-: ಪ್ರಸ್ತುತ ಸಂವಿಧಾನದಲ್ಲಿ ಆಗಿರುವ ಬದಲಾವಣೆಗಳು:-
* ಭಾಗಗಳು-25
* ಅನುಸೂಚಿಗಳು -12
* ತಿದ್ದುಪಡಿಗಳು – 105(OBC ಮಸೂದೆ)
* ವಿಧಿಗಳು -465(470)
ಮೂಲ ಸಂವಿಧಾನದಲ್ಲಿರುವ ಅಂಶಗಳು ಅಂದರೆ ಸಂವಿಧಾನ ಜಾರಿಗೆ ಬಂದಾಗಿನಿಂದ( ಸಂವಿಧಾನ ಜಾರಿಗೆ ಬಂದದ್ದು 1950 ಜನವರಿ 26).
* ಆದರೆ ಸಂವಿಧಾನವನ್ನು ಅಂಗೀಕರಿಸಿದ ವರ್ಷ 1949 ನವಂಬರ್ 26.
* ಭಾಗಗಳು -22
* ಅನುಸೂಚಿಗಳು -8
* ವಿಧಿಗಳು -395
-: ಸಂವಿಧಾನದ ಭಾಗಗಳು:-
ಭಾಗಗಳು ಮತ್ತು ವಿಷಯ ವಸ್ತು.
* ಭಾಗ-1 = ಒಕ್ಕೂಟ ಮತ್ತು ಅದರ ಭೂಪ್ರದೇಶ.
* ಭಾಗ-2 = ಪೌರತ್ವ
* ಭಾಗ-3 = ಮೂಲಭೂತ ಹಕ್ಕುಗಳು
* ಭಾಗ-4 = ರಾಜ್ಯ ನಿರ್ದೇಶಕ ತತ್ವಗಳು
* ಭಾಗ-4 ಎ = ಮೂಲಭೂತ ಕರ್ತವ್ಯಗಳು
* ಭಾಗ-5 = ಕೇಂದ್ರ ಸರ್ಕಾರ
* ಭಾಗ-6 = ರಾಜ್ಯ ಸರ್ಕಾರ
* ಭಾಗ-7 = ದೇಶಿಯ ಸಂಸ್ಥಾನಗಳಿಗೆ ಸಂಬಂಧಪಟ್ಟಂತೆ( ರದ್ದುಪಡಿಸಲಾಗಿದೆ).
* ಭಾಗ-8 = ಕೇಂದ್ರಾಡಳಿತ ಪ್ರದೇಶಗಳು.
* ಭಾಗ-9 = ಪಂಚಾಯತ್ ಸಂಸ್ಥೆಗಳು.
* ಭಾಗ-9ಎ = ಮುನಿಸಿಪಾಲಿಟಿಗಳು.
* ಭಾಗ-9 ಬಿ = ಸಹಕಾರ ಸಂಘಗಳು.
* ಭಾಗ-10 = ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು.
* ಭಾಗ-11 = ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧ.
* ಭಾಗ-12 = ಹಣಕಾಸು,ಆಸ್ತಿ, ಒಪ್ಪಂದ ವಿವಾದ.
* ಭಾಗ-13 = ಭಾರತದೊಳಗೆ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧ.
* ಭಾಗ-14 = ಕೇಂದ್ರ ಮತ್ತು ರಾಜ್ಯಗಳ ಆಡಳಿತ ಸೇವೆಗಳು.
* ಭಾಗ-14 ಎ = ಟ್ರಿಬುನಲ್ ಗಳು ( ನ್ಯಾಯಾಧಿಕರಣ).
* ಭಾಗ-15 = ಚುನಾವಣೆಗಳು
* ಭಾಗ-16 = ಕೆಲ ವರ್ಗಗಳಿಗೆ ಸಂಬಂಧಿಸಿದ ವಿಶೇಷ ಸವಲತ್ತು.
* ಭಾಗ-17 = ಅಧಿಕೃತ ಭಾಷೆ ( ಆಡಳಿತ ಭಾಷೆ).
* ಭಾಗ-18 = ತುರ್ತು ಪರಿಸ್ಥಿತಿಗಳು.
* ಭಾಗ-19 = ಸಂಕೀರ್ಣ ( ಮಿಸಲೆನಿಯಸ್).
* ಭಾಗ-20 = ಸಂವಿಧಾನದ ತಿದ್ದುಪಡಿಗಳು.
* ಭಾಗ- 21 = ತಾತ್ಕಾಲಿಕ ಮತ್ತು ವಿಶೇಷ ನಿಯಮಗಳು.
* ಭಾಗ-22 = ಕಿರು ಶೀರ್ಷಿಕೆ, ಪ್ರಾರಂಭ ಮತ್ತು ಹಿಂದಿಯಲ್ಲಿ ಸಂವಿಧಾನದ ಪ್ರಕಟಣೆ ಮತ್ತು ರದ್ದು ಪಡಿಸುವುದು.
ಪ್ರಸ್ತುತ ಸಂವಿಧಾನದಲ್ಲಿ ಒಟ್ಟು 25 ಭಾಗಗಳು ಮೂಲ ಸಂಖ್ಯೆ ಬದಲಾವಣೆಯಾಗದೆ 7 ನೇ ಭಾಗವನ್ನು ತೆಗೆದುಹಾಕಿ ಅಂದರೆ ದೇಶಿಯ ಸಂಸ್ಥಾನಗಳಿಗೆ ಸಂಬಂಧಿಸಿದ ಭಾಗವನ್ನು ತೆಗೆದುಹಾಕಿ
ಸಂವಿಧಾನದಲ್ಲಿ ಭಾಗ- 4 ಎ ಮೂಲಭೂತ ಕರ್ತವ್ಯಗಳು.
* ಭಾಗ – 9 ಎ ಮುನಿಸಿಪಾಲಿಟಿಗಳು.
* ಭಾಗ-9 ಬಿ ಸಹಕಾರ ಸಂಘಗಳು
* ಭಾಗ-14 ಎ ಟ್ರಿಬುನಲ್ ಗಳು ಅಂದರೆ ನ್ಯಾಯಾಧಿಕರಣ ಸೇರ್ಪಡೆಯಾಗಿವೆ.
ಹೀಗಾಗಿ ಪ್ರಸ್ತುತ ಸಂವಿಧಾನದಲ್ಲಿ ಇರುವ ಒಟ್ಟು ಭಾಗಗಳು 25 ( ಮೂಲ ಸಂಖ್ಯೆ ಬದಲಾವಣೆಯಾಗಿದೆ).
-: ಅನುಸೂಚಿಗಳು ( Schedule) :-
* ಅನುಸೂಚಿ 1 = 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ ವಿವರಗಳು.
* ಅನುಸೂಚಿ 2 = ಸಂಬಳ ಮತ್ತು ಸವಲತ್ತುಗಳು ( ರಾಷ್ಟ್ರಪತಿ, ರಾಜ್ಯಪಾಲ, ಕೇಂದ್ರ – ರಾಜ್ಯ ಶಾಸಕಾಂಗದ ಸಭಾಪತಿಗಳ, ಸುಪ್ರೀಂ ಕೋರ್ಟ್, ಹೈಕೋರ್ಟ್, ನ್ಯಾಯಾಧೀಶರ ಹಾಗೂ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರಿಗೆ ಸಂಬಂಧಪಟ್ಟಂತೆ).
* ಅನುಸೂಚಿ 3 = ಪ್ರಮಾಣವಚನ ( ಸಚಿವರಿಗೆ, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ, ನ್ಯಾಯಾಧೀಶರಿಗೆ ಮತ್ತು ಕಂಟ್ರೋಲ್- ಆಡಿಟರ್ ಜನರಲ್ ಗೆ ಪ್ರತಿಜ್ಞಾವಿಧಿ ವಿಧಾನ.
* ಅನುಸೂಚಿ 4 = ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಸ್ಥಾನಗಳ ಹಂಚಿಕೆ.
* ಅನುಸೂಚಿ 5 = ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟು ಪ್ರದೇಶ.
* ಅನುಸೂಚಿ 6 = ಈಶಾನ್ಯ ಪ್ರದೇಶಕ್ಕೆ ಸಂಬಂಧಪಟ್ಟಂತೆ ನಿಯಮಗಳು.
* ಅನುಸೂಚಿ 7 = ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರಗಳ ಹಂಚಿಕೆ.
* ಅನುಸೂಚಿ 8 = ಭಾರತದ 22 ಭಾಷೆಗಳನ್ನು ನಮೂದಿಸಿರುವುದು.
ಮೂಲ ಸಂವಿಧಾನದಲ್ಲಿ ಎಂಟು ಅನುಸೂಚಿಗಳನ್ನು ನೀಡಲಾಗಿತ್ತು. ಪ್ರಸ್ತುತವಾಗಿ ಸೇರ್ಪಡೆಯಾಗಿರುವ ಅನುಸೂಚಿಗಳು
* ಅನುಸೂಚಿ 9 = ಭೂ ಸುಧಾರಣೆ ( ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗೀಕರಿಸಿದ ಭೂಸುಧಾರಣೆ ಮತ್ತು ಇತರೆ ಕೆಲವು ಮುಖ್ಯ ಕಾಯ್ದೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ತಡೆಯಲು ನಮೂದಿಸಲಾಗಿದೆ).
* ಅನುಸೂಚಿ 10 = ಪಕ್ಷಾಂತರ ನಿಷೇಧ ಕಾನೂನು .
* ಅನುಸೂಚಿ 11 = ಪಂಚಾಯತ್ ಸಂಸ್ಥೆಗಳು ಅಧಿಕಾರಗಳು ಮತ್ತು ಜವಾಬ್ದಾರಿಗಳು.
* ಅನುಸೂಚಿ 12 = ಮುನ್ಸಿಪಾಲಿಟಿಗಳ ಅಧಿಕಾರಗಳು ಮತ್ತು ಜವಾಬ್ದಾರಿಗಳು.
ಅಂದರೆ ಪ್ರಸ್ತುತವಾಗಿ ಸಂವಿಧಾನದಲ್ಲಿ 12 ಅನುಸೂಚಿಗಳು ಇವೆ.