ವರ್ಧನರು ಮತ್ತು ಶಾತವಾಹನರು .( TES,GPSTR,HSTR,FDA,SDA,All Competative exam notes).

    -: ವರ್ಧನರು :-

* ಬಾಣ ಕವಿಯ ಹರ್ಷಚರಿತೆಯ ಪ್ರಕಾರ ಪುಷ್ಯಭೂತಿ ವರ್ಧನ ಈ ವಂಶದ ಸ್ಥಾಪಕ.

* ರಾಜಧಾನಿಗಳು ಥಾನೇಶ್ವರ ಮತ್ತು ಕನೋಜ.

ಪ್ರಭಾಕರ ವರ್ಧನ ( ಸಾಮಾನ್ಯ ಶಕ 583-605).

* ಆದಿತ್ಯ ವರ್ಮನ ಮಗನಾದ ಈತ ” ಮಹಾರಾಜಾಧಿರಾಜ ” ಮತ್ತು ” ಪರಮ ಭಟ್ಟಾರಕ ” ಎಂಬ ಬಿರುದನ್ನು ಹೊಂದಿದ್ದ.

* ಇವನು ಯಶೋಮತಿ ವಿವಾಹವಾಗಿದ್ದು ಇವನಿಗೆ ಎರಡನೆಯ ರಾಜವರ್ಧನ್, ಹರ್ಷವರ್ಧನ್, ರಾಜಶ್ರೀ ಎಂಬ ಮಕ್ಕಳಿದ್ದರು. ಇವನು ಸೂರ್ಯನ ಆರಾಧಕ.

ಎರಡನೇ ರಾಜವರ್ಧನ್ ( ಸಾಮಾನ್ಯ ಶಕ 605-606).

* ಇವನ ಆಳ್ವಿಕೆ ಆರಂಭದಲ್ಲಿ ಮಾಳ್ವದ ದೇವಗುಪ್ತ ಕನೋಜಿನ ಗೃಹ ವರ್ಮನನ್ನು ಕೊಂದು ರಾಜಶ್ರೀ ಯನ್ನು ಬಂಧಿಸಿದನು.

* ಈತ ತನ್ನ ಸಹೋದರಿಯಾದ ಅನ್ಯಾಯವನ್ನು ಸರಿಪಡಿಸಲು ಮಾಳ್ವದ ಮೇಲೆ ದಾಳಿ ಮಾಡಿ ಸ್ನೇಹಿತನಂತೆ ನಟಿಸಿದ ಗೌಡ ದೇಶದ ಶಶಾಂಕ ಮೋಸದಿಂದ ರಾಜವರ್ಧನನ್ನು ಕೊಂದನು.

ಹರ್ಷವರ್ಧನ( ಸಾಮಾನ್ಯ ಶಕ 606-646).

* ವರ್ಧನ ಸಂತತಿಯ ಪ್ರಸಿದ್ಧ ದೊರೆ.

* ಇವನನ್ನು ರಾಜಪುತ್ರ, ಶಿಲಾದಿತ್ಯ, ಪ್ರಿಯದರ್ಶಿನಿ, ಉತ್ತರ ಪಥೇಶ್ವರ, ಪರಮೇಶ್ವರ, ಪರಮ ಭಟ್ಟಾರಕ ಎಂದು ಕರೆಯುತ್ತಿದ್ದರು.

ನರ್ಮದಾ ನದಿ ಕದನ ( ಸಾಮಾನ್ಯ ಶಕ 630-34).

* ಬಾದಾಮಿ ಚಾಲುಕ್ಯರ ಎರಡನೇ ಪುಲಕೇಶಿಯನ್ನು ಯುದ್ಧಕ್ಕೆ ಆಹ್ವಾನಸಿದನು. ಆದರೆ ನರ್ಮದಾ ನದಿಯ ದಡದಲ್ಲಿ ನಡೆದ ಈ ಕದನದಲ್ಲಿ ವರ್ಷವರ್ಧನ ಸೋತನೆಂದು ರವಿ ಕೀರ್ತಿಯ ಐಹೊಳೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

     -: ಆಡಳಿತ :-

* ತನ್ನ ಸಾಮ್ರಾಜ್ಯವನ್ನು ಭುಕ್ತಿಗಳಾಗಿ ಅಂದರೆ ಪ್ರಾಂತ್ಯಗಳಾಗಿ.

* ಪ್ರಾಂತ್ಯಗಳನ್ನು ವಿಷಯಗಳಾಗಿ ಅಂದರೆ ಜಿಲ್ಲೆಗಳಾಗಿ.

* ಜಿಲ್ಲೆಗಳನ್ನು ಪತಕ ಅಥವಾ ಗ್ರಾಮಗಳಾಗಿ ವಿಭಾಗಿಸಿದನು.

    -: ಸಾಹಿತ್ಯ :-

* ಹರ್ಷವರ್ಧನ – ನಾಗಾನಂದ, ಪ್ರಿಯದರ್ಶಿಕ ರತ್ನಾವಳಿ ಎಂಬ ಸಂಸ್ಕೃತ ನಾಟಕಗಳು.

* ಬಾಣಭಟ್ಟ ಹರ್ಷಚರಿತೆ ಕಾದಂಬರಿ ಚಂಡಿ ಶತಕ ಪಾರ್ವತಿ ಪರಿಣಯ.

* ಮಯೂರ ಸೂರ್ಯ ಶತಕ.

* ಭತೃಹರಿ  ಭತೃಹರಿ ಶತಕ.

   -: ಶಾತವಾಹನರು :-

* ಮೌರ್ಯರ ನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ಮಾಡಿದ ಪ್ರಥಮ ಮನೆತನ.

* ಸ್ಥಾಪಕ – ಸಿಮುಖ

* ರಾಜಧಾನಿ – ಫೈತಾನ್ ಅಥವಾ ಪ್ರತಿಷ್ಠಾನ.

* ರಾಜ ಲಾಂಛನ – ವರುಣ.

* ಆರ್. ಜಿ. ಭಂಡಾರ್ಕರ್

ದಕ್ಷಿಣದಲ್ಲಿ ಶಾತವಾಹನರು ನೇಗಿಲನ್ನು ಪರಿಚಯಿಸಿದರು ಎಂಬುವುದಕ್ಕಿಂತ ನೇಗಿಲಿನಿಂದ ಶಾತವಾಹನರು ದಕ್ಷಿಣಕ್ಕೆ ಪರಿಚಿತರಾದರು ಎಂಬುದು ಸೂಕ್ತ ಎಂದಿದ್ದಾರೆ.

     ಸಿಮುಖ.

ನಾನಾಘಾಟ್ ಸಾಸನ ಇವನನ್ನು ರಾಯಸಿಮುಖ ಎಂದು ವರ್ಣಿಸಿದೆ. ಅಲ್ಲದೆ ಜೈನ ಗ್ರಂಥವೊಂದು ಶಾಲಿವಾಹನ ಎಂದು ಕರೆದಿದೆ.

-: ಒಂದನೇ ಶಾತಕರ್ಣಿ :-

* ಈತ ತನ್ನ ದಿಗ್ವಿಜಯಗಳ ಸ್ಮರಣಾರ್ಥ ಎರಡು ಅಶ್ವಮೇಧ ಹಾಗೂ ಒಂದು ರಾಜಸೂಯ ಯಾಗಗಳನ್ನು ಆಚರಿಸಿದನು.

*  ” ದಕ್ಷಿಣ ಪಥಾಪತಿ ” ಎಂಬ ಬಿರುದು ಪಡೆದುಕೊಂಡಿದ್ದನು.

  -: ಹಾಲ ( ಸಾಮಾನ್ಯ ಶಕ 46-51).

* ಈತನು ಶಾತವಾಹನರ 17ನೇ ದೊರೆಯಾಗಿದ್ದ ಶಾಂತಿ ಪ್ರಿಯ ಅರಸನೆಂದು ಖ್ಯಾತನಾಗಿದ್ದಾನೆ.

* ಸ್ವತಹ ಸಾಹಿತಿಯಾಗಿದ್ದ, ಪ್ರಾಕೃತ ಭಾಷೆಯಲ್ಲಿ ಗಾತ ಸಪ್ತಶತಿ ಎಂಬ ಕೃತಿಯನ್ನು ರಚಿಸಿದನು ಇದು 700 ಶೃಂಗಾರ ಕಾವ್ಯಗಳನ್ನು ಒಳಗೊಂಡಿದೆ.

* ಈತನ ಆಸ್ಥಾನ ಕವಿ ಪೈಶಾಚಿ ಪ್ರಾಕೃತ ಭಾಷೆಯಲ್ಲಿ – ಬೃಹತ್ಕಥಾ ಕೃತಿಯನ್ನು ರಚಿಸಿದನು.

* ಈತನೇ ಶಾಲಿವಾಹನ ಶಕೆ ಪ್ರಾರಂಭಿಸಿದನೆಂದು ಹೇಳಲಾಗುತ್ತದೆ.

-: ಗೌತಮಿಪುತ್ರ ಶಾತಕರ್ಣಿ ( ಸಾಮಾನ್ಯ ಶಕ 106-130).

* ಶಾತವಾಹನ ಮನೆತನದ ಪ್ರಸಿದ್ಧ ಅರಸ.

* ಶಕರ ಅರಸನಾದ ನಹಪಾಣನನ್ನು  ಸೋಲಿಸಿ ಆತನ ನಾಣ್ಯಗಳ ಮೇಲೆ ಮರು ಮುದ್ರಣ ಹಾಕಿಸಿದಕ್ಕಾಗಿ ಶಕಾರಿ ಅಥವಾ ಶಿಕಾರಿ ಎಂಬ ಬಿರುದು ಬಂದಿತು.

* ತನ್ನ ಸಾಮ್ರಾಜ್ಯವನ್ನು ಮೂರು ಸಮುದ್ರಗಳ ವರೆಗೆ ವಿಸ್ತರಿಸಿದ್ದಕ್ಕಾಗಿ ತ್ರೈಸಮುದ್ರ ತೋಯ ಪಿತವಾಹನ ( ಅಂದರೆ ಮೂರು ಸಮುದ್ರಗಳ ನೀರನ್ನು ಕುಡಿದ ಕುದುರೆಯನ್ನು ವಾಹನವನ್ನಾಗಿ ಪಡೆದವನು) ಎಂಬ ಬಿರುದು ಪಡೆದಿದ್ದನು.

  -: ಯಜ್ಞಶ್ರೀ ಶಾತಕರ್ಣಿ :-

* ಈತ ಶಾತವಾಹನರ ಕೊನೆಯ ಪ್ರಬಲ ದೊರೆ.

* ಇವನ ನಾಣ್ಯಗಳ ಮೇಲೆ ಹಡಗು ಮತ್ತು ಮೀನಿನ ಚಿತ್ರಗಳು ಇರುವುದರಿಂದ ಉತ್ತಮವಾದ ಸಾಗರ ವ್ಯಾಪಾರ ಹೊಂದಿದ್ದನೆಂದು ಹೇಳಲಾಗಿದೆಹೇಳಲಾಗಿದೆ

       ಆಡಳಿತ.

* ಮೌರ್ಯರ ರೈತ ಪದ್ದತಿಯನ್ನು ಮುಂದುವರಿಸಿದ್ದರು ರಾಜನು ರಾಜ್ಯದ ಎಲ್ಲಾ ಅಧಿಕಾರದ ಕೇಂದ್ರವಾಗಿದ್ದನು ರಾಜನನ್ನು ರಾಜನ್, ಸ್ವಾಮಿನ್ , ರಾಜರಾಣೋ ಎಂದು ಕರೆಯುತ್ತಿದ್ದರು.

  ಆಡಳಿತದ ಅನುಕೂಲಕ್ಕಾಗಿ.

ಜನಪದ ಪ್ರಾಂತ್ಯಾಧಿಕಾರಿ, ಪಟ್ಟಣ ವಿಷಯ ಪತಿ, ಅಗ್ರಹಾರ ಅಮಾತ್ಯ , ಗ್ರಾಮ ಗ್ರಾಮೀಕ ಅಥವಾ ಗೌಡ, ಆಡಳಿತ ಅಧಿಕಾರಿಗಳು ( ಮಂತ್ರಿಮಂಡಲ), ಭಂಡಾರಿಕ ಉಗ್ರಾಣ ಅಧಿಕಾರಿ, ಮಹಾ ಆರ್ಯ ಗ್ರಾಮಾಧಿಕಾರಿ, ಹಿರಣ್ಯಕ ಹಣಕಾಸಿನ ಅಧಿಕಾರಿ, ನಿಬಂಧನಕಾರಿ ಭೂ ದಾಖಲೆ ಅಧಿಕಾರಿ.

* ಸ್ತ್ರೀಯರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಕಾಣಬಹುದು.

* ಸಾಮಾಜಿಕ ಜೀವನ ಚಾತುರ್ವಣಗಳಿಂದ ಕೂಡಿತ್ತು.

* ಅವಿಭಕ್ತ ಕುಟುಂಬ ಸಾಮಾನ್ಯವಾಗಿತ್ತು.

* ಅತಿ ಶೂದ್ರರನ್ನು ಪಂಚಮ ರನ್ನು ಪರಿಗಣಿಸಿ ಅಸ್ಪೃಶ್ಯರೆಂದು ತಿಳಿದಿದ್ದರೂ ಅವರನ್ನು ಸಮಾಜದಿಂದ ದೂರವಿಟ್ಟಿದ್ದರು.

  -: ಆರ್ಥಿಕ ಜೀವನ :-

* ಕೃಷಿ ಪ್ರಮುಖ ಉದ್ಯೋಗವಾಗಿತ್ತು.

* ಗೃಹ ಕೈಗಾರಿಕೆಗಳ ಪ್ರಚಲಿತದಲ್ಲಿತ್ತು.

* ಮುಸ್ಲಿನ್, ಉಣ್ಣೆ ಬಟ್ಟೆ, ಸಾಂಬಾರ್ ಪದಾರ್ಥಗಳು, ಶ್ರೀಗಂಧ ಮುಂತಾದವುಗಳನ್ನು ರಫ್ತು ಮಾಡುತ್ತಿದ್ದರು.

* ಗ್ರೀಕ್ ಮತ್ತು ರೋಮನ್ ಅವರೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು.

* ಇವರ ಕಾಲದ ವಿದೇಶಿ ವ್ಯಾಪಾರದ ಬಗ್ಗೆ ಅನಾಮದೇಯ ರಚಿಸಿದ ಪೇರಿ ಪ್ಲಸ್ ಆಫ್ ದಿ ಎರಿತ್ರಿಯನ್ ಸಿ ಯಲ್ಲಿ ಹಾಗೂ ಸ್ಟ್ರಾಬೋ ಮತ್ತು ಪ್ಲಿನಿ ಬರವಣಿಗೆಗಳಲ್ಲಿ ಉಲ್ಲೇಖವಿದೆ.

* ಈ ಕಾಲದ ಪ್ರಮುಖ ಆಮದುಗಳು – ತಾಮ್ರಾ, ಸೀಸ್, ಪರಿಮಳದ್ರವ್ಯ , ಗಾಜು.

    -: ನಾಣ್ಯಗಳು :-

ಸುವರ್ಣ ದಿನಾರ್ ಎಂಬ ಬಂಗಾರದ ನಾಣ್ಯಗಳು, ಬೆಳ್ಳಿ ಸೀಸದ ಕೂಪಣ ಎಂಬ ನಾಣ್ಯಗಳು ಅಸ್ತಿತ್ವದಲ್ಲಿದ್ದವು.

 ಕಲೆ ಮತ್ತು ವಾಸ್ತು ಶಿಲ್ಪ.

ಇವರ ಕಾಲದ ಪ್ರಮುಖ ಕಲಾ ವಾಸ್ತು ಶಿಲ್ಪ ಕೇಂದ್ರಗಳು ಎಂದರೆ ಅಮರಾವತಿ, ನಾಗಾರ್ಜುನ ಕೊಂಡ, ಅಜಂತ, ಕಾರ್ಲೆ , ನಾಸಿಕ್, ಕನೇರಿ ಮುಂತಾದವು.ಮೂರು ವಿಧದ ಸ್ಮಾರಕಗಳನ್ನು ನಿರ್ಮಿಸಿದರು.

1. ಚೈತಾಲಯಗಳು.

* ಬುದ್ಧನನ್ನು ಪೂಜಿಸುವ ಪ್ರಾರ್ಥನಾ ಸಭಾಂಗಣಗಳೆ ಚೈತ್ಯಗಳು.

*  ಕಾರ್ಲೆ ಚೈತ್ಯಾಲಯ – ಇದು ಭಾರತದ ಅತ್ಯಂತ ಉದ್ದನೆಯ ಹಾಗೂ ಸುಂದರವಾದ ಚೈತಾಲಯವಾಗಿದೆ. ಇದನ್ನು ನಿರ್ಮಿಸಿದ ಶಿಲ್ಪಿ ” ವೈ ಜಯಂತಿ “.

2. ವಿಹಾರಗಳು.

* ಬೌದ್ಧ ಸನ್ಯಾಸಿಗಳ ವಾಸ ಸ್ಥಳಗಳೆ ವಿಹಾರಗಳು.

* ಅಜಂತಾದ 12ನೇ ಗುಹೆ ಏಕಂತಸ್ತ್ತಿನ ಪ್ರಾಚೀನ ಬೌದ್ಧ ವಿಹಾರವಾಗಿದೆ.

* ನಾಸಿಕ್ ನಲ್ಲಿ ಮೂರು ವಿಹಾರಗಳಿವೆ.

3. ಸ್ತೂಪಗಳು .

* ಬುದ್ಧನ ವಿಶೇಷಗಳ ಮೇಲೆ ಗುಮ್ಮಟ ಆಕೃತಿಯಲ್ಲಿ ನಿರ್ಮಿಸಿದ ಕಲಾಕೃತಿಗಳ ಸ್ತೂಪಗಳು.

* ಈ ಕಾಲದ ಸ್ತೂಪಗಳು ಆಂಧ್ರದಲ್ಲಿನ ಅಮರಾವತಿ, ನಾಗಾರ್ಜುನ ಕೊಂಡ, ಗೋಲಿ, ಜಗ್ಗಯ್ಯ ಪೇಟ, ಭಟ್ಟಿ ಪ್ರೊಲು, ಗಂಟಸಾಲಗಳಲ್ಲಿ ಕಂಡುಬರುತ್ತವೆ.

* ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಸನ್ನತಿ ಎಂಬಲ್ಲಿ ಒಂದು ಸ್ತೂಪವಿದೆ.

WhatsApp Group Join Now
Telegram Group Join Now