೀತಿಯಾಗಿ ಆನ್ಲೈನ್ ನಲ್ಲಿ ಇರುವ ಮೀಸಲಾತಿಯನ್ನು ರದ್ದು ಪಡಿಸಲಾಗಿದೆ.
-: ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ :-
ಡಿಸೆಂಬರ್ 9 – 1946 ( ಅಧ್ಯಕ್ಷರು- ಡಾ. ಬಾಬು ರಾಜೇಂದ್ರ ಪ್ರಸಾದ್, ಹಂಗಾಮಿ ಅಧ್ಯಕ್ಷರು – ಸಚ್ಚಿದಾನಂದ ಸಿನ್ಹಾ, ಖಾಯಂ ಉಪಾಧ್ಯಕ್ಷರು – ಟಿ.ಟಿ. ಕೃಷ್ಣಮಾಚಾರಿ.
-: ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರು :-
ಡಾಕ್ಟರ್ ಬಿ ಆರ್ ಅಂಬೇಡ್ಕರ್ ( ಸಂವಿಧಾನ ಶಿಲ್ಪಿ ) ರಚನಾ ಅವಧಿ ಎರಡು ವರ್ಷ, 11 ತಿಂಗಳು, 18 ದಿನಗಳು.
-: ಧ್ಯೇಯಗಳ ನಿರ್ಣಯವನ್ನು ಮಂಡಿಸಿದ್ದು :-
ಡಿಸೆಂಬರ್ 13- 1946 ಅಂಗೀಕರಿಸಿದ್ದು 22 ಜನವರಿ 1947.
-: ಸಂವಿಧಾನದ ಪ್ರಸ್ತಾವನೆ:-
ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯ ( ಕ್ರಮವಾಗಿ).
* ಪ್ರಸ್ತಾವನೆ ರಾಜಕೀಯ ಜಾತಕ – ಕೆ.ಎಂ. ಮುನ್ಷಿ
-: ಭಾರತದ ಸಂವಿಧಾನದ ಲಕ್ಷಣಗಳು :-
* ಲಿಖಿತ ಮತ್ತು ಬೃಹತ್ ಸಂವಿಧಾನ.
* ನಮ್ಯ ಮತ್ತು ಅನಮ್ಯ ಸಂವಿಧಾನ.
* ಸಂಸದೀಯ ಸರ್ಕಾರ ಪದ್ಧತಿ.
* ಗಣತಂತ್ರ ವ್ಯವಸ್ಥೆ.
* ಸಂಯುಕ್ತ ಪದ್ಧತಿ.
* ಮೂಲಭೂತ ಹಕ್ಕುಗಳು.
* ಮೂಲಭೂತ ಕರ್ತವ್ಯಗಳು.
* ರಾಜ್ಯ ನಿರ್ದೇಶಕ ತತ್ವಗಳು.
* ಸ್ವತಂತ್ರ ಮತ್ತು ಏಕಿ ಕೃತ ನ್ಯಾಯಾಂಗ ವ್ಯವಸ್ಥೆ.
* ಏಕ ಪೌರತ್ವ .
* ವಯಸ್ಕರ ಮತದಾನ ಪದ್ಧತಿ.
* ದ್ವಿ ಸದನ ಶಾಸಕಾಂಗ.
* ಪಕ್ಷ ಪದ್ದತಿ.