ಮೌರ್ಯರು ಮತ್ತು ಕುಶಾಣರು ( HSTR,GPSTR,TET,FDA,SDA,All Competative exam notes).

      -: ಮೌರ್ಯರು :-

* ಇದು ಭಾರತದ ಮೊದಲ ಇತಿಹಾಸಿಕ ಸಾಮ್ರಾಜ್ಯ.

* ಮೊದಲ ಬಾರಿಗೆ ರಾಜಕೀಯ ಏಕತೆಯನ್ನು ಸಾಧಿಸಿದ ಸಾಮ್ರಾಜ್ಯ.

* ಈ ಮನೆತನದ ಸ್ಥಾಪಕ – ಚಂದ್ರಗುಪ್ತ ಮೌರ್ಯ.

* ಇವರ ರಾಜಧಾನಿ – ಪಾಟಲಿಪುತ್ರ ( ಇಂದಿನ ಪಾಟ್ನಾ).

ಮೌರ್ಯ ಸಾಮ್ರಾಜ್ಯದ ಇತಿಹಾಸವನ್ನು ಅರಿಯಲು ನಮಗೆ ಲಭ್ಯವಿರುವ ಆಧಾರಗಳು.

1. ಮೆಗಾಸ್ತನೀಸನ ಇಂಡಿಕಾ.

* ಇಂಡಿಕಾ ಕೃತಿಯು ಮೌರ್ಯರ ಕಾಲದ ನಗರಾಡಳಿತ ಸಾಮಾಜಿಕ ಮತ್ತು ಆರ್ಥಿಕ ಸಂಗತಿಗಳನ್ನು ಕುರಿತು ತಿಳಿಸಿಕೊಡುತ್ತದೆ.

* ಸೆಲ್ಯೂಕಸ್ ನಿಕೇಟರ್ ಮೌರ್ಯನ ಆಸ್ಥಾನಕ್ಕೆ ಮೆಗಾಸ್ತಾನಿಸನನ್ನು ತನ್ನ ರಾಯಭಾರಿಯಾಗಿ ಕಳುಹಿಸಿದನು.

2. ಕೌಟಿಲ್ಯನ ಅರ್ಥಶಾಸ್ತ್ರ.

* ಈ ಗ್ರಂಥದಿಂದ ಮೌರ್ಯರ ಕಾಲದ ರಾಜಕೀಯ, ಆರ್ಥಿಕ,ಆಡಳಿತಾತ್ಮಕ, ಸಾಮಾಜಿಕ ಮೊದಲಾದ ಸಂಗತಿಗಳನ್ನು ತಿಳಿಯಬಹುದು.

* ಈ ಗ್ರಂಥವನ್ನು ಆರ್. ಶ್ಯಾಮ ಶಾಸ್ತ್ರಿ ಅವರು ಮೈಸೂರಿನ ಒರಿಂಟಲ್ ಗ್ರಂಥಾಲಯದಲ್ಲಿ ಹಸ್ತಪ್ರತಿಯನ್ನು ಪತ್ತೆ ಮಾಡಿದರು ಜೊತೆಗೆ 1909ರಲ್ಲಿ ಇಂಗ್ಲಿಷ್ ಭಾಷಾಂತರವನ್ನು ಪ್ರಕಟಿಸಿದರು.

ಕೌಟಿಲ್ಯನ ಅರ್ಥಶಾಸ್ತ್ರದ ಬಗ್ಗೆ.

ಕೌಟಿಲ್ಯನ ಅರ್ಥಶಾಸ್ತ್ರವು ಮೂರು ಭಾಗಗಳನ್ನು ಒಳಗೊಂಡಿದೆ.

I.ಮೊದಲ ಭಾಗವು ರಾಜ, ಆತನ ಸಲಹಾ ಸಮಿತಿ ಮತ್ತು ಸರಕಾರವನ್ನು ಕುರಿತು ತಿಳಿಸುತ್ತದೆ.

II. ಎರಡನೇ ಭಾಗವು ನಾಗರಿಕ ಮತ್ತು ಅಪರಾಧಿ ಕಾನೂನುಗಳನ್ನು ತಿಳಿಸುತ್ತದೆ.

III. ಮೂರನೆಯ ಭಾಗವು ಅಂತರ ರಾಜ್ಯ ಕಾನೂನು, ರಾಯಭಾರ ನೀತಿ, ಮತ್ತು ಯುದ್ಧದ ಬಗ್ಗೆ ತಿಳಿಸುತ್ತದೆ.

ಅರ್ಥಶಾಸ್ತ್ರವು ರಾಜ್ಯದ ಪ್ರಮುಖವಾದ ಏಳು ಅಂಗಗಳು ಅಂದರೆ ಸಪ್ತಾಂಗಗಳ ಬಗ್ಗೆ ತಿಳಿಸುತ್ತದೆ ಅವುಗಳೆಂದರೆ.

ರಾಜ( ರಾಜಪ್ರಭುತ್ವ), ಮಂತ್ರಿ ( ಸಲಹಾ ಸಮಿತಿ), ಜನಪದ ( ಜನಸಂಖ್ಯೆ ಮತ್ತು ಭೂಪ್ರದೇಶ ), ದುರ್ಗ( ಕೋಟೆ), ಕೋಶ( ಖಜಾನೆ ), ಬಲ( ಸೇನೆ), ಮಿತ್ರ( ಮಿತ್ರ ರಾಜ).

3. ವಿಶಾಖದತ್ತನ ಮುದ್ರಾ ರಾಕ್ಷಸ.

4. ದೀಪ ವಂಶ ಮತ್ತು ಮಹಾವಂಶ

( ಇವು ಶ್ರೀಲಂಕಾದ ಬೌದ್ಧ ಸಾಹಿತ್ಯ ಕೃತಿಗಳು)

5. ಗ್ರೀಕ್ ಬರಹಗಳು.

ಗ್ರೀಕ್ ಬರಹಗಾರರಾದ ಪ್ಲುಟಾರ್ಕ್, ಜಸ್ಟಿನ್, ನಿಯಾರ್ಕಸ್, ಪ್ಲಿನಿ, ಸ್ಟ್ರಾಂಬೋರ್ ಬರಹಗಳು ಚಂದ್ರಗುಪ್ತನಿಂದ ನಂದರ ನಿರ್ಮೂಲನೆ, ಅವನು ಅಲೆಕ್ಸಾಂಡರ್ ನನ್ನು ಎದುರಿಸಿದ ಬಗೆಯನ್ನು ಹೇಳುತ್ತದೆ.

6. ಅಶೋಕನ ಶಾಸನಗಳು.

* ಶಿಲಾಶಾಸನಗಳ ರಾಜ, ಶಾಸನಗಳ ಪಿತಾಮಹ ಮತ್ತು ಸ್ವ- ಕಥನಗಾರ ಎಂದು ಕರೆಯಲಾಗಿದೆ.

* ಅಶೋಕನು ಶಿಲಾಶಾಸನಗಳನ್ನು ಹೊರಡಿಸಿದ ಮೊದಲ ಸಾಮ್ರಾಟ.

* 1831 ರಲ್ಲಿ ಜೇಮ್ಸ್ ಪ್ರಿನ್ಸೆಪ್ ಅವರು ಅಶೋಕನ ಶಾಸನಗಳನ್ನು ಮೊತ್ತ ಮೊದಲ ಬಾರಿಗೆ ಓದಿದರು.

* 1915ರಲ್ಲಿ ಚಾಲ್ಸ್ ಬೇಡನ್ ಎಂಬ ಬ್ರಿಟಿಷ್ ಎಂಜಿನಿಯರ್ ಕರ್ನಾಟಕದ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಅಶೋಕನ ಶಿಲಾಶಾಸನವನ್ನು ಪತ್ತೆ ಮಾಡಿದರು ಈ ಶಾಸನದಲ್ಲಿ ಮೊತ್ತ ಮೊದಲ ಬಾರಿಗೆ ” ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ” ಎಂಬ ಉಲ್ಲೇಖ ಕಂಡುಬರುತ್ತದೆ.

* ಮೌರ್ಯ ಸಾಮ್ರಾಜ್ಯದ ಬಹುತೇಕ ಭಾಗಗಳಲ್ಲಿರುವ ಅಶೋಕನ ಶಾಸನಗಳು ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿದೆ.ವಾಯುವ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಅರಮಿಕ್ ಮತ್ತು ಖರೋಷ್ಠಿ ಲಿಪಿಗಳಲ್ಲಿವೆ, ಅಪಘಾನಿಸ್ತಾನದಲ್ಲಿ ಅರಾಮಿಕ್ ಲಿಪಿ ಮತ್ತು ಗ್ರೀಕ್ ನಲ್ಲಿ ಹಾಗೂ ಖರೋಷ್ಠಿ ಭಾಷೆಯಲ್ಲಿ ಇವೆ.

ಚಂದ್ರಗುಪ್ತ ಮೌರ್ಯ ( ಸಾ.ಶ.ಪೂ 324 – 300).

* ಮೌರ್ಯ ಸಾಮ್ರಾಜ್ಯದ ಸ್ಥಾಪಕ.

* ಈತ ಸಾ.ಶ ಪೂ 321 ರಲ್ಲಿ ಪಟ್ಟಾಭಿಷೇಕವಾಗಿ ಅಧಿಕಾರಕ್ಕೆ ಬಂದನು. ಇವನ ಪ್ರಧಾನ ಮಂತ್ರಿ- ಕೌಟಿಲ್ಯ.

* ಸೆಲ್ಯೂಕಸ್ ನೊಂದಿಗೆ ಯುದ್ಧ ( ಸಾ.ಶ.ಪೂ 305).

* ಜೈನ ಧರ್ಮದ ಒಂದು ಸಂಪ್ರದಾಯದ ಪ್ರಕಾರ ಚಂದ್ರಗುಪ್ತ ಮೌರ್ಯನು ತನ್ನ ಕೊನೆಯ ಕಾಲದಲ್ಲಿ ಜೈನ ಧರ್ಮವನ್ನು ಸ್ವೀಕರಿಸಿದನು. ಅವನು ಸಾಮ್ರಾಜ್ಯವನ್ನು ತನ್ನ ಮಗನಾದ ಬಿಂದುಸಾರನಿಗೆ ವಹಿಸಿ ಜೈನ ಗುರು ಭದ್ರಬಾಹು ಹಾಗೂ ಕೆಲವು ಎತಿಗಳೊಡನೆ ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೊಳಕ್ಕೆ ಬಂದನು. ಈ ಸಂಪ್ರದಾಯವು ಅಂತಿಮವಾಗಿ ಸಲ್ಲೇಖನ ವ್ರತವನ್ನು ಕೈಗೊಂಡು ಅಲ್ಲಿಯೇ ಮರಣ ಹೊಂದಿದ್ದಾನೆ ಎಂದು ಹೇಳುತ್ತದೆ.

* ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿ ಚಂದ್ರಗುಪ್ತ ಬಸದಿಯೊಂದನ್ನು ನಿರ್ಮಿಸಿದ್ದಾನೆ ಇಲ್ಲಿ ಭದ್ರಬಾಹು ಮತ್ತು ಚಂದ್ರಗುಪ್ತನ ಪಾದದ ಗುರುತುಗಳಿವೆ.

ಬಿಂದುಸಾರ ( ಸಾ.ಶ.ಪೂ 300 – 273).

* ಚಂದ್ರಗುಪ್ತನ ಮಗ ಬಿಂದುಸಾರ.

ಸಾಮ್ರಾಟ ಅಶೋಕ( ಸಾ.ಶ.ಪೂ 321 – 298 ).

* ಮೌರ್ಯ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ದೊರೆ.

* ಬೌದ್ಧ ಕೃತಿಯಾದ ದೀಪ ವಂಶವು ಅಶೋಕನ ತನ್ನ 99 ಸಹೋದರರನ್ನು ಕೊಂದು ಅಧಿಕಾರಕ್ಕೆ ಬಂದನೆಂದು ತಿಳಿಸುತ್ತದೆ.

* ಅಶೋಕನ ಶಾಸನಗಳನ್ನು ಕಲೆ ಹಾಕಿದವರು. ಬಿ.ಎಲ್.ರೈಸ್

* ಅಶೋಕನ ಪಾಟಲಿಪುತ್ರದಲ್ಲಿ ನಡೆದ ಮೂರನೇ ಬೌದ್ಧ ಧರ್ಮ ಸಮ್ಮೇಳನ ( ಸಾ.ಶ.ಪೂ 250) ಆಶ್ರಯದಾತನಾಗಿದ್ದನು.

* ಅಶೋಕನೂ ತನ್ನ ಸಾಮ್ರಾಜ್ಯದಲ್ಲಿ ಸಾಮರಸ್ಯ ತತ್ವವನ್ನು ಧರ್ಮದ ಪ್ರಚಾರ ಮಾಡಲು ಧರ್ಮ ಮಹಾ ಮಾತ್ರರು ಎಂಬ ಅಧಿಕಾರಿಗಳನ್ನು ನೇಮಿಸಿದ್ದನು.

* ಮಹೇಂದ್ರ ಮತ್ತು ಸಂಘಮಿತ್ರೆಯನ್ನು ಬೌದ್ಧ ಧರ್ಮ ಪ್ರಚಾರಕ್ಕೆ ಸಿಲೋನ್ ಗೆ ಕಳುಹಿಸಲಾಯಿತು.

 ಕಳಿಂಗ ಯುದ್ಧ( ಸಾ.ಶ.ಪೂ 261).

ಅಶೋಕ ತನ್ನ ಆಳ್ವಿಕೆಯ ಎಂಟನೇ ವರ್ಷದಲ್ಲಿ ಕಳಿಂಗ ರಾಜ್ಯದ ಮೇಲೆ ಇದ್ದ ಸಾರಿದನು ರಾಜನಾದ ನಂತರ ಅಶೋಕನ ನಡೆಸಿದ ಏಕೈಕ ಇದ್ದಾಗಿತ್ತು.

* ಯುದ್ಧದ ಬಗೆಗೆ ಅಶೋಕನ 13ನೇ ಬಂಡೆಗಲ್ಲು ಶಾಸನವು ಮಾಹಿತಿ ನೀಡುತ್ತದೆ.

* ಯುದ್ಧವು ಒರಿಸ್ಸಾದ ರಾಜಧಾನಿ ಭುವನೇಶ್ವರ್ ದಿಂದ 150 ಕಿಲೋ ಮೀಟರ್ ದೂರವಿರುವ ದೌಲಿ ಪ್ರದೇಶದಲ್ಲಿ ನಡೆಯಿತು.

  -: ಪರಿಣಾಮಗಳು :-

ಯುದ್ಧದಲ್ಲಿ ಒಂದು ಲಕ್ಷದ 50,000 ಜನ ಸೆರೆಯಾಳುಗಳಾದರು, 1 ಲಕ್ಷ ಜನ ಹತರಾದರು. ಹಲವು ಪಟ್ಟು ಜನರು ನಿರಾಶ್ರಿತರಾದರು ಕಳಿಂಗವನ್ನು ಅಶೋಕ  ಗೆದ್ದನಾದರೂ ಯುದ್ಧದ ಸಾವು ನೋವು ಅವನ ಮನ ಕಲಕಿತು.

* ಇದರಿಂದ ಭವಿಷ್ಯದಲ್ಲಿ ಎಲ್ಲಾ ಯುದ್ಧಗಳನ್ನು ತ್ಯಜಿಸುವುದು ಒಂದುವೇಳೆ ಯಾರಾದರೂ ಕೇಡನ್ನು ಬಯಸಿದರೆ ಎಷ್ಟು ಸಾಧ್ಯವೊ ಅಷ್ಟು ಸಹಿಸಿಕೊಳ್ಳುವುದು ಎಲ್ಲಾ ಸಮಸ್ಯೆಗಳನ್ನು ರಾಜಿ ಮಾರ್ಗದ ಮೂಲಕ ಬಗೆಹರಿಸಿಕೊಳ್ಳುವುದು.

* ಪ್ರಪಂಚಕ್ಕೆ ಯುದ್ಧದ ನಿರರ್ಥಕತೆಯನ್ನು ಸಾರಿದ ಮೊದಲ ಸಾಮ್ರಾಟ ಅಶೋಕ.

ಅಶೋಕನ ಧರ್ಮ.

* ಬೌದ್ಧ ಗುರು ಉಪಗುಪ್ತನ ಮಾರ್ಗದರ್ಶನದೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ.

* ಬೌದ್ಧ ಧರ್ಮ ಪ್ರಸಾರ

* ಧರ್ಮ ಪ್ರಚಾರಕ್ಕೆ ಪಾಲಿ ಭಾಷೆಯನ್ನು ಬಳಸಿದರು.

* ಧರ್ಮ ಪ್ರಚಾರ ಮಾಡಲು ಧರ್ಮ ಮಹಾಮಾತ್ರರು ಅಧಿಕಾರಿಗಳನ್ನು ನೇಮಿಸಿದನು.

* ಬನವಾಸಿಗೆ ರಕ್ಷಿತ್, ಮೈಸೂರಿಗೆ ಮಹಾದೇವಿ, ಎಂಬ ಪ್ರಚಾರಕರನ್ನು ಕಳುಹಿಸಿದನು. ಸಿಲೋನ್ಗೆ ತನ್ನ ಮಗ ಮಹೇಂದ್ರ ಮತ್ತು ಸಂಗಮಿತ್ರ ಕಳುಹಿಸಿಕೊಟ್ಟನು.

ಅಶೋಕನ ಶಾಸನಗಳು.

* 13ನೇ ಶಿಲಾ ಶಾಸನ ಅಶೋಕನ ಕಳಿಂಗ ದಿಗ್ವಿಜಯವನ್ನು ವಿವರಿಸುತ್ತದೆ.

ಸಾರನಾಥ ಸ್ತಂಭ ಶಾಸನ.

* ಇಲ್ಲಿ ಬುದ್ಧನ ಪ್ರವಚನ ನೀಡಿದ ಸ್ಮರಣಾರ್ಥ ಒಂದು ಸ್ತಂಭವನ್ನು ನಿರ್ಮಿಸಲಾಯಿತು.

* ಪೀಠದ ಸುತ್ತಲೂ ನಾಲ್ಕು ಚಕ್ರಗಳು ಮತ್ತು ಚಕ್ರದ ಮಧ್ಯೆ ಆನೆ, ವೃಷಭ, ಸಿಂಹ, ಕುದುರೆ ಚಿತ್ರಗಳಿವೆ.ಪೀಠದ ಮೇಲೆ ನಾಲ್ಕು ಸಿಂಹಗಳನ್ನು ನಾಲ್ಕು ದಿಕ್ಕುಗಳಿಗೆ ಬೆನ್ನಿಗೆ ಬೆನ್ನು ಕೊಟ್ಟು ನಿಂತಿರುವ ಬಂಗಿಯಲ್ಲಿ ಕೆತ್ತಲಾಗಿದೆ.

* ಪೀಠದಲ್ಲಿರುವ ಅಶೋಕನ ಚಕ್ರವು 24 ಗೆರೆಗಳನ್ನು ಹೊಂದಿದ್ದು ಕಾಲಗಣನಾ ಸೂಚಕವಾಗಿದೆ.

* ಚಕ್ರದ ಕೆಳಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೆ ಎಂದು ಕೆತ್ತಲಾಗಿದೆ.

* ಇದನ್ನು 1950 ಜನವರಿ 26ರಂದು ನಮ್ಮ ರಾಷ್ಟ್ರ ಲಾಂಛನದಲ್ಲಿರುವ ಕೊಳಲಾಯಿತು.

  ಸ್ತೂಪಗಳು

* ಅಶೋಕ ಒಟ್ಟು 84,000 ಸ್ತೂಪಗಳನ್ನು ನಿರ್ಮಿಸಿದನು.

* ಅತ್ಯಂತ ದೊಡ್ಡ ಸ್ತೂಪ ಸಾಂಚಿ ಮಧ್ಯಪ್ರದೇಶ.

ಮೌರ್ಯರ ಅರ್ಥ ವ್ಯವಸ್ಥೆ.

* ಚಂದ್ರಗುಪ್ತನ ರಾಜ್ಯಪಾಲನಾದ ಪುಷ್ಯಗುಪ್ತ ಗುಜರಾತಿನ ಜುನಾಗಡದ ಬಳಿ ಸುದರ್ಶನ ಸರೋವರ ಎಂಬ ಆಣೆಕಟ್ಟನ್ನು ನಿರ್ಮಿಸಿದನು.

* ಈ ಅಣೆಕಟ್ಟಿಗೆ ತುಷಸ್ಪ ಎಂಬ ಅಧಿಕಾರಿಯು ಕಾಲುವೆ ನಿರ್ಮಾಣ ಮಾಡಿಸಿದನು.

* ಸಮಾಹರ್ಥ ಮತ್ತು ಸನ್ನಿಧಾತ ಎಂಬ ಅಧಿಕಾರಿಗಳು ತೆರಿಗೆ ಸಂಗ್ರಹ ಮತ್ತು ರಾಜ ಭಂಡಾರದ ಪಾಲಕರಾಗಿದ್ದರು.

* ಮೌರ್ಯ ಸಾಮ್ರಾಜ್ಯದ ಕಾಲವನ್ನು ನಗರೀಕರಣದ ಎರಡನೇ ಹಂತ ಎಂದು ಕರೆಯುತ್ತಾರೆ ಎರಡನೇ ಹಂತ ಎಂದು ಕರೆಯುತ್ತಾರೆ.( ಮೊದಲ ಹಂತ ಸಿಂಧೂ ಬಯಲಿನ ನಾಗರಿಕತೆ).

ಸಾಮಾಜಿಕ ವ್ಯವಸ್ಥೆ.

ವರ್ಣ ಆಧಾರಿತ ವ್ಯವಸ್ಥೆ ಇತ್ತು ಬ್ರಾಹ್ಮಣ,ಕ್ಷತ್ರಿಯ, ವೈಶ್ಯ, ಶೂದ್ರ.

ಆಡಳಿತ ವ್ಯವಸ್ಥೆ.

* ಮಂತ್ರಿ, ಪುರೋಹಿತ,ಸೇನಾಪತಿ ಮತ್ತು ಯುವರಾಜ ಅತ್ಯುನ್ನತ ಅಧಿಕಾರಿಗಳಾಗಿದ್ದರು.

* ರಜುಕ ಎಂಬ ನ್ಯಾಯಿಕ ಅಧಿಕಾರಿ ಇದ್ದನು.

* ಯುಕ್ತ ಎಂಬ ಮಾಹಿತಿಗಳನ್ನು ದಾಖಲಿಸುವ ಅಧಿಕಾರಿ ಇದ್ದನು.

ಮೌರ್ಯ ಸಾಮ್ರಾಜ್ಯದ ಪತನ.

* ಅಶೋಕ ನಂತರ ಮೌರ್ಯ ಸಾಮ್ರಾಜ್ಯವು ಪತನಗೊಂಡಿತು.

   -: ಕುಶಾಣರು :-

* ಗ್ರೀಕರ ನಂತರ ಭಾರತೀಯ ಚರಿತ್ರೆ ಹಾಗೂ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದವರು ಕುಶಾಣರು.

* ಮಹಾಯಾನ ಪಂಥವು ಇವರ ಆಶ್ರಯದಲ್ಲಿ ಹೆಚ್ಚಿನ ಪ್ರೋತ್ಸಾಹವನ್ನು ಪಡೆಯಿತು.

* ಗಾಂಧಾರ ಶಿಲ್ಪ ಕಲೆಯು ಇವರಿಂದ ವಿಕಸಿತಗೊಂಡಿತು.

* ಮಧ್ಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದು ಅಲೆಮಾರಿ ಜನಾಂಗದ ಮೂಲ ಹೊಂದಿದವರು ಕುಶಾಣರು.ಇವರು ಯಾಚಿ ಸಂತತಿಯವರು.

* ಕುಜಲಕಡ್ ಫೀಸಸ್ ರಾಜ ಮನೆತನದ ಸಂಸ್ಥಾಪಕ. ವಿಮಾಕಡ್ ಪಿಸಸ್ ಮತ್ತು ಕನಿಷ್ಕ ಈ ವಂಶದ ಮುಖ್ಯ ದೊರೆಗಳು. ಯೂಚಿಗಳು ಮೂಲತಹ ಬುಡಕಟ್ಟುಗಳಿಗೆ ಸೇರಿದವರು. ಕುಜಲಕಡ್ ಫೀಸಸ್ ನ ನೇತೃತ್ವದಲ್ಲಿ ಯೂಚಿ ಬಣಗಳು ಐಕ್ಯಗೊಂಡವು. ಈತನು ಹಿಂದೂಕುಷನ್ ಬೆಟ್ಟಗಳನ್ನು ದಾಟಿ ಕಾಶ್ಮೀರದಲ್ಲಿ ಬಂದು ನೆಲೆಸಿದನು. ವಿಮಾಕಡ್ ಫೈಸಸ್ ಕಾಲದಲ್ಲಿ ಚಿನ್ನದ ನಾಣ್ಯಗಳನ್ನು ಹೊರಡಿಸಲಾಯಿತು.

* ವಿಮಕಡ್ ಫೀಸಸ್ ನ ನಂತರ ಬಂದವನೇ ಕನಿಷ್ಠ. ಇವನ ಆಳ್ವಿಕೆ ಅಡಿಯಲ್ಲಿ ಕುಶಾಣರ ಮನೆತನವು ವ್ಯಾಪಕವಾಗಿ ಬೆಳೆಯಿತು ಇವನು ಸಾ.ಶ 78 ರಲ್ಲಿ ರಾಜಾಳ್ವಿಕೆಯನ್ನು ಪ್ರಾರಂಭಿಸಿ ಹೊಸ ಯುಗವೊಂದಕ್ಕೆ ನಾಂದಿ ಹಾಡಿದನು ಇದನ್ನು ‘ ಶಕ’ ಯುಗವೆಂದು ಕರೆಯುತ್ತಾರೆ.

   -: ಕನಿಷ್ಕ :-

* ಭಾರತದಲ್ಲಿ ಕನಿಷ್ಕನ ಆಳ್ವಿಕೆಯ ವ್ಯಾಪ್ತಿಯು ದಕ್ಷಿಣದ ಸಾಂಚಿ ಹಾಗೂ ಪೂರ್ವದ ಬನಾರಸ್ಸಿನವರೆಗೆ ಅರಡಿತ್ತು. ಮಧ್ಯ ಏಷ್ಯಾ ವನ್ನು ಒಳಗೊಂಡ ಇವನ ಆಳ್ವಿಕೆಯು ವಿಶಾಲವಾದ ಸಾಮ್ರಾಜ್ಯವನ್ನು ಹೊಂದಿತ್ತು. ಪುರುಷ ಪುರವು ಕನಿಷ್ಕನ ರಾಜಧಾನಿ. ಇವನ ಕಾಲದ ಮತ್ತೊಂದು ಮುಖ್ಯ ನಗರ ಮಥುರಾ, ಅಶ್ವಘೋಷ, ವಸುಮಿತ್ರ, ಸಂಗರಕ್ಷ ಮುಂತಾದ ಬೌದ್ಧ ವಿದ್ವಾಂಸರನ್ನು ಇವನ ಕಾಲದಲ್ಲಿ ಕಾಣುತ್ತೇವೆ ನಾಲ್ಕನೇ ಬೌದ್ಧ ಸಮಾವೇಶವನ್ನು ಕಾಶ್ಮೀರದಲ್ಲಿ ಕನಿಷ್ಕನ ನೇತೃತ್ವದಲ್ಲಿಯೇ ನಡೆಯಿತು.

WhatsApp Group Join Now
Telegram Group Join Now