ಮೂಲಭೂತ ಹಕ್ಕುಗಳು. TET, GPSTR, HSTR, PDO, FDA, SDA All Competative exam notes.

ಸಂವಿಧಾನದ ಭಾಗ – 3 ವಿಧಿ 12-35.

1. ಸಮಾನತೆಯ ಹಕ್ಕು.

* 14ನೇ ವಿಧಿ ಅನ್ವಯ :- ” ಕಾನೂನಿನ ಎದುರಿನಲ್ಲಿ ಸಮಾನತೆ ಮತ್ತು ರಕ್ಷಣೆ”

* 15 ನೇ ವಿಧಿ ಅನ್ವಯ :- ” ಸಾರ್ವಜನಿಕ ಸ್ಥಳಗಳಲ್ಲಿ ತಾರತಮ್ಯ ನಿಷೇಧ”

* 16ನೇ ವಿಧಿ ಅನ್ವಯ :- ಯಾವುದೇ ವ್ಯಕ್ತಿಗೆ ” ಸಾರ್ವಜನಿಕ ಹುದ್ದೆಯಲ್ಲಿ ತಾರತಮ್ಯ ನಿಷೇಧ ”

* 17ನೇ ವಿಧಿ ಅನ್ವಯ :- ” ಅಸ್ಪಶ್ಯತೆಯ ಆಚರಣೆಯ ನಿಷೇಧ ”

* 18ನೇ ವಿಧಿ ಅನ್ವಯ :- ” ಬಿರುದುಗಳ ರದ್ಧತಿ ”

2. ಸ್ವಾತಂತ್ರ್ಯದ ಹಕ್ಕು.

ವಿಧಿ 19 ರಿಂದ 22 ರ ವರೆಗೆ ಸ್ವಾತಂತ್ರ್ಯದ ಹಕ್ಕನ್ನು ವಿವರಿಸುತ್ತದೆ.

1. ವಾಕ್ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ.

2. ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ.

3. ಸಂಘ ಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ.

4. ದೇಶದ ಎಲ್ಲೆಡೆ ನಿರ್ಬಂಧವಿಲ್ಲದೆ ಸಂಚರಿಸುವ ಸ್ವಾತಂತ್ರ್ಯ.

5. ಭಾರತದ ಯಾವುದೇ ಭಾಗದಲ್ಲಾದರೂ ವಾಸಿಸುವ ಸ್ವಾತಂತ್ಯ.

6. ಯಾವುದೇ ಉದ್ಯೋಗ, ವೃತ್ತಿ,  ವ್ಯಾಪಾರ, ವ್ಯವಹಾರ ಮಾಡುವ ಸ್ವಾತಂತ್ರ್ಯ.

20ನೇ ವಿಧಿ ಅನ್ವಯ :- ಅಪರಾಧಿಗೆ ಅಪರಾಧ ಮಾಡಿದ ಸಂದರ್ಭದಲ್ಲಿ ಜಾರಿಯಲ್ಲಿದ್ದ ಕಾನೂನಿನ ಅನ್ವಯ ಶಿಕ್ಷೆ ನೀಡಬೇಕು.

21 ನೇ ವಿಧಿ ಅನ್ವಯ :- ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ.

21 ನೇ ‘ ಎ ‘ ವಿಧಿಯಲ್ಲಿ 6 ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ.

22 ನೇ ವಿಧಿ ಅನ್ವಯ :- ” ಅಕ್ರಮ ಬಂಧನ ಮತ್ತು ಸೆರೆವಾಸದ ವಿರುದ್ಧ ರಕ್ಷಣೆ ”

3. ಶೋಷಣೆಯ ವಿರುದ್ಧ ಹಕ್ಕು ( ವಿಧಿ 23-24).

23, 24 ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.

* ಮಾನವ ಜೀವಿಗಳ ಮಾರಾಟ ಮತ್ತು   ಅನೈತಿಕ ಕಾರ್ಯಗಳಿಗೆ ತಳ್ಳುವುದರ ನಿಷೇಧ.

* 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ ಗಣಿಗಳಲ್ಲಿ ಹಾಗೂ ಇನ್ನಿತರ ಹಾನಿಕಾರಕ ವೃತ್ತಿಗಳಲ್ಲಿ ತೊಡಗಿಸುವುದರ ಮೇಲೆ ನಿಷೇಧ.

4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ( ವಿಧಿ 25-28).

25, 26, 27 , 28ನೇ ಪರಿಚ್ಛೇದಗಳಲ್ಲಿ ವಿವರಿಸಲಾಗಿದೆ.

* ಯಾವುದೇ ಧರ್ಮವನ್ನು ಸ್ವೀಕರಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕು.

* ಯಾವುದೇ ನಿರ್ದಿಷ್ಟ ಧರ್ಮವನ್ನು ಪ್ರಚಾರ ಮಾಡಲು ತೆರಿಗೆ ನೀಡುವಿಕೆಯಿಂದ ಸ್ವಾತಂತ್ರ್ಯ.

* ಧಾರ್ಮಿಕ ವಿಷಯಗಳ ನಿರ್ವಹಣೆಯ ಸ್ವಾತಂತ್ರ್ಯ.

* ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ಅಥವಾ ಪೂಜಾ ಸಮಾರಂಭಗಳಲ್ಲಿ  ಹಾಜರಾಗುವಿಕೆಯಿಂದ ವಿನಾಯಿತಿ.

5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು(ವಿಧಿ 29 -30).

* 29 ನೇ ವಿಧಿ ಅನ್ವಯ:- ರಾಷ್ಟ್ರದ ಯಾವುದೇ ಭಾಗದಲ್ಲಿ ನೆಲೆಸಿರುವ ಪ್ರಜೆಗಳು, ತಮ್ಮದೇ ಆದ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿದ್ದರೆ. ಅವುಗಳನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿಪಡಿಸಿಕೊಳ್ಳುವ ಹಕ್ಕು.

ರಾಜ್ಯದಿಂದ ಧನ ಸಹಾಯ ಪಡೆಯುತ್ತಿರುವ ಯಾವುದೇ ಶೈಕ್ಷಣಿಕ ಸಂಸ್ಥೆಯು ಜಾತಿ, ಧರ್ಮ, ಕುಲ, ಭಾಷೆಗಳ ಆಧಾರದ ಮೇಲೆ ಯಾವ ಪೌರನಿಗೂ ಪ್ರವೇಶವನ್ನು ನಿರಾಕರಿಸುವಂತಿಲ್ಲ.

* 30ನೇ ವಿಧಿ ಅನ್ವಯ:- ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರು ತಮ್ಮದೇ ಆದ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಅವುಗಳನ್ನು ನಿರ್ವಹಿಸುವ ಹಕ್ಕು. ಹಾಗೆಯೇ ಅಲ್ಪಸಂಖ್ಯಾತರ ವಿದ್ಯಾ ಸಂಸ್ಥೆಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುವಂತಿಲ್ಲ.

* 31 ನೇ ವಿಧಿ ಅನ್ವಯ:- ಆಸ್ತಿಯ ಹಕ್ಕು  1978. ಸಂವಿಧಾನಕ್ಕೆ 44ನೇ ತಿದ್ದುಪಡಿ ತಂದು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆಯಲಾಗಿದೆ. ಈಗ ಕೇವಲ  ಕಾಯ್ದೆ ಬದ್ಧ ಹಕ್ಕಾಗಿದೆ.

6. ಸಂವಿಧಾನಾತ್ಮಕ ಪರಿಹಾರದ ಹಕ್ಕು( ವಿಧಿ 32).

* 32ನೇ ವಿಧಿ ಅನ್ವಯ: – ವ್ಯಕ್ತಿ ತನ್ನ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟಾದಾಗ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿ ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಅವಕಾಶ ನೀಡಲಾಗಿದೆ.

* ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದ 32ನೇ ವಿಧಿಯನ್ನು ” ಸಂವಿಧಾನದ ಆತ್ಮ ಮತ್ತು ಹೃದಯವಿದ್ದಂತೆ ” ಎಂದಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಈ ಕೆಳಗಿನ ವಿಶೇಷ ಆಜ್ಞೆ ( ರಿಟ್) ಗಳನ್ನು ಹೊರಡಿಸಬಹುದು.

1. ಬಂದಿ ಪ್ರತ್ಯಕ್ಷೀ ಕರಣ ( Habeas Corpus).

ಬಂಧಿಸಿದ ವ್ಯಕ್ತಿಯನ್ನು 24 ಗಂಟೆಯೊಳಗೆ ಹತ್ತಿರದ ನ್ಯಾಯಾಲಯದಲ್ಲಿ ಅಥವಾ ನ್ಯಾಯಾಧೀಶರ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯದವರ ಹೊರಡಿಸಿರುವ ಆಜ್ಞೆಗೆ ಬಂದಿ ಪ್ರತ್ಯಕ್ಷೀಕರಣ ( ಕ್ರಿಮಿನಲ್ ಅಪರಾಧಕ್ಕೆ ಈ ರಿಟ್ ಅನ್ವಯಿಸುವುದಿಲ್ಲ.)

2. ಪರಮಾದೇಶ (Mandamus).

ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲನಾದ ಸಾರ್ವಜನಿಕ ಅಧಿಕಾರಿಗೆ ಅದನ್ನು ನಿರ್ವಹಿಸುವಂತೆ ನ್ಯಾಯಾಲಯ ನೀಡುವ ಆಜ್ಞೆಗೆ ” ಪರಮಾದೇಶ” ಎನ್ನುವರು.

3. ಪ್ರತಿ ಬಂಧಿಕಾಜ್ಞೆ (Prohibition).

ಅದೀನ ನ್ಯಾಯಾಲಯಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸದಂತೆ ನ್ಯಾಯಾಲಯವು ನೀಡುವ ಆದೇಶಕ್ಕೆ ಪ್ರತಿಬಂಧಕಾಜ್ಞೆ ( ಸುಪ್ರೀಂ ಕೋರ್ಟ್/ ಹೈಕೋರ್ಟ್)

4. ಷರ್ಷಿಯೊರರಿ (Certiorari).

ಸರ್ವೋಚ್ಚ ನ್ಯಾಯಾಲಯವು ಒಂದು ಮೊಕದ್ದಮೆಯನ್ನು ಸಾಕ್ಷಿ ಸಮೇತ ತನಗೆ ವರ್ಗಾಯಿಸುವಂತೆ ಕೆಳಗಿನ ನ್ಯಾಯಾಲಯಗಳಿಗೆ ನೀಡುವ ಆದೇಶಕ್ಕೆ ( ಉತ್ಪ್ರೇಕ್ಷಣಾ) ಷರ್ಷಿಯೊರರಿ ಎಂದು ಕರೆಯಲಾಗುತ್ತದೆ.

5. ಕೋ- ವಾರೆಂಟ್ (Quo-Warranto).

ಒಬ್ಬ ವ್ಯಕ್ತಿ ಅಕ್ರಮವಾಗಿ ಸಾರ್ವಜನಿಕ ಹುದ್ದೆಯನ್ನು ಪಡೆದುಕೊಂಡಾಗ ಅದನ್ನು ತೆರವುಗೊಳಿಸುವಂತೆ ನ್ಯಾಯಾಲಯವು ಆ ವ್ಯಕ್ತಿಗೆ ನೀಡುವ ಆದೇಶಕ್ಕೆ ಕೋ – ವಾರೆಂಟ್ ಎಂದು ಕರೆಯುತ್ತಾರೆ.

WhatsApp Group Join Now
Telegram Group Join Now