-: ತುಳುವ ವಂಶ(ಸಾ.ಶ 11503-1565):-
* ಸ್ಥಾಪಕ – ವೀರನರಸಿಂಹ.
ಶ್ರೀಕೃಷ್ಣದೇವರಾಯ (ಸಾ.ಶ1509-1529).
* ದಕ್ಷಿಣ ಭಾರತವನ್ನಾಳಿದ ಸರ್ವಶ್ರೇಷ್ಠ ಸಾಮ್ರಾಟರಲ್ಲಿ ಹಾಗೂ ವಿಜಯನಗರದ ಅರಸರಲ್ಲೆ ಶ್ರೀಕೃಷ್ಣದೇವರಾಯ ಶ್ರೇಷ್ಠನು.
-: ಬಿರುದುಗಳು :-
* ಯವನರಾಜ್ಯ ಪ್ರತಿಷ್ಠಾಪನಾಚಾರ್ಯ, ಆಂಧ್ರಭೋಜಕ, ಕರ್ನಾಟಕ ರಾಜ್ಯರಮಾರಮಣ, ದಕ್ಷಿಣ ಸಮುದ್ರಾಧಿಪತಿ, ಕವಿಪುಂಗವ.
* ರಾಬರ್ಟ್ ಸ್ಯುಯೆಲ್ ಹೇಳುವಂತೆ ಕೃಷ್ಣದೇವರಾಯನು ಅಸಾಮಾನ್ಯ ಪರಾಕ್ರಮಿ. ಚತುರ ಸೇನಾನಿ ಮತ್ತು ರಾಜತಂತ್ರ ನಿಪುಣ.
-: ಸೈನಿಕ ಸಾಧನೆಗಳು :-
1. ಬೀದರ್ ಮತ್ತು ಬಿಜಾಪುರದ ಸುಲ್ತಾನರುಗಳ ವಿರುದ್ಧ ಯುದ್ಧ(1510).
2. ಉಮ್ಮತ್ತೂರಿನ ಪಾಳೆಗಾರರ ದಮನ(1511).
3. ಕಳಿಂಗದ ಮೇಲೆ ದಿಗ್ವಿಜಯ(1513-1518).
ಒಡಿಶಾದ ರಾಜಧಾನಿ ಮೇಲೆ ದಾಳಿ ಮಾಡಿ ಪ್ರತಾಪರುದ್ರದೇವ ಕೃಷ್ಣದೇವರಾಯನಿಗೆ ಶಾಂತಿ ಒಪ್ಪಂದ ಮಾಡಿಕೊಂಡು ತನ್ನ ಮಗಳಾದ ಜಗನ್ಮೋಹಿನಿಯನ್ನು ಕೊಟ್ಟು ವಿವಾಹ ಮಾಡಿದ್ದನು.
4. ಗೋಲ್ಕಂಡ ಮುತ್ತಿಗೆ(1516).
5. ರಾಯಚೂರು ಕಾಳಗ(1520).
6. ಕಲ್ಬುರ್ಗಿ ಮೇಲಿನ ದಾಳಿ
7. ಶ್ರೀಲಂಕಾದ ಮೇಲೆ ದಾಳಿ
-: ಪೋರ್ಚುಗೀಸರೊಡನೆ ಸಂಬಂಧ:-
* ಕೃಷ್ಣದೇವರಾಯ ಪೋರ್ಚುಗೀಸರಿಂದ ಪರ್ಷಿಯನ್ ಮತ್ತು ಅರಬ್ ಕುದುರೆಗಳನ್ನು ಪಡೆಯಲು ಸ್ನೇಹ ಬೆಳೆಸಿದನು.
* ಪೋರ್ಚುಗೀಸರ ವೈಸರಾಯ ಅಲ್ಬುಕರ್ಕ್ ಸಾಮಾನ್ಯ ಶಕ 1510 ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾ ಗೆದ್ದುಕೊಳ್ಳಲು ಕೃಷ್ಣದೇವರಾಯ ಸಹಾಯವನ್ನು ಮಾಡಿದನು.
-: ಸಾಂಸ್ಕೃತಿಕ ಸಾಧನೆಗಳು:-
* 1510ರಲ್ಲಿ ವಿವಾಹ ತೆರಿಗೆ ರದ್ದುಗೊಳಿಸಿದನು.
* ಅಮುಕ್ತ ಮೌಲ್ಯದ ಕೃತಿಯನ್ನು ತೆಲುಗು ಭಾಷೆಯಲ್ಲಿ ರಚಿಸಿದರು.
* ಜಾಂಬವತಿ ಕಲ್ಯಾಣ ಎಂಬ ಸಂಸ್ಕೃತ ನಾಟಕವನ್ನು ರಚಿಸಿದರು.
-: ಈತನ ಆಸ್ಥಾನದಲ್ಲಿದ್ದ ಅಷ್ಟದಿಗ್ಗಜರು :-
1. ಅಲ್ಲಸಾನಿ ಪೆದ್ದಣ್ಣ – ಮನುಚರಿತಂ
2. ನಂದಿ ತಿಮ್ಮಣ – ಪಾರಿಜಾತಹರಣಂ
3. ದೂರ್ಜಟಿ- ಕೃಷ್ಣರಾಜ ವಿಜಯ, ಕಾಳಹಸ್ತಿ ಶತಕ
4. ಮಾದಯ್ಯಗಾರಿ ಮಲ್ಲಣ್ಣ – ರಾಜಶೇಖರ ಚರಿತಂ
5. ರಾಮರಾಜ ಭೂಷಣ – ವಸುಚರಿತಂ
6. ಪಿಂಗಳಿ ಸುರಣ್ಣ – ಕಲಾಪೂರ್ಣ ವಿಜಯಂ
7. ಅಮ್ಯಾಲು ರಾಜರಾಮಭದ್ರ- ರಾಧಮಾಧವ
8. ತೆನಾಲಿ ರಾಮಕೃಷ್ಣ- ಪಾಂಡುರಂಗ ಮಹಾತ್ಮೆ, ಹರಿಭಕ್ತಿಸಾರ
-: ಇವನ ಕಾಲದ ಇತರ ಕವಿಗಳು ಮತ್ತು ಅವರ ಕೃತಿಗಳು :-
* ಕುಮಾರವ್ಯಾಸ – ಗದುಗಿನ ಭಾರತ ಅಥವಾ ಕರ್ನಾಟಕ ಕಥಾಮಂಜರಿ
* ರತ್ನಾಕರವರ್ಣಿ – ಭರತೇಶ ವೈಭವ
* ನಂಜುಂಡ ಕವಿ- ಕುಮಾರರಾಮನ ಕಥೆ
* ವಿರೂಪ ರಾಜ- ತ್ರಿಭುವನ ತಿಲಕ
* ಹರಿದಾಸ- ಇರು ಸಮಯ ವಿಳಕ್ಕಂ
* ದಾಸಸಾಹಿತ್ಯ – ಕನಕದಾಸರ ನಳಚರಿತ್ರೆ, ಮೋಹನ ತರಂಗಿಣಿ ಮತ್ತು ರಾಮಧಾನ್ಯಚರಿತೆ.
* ಹೊನ್ನಮ್ಮ ಎಂಬುವವಳು ಎರಡನೇ ದೇವರಾಯನ ಆಸ್ಥಾನದಲ್ಲಿ ವರದಿಗಾರರಾಗಿದ್ದಳು.
* ವಿಜಯನಗರ ಕಾಲದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ಕುಸ್ತಿ.
* ಹರಿಯಕ್ಕ ಎಂಬುವವಳು ಆ ಕಾಲದ ಖ್ಯಾತ ಮಹಿಳಾ ಕುಸ್ತಿಪಟು.
* ಅನಂತಪುರ ಜಿಲ್ಲೆಯ ಗುತ್ತಿ ಸಮೀಪದ ವಜ್ರ ಕರೂರು ವಜ್ರದ ಕೇಂದ್ರವಾಗಿತ್ತು.
* ಕ್ಯಾಲಿಕಟ್ ನಲ್ಲಿ ನೀಲಗಳು ಹೇರಳವಾಗಿ ದೊರೆಯುತ್ತಿದ್ದವು.
* ಭಟ್ಕಳವು ಕಬ್ಬಿಣದ ಅದಿರಿನ ಕೇಂದ್ರವಾಗಿತ್ತು.
-: ವಿದೇಶಿ ಪ್ರವಾಸಿಗರ ಭೇಟಿ :-
* ಬಾರ್ಬೋಸಾ – ಕ್ರೈಸ್ತನೇ, ಯಹೂದಿಯೇ, ಮಹಮ್ಮದಿಯನೇ ಅಥವಾ ಹಿಂದೂವೇ ಯಾರಾದರೂ ನಿರಾತಂಕವಾಗಿ ಈ ರಾಜ್ಯದಲ್ಲಿ ಬಾಳಬಹುದು.
* ಪೇಸ್ – ದಿನಕ್ಕೊಂದು ಸಂತೆ ನಡೆಯುತ್ತಿತ್ತು.
-: ತಾಳಿಕೋಟೆ ಕದನ( ಸಾಮಾನ್ಯ ಶಕ1565).
* ತಾಳಿಕೋಟೆ ಸಮೀಪದ ರಕ್ಕಸಗಿ ಮತ್ತು ತಂಗಡಗಿ ಗ್ರಾಮಗಳ ಮಧ್ಯದಲ್ಲಿ ಈ ಕದನ ನಡೆಯಿತು.
-: ಸಾಂಸ್ಕೃತಿಕ ಕೊಡುಗೆಗಳು:-
ಆಡಳಿತ
* ಕೃಷ್ಣದೇವರಾಯನ ಅಮುಕ್ತ ಮೌಲ್ಯ ಕೃತಿಯಲ್ಲಿ ” ಕಿರೀಟ ಹೊತ್ತ ರಾಜನ ಸದಾ ಧರ್ಮದ ಮೇಲೆ ಕಣ್ಣಿಟ್ಟು ಆಳಬೇಕು” ಎಂದಿದ್ದಾನೆ.
ಮಂತ್ರಿಮಂಡಲ
ಅಬ್ದುಲ್ ರಜಾಕ್ ಮತ್ತು ನ್ಯೂನಿಜ್ ರಾಜಧಾನಿಯಲ್ಲಿ ಒಂದು ಕೇಂದ್ರಾಡಳಿತ ಕಚೇರಿ ಇತ್ತು ಎಂದಿದ್ದಾರೆ. ರಜಾಕ್ ಇದನ್ನು ದಿವಾನಖಾನೆ ಎಂದು ಕರೆದಿದ್ದಾನೆ.
* ಸಚಿವಾಲಯದ ಕಾರ್ಯದರ್ಶಿಯನ್ನು ರಾಯಸಂ, ಮುಖ್ಯ ಕಾರ್ಯದರ್ಶಿಯನ್ನು ರಾಯಸ ಸ್ವಾಮಿ ಎಂದು ಕರೆಯುತ್ತಿದ್ದರು, ಅಲ್ಲದೆ ಕಾರ್ಯಕರ್ತ ಎಂಬ ಪ್ರಮುಖ ಅಧಿಕಾರಿಯ ಉಲ್ಲೇಖವಿದೆ.
* ರಾಜನ ಆಜ್ಞೆಗಳನ್ನು ಜಾರಿಗೆ ತರುವ ಅಧಿಕಾರಿಯನ್ನು ಶಾಸನಚಾರ್ಯ ಎಂತಲೂ, ಸ್ವಧರ್ಮ ರಕ್ಷಣೆಗೆ ನೇಮಿಸಲ್ಪಟ್ಟ ಅಧಿಕಾರಿಗಳನ್ನು ಸಮಾಯಾಚಾರ್ಯ ಎಂತಲೂ ಕರೆಯುತ್ತಿದ್ದರು.
* ಅಪರಾಧಿಗಳಿಗೆ ಮರಣದಂಡನೆ, ಸೆರೆವಾಸ ಮತ್ತು ದಂಡವನ್ನು ಶಿಕ್ಷೆಗಳಾಗಿ ವಿಧಿಸಲಾಗುತ್ತಿತ್ತು. ಕೆಲವೊಂದು ಸಂದರ್ಭಗಳಲ್ಲಿ ಅಪರಾಧಿಗಳನ್ನು ಆನೆ ಕಾಲಿನಿಂದ ತುಳಸಿ ಸಾಯಿಸುವ ಶಿಕ್ಷೆ ಕೊಡಲಾಗುತ್ತಿತ್ತು.
-: ಈ ಕಾಲದ ಪ್ರಮುಖ ಅಧಿಕಾರಿಗಳೆಂದರೆ :-
* ಸಭಾ ನಾಯಕ( ಶರೀಯತ್ ನ ಮುಖ್ಯಸ್ಥ)
* ಮಹಾಸಂಧಿ ವಿಗ್ರಹಿ( ವಿದೇಶಾಂಗ ವ್ಯವಹಾರ)
ಪ್ರಾಂತೀಯ ಆಡಳಿತ
* ಕ್ರಾಂತಿಯ ಆಡಳಿತವನ್ನು ನಾಯಂಕರ ಪದ್ಧತಿಯೆಂದು ಕರೆಯುತ್ತಿದ್ದರು.
* ರಾಜ್ಯಗಳನ್ನು ವಿಷಯ ಅಥವಾ ವೆಲಾಡಿ ಅಂತಲೂ, ವಿಷಯವನ್ನು ನಾಡು ಅಥವಾ ಸೀಮೆ ಅಂತಲೂ ವಿಭಾಗಿಸಲಾಗಿತ್ತು ಆಡಳಿತದ ಕೊನೆಯ ಘಟಕ ಗ್ರಾಮವಾಗಿತ್ತು.
ಗ್ರಾಮ ಆಡಳಿತ
* ಗೌಡ ಎಂಬ ಅಧಿಕಾರಿ ಗ್ರಾಮದ ಮುಖಂಡನಾಗಿದ್ದನು.
* ಶಾನುಭೋಗ ಗ್ರಾಮದ ಕರಣಿಕನಾಗಿದ್ದನು.
* ಕೇಂದ್ರ ಸರ್ಕಾರ ಮತ್ತು ಗ್ರಾಮದ ಕೊಂಡಿಯಾಗಿ ಗ್ರಾಮ ಸಮಸ್ಯೆ ಬಗೆಹರಿಸುತ್ತಿದ್ದ ಅಧಿಕಾರಿ ಮಹಾನಕ ಚಾರ್ಯ.
* ಗ್ರಾಮ ಸೇವಕನನ್ನು ಆಯಗಾರ ಎಂತಲು, ಗ್ರಾಮಪೀಸರನ್ನು ತಳಾರಿ ಅಂತಲೂ ಕರೆಯುತ್ತಿದ್ದರು.
ಆರ್ಥಿಕ ಜೀವನ
* ಭೂ ಕಂದಾಯ ರಾಜ್ಯದ ಆದಾಯದ ಪ್ರಮುಖ ಮೂಲವಾಗಿತ್ತು.
* ಕೃಷಿ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿತ್ತು.ವಿಜಯನಗರ ಸಾಮ್ರಾಜ್ಯದ ಕಾಲವೂ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಿತ್ತು.
* ಬಟ್ಟೆ ನೆಯ್ಗೆ ಮುಖ್ಯ ಕೈಗಾರಿಕೆ ಆಗಿತ್ತು.
ಸಾಮಾಜಿಕ ಜೀವನ
* ಸಮಾಜವು ಚಾತುರ್ವರ್ಣ ವ್ಯವಸ್ಥೆ ಮೇಲೆ ರೂಪಗೊಂಡಿತ್ತು.
* ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ ಮತ್ತು ದೇವದಾಸಿ ಪದ್ಧತಿಗಳು ಅಸ್ತಿತ್ವದಲ್ಲಿದ್ದವು.
ಧಾರ್ಮಿಕ ವ್ಯವಸ್ಥೆ
* ವಿಜಯನಗರ ಎಲ್ಲ ಮತಗಳಿಗೂ ಪ್ರೋತ್ಸಾಹ ನೀಡಿದ ಕೀರ್ತಿಗೆ ಪಾತ್ರವಾಗಿದೆ.
* ಶ್ರೀ ವೈಷ್ಣವ ಮತ್ತು ಜೈನ ಮತಾವಲಂಬಿಗಳು ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಗೌರವದಿಂದ ಬಾಳುವಂತ ವಾತಾವರಣ ನಿರ್ಮಾಣವಾಗಿತ್ತು.
* ವಿಜಯನಗರದಲ್ಲಿ ಮುಸ್ಲಿಮರಿಗೆ ಮಸೀದಿಗಳನ್ನು ಕಟ್ಟಿಸಲಾಯಿತು.
ಶಿಕ್ಷಣ ಮತ್ತು ಸಾಹಿತ್ಯ.
* ಧೂಳಾಕ್ಷರ ಎಂಬುದು ಒಂದು ಶಿಕ್ಷಣ ಪದ್ಧತಿಯಾಗಿದ್ದು ಅದು ಕನಕದಾಸರ ಮೋಹನ ತರಂಗಿಣಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇದು ಮರಳಿನ ಮೇಲೆ ಬರೆಯುವ, ಕಲಿಕೆಯ ಪದ್ಧತಿಯಾಗಿತ್ತು.
* ಪ್ರಾಥಮಿಕ ಶಿಕ್ಷಣವನ್ನು ” ಬಾಲ ಭೋದೆ” ಎಂದು ಕರೆಯಲಾಗುತ್ತಿತ್ತು.
* ಹಂಪಿ, ಕೋಡಿಮಠ, ಶೃಂಗೇರಿ, ಯಡಿಯೂರು ಹಾಗೂ ಕುಣಿಗಲ್ ಕಾಲದ ಪ್ರಮುಖವಾದ ಶಿಕ್ಷಣ ಕೇಂದ್ರಗಳಾಗಿದ್ದವು.
-: ವಿಜಯನಗರ ಕಾಲದ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯ :-
* ಮಾಧವ – ಸಾಯಣ- ಪರಾಸರ ಮಾಧವಿಯ
* ಗಂಗಾದೇವಿ – ಮಧುರ ವಿಜಯಂ
* ತಿರುಮಲಾಂಬ- ವರದಾಂಬಿಕೆ ಪರಿಣಯಂ
* ಗುರುವಿದ್ಯಾರಣ್ಯ – ರಾಜಕಾಲನಿರ್ಣಯ, ಶಂಕರ ವಿಜಯ, ಸರ್ವದರ್ಶನ ಸಂಗ್ರಹ
* ಕೃಷ್ಣದೇವರಾಯ – ಜಾಂಬವತಿ ಕಲ್ಯಾಣ, ಉಷಾ ಪರಿಣಯಂ
ಕನ್ನಡ ಸಾಹಿತ್ಯ
* ಕುಮಾರವ್ಯಾಸ – ಕರ್ನಾಟಕ ಕಥಾಮಂಜರಿ
* ರತ್ನಾಕರವರ್ಣಿ – ಭರತೇಶ ವೈಭವ
* ಭೀಮಕವಿ – ಬಸವ ಪುರಾಣ
* ಚಾಮರಸ – ಪ್ರಭುಲಿಂಗ ಲೀಲೆ
* ವಿರುಪಾಕ್ಷ ಪಂಡಿತ – ಚನ್ನಬಸವ ಪುರಾಣ
* ಕನಕದಾಸ – ಮೋಹನ ತರಂಗಿಣಿ, ನಳ ಚರಿತೆ, ಹರಿಭಕ್ತಸಾರ, ರಾಮಧ್ಯಾನ ಚರಿತೆ.
* ನರಹರಿ – ತೊರವೆ ರಾಮಾಯಣ
* ಶ್ರೀನಾಥ – ಕಾಶಿ ಕಂದ
* ಕೃಷ್ಣದೇವರಾಯ – ಅಮುಕ್ತ ಮೌಲ್ಯದ
* ಅಲ್ಲಸಾನಿ ಪೆದ್ದಣ್- ಮನುಚರಿತಂ ( ಆಂಧ್ರ ಕವಿ ಪಿತಾಮಹ)
ಕಲೆ ಮತ್ತು ವಾಸ್ತು ಶಿಲ್ಪ
* ಪರ್ಷಿ ಬ್ರೌನರು ವಿಜಯನಗರದ ವಾಸ್ತುಶಿಲ್ಪ ಶೈಲಿಯನ್ನು ದ್ರಾವಿಡ ಶೈಲಿಯ ಶ್ರೇಷ್ಠ ವಿಕಸಿತ ರೂಪ ಎಂದು ವರ್ಣಿಸಿದ್ದಾನೆ.
* ಇವರು ದ್ರಾವಿಡ ಶೈಲಿಯನ್ನು . ನಂತರ ಕೆಲವೊಂದು ವಿಶಿಷ್ಟವಾದ ಲಕ್ಷಣಗಳನ್ನು ಸೇರಿಸಿದರು.
* ಲೇಪಾಕ್ಷಿಯನ್ನು ಶೈವರ ಅಜಂತಾ ಎಂದು ಕರೆಯಲಾಗಿದೆ.