* 1336ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದವರು ಹರಿಹರ ಮತ್ತು ಬುಕ್ಕರಾಯ.(ಮಾರಪ್ಪ, ಮುದ್ದಪ್ಪ ಮತ್ತು ಕಂಪನ)
* ತುಂಗಭದ್ರಾ ನದಿಯ ದಕ್ಷಿಣ ದಡದ ಮೇಲೆ ಸಾಮ್ರಾಜ್ಯ ಸ್ಥಾಪನೆ ಆಯಿತು.
* ವಿದ್ಯಾರಣ್ಯರ ಮಾರ್ಗದರ್ಶನದೊಂದಿಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆಯಿತು.
* ಲಾಂಛನ- ವರಾಹ
-: ವಿಜಯನಗರ ಸಾಮ್ರಾಜ್ಯದ 4 ರಾಜವಂಶಗಳು :-
1. ಸಂಗಮ ವಂಶ(ಸಾ.ಶ1336-1485)
2. ಸಾಳುವ ವಂಶ(ಸಾ.ಶ.1485-1505)
3. ತುಳುವ ವಂಶ(ಸಾ.ಶ 1505-1570)
4. ಅರವೀಡು ವಂಶ(ಸಾ.ಶ 1571-1646)
ಸಂಗಮ ವಂಶ ( ಸಾ.ಶ 1336-1485).
* ಒಂದನೇ ಹರಿಹರ ಸಂಗಮ ವಂಶದ ಸ್ಥಾಪಕ.
* ಇವನ ಆಳ್ವಿಕೆಯ ಕಾಲದಲ್ಲಿ ಅಲ್ಲಾ-ಉದ್-ದೀನ್ – ಹಸನ್ ಗಂಗು ಬಹಮನ್ ಷಾ ಸಾಮಾನ್ಯ ಶಕ 1347ರಲ್ಲಿ ಬಹುಮನಿ ಸಾಮ್ರಾಜ್ಯ ಸ್ಥಾಪಿಸಿದನು.
ಒಂದನೇ ಹರಿಹರ( ಸಾ.ಶ 1336-1356).
* ಸಂಗಮ ವಂಶದ ಮೊದಲ ದೊರೆ.
* ಇವನ ಕಾಲದಲ್ಲಿ ವೇದಗಳ ಮೇಲೆ ಭಾಷ್ಯಗಳು ರಚನೆಯಾಗಿದ್ದ ರಿಂದ ಇವನನ್ನು ವೇದ ಮಾರ್ಗ ಸ್ಥಾಪನಾಚಾರ್ಯ ಎಂಬುದು ಹರಿಹರನ ಬಿರುದು.
ಒಂದನೇ ಬುಕ್ಕರಾಯ(ಸಾ.ಶ 1356-1377).
* ಈತನ ಪುತ್ರ ಕಂಪಣ್ಣನು ಸಾಮ್ರಾಜ್ಯವನ್ನು ವಿಸ್ತರಿಸಿದ.( ಮಧುರೈ ಸುಲ್ತಾನನನ್ನು ಪದಚ್ಯುತಿಗೊಳಿಸಿ)
* ಕಂಪಣ ವಿಜಯವನ್ನು ಕುರಿತು ಅವನ ಹೆಂಡತಿ ಗಂಗಾದೇವಿಯು ಮಧುರ ವಿಜಯಂ ಎಂಬ ಸಂಸ್ಕೃತ ಕೃತಿ ರಚಿಸಿದರು.
* ಚೀನಾ ದೇಶಕ್ಕೆ ಮಿಂಗ್ ವಂಶದ ಸಾಮ್ರಾಟನ ಆಸ್ಥಾನಕ್ಕೆ ಬುಕ್ಕರಾಯ ರಾಯಭಾರಿಯನ್ನು ಕಳಿಸಿದ್ದನು.
ಎರಡನೇ ಹರಿಹರ(ಸಾ.ಶ 1377-1404).
* ಸಾಮ್ರಾಟ ಎಂದು ಘೋಷಿಸಿಕೊಂಡ ಮೊದಲ ವಿಜಯನಗರದ ದೊರೆ.
ಒಂದನೇ ದೇವರಾಯ( ಸಾ.ಶ1406-1422).
* ಇವನು ಬಹುಮನಿ ಸುಲ್ತಾನ ಫಿರೋಜ್ ಶಾನೊಂದಿಗೆ ಯುದ್ಧವನ್ನು ಗೆಲ್ಲುತ್ತಾನೆ. ಇದ್ದವನ್ನು ಅಕ್ಕಸಾಲಿಗ ಹುಡುಗಿ ಯುದ್ಧ ಎನ್ನುವರು.
* ತುಂಗಭದ್ರೆಗೆ ಅಡ್ಡಲಾಗಿ 15 ಮೈಲು ಉದ್ದದ ಅಣೆಕಟ್ಟನ್ನು ಕಟ್ಟಿ ಕಾಲುವೆ ನಿರ್ಮಿಸಿ ಸುಂದರ ನಗರವನ್ನಾಗಿ ರೂಪಿಸಿದನು.
* ಇವನ ಕಾಲದಲ್ಲಿ ಇಟಲಿಯ ವೆನಿಷಿಯಾದ ಪ್ರವಾಸಿ ನಿಕೊಲೊ- ಡಿ- ಕೊಂತಿ ಭೇಟಿ ನೀಡಿದ್ದನು.
ಎರಡನೇ ದೇವರಾಯ ( ಸಾ.ಶ 1424-1446).
* ಇವನು ಸಂಗಮ ವಂಶದ ಶ್ರೇಷ್ಠ ದೊರೆ.
* ಪ್ರತಾಪ ರುದ್ರ ಇವನಿಗೆ ಇರುವ ಇನ್ನೊಂದು ಹೆಸರು.
* ಇವನನ್ನು ಎರಡನೆಯ ದೇವರಾಯ/ ಪ್ರೌಢದೇವರಾಯ ಎಂದು ಕರೆಯುತ್ತಾರೆ.
* ಇವನಿಗೆ ಗಜಬೇಂಟೆಗಾರ ಎಂಬ ಬಿರುದು ಇತ್ತು.
* ಇವನು ತನ್ನ ಸೇನಾಪತಿ ಲಕ್ಕಣ್ಣ ದಂಡೇಶ ಶ್ರೀಲಂಕಾದ ವರಿಗೆ ದಂಡೆತ್ತಿ ಹೋಗಿ ಕಪ್ಪ ಕಾಣಿಕೆಯನ್ನು ಪಡೆದಿದ್ದರಿಂದ ಇವನನ್ನು ” ದಕ್ಷಿಣ ಸಮುದ್ರಾಧಿಪತಿ ” ಎಂದು ಕರೆಯುತ್ತಾರೆ.
* ಕುರಾನಿನ ಪ್ರತಿಯನ್ನು ತನ್ನ ಸಿಂಹಾಸನ ಮೇಲಿಟ್ಟು ಆಳ್ವಿಕೆ ಮಾಡಿದರು.
* ಪ್ರೌಢದೇವರಾಯನ ಆಸ್ಥಾನಕ್ಕೆ ಪರ್ಸಿಯಾದ ರಾಜ ಶಾರುಖ್ ತನ್ನ ರಾಯಭಾರಿ ಅಬ್ದುಲ್ ರಜಾಕ್ ನನ್ನು ಕಳುಹಿಸಿದನು. ಇವನು ವಿಜಯನಗರ ಸಾಮ್ರಾಜ್ಯದ ಕುರಿತು, ವಿಜಯನಗರ ದಂತ ನಗರ ಈ ಭೂಮಿಯ ಮೇಲಿಲ್ಲ, ಮತ್ತು ಇಂತಹ ನಗರವನ್ನು ಕಣ್ಣು ಕಂಡಿಲ್ಲ ಕಿವಿ ಕೇಳಿಲ್ಲ, ರಾಯರಂತಹ ರಾಯ ಮತ್ತೊಬ್ಬರಿಲ್ಲ ಎಂದು ವರ್ಣಿಸಿದನು.
* ಎರಡನೇ ದೇವರಾಯನ ಒರಿಸ್ಸಾದ ಗಜಪತಿ ಕಪಿಲೆಂದ್ರನನ್ನು ಸೋಲಿಸಿ ಕೊಂಡವೀಡನ್ನು ಗೆದ್ದುಕೊಂಡನು ಗಡಿ ಪ್ರದೇಶದ ನಾಯಕರುಗಳನ್ನು ಅಡಗಿಸಿ ಈಶಾನ್ಯ ಗಡಿಯನ್ನು ಕೃಷ್ಣಾ ನದಿಯವರೆಗೂ ವಿಸ್ತರಿಸಿದ ನಂತರ ಕೇರಳವನ್ನು ಗೆದ್ದು, ಕೇರಳ ಶ್ರೀಲಂಕಾದಿಂದ ಕಪ್ಪ ಕಾಣಿಕೆಗಳನ್ನು ಸ್ವೀಕರಿಸಿದನು. ಇದರಿಂದ ” ದಕ್ಷಿಣ ಪಥದ ಚಕ್ರವರ್ತಿ” ಎನಿಸಿದ.
* ಎರಡನೇ ದೇವರಾಯನ ದಳಪತಿಯಾದ ಲಕ್ಕಣ್ಣ ದಂಡೇಶನ್ ಒಂದು ನೌಕ ವಿಜಯ ಯಾತ್ರೆಯನ್ನು ಕೈಗೊಂಡು ಯಶಸ್ವಿಯಾದನು. ಈತನು ಪರ ಮತ ಸಹಿ ಷ್ಣುವಾಗಿದ್ದನು. ರಾಜಧಾನಿಯಲ್ಲಿ ಮಸೀದಿಯನ್ನು ನಿರ್ಮಿಸಿದನು.
ಸಾಂಸ್ಕೃತಿಕ ಸಾಧನೆ.
* ಈತ ಸರ್ವಧರ್ಮ ಸವಿಷ್ಣುವಾಗಿದ್ದನು.
* ಮುಸ್ಲಿಮರು ಕುದುರೆಯನ್ನು ಪಳಗಿಸುವ ಕಲೆಯಲ್ಲಿ ಹಾಗೂ ಬಿಲ್ವಿದ್ಯೆಯಲ್ಲಿ ಪರಿಣಿತರಾಗಿದ್ದರಿಂದ ತನ್ನ ಸೈನ್ಯಕ್ಕೆ ಸೇರಿಸಿಕೊಂಡನು.
* ಕುಮಾರವ್ಯಾಸ ಗದುಗಿನ ಭಾರತದ ಪ್ರಾರಂಭದ ಹತ್ತು ಪರ್ವತಗಳನ್ನು ಕನ್ನಡದಲ್ಲಿ ರಚಿಸಿದನು.( ಇದನ್ನು ಗದುಗಿನ ಭಾರತ ಅಥವಾ ಕರ್ನಾಟಕ ಭಾರತ ಕಥಮಂಜರಿ ಎನ್ನುವರು).
* ಲಕ್ಕಣ್ಣ ದಂಡೇಶ ಕನ್ನಡದಲ್ಲಿ ಶಿವತತ್ವ ಚಿಂತಾಮಣಿ ಎಂಬ ಕೃತಿಯನ್ನು ರಚಿಸಿದನು.
-: ಸಾಳುವ ವಂಶ ( ಸಾ.ಶ 1485-1503).:-
* ಸಾಳುವ ನರಸಿಂಹ
* ಸಾಳುವ ಎಂದರೆ ಗರುಡ ಎಂದರ್ಥ.