ಮರಾಠರು. TET, GPSTR, HSTR, PDO, FDA, SDA All Competative exam notes.

   -: ಛತ್ರಪತಿ ಶಿವಾಜಿ :-

* ಕ್ರಿ.ಶ 1648ರಲ್ಲಿ ತೋರಣಗಲ್ಲು ಕೋಟೆಯನ್ನು ( ಬಿಜಾಪುರ) ವಶಪಡಿಸಿಕೊಂಡನು. ಇದು ಆದಿಲ್ ಷಾಹಿಯ ಅಧೀನದಲ್ಲಿತ್ತು. ನಂತರ ರಾಯಗಡ, ಚಾಕಣ್, ಸಿಂಹಗಡ, ಪುರಂದರಗಡೆಗಗಳನ್ನು ವಶಪಡಿಸಿಕೊಂಡನು.

* ಕ್ರಿ.ಶ 1655ರಲ್ಲಿ ಶಿವಾಜಿಯು ಕೊಂಕಣ ಪ್ರದೇಶದ ಕಲ್ಯಾಣ, ಜಾವಳಿ, ಪ್ರದೇಶಗಳನ್ನು ವಶಪಡಿಸಿಕೊಂಡನು.

* ಕ್ರಿ.ಶ. 1660 ರಲ್ಲಿ ಔರಂಗಜೇಬನು ಶಿವಾಜಿಯನ್ನು ಸೋಲಿಸಲು ಶಾಯಿಸ್ತಾ ಖಾನನ್ನು ಕಳುಹಿಸಿದನು.

* ಶಿವಾಜಿಯನ್ನು ನಿಗ್ರಹಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ರಲ್ಲಿ ಶಿವಾಜಿಯನ್ನು ಸೋಲಿಸಿ ” ಪುರಂದರ ಒಪ್ಪಂದ” ವನ್ನು ಮಾಡಿಕೊಂಡುನು.

* ಕ್ರಿ.ಶ 1674 ರಲ್ಲಿ ರಾಯಗಡದಲ್ಲಿ ಕಿರೀಟಧಾರಣೆ ಮಾಡಿಕೊಂಂಡು ” ಛತ್ರಪತಿ ಶಿವಾಜಿ” ಎನಿಸಿಕೊಂಡನು.

  ಶಿವಾಜಿಯ ಆಡಳಿತ.

ಶಿವಾಜಿ ತನ್ನ ರಾಜ್ಯವನ್ನು ಅನೇಕ ಪ್ರಾಂತ್ಯಗಳಾಗಿ ವಿಂಗಡಿಸಿದ್ದನು. ಅವುಗಳನ್ನು ಸ್ವರಾಜ್ಯ ಮತ್ತು ಮೊಘಲರ ರಾಜ್ಯಗಳೆಂದು ಕರೆಯುತ್ತಿದ್ದರು. ಮರಾಠಿ ಆಡಳಿತ ಭಾಷೆಯಾಗಿತ್ತು. ಸರ್ಕಾರದ ಮುಖ್ಯಸ್ಥನಾಗಿದ್ದ ದೊರೆಗೆ ಆಡಳಿತದಲ್ಲಿ ನೆರವು ನೀಡಲು ಅಷ್ಟ ಪ್ರಧಾನರೆಂಬ ಮಂತ್ರಿಗಳಿದ್ದರು.

   ಕಂದಾಯ ವ್ಯವಸ್ಥೆ.

ಕಂದಾಯವನ್ನು ಹಣದ ಅಥವಾ ವಸ್ತು ರೂಪದಲ್ಲಿ ನೀಡಬೇಕಿತ್ತು. ಚೌತ್ ಹಾಗೂ ಸರದೇಶಮುಖಿಯೆಂಬ ಭೂ ಕಂದಾಯಗಳಿದ್ದವು.

          ಸೈನ್ಯ.

ಮರಾಠ ಸೈನ್ಯದಲ್ಲಿ ಕಾಲ್ದಳ, ಗಜದಳ, ಅಶ್ವದಳ ಮತ್ತು ಫಿರಂಗಿದಳ ಗಳಿದ್ದವು. ರಾಯಗಡ, ರಾಜಗಡ, ತೋರಣ ಗಡ, ಪ್ರತಾಪಗಡ ಮತ್ತು ಸಿಂಹಗಡಗಳಲ್ಲಿ ಪ್ರಮುಖ ಕೋಟೆಗಳಿದ್ದವು. ಹವಾಲ್ದಾರ್ ಕೋಟೆಯ ಮೇಲ್ವಿಚಾರಕನಾಗಿದ್ದನು. ಸೈನ್ಯದಲ್ಲಿ ಅನೇಕ ಚಿಕ್ಕ ಘಟಕಗಳಿದ್ದವು. ಗೆರಿಲ್ಲಾ ಯುದ್ಧ ತಂತ್ರಗಾರಿಕೆಯಲ್ಲಿ ಶಿವಾಜಿ ಸೈನಿಕರು ವಿಶೇಷ ತರಬೇತಿ ಪಡೆದಿದ್ದರು.

* ಕ್ರಿ.ಶ 1680 ರಲ್ಲಿ ಶಿವಾಜಿಯು ಮರಣವನ್ನಪ್ಪಿದನು. ಇವನ ನಂತರ ಇವನ ಮಗ ‘ ಸಾಂಬಾಜಿ’ ಅಧಿಕಾರಕ್ಕೆ ಬಂದನು, ನಂತರ ಕೊನೆಯ ದೊರೆ ಸಾಹು ಬರುತ್ತಾನೆ. ಇವನ ಆಳ್ವಿಕೆಯ ಕಾಲದಲ್ಲಿ ಪೇಶ್ವೆಗಳು ಪ್ರಬಲರಾದರು.

    -: ಪೇಶ್ವೆಗಳು :-

* ಬಾಲಾಜಿ ವಿಶ್ವನಾಥ್ ( 1713-1720).

ಬಾಲಾಜಿ ವಿಶ್ವನಾಥನ ಮರಾಠರ ಮೊದಲ ಪೇಶ್ವೆಯಾಗಿದ್ದು ಇವನನ್ನು ಮರಾಠ ರಾಜ್ಯದ ಎರಡನೇ ಸ್ಥಾಪಕ ಎಂದು ಕರೆಯಲಾಗುತ್ತದೆ.

* ಒಂದನೇ ಬಾಜಿರಾವ್(1720-1740).

ಒಂದನೇ ಬಾಜಿ ರಾವನಿಗೆ ಇತಿಹಾಸದಲ್ಲಿ ” ಎರಡನೇ ಶಿವಾಜಿ” ಎಂದು ಕರೆಯಲಾಗಿದೆ.

      ಸಾಧನೆಗಳು.

ಕ್ರಿ.ಶ 1723 ರಲ್ಲಿ ‘ ಮಾಳ್ವ’ ರಾಜ್ಯವನ್ನು ಗೆದ್ದುಕೊಂಡನು. ಈತನು ಬುಂದೇಲಖಂಡದ ಛತ್ರ ಸಾಲನಿಗೆ ಮೊಘಲರ ವಿರುದ್ಧ ಸಹಾಯ ಮಾಡಿದನು.

ಕ್ರಿ.ಶ 1739 ರಲ್ಲಿ ಪೋರ್ಚುಗೀಸರ ವಶದಲ್ಲಿದ್ದ ಸಾಲ್ಸೆಟ್ ಮತ್ತು ಬಸ್ಸಿನ್ ಬಂದರುಗಳು ಮರಾಠರ ವಶವಾದವು.

-: ಮೊದಲ ಆಂಗ್ಲೋ ಮರಾಠ ಯುದ್ಧ (1775-1782):-

* ಬಕ್ಸಾರ್ ಕದನದಲ್ಲಿ ಸೋತ ಬ್ರಿಟಿಷರ ಆಶ್ರಯದಲ್ಲಿದ್ದ ಮೊಗಲ್ ದೊರೆ ಎರಡನೇ ಷಾ ಆಲಂ ನನ್ನು ಮರಾಠರು ಕರೆತಂದು ಮತ್ತೆ ದೆಹಲಿ ಸಿಂಹಾಸನದ ಮೇಲೆ ಕೂರಿಸಿದರು.

* ಎರಡನೇ ಷಾ ಆಲಂ ಬ್ರಿಟಿಷರಿಗೆ ನೀಡಿದ್ದ ಮತ್ತು ಅಲಹಾಬಾದ್ಗಳನ್ನು ಮರಾಠರಿಗೆ ನೀಡಿದನು. ಇದರಿಂದ ಬ್ರಿಟಿಷರು ಮತ್ತು ಮಾರಾಟರಿಗೂ ವೈರತ್ವ ಉಂಟಾಯಿತು.

* ಇದೇ ಸಮಯದಲ್ಲಿ ಮರಾಠರ ಬಲಿಷ್ಠ ಪೇಶ್ವೆ ” ಮಾಧವರಾವ್ ” ತೀರಿಕೊಂಡಿದ್ದು ಮರಾಠರಿಗೆ ತುಂಬಲಾಗದ ನಷ್ಟವಾಗಿತ್ತು.

* ನಂತರ ಪೇಶ್ವೆಯ ಸ್ಥಾನಕ್ಕೆ ಮಾದವರಾವನ ತಮ್ಮ ನಾರಾಯಣನು ಬಂದನಾದರೂ ಅವನನ್ನು ಅವನ ಚಿಕ್ಕಪ್ಪ ರಘೋಬಾ( ರಘುನಾಥ ರಾವ್) ನು ಕೊಲೆ ಮಾಡಿದನು. ಇದರಿಂದ ಪೇಶ್ವೆಯ ಸ್ಥಾನಕ್ಕೆ ಕಲಹ ಏರ್ಪಟ್ಟಿತು.

* ನಾನಾ ಫಡ್ನವೀಸ್ನ ನೇತೃತ್ವದಲ್ಲಿ ಪೇಶ್ವೆ ಸ್ಥಾನಕ್ಕೆ ಆಕಾಂಕ್ಷಿ ಯಾದ ರಘೋಬನ ಬದಲು ಅವನ ನಾರಾಯಣನ ಮಗ ಎರಡನೇ ಮಾದವರಾವ್ ಗೆ ಮರಾಠ ಒಕ್ಕೂಟ ಪಟ್ಟ ಕಟ್ಟಿತು.

* ಮರಾಠ ಮನೆತನಗಳಿಂದ ಬೆಂಬಲ ಸಿಗದ ರಘೋಬನು ಬ್ರಿಟಿಷರ ಬೆಂಬಲ ಕೋರಿದ. ಬ್ರಿಟಿಷರು ಈ ಸಂದರ್ಭವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡರು.

* 1775-1782 ರಲ್ಲಿ ನಡುವೆ ಬ್ರಿಟಿಷ್ ಮತ್ತು ಮರಾಠ ಒಕ್ಕೂಟಗಳ ನಡುವೆ ನಡೆದ ದೀರ್ಘ ಯುದ್ಧದಲ್ಲಿ ಮರಾಠರು ಪ್ರಾರಂಭಿಕ ಯಶಸ್ಸನ್ನು ಸಾಧಿಸಿದರು. ಅಂತಿಮವಾಗಿ ಅಹಮದಾಬಾದನ್ನು ಕಳೆದುಕೊಂಡರು.

* ಮರಾಠ ಒಕ್ಕೂಟವು ಯುದ್ಧ ಮುಂದುವರಿಸಲಾಗದೆ ಬ್ರಿಟಿಷರೊಂದಿಗೆ ” ಸಾಲ್ಬಾಯ್” ಒಪ್ಪಂದವನ್ನು ಮಾಡಿಕೊಂಡರು.

* ಎರಡನೇ ಮಾದವರಾವ ನನ್ನು ಪೇಶ್ವೆಯಾಗಿ ನೇಮಿಸಿತು.

  -: ಸಹಾಯಕ ಸೈನ್ಯ ಪದ್ಧತಿ :-

ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಸಲುವಾಗಿ ಸಹಾಯಕ ಸೈನ್ಯ ಪದ್ಧತಿ ಎಂಬ ನೀತಿಯನ್ನು ” ವೆಲ್ಲೆಸ್ಲಿ ಯು 1798 ರಲ್ಲಿ ” ಜಾರಿಗೆ ತಂದನು.

 -: ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳು :-

* ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಸಲುವಾಗಿ ಈ ಪದ್ಧತಿಯನ್ನು ಯಾರಿಗೆ ತಂದರು.

* ಭಾರತೀಯ ರಾಜನು ಬ್ರಿಟಿ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿರಿಸಿಕೊಳ್ಳಬೇಕು.

* ಸೇನೆಯ ವೇತನ ಮತ್ತು ನಿರ್ವಹಣೆಯ ವ್ಯಾಸವನ್ನು ಸಂಬಂಧಪಟ್ಟ ರಾಜ್ಯವೇ ಬರಿಸಬೇಕು. ಇಲ್ಲವೇ ನಿರ್ದಿಷ್ಟ ಕಂದಾಯ ಪ್ರದೇಶವನ್ನು ಬಿಟ್ಟು ಕೊಡಬೇಕು.

* ರಾಜನ ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟ್ ನೇಮಿಸಿಕೊಳ್ಳಬೇಕು.

* ಬ್ರಿಟಿಷರ ಅನುಮತಿ ಇಲ್ಲದೆ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ.

* ಭಾರತದ ಯಾವುದೇ ರಾಜ್ಯಗಳೊಂದಿಗೆ ಯುದ್ಧ/ ಸಂಧಾನ ಮಾಡಿಕೊಳ್ಳಬೇಕಾದರೆ ಗೋವರ್ನರ್ ಜನರಲ್ ನ ಸಮ್ಮತಿ ಬೇಕು.

* ಇದಕ್ಕೆ ಪ್ರತಿಯಾಗಿ ಕಂಪನಿಯು ಆ ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದು.

  -: ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ ಗಳು :-

ಹೈದರಾಬಾದ್ ನಂತರದಲ್ಲಿ ಮೈಸೂರು, ಔದ್, ತಂಜಾವೂರು, ಮರಾಠ, ಆರ್ಕಾಟ್, ಪೂನಾ, ಬೀರಾರ್, ಗ್ವಾಲಿಯರ್ ಮುಂತಾದ ರಾಜ್ಯಗಳು ಈ ಒಪ್ಪಂದಕ್ಕೆ ಒಳಪಟ್ಟವು.

-: ಎರಡನೇ ಆಂಗ್ಲೋ ಮರಾಠ ಯುದ್ಧ (1803-1805):-

* ಮರಾಠ ಮನೆತನಗಳ ನಾಯಕರ ನಡುವೆ ಸಂಘರ್ಷವೇ ಈ ಯುದ್ಧಕ್ಕೆ ಕಾರಣವಾಯಿತು.

* ಹೋಳ್ಕರ್ ಮನೆತನದ ಯಶವಂತರಾಯ್ ಒಂದು ಕಡೆಯಾದರೆ ಸಿಂಧಿಯಾ ಮನೆತನದ ದೌಲತ್ ರಾವ್ ಮತ್ತು ಪೇಶ್ವೆ ಎರಡನೇ ಬಾಜಿರಾವ್ ಇನ್ನೊಂದು ಕಡೆಗಿದ್ದರು.

* 1802ರಲ್ಲಿ ಹೋಳ್ಕರ ಸೈನ್ಯವು ಸಿಂಧಿಯಾ ಮತ್ತು ಪೇಶ್ವೆಯ ಸೈನ್ಯವನ್ನು ಸೋಲಿಸಿತು.

* ಪೇಶ್ವೆ ಎರಡನೇ ಬಾಜಿರಾವ್ ಇಂಗ್ಲಿಷರ ಸಹಾಯ ಯಾಚಿಸಿದನು.

* ಲಾರ್ಡ್ ವೆಲ್ಲೆಸ್ಲಿ ಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ಸಿಕ್ಕಿತು.

* ಪೇಶ್ವೆ ಎರಡನೇ ಬಾಜಿರಾವ್ ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು.

* ಎರಡನೇ ಬಾಜಿರಾವ್ ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದ್ದನ್ನು ವಿರೋಧಿಸಿ ಹೋಳ್ಕರ್, ಬೋಸ್ಲೆ, ಸಿಂದಿಯಾ ಮೊದಲಾದ ಮರಾಠ ಮನೆತನಗಳು ಒಗ್ಗೂಡಿದವು.

* 1803-1805 ರ ವರೆಗೆ ಮರಾಠ ಮನೆತನಗಳ ಸೇನೆಯನ್ನು ವೆಲ್ಲೆಸ್ಲಿಯು ಅನೇಕ ಯುದ್ಧಗಳಲ್ಲಿ ಮಣಿಸಿದ. ಆದರೆ ವೆಲ್ಲೆಸ್ಲಿಯು ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದವರೇ ಹೆಚ್ಚಿತು. ಇದರಿಂದ ತೀವ್ರ ಟೀಕೆಗೆ ಒಳಗಾದ ವೆಲ್ಲೆಸ್ಲಿಯು ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಿದ. ಇದರಿಂದ ಆ ಪ್ರದೇಶದಲ್ಲಿ ತಾತ್ಕಾಲಿಕ ಶಾಂತಿ ನೆಲೆಸಿತು.

-: ಮೂರನೇ ಆಂಗ್ಲೋ ಮರಾಠ ಯುದ್ಧ(1817-1818):-

* ಮರಾಠರ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದವು.

* ಪೇಶ್ವೆ ಎರಡನೇ ಬಾಜಿರಾವ್ ಕೂಡ ಬ್ರಿಟಿಷರ ನಿಯಂತ್ರಣದಿಂದ ಮುಕ್ತಗೊಳ್ಳಲು ಅವಣಿಸುತಿದ್ದನು.

* 1817 ರಲ್ಲಿ ಪೇಶ್ವೆ ಯು ಪೂನಾದಲ್ಲಿ ಬ್ರಿಟಿಷರ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು.

* ನಾಗಪುರದ ಅಪ್ಪ ಸಾಹೇಬ್ ಮತ್ತು ಮಲ್ಹಾರ್ ರಾದ್ ಹೋಳ್ಕರ್ ಕೂಡ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸೋತರು.

* ಅಂತಿಮವಾಗಿ ಪೆಶ್ವೆ ಎರಡನೇ ಬಾಜಿರಾಯನ ಬ್ರಿಟಿಷರ ವಿರುದ್ಧ ದಂಗೆ ಎದ್ದು 1818 ರಲ್ಲಿ ” ಕೋರ್ ಗಾವ್ ಮತ್ತು ಅಷ್ಟಿ” ಯುದ್ಧಗಳಲ್ಲಿ ಸೋತು ಶರಣಾದನು.

* ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿ ಬಾಜಿರಾಯನಿಗೆ ವಿಶ್ರಾಂತಿ ವೇತನ ನೀಡಿದರು. ಬದಲಿಗೆ ಶಿವಾಜಿಯ ವಂಶಸ್ಥ ಪ್ರತಾಪ ಸಿಂಹನನ್ನು ಸಣ್ಣ ರಾಜ್ಯ ಸತಾರದಲ್ಲಿ ಪ್ರತಿಷ್ಠಾಪಿಸಿ, ಮರಾಠರ ಸಾಂಪ್ರದಾಯಿಕ ಮುಖಂಡನನ್ನಾಗಿಸುವ ಮೂಲಕ ಮಾರಾಟದ ಪ್ರತಿರೋಧವನ್ನು ನಿಗ್ರಹಿಸಿದರು.

WhatsApp Group Join Now
Telegram Group Join Now