ಮೂಲಭೂತ ಕರ್ತವ್ಯಗಳು ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳು. TET, GPSTR, HSTR, PDO, FDA, SDA All Competative exam notes.

ಭಾರತದ ಮೂಲಭೂತ ಕರ್ತವ್ಯಗಳನ್ನು ಸ್ವರ್ಣಸಿಂಗ್ ಸಮಿತಿಯ ಶಿಫಾರಸ್ಸಿನ ಅನ್ವಯ 42 ನೇ ತಿದ್ದುಪಡಿಯ ಮೂಲಕ 1976ರ ಕಾಯ್ದೆಯ ಅಡಿಯಲ್ಲಿ ಜಾರಿಗೆ ತಂದು ಸಂವಿಧಾನದಲ್ಲಿ ಅಳವಡಿಸಲಾಗಿದೆ.

* ಮೂಲಭೂತ ಕರ್ತವ್ಯಗಳನ್ನು ರಷ್ಯಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.

* ಮೂಲಭೂತ ಕರ್ತವ್ಯಗಳು ಸಂವಿಧಾನದ ಭಾಗ 4 ಎ ರಲ್ಲಿ 51 ಎ ವಿಧಿಯ ವರೆಗೆ 11 ಮೂಲಭೂತ ಕರ್ತವ್ಯಗಳನ್ನು ತಿಳಿಸಿ ಕೊಡುತ್ತದೆ.

* ನಂತರ 2002ರಲ್ಲಿ 86 ನೇ ತಿದ್ದುಪಡಿ ಮೂಲಕ ಶಿಕ್ಷಣದ ಕರ್ತವ್ಯವನ್ನು 11 ನೇ ಮೂಲಭೂತ ಕರ್ತವ್ಯವಾಗಿದೆ 51 ಕೆ ಯಲ್ಲಿ ಸೇರ್ಪಡೆ ಮಾಡಲಾಯಿತು.

* ಪ್ರಸ್ತುತವಾಗಿ ಮೂಲಭೂತ ಕರ್ತವ್ಯಗಳ ಸಂಖ್ಯೆ 11.

* 1976ರಲ್ಲಿ ಸಂವಿಧಾನಕ್ಕೆ 86ನೇ ತಿದ್ದುಪಡಿ ತಂದು ಮತ್ತೊಂದು ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ.

* 2002 ರಲ್ಲಿ ಸಂವಿಧಾನಕ್ಕೆ 86ನೇ ತಿದ್ದುಪಡಿ ತಂದು ಮತ್ತೊಂದು ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ.

* ಸಂವಿಧಾನದ 4-ಎ ಭಾಗದಲ್ಲಿ 51 -ಎ ವಿಧಿಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಕಾಣಬಹುದು ಅವುಗಳೆಂದರೆ.

* ವಿಧಿ 51 ಎ :- ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.

* ವಿಧಿ 51 ಬಿ :- ಸ್ವಾತಂತ್ರ್ಯ ಚಳುವಳಿಯ ಉದಾತ್ತ ಆದರ್ಶಗಳನ್ನು ಪಾಲಿಸುವುದು.

* ವಿಧಿ 51 ಸಿ :- ಭಾರತದ ಸಾರ್ವಭೌಮತೆ, ಐಕ್ಯತೆ ಮತ್ತು ಸಮಗ್ರತೆಯನ್ನು ರಕ್ಷಿಸುವುದು.

* ವಿಧಿ 51 ಡಿ :- ಅನಿವಾರ್ಯ ಎಂದಾಗ ದೇಶ ಸೇವೆ ಮಾಡುವ ಮೂಲಕ ರಾಷ್ಟ್ರವನ್ನು ರಕ್ಷಿಸುವುದು.

* ವಿಧಿ 51 ಇ :- ಸಾಮರಸ್ಯ ಮತ್ತು ಬಾತೃತ್ವ ಭಾವನೆಯನ್ನು ಬೆಳೆಸಿಕೊಳ್ಳುವುದು ಹಾಗೂ ಮಹಿಳೆಯರನ್ನು ಗೌರವಿಸುವುದು.

* ವಿಧಿ 51 ಎಫ್ :- ನಮ್ಮ ಮಿಶ್ರ ಸಂಸ್ಕೃತಿಯನ್ನು ಪೋಷಿಸಿ ರಕ್ಷಿಸುವುದು.

* ವಿಧಿ 51 ಜಿ :- ಅರಣ್ಯಗಳು ಸರೋವರಗಳು ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡ ನೈಸರ್ಗಿಕ ಪರಿಸರವನ್ನು ರಕ್ಷಿಸಿ ಅಭಿವೃದ್ಧಿ ಪಡಿಸುವುದು.

* ವಿಧಿ 51 ಹೆಚ್ :- ವೈಜ್ಞಾನಿಕ ಮತ್ತು ಮಾನವೀಯ ಗುಣಗಳನ್ನು ಹಾಗೂ ಸುಧಾರಣಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು.

* ವಿಧಿ 51 ಐ :- ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು.

* ವಿಧಿ 51 ಜೆ :- ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆಯನ್ನು ತೋರಿಸಿ ರಾಷ್ಟ್ರದ ಉನ್ನತಿಗಾಗಿ ಶ್ರಮಿಸುವುದು.

* ವಿಧಿ 51 ಕೆ :- 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ತಂದೆ,ತಾಯಿ ಅಥವಾ ಪಾಲಕರು ಶಿಕ್ಷಣ ಪಡೆಯುವ ಅವಕಾಶ ನೀಡತಕ್ಕದ್ದು.

-: ರಾಜ್ಯ ನೀತಿ ನಿರ್ದೇಶಕ ತತ್ವಗಳು :-

* ರಾಜ್ಯನೀತಿ ನಿರ್ದೇಶಕ ತತ್ವಗಳು ಐರಿಷ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಕಲ್ಯಾಣ ರಾಜ್ಯದ ಕಲ್ಪನೆಯಿಂದ ರಾಜ್ಯ ನಿರ್ದೇಶಕ ತತ್ವಗಳನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ.

 ಸಂವಿಧಾನದ ಭಾಗ 4ರ 36 ರಿಂದ 51ನೇ ವಿಧಿಗಳ ಅಡಿಯಲ್ಲಿ ರಾಜ್ಯನೀತಿ ನಿರ್ದೇಶಕ ತತ್ವಗಳನ್ನು ತಿಳಿಸಲಾಗಿದೆ.

1. ಎಲ್ಲಾ ಪೌರರಿಗೂ ತಮ್ಮ ಜೀವನೋಪಾಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು.

2. ಸಮುದಾಯದಲ್ಲಿನ ಸಂಪತ್ತು ಮತ್ತು ಉತ್ಪಾದನಾ ಸಾಧನೆಗಳು ಕೆಲವೇ ಜನರ ಸ್ವತ್ತಾಗದಂತೆ ತಡೆಗಟ್ಟುವುದು.

3. ಸ್ತ್ರೀ  ಮತ್ತು ಪುರುಷರೆಲ್ಲರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. ಕಾರ್ಮಿಕರ ಯೋಗಕ್ಷೇಮವನ್ನು ರಕ್ಷಿಸುವುದು.

4. ವೃದ್ಧರು, ರೋಗಿಗಳು, ದುರ್ಬಲ ವರ್ಗದವರು ಮತ್ತು ಅಸಮರ್ಥರಿಗೆ ಸಹಾಯಧನ ನೀಡುವುದು.

5. ಏಕರೂಪ ನಾಗರಿಕ ಕಾನೂನನ್ನು ಜಾರಿಗೆ ತರುವುದು.

6. ಆರು ವರ್ಷದವರೆಗೆನ ಎಲ್ಲಾ ಮಕ್ಕಳಿಗೆ ಬಾಲ್ಯ ಪೋಷಣೆ ಮತ್ತು ಶಾಲಾ ಪೂರ್ವ ಶಿಕ್ಷಣವನ್ನು ಕೊಡಲು ರಾಜ್ಯ ಪ್ರಯತ್ನಿಸಬೇಕು.

7. ಸ್ಮಾರಕಗಳು ಮತ್ತು ಸ್ಥಳಗಳನ್ನು ರಕ್ಷಿಸುವುದು.

8. ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು.

9. ಅಂತರಾಷ್ಟ್ರೀಯ ಶಾಂತಿಯುತ ವಿದೇಶಿ ನೀತಿಯನ್ನು ಪಾಲಿಸುವುದು. ಭದ್ರತೆ ಕಾಪಾಡಿ ವಿಶ್ವ ಕಾನೂನನ್ನು ಗೌರವಿಸುವುದು.

10. ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸುವುದು.

11. ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು.

12. ಕೃಷಿ ಹಾಗೂ ಪಶು ಸಂಗೋಪನೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದು.

13. ಪಾನ ನಿಷೇಧವನ್ನು ಜಾರಿಗೆ ತರುವುದು.

14. ವೈಜ್ಞಾನಿಕ ಆಧಾರದ ಮೇಲೆ ಬೇರೆ ಸಾಯವನ್ನು ಅಭಿವೃದ್ಧಿಗೊಳಿಸುವುದು.

WhatsApp Group Join Now
Telegram Group Join Now