ಸ್ವಾತಂತ್ರ ಹೋರಾಟಗಳು ( ಭಾಗ-02) TET, GPSTR, HSTR, PDO, FDA, SDA, All Competative exam notes.

-: ಭಾರತದ ದಂಗೆಯ ಪ್ರಮುಖ ಸ್ಥಳಗಳು ಮತ್ತು ನಾಯಕರುಗಳು :-

* ದೆಹಲಿ – ಸೇನಾಪತಿ ಬಖತ್ ಖಾನ್

* ಕಾನ್ಪುರ್ – ನಾನಾ ಸಾಹೇಬ್ ಮತ್ತು ತಾತ್ಯಾ ಟೋಪಿ

* ಲಕ್ನೋ – ಬೇಗಂ ಹಜರತ್ ಮಹಲ್

* ಝಾನ್ಸಿ – ರಾಣಿ ಲಕ್ಷ್ಮೀ ಬಾಯಿ

* ಬಿಹಾರ – ಕುಂವರ್ ಸಿಂಗ್

-: ಕರ್ನಾಟಕದಲ್ಲಿ ದಂಗೆಯ ಪ್ರಮುಖ ಸ್ಥಳಗಳು ಮತ್ತು ನಾಯಕರು :-

* ಮುಂಡರಗಿ – ಭೀಮರಾವ್

* ಹಲಗಲಿ – ಬೇಡರು

* ಸುರಪುರ – ನಾಲ್ಕನೇ ವೆಂಕಟಪ್ಪ ನಾಯಕ

* ನರಗುಂದ – ಬಾಬಾಸಾಹೇಬ್

ಸಾಮಾನ್ಯ ಶಕ 1858 ರಲ್ಲಿ ಬ್ರಿಟನ್ನಿನ ರಾಣಿ ವಿಕ್ಟೋರಿಯಾ ಒಂದು ಘೋಷಣೆಯನ್ನು ಹೊರಡಿಸಿದಳು. ಈ ಘೋಷಣೆಯು ಭಾರತೀಯರ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿತು. ಈ ಹೋರಾಟವು ಆಧುನಿಕ ರಾಷ್ಟ್ರೀಯ ಚಳುವಳಿಯ ಉದಯಕ್ಕೆ ನಾಂದಿ ಹಾಡಿತು. ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ನಿರಂತರ ಸ್ಫೂರ್ತಿಯಾಗಿ ಪರಿಣಮಿಸಿತು.

-: ಮಹಾದಂಗೆಯ ಸ್ವರೂಪ:-

* ಸಿಪಾಯಿ ದಂಗೆ – ಬ್ರಿಟಿಷರು

* ಜನತೆಯ ಮಹಾನ್ ಬಂಡಾಯ/ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ – ಭಾರತದ ರಾಷ್ಟ್ರೀಯ ಇತಿಹಾಸಕಾರರು

* ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಪ್ರಥಮ ಯುದ್ಧ – ವಿನಾಯಕ್ ದಾಮೋದರ್ ಸಾವರ್ಕರ್

* ಭಾರತದ ಮೊದಲ ಸ್ವಾತಂತ್ರ್ಯ ಸಮರ – ಪಟ್ಟಾಭಿ ಸೀತಾರಾಮಯ್ಯ

-: ಸ್ವಾತಂತ್ರ್ಯ ಚಳುವಳಿ (1885-1919) :-

* 19ನೇ ಶತಮಾನದಲ್ಲಿ ರಾಷ್ಟ್ರೀಯತೆ ಬೆಳವಣಿಗೆಯಾಯಿತು.

* ರಾಷ್ಟ್ರೀಯತೆ ಎಂದರೆ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ಜನರ ಮನದಲ್ಲಿ ಮೂಡುವ ನಾವೆಲ್ಲರೂ ಒಂದೇ ಎಂಬ ಏಕತೆಯ ಭಾವನೆಯಾಗಿದೆ.

* ರಾಷ್ಟ್ರೀಯತೆ ಬೆಳವಣಿಗೆಗೆ ಹಲವು ಅಂಶಗಳು ಪ್ರೇರಣೆ ನೀಡಿದವು ಅವುಗಳೆಂದರೆ

* ಪಾಶ್ಚಿಮಾತ್ಯ ಶಿಕ್ಷಣ ಮತ್ತು ಆಧುನಿಕ ಜ್ಞಾನ ವಿಜ್ಞಾನದ ಪರಿಚಯ.

* ಏಕರೂಪದ ಆಡಳಿತಾತ್ಮಕ ವ್ಯವಸ್ಥೆ.

   -: ಆರ್ಥಿಕ ಶೋಷಣೆ :-

* ದಾದಾಬಾಯಿ ನವರೋಜಿ ಅವರು ಭಾರತದ ಸಂಪತ್ತನ್ನು ಬ್ರಿಟಿಷರು ದೋಚುತಿದ್ದ ಕ್ರಮವನ್ನು ” ಸಂಪತ್ತಿನ ಸೋರಿಕೆ ಸಿದ್ಧಾಂತ ” ಮೂಲಕ ಪ್ರತಿಪಾದಿಸಿದ್ದಾರೆ.

-: ಭಾರತದ ರಾಷ್ಟ್ರೀಯ ಕಾಂಗ್ರೆಸ್ ( 1885):-

* ಸ್ಥಾಪಕ – ಎಲನ್ ಆಕ್ಟೇವಿಯನ್ ಹ್ಯೂಮ್

* ಅಧ್ಯಕ್ಷರು – ಉಮೇಶ್ ಚಂದ್ರ ಬ್ಯಾನರ್ಜಿ

* ಸ್ಥಳ – ಮುಂಬೈ

-: ಮಂದಗಾಮಿಗಳ ಯುಗ ( 1885- 1905 ) :-

* ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಆರಂಭಿಕ ನಾಯಕರನ್ನು ಮಂದಗಾಮಿಗಳು ಅಥವಾ ಸೌಮ್ಯವಾದಿಗಳು ಎಂದು ಕರೆಯುತ್ತಾರೆ.

* ಇವರು ಬ್ರಿಟಿಷರ ಆಳ್ವಿಕೆಗೆ ನಿಷ್ಠಾವಂತರಾದ ಪ್ರಾರ್ಥನೆ ಚಿನ್ನಹ ಮತ್ತು ಪ್ರತಿಭಟನೆಯ ನೀತಿಯನ್ನು ಅನುಸರಿಸಿದರು.

* ಮಂದಗಾಮಿಗಳಲ್ಲಿ ಪ್ರಮುಖ ನಾಯಕರುಗಳೆಂದರೆ.

* ದಾದಾಬಾಯಿ ನವರೋಜಿ, ಸುರೇಂದ್ರನಾಥ್ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ, ಮಹಾದೇವ ಗೋವಿಂದ ರಾನಡೆ.

-: ಮಂದಗಾಮಿಗಳ ಪ್ರಮುಖ ಬೇಡಿಕೆಗಳು :-

* ವಾಕ್ ಮತ್ತು ಮುದ್ರಣ ಸ್ವಾತಂತ್ರ .

* ಕಾರ್ಯಾಂಗದಿಂದ ನ್ಯಾಯಾಂಗದ ಬೇರ್ಪಡೆ.

* ಸೈನಿಕ ವೆಚ್ಚದ ಕಡಿತ.

* ಪ್ರಾಥಮಿಕ ಪ್ರೌಢ ಮತ್ತು ತಾಂತ್ರಿಕ ಶಿಕ್ಷಣದ ಅನುಷ್ಠಾನ.

* ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ರದ್ದತಿ.

* ಬ್ಯಾಂಕಿಂಗ್ ನೀರಾವರಿ ವೈದ್ಯಕೀಯ ಮತ್ತು ಆರೋಗ್ಯ ಸೌಲಭ್ಯಗಳು.

* ಉಪ್ಪಿನ ಸುಂಕದ ಸಂಪೂರ್ಣ ರದ್ದತಿ.

* ಇಂಗ್ಲೆಂಡ್ ಮತ್ತು ಇಂಡಿಯಾದಲ್ಲಿ ಏಕಕಾಲದಲ್ಲಿ ಐಸಿಎಸ್ ಪರೀಕ್ಷೆಯನ್ನು ನಡೆಸುವುದು.

* ಕೇಂದ್ರ ಹಾಗೂ ಪ್ರಾಂತೀಯ ಶಾಸನಸಭೆಗಳಲ್ಲಿ ಭಾರತೀಯರಿಗೆ ಪ್ರಾತಿನಿಧ್ಯ ನೀಡುವುದು.

* ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸುವುದು.

-: ತೀವ್ರಗಾಮಿಗಳ ಯುಗ (1905-1919):-

* ಇವರು ಮಂಡ್ಯಗಾಮಿಗಳ ನೀತಿಯನ್ನು ತಿರುಪೆಯ ನೀತಿ ( ಪಾಲಿಸಿ ಆಫ್ ಮೆಂಡಿಕೆನ್ಸಿ ) ಎಂದು ವ್ಯಂಗ್ಯವಾಡಿದರು.

-: ತೀವ್ರಗಾಮಿಗಳ ಪ್ರಮುಖ ನಾಯಕರು :-

* ಲಾಲಾ ಲಜಪತ್ ರಾಯ್ , ಬಾಲಗಂಗಾಧರ್ ತಿಲಕ್, ಬಿಪಿನ್ ಚಂದ್ರ ಪಾಲ್.

* ಈ ಮೂವರನ್ನು ಲಾಲ್- ಬಾಲ್ – ಪಾಲ್ ಎಂದು ಕರೆಯುತ್ತಾರೆ.

* ಬಾಲಗಂಗಾಧರ್ ತಿಲಕ್ :-  ” ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ನಾನು ಅದನ್ನು ಪಡೆದೆ ತೀರುತ್ತೇನೆ” .

* ತಿಲಕರು ಗಣೇಶ ಮತ್ತು ಶಿವಾಜಿ ಉತ್ಸವಗಳನ್ನು ಪರಿಚಯಿಸಿದರು.

* ಬಾಲಗಂಗಾಧರ್ ತಿಲಕರು ಇಂಗ್ಲೀಷ್ ಭಾಷೆಯಲ್ಲಿ ‘ ಮರಾಠ’ ಮತ್ತು ಮರಾಠಿ ಭಾಷೆಯಲ್ಲಿ ‘ ಕೇಸರಿ ‘ ಎಂಬ ಪತ್ರಿಕೆಗಳನ್ನು ಪ್ರಕಟಿಸಿದರು.

* ಬಿಪಿನ್ ಚಂದ್ರ ಪಾಲರು ‘ ನ್ಯೂ ಇಂಡಿಯಾ ‘ ಮತ್ತು ಅರವಿಂದರು ‘ ವಂದೇ ಮಾತರಂ’ ಪತ್ರಿಕೆಗಳನ್ನು ಪ್ರಾರಂಭಿಸಿದರು.

* ಲಾಲಾ ಲಜಪತ್ ರಾಯ್ ಅವರನ್ನು ‘ ಪಂಜಾಬಿನ ಸಿಂಹ ‘ ಎಂದು ಕರೆಯುತ್ತಾರೆ.

* ಲಾಲಾ ಲಜಪತ್ ರಾಯ್ ಅವರು ” ನಾವು ಸ್ವರಾಜ್ಯವನ್ನು ಹಕ್ಕಿನ ರೂಪದಲ್ಲಿ ಪಡೆಯುತ್ತೇವೆ, ಹೊರತು ಭಿಕ್ಷಾ ರೂಪದಲ್ಲಿ ಅಲ್ಲ” ಎಂದು ಹೇಳಿದರು.

* ತೀವ್ರವಾದವನ್ನು ಪ್ರತಿನಿಧಿಸಿದ ಮತ್ತೊಬ್ಬ ನಾಯಕರಲ್ಲಿ ” ಅರವಿಂದ್ ಘೋಷ್ ” ಕೂಡ ಒಬ್ಬರು.

 

WhatsApp Group Join Now
Telegram Group Join Now