ಸಾಮಾಜಿಕ ಸುಧಾರಣೆಗಳು. TET, GPSTR, HSTR, PDO, FDA, SDA, All Competative exam notes.

19ನೇ ಶತಮಾನವನ್ನು ಭಾರತ ಇತಿಹಾಸದಲ್ಲಿ ” ನವೋದಯ ಅಥವಾ ಪುನರುಜ್ಜೀವನ ಕಾಲ ” ಎಂದು ಕರೆಯಲಾಗಿದೆ.

-: ರಾಜರಾಮ್ ಮೋಹನ್ ರಾಯ್ -(1774-1833):-

* ಜನನ- ಮೇ 22, 1774

* ತಂದೆ- ರಮಾಕಾಂತ ರಾಯ್, ತಾಯಿ-ತಾರಣಿ ದೇವಿ

* ಜನ್ಮಸ್ಥಳ – ಬಂಗಾಳದ ಬರ್ಡ್ವಾನ್ ಜಿಲ್ಲೆಯ ರಾಧಾನಗರ.

* ಬಿರುದು :-

ಭಾರತೀಯ ಪುನರುಜ್ಜೀವನದ ಪಿತಾಮಹ ( ನೀಡಿದವರು ರವೀಂದ್ರನಾಥ್ ಠಾಗೋರ್), ವೈಚಾರಿಕಡೆಯ ಪಿತೃ, ಬ್ರಹ್ಮ ಸಮಾಜದ ಸ್ಥಾಪಕ. ಎರಡನೇ ಅಕ್ಬರ ” ರಾಜ ” ಎಂಬ ಬಿರುದನ್ನು 1829 ರಲ್ಲಿ ನೀಡಿದನ್ನು.

* ಪತ್ರಿಕೆಗಳು:-

ಸಂವಾದ ಕೌಮುದಿ ( ಬೆಂಗಾಲಿ ಭಾಷೆ), ಸಮಾಚಾರ ದರ್ಪಣ, ಮೀರತ್ – ಉಲ್- ಅಕ್ಬರ್ ( ಪರ್ಷಿಯನ್) ಬ್ರಾಹ್ಮನಿಕಲ್.

* ಮರಣ – 1833 ಇಂಗ್ಲೆಂಡಿನ ಬ್ರಿಸ್ಬಲ್ ನಗರ.

ಇವರ ಸಾಮಾಜಿಕ ಸುಧಾರಣೆಗಳು.

* ಸ್ತ್ರೀ ಶಿಶು ಹತ್ಯ ನಿಷೇಧ ಕಾಯ್ದೆ ಜಾರಿಗೆ ತರುವಲ್ಲಿ ಪ್ರಭಾವ ಬೀರಿದರು.

* ರಾಜಾರಾಮ್ ಮೋಹನ್ ರಾಯ್ ಅವರ ಸಹಕಾರದೊಂದಿಗೆ ಲಾರ್ಡ್ ವಿಲಿಯಂ ಬೆಂಟಿಕ್ ಡಿಸೆಂಬರ್ 4 1829 ರಂದು ಸತಿ ಸಹಗಮನ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ತಂದರು.

* 1823ರ ಪತ್ರಿಕಾ ಸ್ವಾತಂತ್ರ್ಯ ಹರಣ ಕಾಯ್ದೆಯನ್ನು ವಿರೋಧಿಸಿದರು.

* 1814ರಲ್ಲಿ ಕಲ್ಕತ್ತಾದಲ್ಲಿ ಆತ್ಮೀಯ ಸಭಾ ವನ್ನು ಸ್ಥಾಪಿಸಿದರು.

* ಇವರು ಕಲ್ಕತ್ತದಲ್ಲಿ ಹಿಂದೂ ಕಾಲೇಜನ್ನು 1817, ಇಂಗ್ಲಿಷ್ ಶಾಲೆ ಹಾಗೂ ಏಕದೇವತಾರಾಧನೆ ಸಿದ್ಧಾಂತವನ್ನು ಬೋಧಿಸಲು ಸಂಸ್ಕೃತ ವೇದಾಂತ ಕಾಲೇಜನ್ನು ಸ್ಥಾಪಿಸಿದರು.

* ಬ್ರಿಫ್ ಮಾರ್ಕ್ಸ್, ಏ ಗಿಫ್ಟ್ ಆಫ್ ಮೋನೋಥಿಸ್ಟ್, ಬೆಂಗಾಲಿ ಗ್ರಾಮರ್ ಇತ್ಯಾದಿ ಕೃತಿಗಳನ್ನು ರಚಿಸಿ ಆಧುನಿಕ ಬೆಂಗಾಲಿ ಗದ್ಯ ಸಾಹಿತ್ಯದ ಪಿತಾಮಹ ಎಂಬ ಬಿರುದನ್ನು ಪಡೆದರು.

* ಬ್ರಹ್ಮ ಸಮಾಜ.

* 1828 ರಲ್ಲಿ ರಾಜಾರಾಮ್ ಮೋಹನ್ ರಾಯ್ ಕಲ್ಕತ್ತದಲ್ಲಿ ಬ್ರಹ್ಮ ಸಮಾಜವನ್ನು ಸ್ಥಾಪಿಸಿದರು.

* ಇದರ ಕಾರ್ಯದರ್ಶಿ ತಾರಾ ಚಂದ್ರ ಚಕ್ರವರ್ತಿ.

  ತತ್ವಗಳು.

* ಏಕೀಶ್ವರತೆ.

* ಮೂರ್ತಿ ಪೂಜೆಗೆ ವಿರೋಧ.

* ಸರ್ವಧರ್ಮ ಸಮನ್ವಯತೆ.

* ಮೂಢನಂಬಿಕೆಗೆ ವಿರೋಧ.

-: ತರುಣ ಬಂಗಾಳ ಚಳುವಳಿ – ಹೆನ್ರಿ ವಿವಿಯನ್ ಡಿರೋಜಿಯೋ :-

* ಈಶ್ವರ್ ಚಂದ್ರ ವಿದ್ಯಾಸಾಗರ (1820-1891).

* ಜನನ ಸೆಪ್ಟಂಬರ್ 26 1820.

* ಜನ್ಮಸ್ಥಳ ಬಂಗಾಳದ ಮಿಡ್ನಾಪುರದಲ್ಲಿ ಜಿಲ್ಲೆಯ ಬೀರ್ ಸಿಂಘ ಗ್ರಾಮ.

* ತಂದೆ ಠಾಕೂರ್ ದಾಸ್, ತಾಯಿ ಭಗವತಿ ದೇವಿ.

    ಸುಧಾರಣೆಗಳು.

* ಮಹಿಳಾ ಶಿಕ್ಷಕರಿಗೆ ತರಬೇತಿ ನೀಡಲು ಬೆತ್ಯೂನ್ ಶಾಲೆ ತೆರೆದರು.

* 1856ರ ಜುಲೈ 26ರಂದು ವಿಧವಾ ಮರುವಿವಾಹ ಕಾಯ್ದೆ ಜಾರಿಗೆ ತರುವಲ್ಲಿ ಶ್ರಮಿಸಿದರು.

* ಬೇತಾಳ ಪಂಚವಿಂಶತಿ, ಬಂಗಾಳದ ಇತಿಹಾಸ, ಅಖ್ಯಾನ ಮಂಜರಿ, ಜ್ಯೂರಿಜ್ ಆಫ್ ಹಿಂದೂ ವಿಡೋಸ್ ಎಂಬ ಕೃತಿಗಳನ್ನು ರಚಿಸಿದರು.

* ತರ್ಕಾಲಂಕಾರ, ಸರ್ವ ಶುಭಕಾರಿ, ಸೋಮ ಪ್ರಕಾಶ ಎಂಬ ಕೃತಿಗಳು ರಚಿಸಿದರು.

  -: ಪ್ರಾರ್ಥನಾ ಸಮಾಜ:-

* 1867ರಲ್ಲಿ ಆತ್ಮರಾಮ್ ಪಾಂಡುರಂಗ ಅವರು ಪ್ರಾರ್ಥನಾ ಸಮಾಜವನ್ನು ಮುಂಬೈನಲ್ಲಿ ಸ್ಥಾಪಿಸಿದರು.

ಪ್ರಾರ್ಥನಾ ಸಮಾಜದ ಉದ್ದೇಶಗಳು.

* ಜಾತಿ ಪದ್ಧತಿಯನ್ನು ಖಂಡಿಸುವುದು.

* ವಿವಾಹದ ವಯಸ್ಸನ್ನು ಹೆಚ್ಚಿಸುವುದು.

* ನಿಮ್ಮ ವರ್ಗಗಳ ಉದ್ದಾರ, ಅನಕ್ಷರತೆ ಹೋಗಲಾಡಿಸುವುದು.

* ಸ್ತ್ರೀ ಶಿಕ್ಷಣ, ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡುವುದು.

* ಇವರ ಪತ್ರಿಕೆ – ಸುಭೋದ

* ಇದರ ಪ್ರಮುಖ ಸದಸ್ಯರು – ಆರ್ ಕೆ ಭಂಡಾರ್ಕರ್, ಮಹದೇವ ಗೋವಿಂದ ರಾನಡೆ, ಜೋಶಿ ಗೋಪಾಲಕೃಷ್ಣ ಗೋಖಲೆ, ಶಾಂತರಾಮ ಭೋಂಸ್ಲೆ, ಪಂಡಿತ್ ರಮಾಬಾಯಿ.

* ಮಹದೇವ ಗೋವಿಂದರಾನಡೆ ಅವರು ವಿಧವಾ ವಿವಾಹ ಸಂಘ, ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.

* ಮಹಾದೇವ ಗೋವಿಂದ ರಾನಡೆಯವರನ್ನು ಮಹಾರಾಷ್ಟ್ರದ ಸಾಕ್ರೆಟಿಸ್ ಎನ್ನುವರು.

  ಇವರ ಕೊಡುಗೆಗಳು.

* 1870 ಪುಣೆಯಲ್ಲಿ ಸಾರ್ವಜನಿಕ ಸಭಾ ಆರಂಭಗೊಂಡಿತು.

* 1884ರಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿ ಆರಂಭಿಸಿದರು.

* 1916ರಲ್ಲಿ ಪುಣೆಯಲ್ಲಿ ಪ್ರಥಮ ಮಹಿಳಾ ವಿಶ್ವವಿದ್ಯಾಲಯ ಆರಂಭ.

 -: ಆರ್ಯ ಸಮಾಜ :-

* ಆರ್ಯ ಎಂದರೆ ಕುಲೀನ್/ಶ್ರೇಷ್ಠ/ ಕೃಷಿಯಲ್ಲಿ ತೊಡಗಿದ್ದವನು ಎಂಬ ಅರ್ಥ ಕೊಡುತ್ತದೆ.

  ಸ್ವಾಮಿ ದಯಾನಂದ ಸರಸ್ವತಿ.

* ಸ್ವಾಮಿ ದಯಾನಂದ ಸರಸ್ವತಿ ಅವರು ಏಪ್ರಿಲ್ 10 1875 ರಂದು ಬಾಂಬೆಯಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು.

* ಇದರ ಮತ್ತೊಂದು ಶಾಖೆ ಲಾಹೋರಿನಲ್ಲಿ 1877 ರಲ್ಲಿ ಸ್ಥಾಪನೆಯಾಯಿತು.

* ಜನನ 1824.

* ತಂದೆ – ಅಂಬಾ ಶಂಕರ್ ತಿವಾರಿ, ತಾಯಿ – ಅಮೃತಬಾಯಿ, ಮೂಲ ಹೆಸರು – ಮೂಲ ಶಂಕರ, ಇವರ ಗುರು- ವಿರಜಾನಂದ.

     ಸುಧಾರಣೆಗಳು.

* ಗೋ ಹತ್ಯೆ ಖಂಡಿಸಿ ಗೋ ಸಂರಕ್ಷಣಾ ಚಳುವಳಿಯನ್ನು ಆರಂಭಿಸಿದರು.

* ಇವರು ಪರೋಪಕಾರಿ ಸಭಾವನ್ನು ಸ್ಥಾಪಿಸಿದರು.

* ಇವರ ಘೋಷಣೆ ” ವೇದಗಳಿಗೆ ಹಿಂತಿರುಗಿ ”

* ಇವರು ಹಿಂದೂ ಧರ್ಮದ ಸುದ್ದಿ ಚಳುವಳಿಯನ್ನು ಆರಂಭಿಸಿದರು. ಅವರಿಗೆ ಆರ್ಯ ಮತ್ತು ಭಾರತೀಯರಿಗೆ ಭಾರತ ಎಂದು ಘೋಷಿಸಿದರು.

* ಇವರು ಕೃತಿ- ಸತ್ಯಾರ್ಥಕ ಪ್ರಕಾಶ ಇದನ್ನು ಆರ್ಯ ಸಮಾಜವಾದಿಗಳ ಬೈಬಲ್ ಎನ್ನುವರು.

* ಸ್ವದೇಶಿ ತತ್ವವನ್ನು ಭಾರತೀಯರಿಗೆ ನೀಡಿದ ಮೊದಲಿಗರು.

* ಲಾಹೋರಿನ ದಯಾನಂದ ಆಂಗ್ಲೋ ವೇದಿಕ್ ಕಾಲೇಜು ಹಾಗೂ ಹರಿದ್ವಾರದ ಗುರು ಕುಲವನ್ನು ಸ್ವಾಮಿ ದಯಾನಂದರ ಶಿಷ್ಯರಾದ ಲಾಲ್ ಹಂಸರಾಜ್ ಮತ್ತು ಸ್ವಾಮಿ ಶ್ರದ್ದಾನಂದರು ಸ್ಥಾಪಿಸಿದರು.

-: ಸತ್ಯಶೋಧಕ ಸಮಾಜ – ಜ್ಯೋತಿಬಾಪುಲೆ:-

* ಜನನ 1827 ಮಹಾರಾಷ್ಟ್ರದ ಪುನಾದಲ್ಲಿ .

* ಇವರ ಬಿರುದು ಮಹಾರಾಷ್ಟ್ರದ ಗಾಂಧಿ.

* ಜ್ಯೋತಿ ಬಾಪುಲೆ ಅವರು ಸತ್ಯಶೋಧಕ ಸಮಾಜವನ್ನು ಸೆಪ್ಟೆಂಬರ್ 24 1873ರಲ್ಲಿ ಪುಣೆಯಲ್ಲಿ ಸ್ಥಾಪಿಸಿದರು.

  ಸುಧಾರಣೆಗಳು.

* 1849ರಲ್ಲಿ ಪುಣೆಯಲ್ಲಿ ಬಾಲಕಿಯರ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದರು.

* ಇವರು ಸ್ಥಾಪಿಸಿದ ಪತ್ರಿಕೆ – ದೀನಬಂಧು.

* ಇವರ ಕೃತಿಗಳು – ಸಾರ್ವಜನಿಕ ಸತ್ಯ ಧರ್ಮ, ಗುಲಾಮಗಿರಿ.

* ಇವರು ಜನರಿಂದ ಮಹಾತ್ಮ ಎಂದು ಕರೆಸಿಕೊಂಡರು.

* ಸಾರ್ವತ್ರಿಕ ಶಿಕ್ಷಣದ ಪ್ರಚಾರ ಮಾಡಿದರು.

-: ಥಿಯೋಸಾಫಿಕಲ್ ಸೊಸೈಟಿ :-

* ಇದನ್ನು ಮೊದಲು ರಷ್ಯಾದಲ್ಲಿ 1875ರಲ್ಲಿ ರಷ್ಯಾ ಮಹಿಳೆ ಮೇಡಂ ಹೆಚ್.ಪಿ. ಬ್ಲಾವಟಸ್ಕಿ ಮತ್ತು ಅಮೇರಿಕಾದ ಕರ್ನಲ್ ಹೆನ್ರಿ ಓಲ್ಕಾಟ್ ರವರು ಸ್ಥಾಪಿಸಿದರು.

* ಇದರ ಒಂದು ಶಾಖೆಯನ್ನು ಭಾರತದ ಮದ್ರಾಸ್ನ ಗಡಿಯಾರದಲ್ಲಿ ಸ್ಥಾಪಿಸಲಾಯಿತು.

* ಥೀಯೊಸ್ ಎಂದರೆ ದೇವರು, ಸಾಫಿಯ ಎಂದರೆ ಜ್ಞಾನ ಎಂದರ್ಥ.

* ಭಾರತದಲ್ಲಿ ಇದನ್ನು ಹೆಚ್ಚು ಜನಪ್ರಿಯಗೊಳಿಸಿದವರು ಡಾ. ಅನಿಬೆಸೆಂಟ್

   ಡಾII ಅನಿಬೆಸೆಂಟ್.

* ಇವರು ಐರಿಷ್ ಮಹಿಳೆಯಾಗಿದ್ದು, ರೇವರೆಂಡ್ ಫ್ರಾಂಕ್ ಎಂಬ ಕ್ರೈಸ್ತ ಪಾದ್ರಿರಿಯನ್ನು ವಿವಾಹವಾಗಿದ್ದು ವೈವಾಹಿಕ ಜೀವನ ತೃಪ್ತಿ ಕಾಣಲಿಲ್ಲ.

* ಇವರು ಭಗವದ್ಗೀತೆಯನ್ನು ಇಂಗ್ಲೀಷ್ ಗೆ ಭಾಷಾಂತರಿಸಿದರು.

* 1898ರಲ್ಲಿ ಬನಾರಸ್ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಿದರು. ಇದೇ ಮುಂದೆ ಬನಾರಸ್ ಹಿಂದೂ ವಿಶ್ವವಿದ್ಯಾಲಯವಾಯಿತು.

* 1916ರಲ್ಲಿ ಮದ್ರಾಸ್ ನಲ್ಲಿ ಹೋಂ ರೂಲ್ ಚಳುವಳಿಯನ್ನು ನಡೆಸಿದರು.

* ಇವರ ಎರಡು ಪತ್ರಿಕೆಗಳು ಕಾಮನ್ ವಿಲ್ ಹಾಗೂ ನ್ಯೂ ಇಂಡಿಯಾ.

* 1917ರಲ್ಲಿ ಕಲ್ಕತ್ತಾ ಭಾರತೀಯ ಕಾಂಗ್ರೆಸ್ ನ ಪ್ರಥಮ ಮಹಿಳಾ ಅಧ್ಯಕ್ಷರು.

-: ರಾಮಕೃಷ್ಣ ಪರಮಹಂಸ:-

* ಇವರ ಮೂಲ ಹೆಸರು ಗಂಗಾಧರ, ಇವರು ಬಂಗಾಳದ ಹೂಗ್ಲಿ ಬಳಿಯ ಕಾಮರ್ ಪುರ ಹಂಬಲಿ ಜನಿಸಿದರು.

* ತಂದೆ ಖುಕುದಿರಾಂ ಚಟ್ಟೋಪಾಧ್ಯಾಯ, ತಾಯಿ ಚಂದ್ರವೇಣಿ ಮಣಿ, ಪತ್ನಿ ಶಾರದಾದೇವಿ.

-: ಸ್ವಾಮಿ ವಿವೇಕಾನಂದ :-

* ಇವರ ಬಾಲ್ಯದ ಹೆಸರು ನರೇಂದ್ರನಾಥ ದತ್ತ ಇವರು ಜನವರಿ 12 1863 ರಂದು ಕಲ್ಕತ್ತಾದಲ್ಲಿ ಜನಿಸಿದರು.

* ತಂದೆ ವಿಶ್ವನಾಥ ದತ್ತ ಮತ್ತು ತಾಯಿ ಭುವನೇಶ್ವರಿ ದೇವಿ.

* ಇವರ ಗುರುಗಳು ರಾಮಕೃಷ್ಣ ಪರಮಹಂಸರು.

ಚಿಕಾಗೋ ವಿಶ್ವಧರ್ಮ ಸಮ್ಮೇಳನ.

* ಮೇ 31 1893ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದರು. ಭಾಷಣ ಮಾಡುವಾಗ ಅಮೆರಿಕದ ನನ್ನ ಸಹೋದರ ಸಹೋದರಿಯರೇ ಎಂಬ ಮಾತು ಪ್ರಸಿದ್ಧವಾಗಿದೆ.

* ನ್ಯೂಯಾರ್ಕ್ ನಲ್ಲಿ ವೇದಾಂತ ಸಮಾಜವನ್ನು ಸ್ಥಾಪಿಸಿದರು.

    ರಾಮಕೃಷ್ಣ ಮಿಷನ್.

* 1897ರಲ್ಲಿ ಕಲ್ಕತ್ತಾ ಬಳಿಯ ಬೇಲೂರಿನಲ್ಲಿ ವಿವೇಕಾನಂದರು ರಾಮಕೃಷ್ಣ ಮಠವನ್ನು ಸ್ಥಾಪಿಸಿದರು. ಇದರ ಮತ್ತೊಂದು ಶಾಖೆ ಮಾಯಾವತಿ ಎಲ್ಲಿದೆ.

* ವಿವೇಕಾನಂದರ ಬಿರುದುಗಳು – ಆಧುನಿಕ ರಾಷ್ಟ್ರೀಯ ಚಳುವಳಿಯ ಆಧ್ಯಾತ್ಮಿಕತೆಯ ತಂದೆ ಎಂದು ಸಿಸ್ಟರ್ ನಿವೇದಿತಾ ಅವರು ಕರೆದಿದ್ದಾರೆ.

-: ಅಲಿಘರ್ ಚಳುವಳಿ :-

* ಸ್ಥಾಪಕರು ಸರ್ ಸೈಯದ್ ಅಹ್ಮದ್ ಖಾನ್.

* 1875ರಲ್ಲಿ ಉತ್ತರ ಪ್ರದೇಶದಲ್ಲಿ ಸ್ಥಾಪಿಸಲಾಯಿತು.

* ಸರ್ ಸೈಯದ್ ಅಹಮದ್ ಖಾನ್ ರನ್ನು ಮುಸ್ಲಿಂ ಸುಧಾರಣಾ ವಾದಿ, ಇಸ್ಲಾಮಿನ ವೃದ್ಧ ಪಿತಾಮಹ ಎಂದು ಕರೆಯುತ್ತಾರೆ.

* ಇಂಗ್ಲಿಷ್ ಕೃತಿಗಳನ್ನು ಭಾಷಾಂತರಿಸಲು ಅಂಜುಮನ್ ಅಥವಾ ಸೈಂಟಿಫಿಕ್ ಸೊಸೈಟಿಯನ್ನು ಸ್ಥಾಪಿಸಿದರು.

* 1875ರಲ್ಲಿ ಅಲಿಗರ್ ನಲ್ಲಿ ಮಹಮದನ್ ಆಂಗ್ಲೋ ಓರಿಯಂಟಲ್ ಕಾಲೇಜನ್ನು ಸ್ಥಾಪಿಸಿದರು. ಈ ಕಾಲೇಜು ಮುಂದೆ ಅಲಿಗರ್ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿತು.

* ಮುಸ್ಲಿಮರಲ್ಲಿ ಪಾಶ್ಚಿಮಾತ್ಯ ಶಿಕ್ಷಣ ಬೆಳೆಸಿದರು.

* ಇವರ ಕೃತಿ ದ ಲಾಯಲ್ ಮುಸ್ಲಿಂ ಇನ್ ಇಂಡಿಯಾ ಟು ಬ್ರಿಟಿಷ್ .

* ಪರದ ಪದ್ಧತಿಯನ್ನು ವಿರೋಧಿಸಿದ ಮೊದಲ ಭಾರತೀಯ .

* ರಿ ಫಾರ್ಮಲ್ ಎಂಬ ಪತ್ರಿಕೆಯನ್ನು ಸ್ಥಾಪಿಸಿದರು.

 

 

 

WhatsApp Group Join Now
Telegram Group Join Now