* ಸಾಮಾನ್ಯ ಶಕ 1800 ರಲ್ಲಿ ದೊಂಡಿಯಾ ವಾಘನು ಬ್ರಿಟಿಷರ ವಿರುದ್ಧ ದಂಗೆ ಇದ್ದನು. ಆದರೆ ಬ್ರಿಟಿಷರು ಮಾರಾಟ ಮತ್ತು ನಿಜಾಮರ ಸಹಾಯದಿಂದ ದೊಂಡಿಯಾ ವಾಘನನ್ನು ಬಂಧಿಸಿದ ಅರ್ಥವೇಲ್ಲೆಸ್ಲಿ ಕೋನಗಲ್ ನಲ್ಲಿ ಕೊಂದನು.
* ಸಾಮಾನ್ಯ ಶಕ 1819ರಲ್ಲಿ ಕೊಪ್ಪಳದಲ್ಲಿ ವೀರಪ್ಪ ಎಂಬ ಜಮೀನ್ದಾರನು ನಿಜಾಮನ ವಿರುದ್ಧ ದಂಗೆ ಇದ್ದನು.
* ಸಾಮಾನ್ಯ ಶಕ 1824 ರಿಂದ 1830 ರಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಬ್ರಿಟಿಷರ ವಿರುದ್ಧ ರಾಣಿ ಚೆನ್ನಮ್ಮ ಮತ್ತು ನಿಷ್ಠಾವಂತ ಸೇವಕ ಸಂಗೊಳ್ಳಿ ರಾಯಣ್ಣ ವೀರಾವೇಶದಿಂದ ಹೋರಾಡಿದರು.
-: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ:-
* ಬ್ರಿಟಿಷರ ಸಾಮಾನ್ಯ ಶಕ 1857ರ ಐತಿಹಾಸಿಕ ಘಟನೆಯನ್ನು ಕೇವಲ ಸಿಪಾಯಿಗಳ ದಂಗೆ ಎಂದು ಪರಿಗಣಿಸಿದ್ದಾರೆ.
* ಭಾರತೀಯ ರಾಷ್ಟ್ರೀಯವಾದಿಗಳು ಈ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಸಾರಿದರು.
* ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದನು.
* ಲಾರ್ಡ ಡಾಲ್ ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದನು.
* ಸತಾರ, ಜೈಪುರ, ಸಂಬಲ್ಪುರ, ಉದಯಪುರ, ಜಾನ್ಸಿ, ಅವಧ್ ಇದೇ ಮೊದಲಾದ ಪ್ರದೇಶಗಳು ಡಾಲ್ ಹೌಸಿಯ ನೀತಿಗೆ ಬಲಿಯಾದ ರಾಜ್ಯಗಳು.
* ಬ್ರಿಟಿಷರು ಪರಿಷತ್ ಭಾಷೆಗೆ ಬದಲಾಗಿ ಇಂಗ್ಲೀಷನ್ನು ನ್ಯಾಯಾಲಯದ ಭಾಷೆಯಾಗಿ ಘೋಷಿಸಿದ್ದರು.
* ಬ್ರಿಟಿಷರು ಭಾರತೀಯರನ್ನು ” ಸಂಸ್ಕೃತಿ ಮತ್ತು ನಾಗರಿಕತೆ ಗಂಧವಿಲ್ಲದ ಅನಾಗರಿಕರು ” ಎಂದು ಕರೆದರು.
* ಭಾರತೀಯರನ್ನು ಹಂದಿ, ಕರಿ ಮನುಷ್ಯರು ಎಂದು ಸಂಬೋಧಿಸುತ್ತಿದ್ದರು.
* ಯುರೋಪಿಯನ್ನರ ಮೇಲ್ ಉಸ್ತುವಾರಿಯಲ್ಲಿದ್ದ ಹೋಟೆಲ್ ಮತ್ತು ಕ್ಲಬ್ಬುಗಳಿಗೆ ಭಾರತೀಯರಿಗೆ ಪ್ರವೇಶವಿರಲಿಲ್ಲ. ಜೊತೆಗೆ ” ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವು ನಿಷಿದ್ಧ ” ಎಂಬ ನಾಮಫಲಕಗಳನ್ನು ದ್ವಾರದಲ್ಲಿ ತೂಗು ಹಾಕುತ್ತಿದ್ದರು.
* ಲಾರ್ಡ್ ಕ್ಯಾನಿಂಗ್ ನು ಸಾಮಾನ್ಯ ಸೇನಾ ಸೇವಾ ಕಾಯ್ದೆ ಜಾರಿಗೆ ತಂದನು.
* ಸಾಮಾನ್ಯ ಶಕ 1857 ರಲ್ಲಿ ಒಂದು ಹೊಸ ಮಾದರಿಯ ಬಂದೂಕನ್ನು ( ಎನ್ಫಿಎಲ್ಡ್ ರೈಫಲ್) ಸೇನೆಯಲ್ಲಿ ತೊಡಗಿಸಿದ್ದ ಸಿಪಾಯಿ ದಂಗೆಗೆ ತಕ್ಷಣದ ಕಾರಣವಾಯಿತು. ಎಲ್ಫಿಎಲ್ಡ್ ಬಂದೂಕುಗಳಿಗೆ ಎನ್ನಫಿಲ್ಡ್ ಬಂದೂಕುಗಳಿಗೆ ತೋಟಾ( ಕಾರ್ಟ್ರಿಡ್ಜ) ಗಳನ್ನು ತುಂಬುವ ಮುನ್ನ ಅದನ್ನು ಹೊದಿಸಿದ ಕಾಗದವನ್ನು ಹಲ್ಲಿನಿಂದ ಕಚ್ಚಿ ಹರಿಯಬೇಕಿತ್ತು. ಈ ಕಾಗದಕ್ಕೆ ಹಂದಿ ಮತ್ತು ಗೋವಿನ ಕೊಬ್ಬು ಬಳಸಲಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಸೈನಿಕರಲ್ಲಿ ಹಬ್ಬಿತ್ತು. ಇದು ಮುಸ್ಲಿಂ ಮತ್ತು ಹಿಂದೂ ಸಿಪಾಯಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದಾಗಿತ್ತು. ಅವುಗಳನ್ನು ಬಳಸಲು ನಿರಾಕರಿಸಿದ ಸೈನಿಕರು ಬ್ರಿಟಿಷರಿಂದ ಶಿಕ್ಷೆಗೊಳಗಾದರು.
-: ದಂಗೆಯ ಗತಿ :-
ಮೀರತ್ ನಲ್ಲಿ ದಂಗೆಯೂ ಸಾಮಾನ್ಯ ಶಕ 1857 ರ ಮೇ 10 ರಂದು ಆರಂಭವಾಯಿತು. ಆನಂತರ ಉತ್ತರ ಭಾರತದ ಪ್ರಾಂತ್ಯಗಳ ಅದ್ಯಂತ ವ್ಯಾಪಕವಾಗಿ ತೀವ್ರಗೊಂಡಿತು. ಮೀರತ್ ನಲ್ಲಿ ದಂಗೆ ಸ್ಪೋಟ ಗೊಳ್ಳುವ ಮೊದಲೇ ಬ್ಯಾರಕ್ ಪುರದ ( ಬಂಗಾಲ) ಭಾರತೀಯ ಸಿಪಾಯಿ ಮಂಗಲ ಪಾಂಡೆ ಕೊಬ್ಬು ಸವರಿದ ಬಂದೂಕನ್ನು ಬಳಸಲು ತಿರಸ್ಕರಿಸಿ ಬಹಿರಂಗವಾಗಿಯೇ ಬ್ರಿಟಿಷ್ ಅಧಿಕಾರಿಯೊಬ್ಬನಿಗೆ ಗುಂಡಿಕ್ಕಿ ಕೊಂದನು.
ಭಾರತೀಯ ಸಿಪಾಯಿಗಳು ಮಾರೋ ಫರಂಗಿಕೋ ( ಯುರೋಪಿಯನ್ನರನ್ನು ಕೊಲ್ಲಿ) ಎಂದು ಕೂಗುತ್ತಾ ದಿಲ್ಲಿಯ ಕಡೆಗೆ ಧಾವಿಸಿದರು. ದಿಲ್ಲಿಯಲ್ಲಿ ಸಿಪಾಯಿಗಳು ವಯೋ ವೃದ್ಧ ಹಾಗೂ ದುರ್ಬಲ ಮೊಘಲ ದೊರೆ ಎರಡನೇ ಬಹದ್ದೂರ್ ಷಾನನ್ನು ಭಾರತದ ಚಕ್ರವರ್ತಿ ಎಂದು ಘೋಷಣೆ ಮಾಡಿದರು.
-: ಫರಂಗಿ :-
ಫರಂಗಿ ಪದವು ಪರ್ಷಿಯನ್ ಮೂಲದ್ದಾಗಿದೆ. ಇದನ್ನು ಉರ್ದು ಮತ್ತು ಹಿಂದಿಗಳಲ್ಲಿ ಯುರೋಪಿಯನ್ನರನ್ನು ಕೀಳಾಗಿ ಸೂಚಿಸಲು ಬಳಸಲಾಗುತ್ತಿತ್ತು.