ಶಿಲಾಗೋಳ (Lithosphere). TET, GPSTR, HSTR, PDO, FDA, SDA All Competative exam notes.

    -: ಶಿಲಾಗೋಳ :-

ಶಿಲೆಗಳ ಕುರಿತು ವೈಜ್ಞಾನಿಕ ಅಧ್ಯಯನವನ್ನು ಶಿಲಾ ವಿಜ್ಞಾನ/Petrology ಎಂದು ಕರೆಯುತ್ತಾರೆ.

* ಭೂಮಿಯ ಅತ್ಯಂತ ಮೇಲ್ಭಾಗದ ಘನ ಪದರವನ್ನು ಶಿಲಾಗೋಳ ಎನ್ನುವರು.

-: ಭೂಮಿಯ ಅಂತರಾಳದ ರಚನೆ ಮತ್ತು ಸಂಯೋಜನೆ :-

* ನಮ್ಮ ಭೂಮಿಯು 4.6 ದಶಲಕ್ಷ ಕೋಟಿ ವರ್ಷಗಳಿಗಿಂತ ಹಳೆಯದಾಗಿದೆ.

* ಭೂಮಿಯ ಅಂತರಾಳದ ಬಗ್ಗೆ ಹೆಚ್ಚು ತಿಳಿಯಲು ಮಾನವನು ಪರೋಕ್ಷ ಮೂಲಗಳನ್ನು ಅವಲಂಬಿಸಿದ್ದಾನೆ.

ಅವುಗಳಲ್ಲಿ ಮುಖ್ಯವಾದವುಗಳೆಂದರೆ.

1. ಭೂಕಂಪನದ ಅಲೆಗಳು.

2. ಜ್ವಾಲಾಮುಖಿಯ ವಸ್ತುಗಳು.

ಭೂಮಿಯ ಅಂತರಾಳವು ವಿವಿಧ ಬಗೆಯ ವಸ್ತುಗಳನ್ನು ವಿವಿಧ ರೂಪಗಳಲ್ಲಿ ಒಳಗೊಂಡಿದೆ ವಸ್ತುಗಳ ಸಾಂದ್ರತೆ, ರಾಸಾಯನಿಕ ಸಂಯೋಜನೆ ಮತ್ತು ಭೌತ ದ್ರವ್ಯಗಳ ರೂಪದ ಆಧಾರದ ಮೇಲೆ ಭೂಮಿಯ ಅಂತರಾಳವನ್ನು ಮೂರು ಪದರಗಳಾಗಿವೆ ನಡೆಸಲಾಗಿದೆ ಅವುಗಳೆಂದರೆ.

1. ಭೂಚಿಪ್ಪು – Crust

2. ಮ್ಯಾಂಟಲ್ – Mantle

3. ಕೇಂದ್ರ ಗೋಳ – Core

-: 1. ಭೂ ಚಿಪ್ಪು ( Crust).:-

* ಇದು ಭೂಮಿಯ ಅತ್ಯಂತ ಮೇಲ್ಭಾಗದ ಪದರು.

* ಇದು ಹೆಚ್ಚಾಗಿ ಸಿಲಿಕ್, ಅಲುಮಿನಿಯಂ ಮತ್ತು ಮೆಗ್ನೀಷಿಯಂ ಗಳಿಂದ ಕೂಡಿದೆ ಇದನ್ನು ಶಿಲಾಗೋಳ ಎನ್ನುವರು.

* ಇದು ಭೂಮಿಯ ಮೇಲ್ಬಾಗದಿಂದ ಸುಮಾರು 60 ಕಿಲೋಮೀಟರ್ ಆಳದವರೆಗೆ ವಿಸ್ತರಿಸಿದೆ.

* ಇದರಲ್ಲಿ ಈ ಕೆಳಗಿನ ಎರಡು ಪದರಗಳನ್ನು ನೋಡಬಹುದು.

1. ಸಿಯಾಲ್ – ಸಿಲಿಕ್ ಮತ್ತು ಅಲುಮಿನಿಯಂ ಗಳ ಪ್ರಮಾಣ ಹೆಚ್ಚಾಗಿರುತ್ತದೆ. ಇದನ್ನು ಭೂಖಂಡದ ಮೇಲ್ಪದರೂ ಎಂದು ಕರೆಯುತ್ತಾರೆ.

2. ಸೈಮಾ – ಇದು ಭೂ ಚುಪ್ಪಿನ ಕೆಳಭಾಗವಾಗಿದ್ದು ಸಿಲಿಕ್ ಮತ್ತು ಮೆಗ್ನೀಷಿಯಂ ಗಳಿಂದ ಕೂಡಿದ್ದು ಹೆಚ್ಚು ಸಾಂದ್ರತೆ ಹೊಂದಿದೆ. ಇದನ್ನು ಸಾಗರಿಯ ಮೇಲ್ಪದರ ಎಂದು ಕರೆಯುತ್ತಾರೆ.

ಭೂ ಚಿಪ್ಪು ಮತ್ತು ಮ್ಯಾಂಟಲ್ ಸಂಧಿಸುವ ಸೀಮಾ ವಲಯವನ್ನು ಮೊಹೊ ರೋವಿಸಿಕ್/ ಮೋಹೋ ವಲಯ ಎಂದು ಕರೆಯುತ್ತಾರೆ.

-: 2.ಮ್ಯಾಂಟಲ್ (Martle):-

* ಇದು ಭೂಮಿಯ ಅಂತರಾಳದ ಎರಡನೇ ಹಾಗೂ ಮಧ್ಯಭಾಗದ ಪದರು.

* ಮ್ಯಾಂಟಲ್ ವಲಯವು ಭೂಮಿಯಿಂದ ಸುಮಾರು 2900 ಕಿಲೋಮೀಟರ್ ಆಳದವರೆಗೆ ವಿಸ್ತರಿಸಿದೆ.

-: ಮ್ಯಾಂಟಲ್ ನಲ್ಲಿ ಎರಡು ಭಾಗಗಳಿವೆ :-

1. ಏಸ್ತೆನೋಸ್ಪಿಯರ್ ( ಮೇಲ್ಪದರು) – ಇದು ಭಾಗಶ: ದ್ರವರೂಪದಲ್ಲಿ ಇದೆ.

2. ಮೆಸಾಸ್ಪಿಯರ್ ( ಕೆಳ ಪದರು)- ಇದು ಭಾಗಶಃ ಘನ ರೂಪದಲ್ಲಿರುತ್ತದೆ.

-: 3. ಕೇಂದ್ರ ಗೋಳ (Core):-

* ಇದು ಭೂಮಿಯ ಅತ್ಯಂತ ಒಳಭಾಗ.

* ಇದು ಭೂಮಿಯ ಮೇಲ್ಮೈನಿಂದ 6371 ಕಿಲೋಮೀಟರ್ ಆಳದವರೆಗೆ ಕಂಡುಬರುತ್ತದೆ.

* ಕೇಂದ್ರಗಳು ಪ್ರಧಾನವಾಗಿ ನಿಕ್ಕಲ್ Ni, ಮತ್ತು ಕಬ್ಬಿಣ Fe ವಸ್ತುಗಳಿಂದ ಕೂಡಿರುವುದು. ಇದರಿಂದ ಕೇಂದ್ರ ಒಳ್ಳೆಯವನು ಸಾಂಕೇತಿಕವಾಗಿ ನಿಫೆ ಎಂದು ಕರೆಯಲಾಗಿದೆ.

-: ಕೇಂದ್ರ ಗೋಳದಲ್ಲಿ ಎರಡು ಉಪಯೋಗ ವಲಯಗಳು ಕಂಡುಬರುತ್ತವೆ.:-

1. ಹೊರ ಕೇಂದ್ರ ಗೋಳ – ಇದು ಅರೆ ದ್ರವರೂಪ ಸ್ಥಿತಿಯಲ್ಲಿ ಕಂಡು ಬರುತ್ತದೆ.

2. ಒಳ ಕೇಂದ್ರ ಗೋಳ – ಇದು ಘನ ಸ್ಥಿತಿಯಲ್ಲಿರುತ್ತದೆ.

  -: ಶಿಲೆಗಳು :-

* ಇವುಗಳನ್ನು ಮೂರು ಮುಖ್ಯ ವಿಧಗಳಾಗಿ ವಿಂಗಡಿಸಲಾಗಿದೆ ಅವುಗಳೆಂದರೆ.

1. ಅಗ್ನಿ ಶಿಲೆಗಳು

2. ಕಣ ಶಿಲೆಗಳು

3. ರೂಪಾಂತರ ಶಿಲೆಗಳು.

-: ಅಗ್ನಿ ಶಿಲೆಗಳು:-

* ಅಗ್ನಿ ಶಿಲೆಗಳನ್ನು ಆಂಗ್ಲ ಭಾಷೆಯಲ್ಲಿ ಇಗ್ನಿಯಸ್ಸ ರಾಕ್ಸ್ ಎಂದು ಕರೆಯುತ್ತಾರೆ.

* ಇಗ್ನೇಷಿಯಸ್ ಎಂದರೆ ಬೆಂಕಿ ಎಂದರ್ಥ. ಇದು ಲ್ಯಾಟಿನ್ ಭಾಷೆಯ ಇಗ್ನಿಸ್ ಅಥವಾ ಸಂಸ್ಕೃತದ ಅಗ್ನಿ ಎಂಬ ಪದದಿಂದ ಬಂದಿದೆ.

* ಅಗ್ನಿಶಿಲೆಗಳು ಮೊದಲು ನಿರ್ಮಾಣವಾಗುವುದರಿಂದ ಇವುಗಳನ್ನು ಪ್ರಾಥಮಿಕ ಶಿಲೆಗಳು ಎಂದು ಕರೆಯುವರು.

-: ಅಗ್ನಿ ಶಿಲೆಗಳ ವಿಧಗಳು :-

 1. ಅಂತಸ್ಸರಣ ಶಿಲೆಗಳು

a. ಅಂತರಾಗ್ನಿ ಶಿಲೆಗಳು – ಗ್ರಾನೈಟ್ ( ಹರಳುತ್ಪತಿ)

b. ಡೈಕ್ ಶಿಲೆಗಳು – ಡೋಲೊರೈಟ್ ( ಭಾಗಶಃ ಹರಳುತ್ಪತಿ).

2. ಬಹಿಸ್ಸರಣ ಶಿಲೆಗಳು .

ಲಾವಾ ಅಥವಾ ಜ್ವಾಲಾಮುಖಿ ಜನ್ಯ ಶಿಲೆಗಳು – ಬಸಾಲ್ಟ್ ಶಿಲೆ.

-: ಅಂತಸ್ಸರಣ ಶಿಲೆಗಳು :-

* ಶಿಲಾ ಪಾಕ ಅಥವಾ ಮ್ಯಾಗ್ಮಾ ಭೂಮಿಯ ಮೇಲ್ಮೈಯನ್ನು ತಲುಪುವ ಮೊದಲೇ ಕೆಲವು ವೇಳೆ ಅಂತರಾಳದಲ್ಲಿ ತಂಪಾಗಿ ಘನಿಭವಿಸಿ ನಿಧಾನವಾಗಿ ಶಿಲೆಗಳು ನಿರ್ಮಿತವಾಗುತ್ತವೆ. ಇಂತಹ ಶಿಲೆಗಳನ್ನು ಅಂತ ಸ್ಸರಣ ಶಿಲೆಗಳು ಎನ್ನುವರು.

* ಉದಾಹರಣೆ – ಗ್ರಾನೈಟ್, ಡಯೋರೈಟ್, ಗ್ಯಾಬ್ರೋ

ಶಿಲಾ ವಸ್ತುಗಳು ಭೂಮಿಯ ಒಳಭಾಗದಲ್ಲಿ ಕರಗಿ ದ್ರವ/ಅರೆ ದ್ರವ ರೂಪದಲ್ಲಿ ಇರುತ್ತದೆ. ಇದನ್ನು ಮ್ಯಾಗ್ಮಾ ಎನ್ನುವರು. ಇದು ಭೂಮಿಯ ಹೊರಭಾಗಕ್ಕೆ ಬಂದಾಗ ಲಾವಾರಸ ಎನ್ನುವರು.

-: ಬಹಿಸ್ಸರಣ ಶಿಲೆಗಳು :-

* ಶಿಲಾ ಪಾಕವು ಕ್ರಮೇಣ ಭೂಮಿಯಲ್ಲಿ ತಂಪಾಗಿ ಉತ್ಪತ್ತಿಯಾದ ಶಿಲೆಗಳನ್ನು ಬಹಿಸ್ಸರಣ ಶಿಲೆಗಳು ಎಂದು ಕರೆಯಲಾಗಿದೆ.

* ಈ ಶಿಲೆಗಳು ಸಾಮಾನ್ಯವಾಗಿ ಸಣ್ಣ ಹರಳುಗಳಿಂದ ಕೂಡಿದ್ದು ಗಾಜಿನಂತೆ ನಯವಾಗಿರುತ್ತದೆ. ಏಕೆಂದರೆ ಲಾವರಸವು ಭೂಮಿಯ ಮೇಲೆ ಬಹುಬೇಗ ತಂಪಾಗಿ, ಘನೀಭವಿಸಿ ಶಿಲೆಗಳಾಗುತ್ತವೆ.

* ಉದಾಹರಣೆ- ಬಸಾಲ್ಟ್, ಆಂಡೆಸೈಟ್.

-: 2. ಕಣ ಶಿಲೆಗಳು :-

* ಇದು ಆಂಗ್ಲ ಭಾಷೆಯ ಸೆಡಿಮೆಂಟರಿ ಪದವು ಭಾಷೆಯ ಲ್ಯಾಟಿನ್ ಭಾಷೆಯ ಸೆಡಿಮೆಂಟಮ್ ಎಂಬ ಪದದಿಂದ ಬಳಕೆಗೆ ಬಂದಿದೆ. ಅಂದರೆ ತಳ ಸೇರುವಿಕೆ ಎಂದರ್ಥ.

-: ಈ ಶಿಲೆಗಳಲ್ಲಿ ಎರಡು ವಿಧಗಳನ್ನು ಕಾಣಬಹುದು :-

1. ಜೈವಿಕ ಶಿಲೆಗಳು

2. ಅಜೈವಿಕ ಶಿಲೆಗಳು

1. ಜೈವಿಕ ಶಿಲೆಗಳು.

a. ಚೂರ್ಣಾಧಿಕ್ಯ ಶಿಲೆಗಳು – ಸುಣ್ಣದ ಕಲ್ಲು

b. ಇಂಗಾಲಾಧಿಕ್ಯ ಶಿಲೆಗಳು – ಕಲ್ಲಿದ್ದಲು

2. ಅಜೈವಿಕ ಶಿಲೆಗಳು.

a. ಭೌತಿಕ ಕ್ರಿಯೆಯಿಂದಾದ ಕಣಶಿಲೆಗಳು – ಮರಳುಗಲ್ಲು.

b. ರಾಸಾಯನಿಕ ಕ್ರಿಯೆಯಿಂದಾದ ಕಣ ಶಿಲೆಗಳು – ಜೆಡಿ ಶಿಲೆ

-: ಭೌತಿಕ ಕ್ರಿಯೆಯಿಂದಾದ ಕಣ ಶಿಲೆಗಳು :-

* ಶೀತಲೀಕರಣ ಮತ್ತು ನಗ್ನೀಕರಣ ಕಾರ್ಯದಿಂದ ಮೂಲ ಶಿಲೆಗಳಿಂದ ಉತ್ಪತ್ತಿಯಾಗುತ್ತದೆ.

* ಉದಾಹರಣೆಗೆ – ಮರಳುಗಲ್ಲು ( ಮರಳು ಮಯ ಶಿಲೆ) , ಜೆಡಿ ಶಿಲೆ.

-: ರಾಸಾಯನಿಕ ಕ್ರಿಯೆಯಿಂದಾದ ಕಣಶಿಲೆಗಳು :-

* ಲವಣಾಂಶಗಳಿಂದ ಕೂಡಿರುವ ದ್ರಾವಣವೂ ಉಷ್ಣಾಂಶದಿಂದ ಭಾಷ್ಪಿ ಭವನ ಗೊಳ್ಳುವುದರಿಂದ ರಾಸಾಯನಿಕ ಕಣಗಳು ಸಂಚಯನಗೊಂಡು ನಿರ್ಮಾಣವಾಗುತ್ತವೆ.

* ಉದಾಹರಣೆ – ಕಲ್ಲುಪ್ಪು, ಜಿಪ್ಸಂ ಇತ್ಯಾದಿ.

-: ಜೈವಿಕ ಕ್ರಿಯೆಗಳಿಂದ ಉಂಟಾದ ಕಣಶಿಲೆಗಳು:-

* ಜೀವಾವಶೇಷಗಳಾದ ಜಲಚರಗಳ ಚಿಪ್ಪುಗಳು, ಸಸ್ಯವರ್ಗ ಮತ್ತು ಪ್ರಾಣಿ ವರ್ಗಗಳ ಪಳೆಯುಳಿಕೆಗಳು ಮಣ್ಣಿನಲ್ಲಿ ಸೇರಿ ಗಟ್ಟಿಯಾಗಿ ಜೈವಿಕ ಕಣಶಿಲೆಗಳು ನಿರ್ಮಾಣವಾಗುತ್ತವೆ.

* ಉದಾಹರಣೆ – ಸುಣ್ಣದ ಕಲ್ಲು, ಕಲ್ಲಿದ್ದಲು.

-: ರೂಪಾಂತರ ಶಿಲೆಗಳು :-

* ಅಗ್ನಿ ಶಿಲೆಗಳು ಮತ್ತು ಕಣ ಶಿಲೆಗಳು ಅತ್ಯಧಿಕ ಉಷ್ಣಾಂಶ ಹಾಗೂ ಒತ್ತಡದ ಪರಿಣಾಮದಿಂದಾಗಿ ಮಾರ್ಪಾಡು ಹೊಂದಿ ರೂಪಾಂತರ ಶಿಲೆಗಳು ನಿರ್ಮಾಣವಾಗುತ್ತವೆ.

 -: ಉದಾಹರಣೆ :-

ಗ್ರಾನೈಟ್ – ನೀಸ್

ಬಸಾಲ್ಟ್ – ಶಿಸ್ಟ್

ಸುಣ್ಣದಕಲ್ಲು – ಅಮೃತಶಿಲೆ

ಮರಳು ಶಿಲೆ – ಸ್ಪಟಿಕಶಿಲೆ

ಕಲ್ಲಿದ್ದಲು – ಗ್ರಾಫೈಟ್

ಗ್ರಾಫೈಟ್ – ವಜ್ರ

ರೂಪಾಂತರ ಶಿಲೆಗಳು ಅತ್ಯಂತ ಕಠಿಣವಾಗಿವೆ. ಇವುಗಳು ಅಮೂಲ್ಯವಾದ ಖನಿಜಗಳನ್ನು ಮತ್ತು ಬೆಲೆಬಾಳುವ ಹರಳುಗಳನ್ನು ಒಳಗೊಂಡಿರುತ್ತದೆ.

ಉದಾಹರಣೆ – ವಜ್ರ, ರೂಬಿ , ಎಮರಾಲ್ಡ್ ಮುಂತಾದವು.

WhatsApp Group Join Now
Telegram Group Join Now