ರಾಷ್ಟಕೂಟರು ಮತ್ತು ಕಲ್ಯಾಣಿ ಚಾಲುಕ್ಯರು. TET,GPSTR,HSTR,PDO All Competative exam notes.

Table of Contents

ರಾಷ್ಟಕೂಟರು ( ಸಾಮಾನ್ಯ ಶಕ 753-973).

* ಇವರು 8ನೇ ಶತಮಾನದಿಂದ 10ನೇ ಶತಮಾನದ ವರೆಗೆ ಆಳ್ವಿಕೆ ನಡೆಸಿದರು.

* ರಾಷ್ಟ್ರಕೂಟ ಎಂದರೆ ” ರಾಷ್ಟ್ರದ ಮುಖ್ಯಸ್ಥರು ” ಎಂದರ್ಥ.

* ಸ್ಥಾಪಕ – ದಂತಿದುರ್ಗ ( ಬಾದಾಮಿ ಚಾಲುಕ್ಯರ ದೊರೆ ಎರಡನೇ ಕೀರ್ತಿವರ್ಮನನ್ನು ಸೋಲಿಸಿ ಸಾಮ್ರಾಜ್ಯ ಸ್ಥಾಪನೆ ಮಾಡಿದನು)

* ರಾಜಧಾನಿಗಳು – ಲಟ್ಟಲೂರು ( ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆ ಲಾತೂರ್ ) ಮಾನ್ಯ ಖೇಟ ( ಗುಲ್ಬರ್ಗ ಜಿಲ್ಲೆ )

* ರಾಜ್ಯ ಲಾಂಛನ – ಗರುಡ

ದಂತಿದುರ್ಗ ( ಸಾಮಾನ್ಯ ಶಕ 753-756).

* ಹಿರಣ್ಯಗರ್ಭದಾನ ಯಾಗವನ್ನು ಮಾಡಿದನು.

* ಇವನು ಚಾಲುಕ್ಯ ದೊರೆ ಎರಡನೇ ಕೀರ್ತಿವರ್ಮನನ್ನು ಸೋಲಿಸಿ, ರಾಷ್ಟ್ರಕೂಟ ವಂಶ ಸ್ಥಾಪಿಸಿದನು.

ಒಂದನೇ ಕೃಷ್ಣ ( ಸಾಮಾನ್ಯ ಶಕ 756-774).

* ದಂತಿದುರ್ಗ ಸಂತಾನವಿಲ್ಲದೆ ಮರಣ ಹೊಂದಿದಾಗ ಅವನ ಚಿಕ್ಕಪ್ಪನಾದ ಒಂದನೇ ಕೃಷ್ಣನು ಆಡಳಿತಕ್ಕೆ ಬಂದನು.

* ಎಲ್ಲೋರದಲ್ಲಿ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು ಇದು ಏಕಶಿಲೆಯ ನಿರ್ಮಾಣವಾಗಿರುವ ಬೃಹತ್ ದೇವಾಲಯವಾಗಿದೆ. ಇದನ್ನು ಮೇಲಿನಿಂದ ಕೆಳಗೆ ಕೊರೆಯಲಾಗಿದೆ. ಇದನ್ನು ಕಟ್ಟಿದ ಶಿಲ್ಪಿ ” ವಿಶ್ವಕರ್ಮ ”

ಎರಡನೇ ಗೋವಿಂದ ( ಸಾಮಾನ್ಯ ಶಕ 774-780).

* ಇವನು ಗಂಗರ ಶ್ರೀ ಪುರುಷ ಮತ್ತು ವೆಂಗಿಯ ವಿಷ್ಣುವರ್ಧನನ್ನು ಸೋಲಿಸಿದನು.

* ಬಿರುದುಗಳು – ಪ್ರತಾಪವ ಲೋಕ, ಪ್ರಭುತ ವರ್ಷ, ಜಗತ್ತುಂಗ .

ಧ್ರುವ ( ಸಾಮಾನ್ಯ ಶಕ 780-793).

* ಗಂಗಾ ಯಮುನಾ ತೀರದಲ್ಲಿ ಬಂಗಾಲದ ಧರ್ಮ ಪಾಲನನ್ನು ಸೋಲಿಸಿದನು .

* ಕನೌಜಿನ ಇಂದ್ರಾಯುಧ ನನ್ನು ಸೋಲಿಸಿದನು.

* ಇವರು ಹೊಯ್ಸಳ ರಾಜಧಾನಿ ಹಳೇಬೀಡಿನಲ್ಲಿ ಧ್ರುವ ಸಮುದ್ರ ಎಂಬ ಕೆರೆಯನ್ನು ನಿರ್ಮಿಸಿದನು. ಆದ್ದರಿಂದ ಅದಕ್ಕೆ ದ್ವಾರಸಮುದ್ರ ಎಂಬ ಹೆಸರು ಬಂದಿದೆ.

* ಇವರು ಧಾರಾವರ್ಷ , ಶ್ರೀ ವಲ್ಲಭ, ಕಲಿವಲ್ಲಭ ಎಂಬ ಬಿರುದುಗಳನ್ನು ಹೊಂದಿದನು.

ಮೂರನೇ ಗೋವಿಂದ ( ಸಾಮಾನ್ಯ ಶಕ 793-814).

ಒಂದನೇ ಅಮೋಘವರ್ಷ ನೃಪತುಂಗ ( ಸಾಮಾನ್ಯ ಶಕ 814-878).

* ರಾಷ್ಟ್ರಕೂಟರಲ್ಲಿಯೇ ಪ್ರಸಿದ್ಧನಾದ ಅರಸ.

* ಇವನ ಸೇನಾನಿ ಬಂಕೇಶ – ಬಂಕಾಪುರ ಎಂಬ ನಗರವನ್ನು ನಿರ್ಮಿಸಿದನು.

* ವೆಂಗಿಯ ಎರಡನೇ ವಿಕ್ರಮಾದಿತ್ಯನನ್ನು ವಿಂಗವಳ್ಳಿ ಕದನದಲ್ಲಿ ಸೋಲಿಸಿದನು.

* ಕಲಾ ಪ್ರಿಯನಾದ ಈತ ಮಾನ್ಯಖೇಟ ಎಂಬ ಹೊಸ ರಾಜಧಾನಿಯನ್ನು ನಿರ್ಮಿಸಿದನು.

* ಸಾಮಾನ್ಯ ಶಕ 851 ರಲ್ಲಿ ಹರ ಪ್ರವಾಸಿಗ ಸುಲೈಮಾನ್ ನೃಪತುಂಗನ ಆಸ್ಥಾನಕ್ಕೆ ಭೇಟಿ ನೀಡಿ ಅವನ ಸಾಮ್ರಾಜ್ಯವು ಅಂಜನ ಪ್ರಪಂಚದ ನಾಲ್ಕು ಖ್ಯಾತ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು ಎಂದು ಬಣ್ಣಿಸಿದ್ದಾನೆ.

* ಇವನ ಆಸ್ಥಾನ ಕವಿ ಶ್ರೀವಿಜಯ ಕವಿರಾಜಮಾರ್ಗ ಎಂಬ ಕನ್ನಡದ ಮೊಟ್ಟ ಮೊದಲ ಉಪಲಬ್ದ ಕೃತಿಯನ್ನು ರಚಿಸಿದನು.

* ಕವಿರಾಜ ಮಾರ್ಗದಲ್ಲಿ ಕರ್ನಾಟಕದ ವ್ಯಾಪ್ತಿಯನ್ನು ಕಾವೇರಿಯಿಂದ ಗೋದಾವರಿ ಪರಮಿರ್ಪ ನಾಡದಾ ಕದನದೋಳ್ ಜನಪದ ಎಂದು ವರ್ಣಿಸಿದೆ.

ಎರಡನೇ ಕೃಷ್ಣ ( ಸಾಮಾನ್ಯ ಶಕ 880-914).

* ಗೂರ್ಜರ ಪ್ರತಿಹಾರರ ಅರಸನಾದ ಭೋಜರಾಜನನ್ನು ಸೋಲಿಸಿದನು.

ಮೂರನೇ ಇಂದ್ರ ( ಸಾಮಾನ್ಯ ಶಕ 914-928).

* ರಾಷ್ಟ್ರಕೂಟರ ಸಾರ್ವಭೌಮತ್ವವನ್ನು ಉತ್ತರ ಭಾರತದಲ್ಲಿ ಪುನಃ ಸ್ಥಾಪಿಸಿದನು.

* ಇವನ ಆಸ್ಥಾನದಲ್ಲಿದ್ದ  ತ್ರಿವಿಕ್ರಮ ನಳಚಂಪು ಕೃತಿಯನ್ನು ರಚಿಸಿದನು. ಇದು ಪ್ರಥಮ ಸಂಸ್ಕೃತದ ಚಂಪು ಕಾವ್ಯ.

ಮೂರನೇ ಕೃಷ್ಣ ( ಸಾಮಾನ್ಯ ಶಕ 939-967).

* ಸಾಮಾನ್ಯ ಶೇಕು 949ರಲ್ಲಿ ನಡೆದ ತಕ್ಕೊಳಂ ಕದನದಲ್ಲಿ ಚೋಳರ ಅರಸನಾದ ಒಂದನೇ ಪರಾಂತಕ ಚೋಳನನ್ನು ಸೋಲಿಸಿದನು.

* ಇವನ ಆಸ್ಥಾನ ಕವಿ ಉಭಯ ಕವಿ ಚಕ್ರವರ್ತಿ ಎಂಬ ಬಿರುದು ಹೊಂದಿದ್ದ ಪೊನ್ನ ಶಾಂತಿಪುರಾಣ,ಭುವನೈಕ ರಾಮಾಭ್ಯುದಯ ಎಂಬ ಕೃತಿ ರಚಿಸಿದನು.

   -: ಆಡಳಿತ :-

* ರಾಷ್ಟ್ರವೆಂಬುದು ಭಾರತದ ಪ್ರಮುಖ ಘಟಕವಾಗಿದ್ದು, ಸಾಮ್ರಾಜ್ಯವನ್ನು ಅನೇಕ ವಿಭಾಗಗಳಾಗಿ ವಿಂಗಡಿಸಿದ್ದಾರೆ.

* ರಾಷ್ಟ್ರ , ವಿಷಯ, ನಾಡು, ಭುಕ್ತಿ ಎಂದು ವಿಭಾಗಿಸಲಾಗಿತ್ತು.

* ಕಳಸ, ಇಂಡಿ, ಸಾಲೋಟಗಿ ಅಂದಿನ ಪ್ರಮುಖ ಶಿಕ್ಷಣ ಕೇಂದ್ರಗಳಾಗಿದ್ದವು.

     -: ಸಾಹಿತ್ಯ :-

* ಹಲಾಯುಧ – ಕವಿರಹಸ್ಯ ಮತ್ತು ಮಿತ್ರ ಸಂಜೀವಿನಿ

* ಶಿವಕೋಟ್ಯಾಚಾರ್ಯ – ವಡ್ಡಾರಾಧನೆ

* ತ್ರಿವಿಕ್ರಮ – ನಳಚಂಪೂ, ಮದಲಸ ಚಂಪು

* ಮಹಾವೀರಚಾರ್ಯ – ಗಣಿತ ಸಾರಸಂಗ್ರಹ

* ಜಿನಸೇನಾಚಾರ್ಯ – ಹರಿವಂಶ

* ಪೊನ್ನ – ಶಾಂತಿಪುರಾಣ

* ಶ್ರೀ ವಿಜಯ – ಕವಿರಾಜಮಾರ್ಗ

  -: ಕಲೆ ಮತ್ತು ವಾಸ್ತು ಶಿಲ್ಪ :-

* ಎಲ್ಲೋರ ( ದಿ ವರ್ಲ್ಡ್ ಹೆರಿಟೇಜ್ ಸೈಟ್ ).

* ಈ ಸ್ಥಳ 1983 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿತು.

* 16ನೇ ಗುಹೆ ಕೈಲಾಸನಾಥ ದೇವಾಲಯ ಬರುವ ಗುರಿಯಾಗಿದೆ ಇದನ್ನು ಒಂದನೇ ಕೃಷ್ಣ ನಿರ್ಮಿಸಿದನು.

* ಇವರ ಕಾಲದ ಪ್ರಮುಖ ಶಿಕ್ಷಣ ಕೇಂದ್ರಗಳು ಬಿಜಾಪುರದ ಇಂಡಿಯಾ, ಸಾಲೋಟಗಿ ಗ್ರಾಮ , ಹಾವೇರಿಯ ಕಳಸಾ, ಶಿವಮೊಗ್ಗದ ಬಳ್ಳಿಗಾವೆ .

* ಪಂಪನು ರಾಷ್ಟ್ರಕೂಟರ ಸಾಮಂತರವಾದ ವೇಮಲವಾಡ ಚಾಲುಕ್ಯರ ಎರಡನೇ ಅರಿಕೇಸರಿ ಆಸ್ಥಾನದಲ್ಲಿ ಇದ್ದನು.

ಕಲ್ಯಾಣದ ಚಾಲುಕ್ಯರು.

* ರಾಷ್ಟ್ರಕೂಟರ ಅವನತಿಯ ನಂತರ ಮಾನ್ಯಖೇಟವನ್ನು( ಎಲ್ಲೋರಾ) ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದರು.

* ರಾಜಧಾನಿ ಬೀದರ್ ಜಿಲ್ಲೆಯ ಬಸವಕಲ್ಯಾಣ

* ಸ್ಥಾಪಕ – ಎರಡನೇ ತೈಲಪ ಅಥವಾ ಇಮ್ಮಡಿ ತೈಲಪ

* ಲಾಂಛನ – ವರಾಹ

ಎರಡನೇ ತೈಲಪ ( ಸಾಮಾನ್ಯ ಶಕ 973-997).

* ಇಮ್ಮಡಿ ತೈಲಪ ಕಲ್ಯಾಣ ಚಾಲುಕ್ಯ ವಂಶದ ಸ್ಥಾಪಕ.

* ಇವನು ಬಾದಾಮಿ ಚಾಲುಕ್ಯರ ನಾಲ್ಕನೇ ವಿಕ್ರಮಾದಿತ್ಯನ ಮಗ.

ಸತ್ಯಶ್ರಯ ( ಸಾಮಾನ್ಯ ಶಕ 997-1008).

* ಇವನು ಚೋಳರನ್ನು ಹಿಮ್ಮೆಟ್ಟಿಸಿ ಇರಿವೆ ಬೆಡಂಗ ಎಂಬ ಬಿರುದು ಪಡೆದ.

* ಕನ್ನಡದ ಖ್ಯಾತ ಕವಿಯಾದ ರನ್ನನಿಗೆ ಆಶ್ರಯದಾತನಾಗಿದ್ದ.

* ರನ್ನನು ಸತ್ಯ ಆಶ್ರಯನನ್ನು  ಮಹಾಭಾರತದ ಭೀಮನಿಗೆ ಹೋಲಿಸಿದ್ದಾನೆ.

ಇಮ್ಮಡಿ ಜಯಸಿಂಹ ( ಸಾಮಾನ್ಯ ಶಕ 1015-1043).

* ಜಯಸಿಂಹನ ಆಸ್ಥಾನದಲ್ಲಿದ್ದ ದುರ್ಗಸಿಂಹನ ಪಂಚತಂತ್ರ ಎಂಬ ಕೃತಿಯನ್ನು ಕನ್ನಡದಲ್ಲಿ ರಚಿಸಿದ್ದಾನೆ.

* ಈತನ ಆಸ್ಥಾನದ ಕವಿ ವಾದಿರಾಜ ಸಂಸ್ಕೃತದಲ್ಲಿ ಪಾರ್ಶ್ವನಾಥ ಚರಿತೆ, ವಾದಿರಾಜ ಚರಿತೆ ಎಂಬ ಕೃತಿಯನ್ನು ರಚಿಸಿದನು.

ಒಂದನೇ ಸೋಮೇಶ್ವರ ( ಸಾಮಾನ್ಯ ಶಕ 1043-1068).

* ಇವನು ಹೊಸ ರಾಜಧಾನಿ ಕಲ್ಯಾಣವನ್ನು ಕಟ್ಟಿದ ಇದು ಪ್ರಸ್ತುತ ಬೀದರ್ ಜಿಲ್ಲೆಯಲ್ಲಿದೆ.

ಆರನೇ ವಿಕ್ರಮಾದಿತ್ಯ ( ಸಾಮಾನ್ಯ ಶಕ 1076-1127).

* ಕಲ್ಯಾಣ ಚಾಲುಕ್ಯರ ಮನೆತನದ ಪ್ರಸಿದ್ಧ ಅರಸ.

* ಸಾಮಾನ್ಯ ಶಕ 1076 ರಲ್ಲಿ ಎರಡನೇ ಸೋಮೇಶ್ವರನನ್ನು ಸೋಲಿಸಿ ಅಧಿಕಾರಕ್ಕೆ ಬಂದ ಈತ ಚಾಲುಕ್ಯ ವಿಕ್ರಮ ಶಕೆಯನ್ನು ಆರಂಭಿಸಿದನು.

* ಇವನ ಪ್ರಸಿದ್ಧ ದಂಡ ನಾಯಕ ದಂಡಾಧೀಶ.

ಸೈನಿಕ ಸಾಧನೆಗಳು.

* ಸಹೋದರ ನಾಲ್ಕನೇ ಜಯಸಿಂಹ ದಂಗೆ ಎದ್ದನು ಈ ದಂಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿ ಆತನನ್ನು ಕ್ಷಮಿಸಿ, ಬನವಾಸಿಯ ಪ್ರಾಂತ್ಯಾಧಿಕಾರಿಯಾಗಿ ಮಾಡಿದನು.

* ಜಗ ದೇವನ ಪರವಾಗಿ ಮತ್ತೊಮ್ಮೆ ಧಾರಾ ನಗರದ ಮೇಲೆ ದಾಳಿ ಮಾಡಿ ಜಗದೇವನಿಗೆ ಸಾಮ್ರಾಜ್ಯ ದೊರಕಿಸಿ ಕೊಟ್ಟರು.

* ಇವನ ದಂಡ ನಾಯಕ ದಂಡಾದೀನು( ಮಹಾದೇವ) ಇಟಗಿಯಲ್ಲಿ ಮಹಾದೇವ ದೇವಾಲಯ ನಿರ್ಮಿಸಿದನು ಇದನ್ನು “ದೇವಾಲಯಗಳ ಚಕ್ರವರ್ತಿ ” ಎಂದು ಕರೆಯಲಾಗಿದೆ.

* ಇವನ ಹೆಂಡತಿ ಚಂದ್ರಲೇಖ ನೃತ್ಯ- ಸಂಗೀತ ಪ್ರವೀಣೆಯಾಗಿದ್ದು ಅಭಿನವ ಸರಸ್ವತಿ ಎಂಬ ಬಿರುದು ಪಡೆದಿದ್ದಳು.

* ಈತನ ಆಸ್ಥಾನದಲ್ಲಿದ್ದ ಬಿಲ್ಹಣ ವಿಕ್ರಮಾಂಕ ದೇವ ಚರಿತಂ, ವಿಜ್ಞಾನೇಶ್ವರನ ಮಿತಾಕ್ಷರ ಸಂಹಿತೆ ಕೃತಿಯನ್ನು ರಚಿಸಿದನು.

* ವಿಜ್ಞಾನೇಶ್ವರನು – ತನ್ನ ಮಿತಾಕ್ಷರ ಸಂಹಿತೆ ಕೃತಿಯಲ್ಲಿ ” ಜಗತ್ತಿನಲ್ಲಿ ಕಲ್ಯಾಣದಂತಹ ನಗರವು ಹಿಂದಿರಲಿಲ್ಲ, ಮುಂದಿರಲಾರದು. ವಿಕ್ರಮಾದಿತ್ಯ ನಂತರ ರಾಜನನ್ನು ಕಂಡಿಲ್ಲ ಕೇಳಿಲ್ಲ” ಎಂದಿದ್ದಾನೆ.

ಮೂರನೇ ಸೋಮೇಶ್ವರ ( ಸಾಮಾನ್ಯ ಶಕ 1127-1137).

* ಈ ಮನೆತನದ ಶಾಂತಿ ಪ್ರಿಯ ಅರಸ.

* ಸ್ವತಃ ಸಾಹಿತಿಯಾಗಿದ್ದ ಈತ ಸಂಸ್ಕೃತದ ವಿಶ್ವಕೋಶ ಎಂದೇ ಕರೆಯಲ್ಪಡುವ ” ಮಾನಸೋಲ್ಲಾಸ ” ಅಥವಾ ” ಅಭಿಲಾಷಿತಾರ್ಥ ಚಿಂತಾಮಣಿ ” ಎಂಬ ಕೃತಿಯನ್ನು ರಚಿಸಿದನು.

ಮೂರನೇ ತೈಲಪ ( ಸಾಮಾನ್ಯ ಶಕ 1149-1162).

* ಈತನ ಕಾಲದಲ್ಲಿ ಎಂದರೆ ಸಾಮಾನ್ಯ ಶಕ 1157 ರಲ್ಲಿ ಕಲ್ಯಾಣವನ್ನು ಕಲಚೂರಿ ಮನೆತನದ ಅರಸನಾದ ಬಿಜ್ಜಳನು ಪಡೆದುಕೊಂಡಿದ್ದಕ್ಕಾಗಿ ಇವನ ಅವನತಿಯಾಯಿತು.

ನಾಲ್ಕನೇ ಸೋಮೇಶ್ವರ ( ಸಾಮಾನ್ಯ ಶಕ 1183-1189).

* ಕಲ್ಯಾಣ ಚಾಲುಕ್ಯರ ಕೊನೆಯ ದೊರೆ.

  -: ಆಡಳಿತ :-

* ಕಲ್ಯಾಣಿ ಚಾಲುಕ್ಯರು ಬಾದಾಮಿ ಚಾಲುಕ್ಯರ ಆಡಳಿತ ವ್ಯವಸ್ಥೆಯನ್ನು ಹೋಲುವಂತಹ ಆಡಳಿತ ಪದ್ಧತಿಯನ್ನು ರೂಪಿಸಿದರು.

* ದಾಸಿವೇರ್ಗಡೆ – ಅರಮನೆಯ ಪಾರುಪತ್ಯಗಾರ

* ಖಾನಸವೇರ್ಗಡೆ – ಉಗ್ರಾಣ ಪಾರುಪತ್ಯಗಾರ

* ಅಂತಃಪುರಾಧ್ಯಕ್ಷ – ಅಂತಪುರದ ಮೇಲ್ವಿಚಾರಕ

 -: ಆಡಳಿತ ವಿಂಗಡನೆ :-

* ರಾಷ್ಟ್ರ ರಾಷ್ಟ್ರಪತಿ, ವಿಷಯ ವಿಷಯ ಪತಿ, ನಾಡು ನಾಡ ರಸ, ಧಾನ ಗ್ರಾಮ ಕೂಟ.

-: ಕಲ್ಯಾಣಿ ಚಾಲುಕ್ಯರ ಸಾಂಸ್ಕೃತಿಕ ಕೊಡುಗೆಗಳು :-

* ಬಿಲ್ಹಣ – ವಿಕ್ರಮಂಕದೇವಚರಿತಂ

* ವಾದಿರಾಜ – ಪಾರ್ಶ್ವನಾಥ ಚರಿತೆ, ಯಶೋಧರ ಚರಿತೆ.

* ಬಸವಣ್ಣ ವಚನಗಳು

* ನಾಗಚಂದ್ರ – ಮಲ್ಲಿನಾಥ ಪುರಾಣ, ರಾಮಚಂದ್ರಚರಿತಪುರಾಣ

* ರನ್ನ – ಅಜಿತಪುರಾಣ, ಸಾಹಸಭೀಮ ವಿಜಯ ಅಥವಾ ಗದಾಯುದ್ಧ , ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ, ರನ್ನ ಕಂದ

* ಒಂದನೇ ನಾಗವರ್ಮ – ಕರ್ನಾಟಕ ಕಾದಂಬರಿ, ಛಂದೋಬುಧಿ

* ಎರಡನೇ ಚಾವುಂಡರಾಯ – ಲೋಕೋಪಕಾರಿ

* ಶ್ರೀಧರಾಚಾರ್ಯ – ಜಾತಕ ತಿಲಕ

* ಎರಡನೇ ನಾಗವರ್ಮ – ಕಾವ್ಯಾವಲೋಕನ ಭಾಷ ಭೂಷಣ ಅಭಿದಾನಿವಸ್ತುಕೋಶ

* ದುರ್ಗಸಿಂಹ – ಪಂಚತಂತ್ರ

* ನಯಸೇನಾ – ಧರ್ಮಾಮೃತ

 

WhatsApp Group Join Now
Telegram Group Join Now