-: ಬಂಗಾಳದ ವಿಭಜನೆ (1905):-
* 1911ರಲ್ಲಿ ವಿಭಜನೆಯನ್ನು ಬ್ರಿಟಿಷರು ರದ್ದು ಮಾಡಬೇಕಾಯಿತು.
-: ಮುಸ್ಲಿಂ ಲೀಗ್ ಸ್ಥಾಪನೆ (1906):-
* ಸಾಮಾನ್ಯ ಶಕ 1906 ರಲ್ಲಿ ಮುಸ್ಲಿಂ ನಿಯೋಗವೊಂದು ಭಾರತದ ವೈಸ್ರಾಯ್ ಆಗಿದ್ದ ಮಿಂಟೋ ಅವರನ್ನು ಭೇಟಿ ಮಾಡಿತು. ಈ ಭೇಟಿಯ ಪ್ರೇರಣೆಯಿಂದಾಗಿ, ಸರ್ ಆಗಾಖಾನ್, ಢಾಕಾದ ನವಾಬ ಸಲಿಮುಲ್ಲಾ ಮತ್ತು ಇನ್ನಿತರರು ಸೇರಿ 1906ರಲ್ಲಿ ಭಾರತ ಮುಸ್ಲಿಂ ಲೀಗನ್ನು ಢಾಕಾದಲ್ಲಿ ಸ್ಥಾಪಿಸಿದರು.( ಢಾಕಾ ಈಗಿನ ಬಾಂಗ್ಲಾದೇಶದ ರಾಜಧಾನಿ)
-: ಸೂರತ್ ಒಡಕು (1907):-
* ಸಾಮಾನ್ಯ ಶಕ 1907 ರಲ್ಲಿ ಸೂರತ್ ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ನಡುವೆ ಕಾಂಗ್ರೆಸ್ ಇಬ್ಭಾಗವಾಯಿತು.
* ಸಾಮಾನ್ಯ ಶಕ 1909 ರಲ್ಲಿ ಮಿಂಟೋ ಮಾರ್ಲೆ ಸುಧಾರಣಾ ಕಾಯ್ದೆಯಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮತಕ್ಷೇತ್ರವನ್ನು ಕಲ್ಪಿಸಿದರು.
* ಸಾಮಾನ್ಯ ಶಕ 1916 ರಲ್ಲಿ ಲೋಕಮಾನ್ಯ ಬಾಲಗಂಗಾಧರ್ ತಿಲಕರು ಮತ್ತು ಅನಿಬೆಸೆಂಟ್ ಅವರು ಹೋಂ ರೂಲ್ ಚಳುವಳಿಯನ್ನು ಆರಂಭಿಸಿದರು.
-: ಹೋಂ ರೂಲ್ :-
* ಇದು ಐರಿಶ್ ಹೋಂ ರೂಲ್ ಚಳುವಳಿಯಿಂದ ಪ್ರೇರೇಪಿತವಾಗಿ ಇದರ ಮುಖ್ಯ ಉದ್ದೇಶವೆಂದರೆ ಭಾರತಕ್ಕೆ ಸ್ವಯಂ ಆಡಳಿತ ತರುವುದು. ಬಾಲಗಂಗಾಧರ್ ತಿಲಕ್ ಮತ್ತು ಅನಿಬೆಸೆಂಟ್ ರ 1916 ರಲ್ಲಿ ಪ್ರತ್ಯೇಕವಾಗಿ ಹೋಂ ರೂಲ್ ಚಳುವಳಿಯನ್ನುಗಳನ್ನು ಮಹಾರಾಷ್ಟ್ರ ಮತ್ತು ತಮಿಳುನಾಡು ಪ್ರಾಂತ್ಯಗಳಲ್ಲಿ ಆರಂಭಿಸಿದರು.
-: ರೌಲತ್ ಕಾಯ್ದೆ (1919):-
* ಸಾಮಾನ್ಯ ಶಕ 1917 ರ ಡಿಸೆಂಬರ್ ನಲ್ಲಿ ನ್ಯಾಯಮೂರ್ತಿ ರೌಲತ್ತನ ಮಾರ್ಗದರ್ಶನದಲ್ಲಿ ಒಂದು ಸಮಿತಿ ರಚನೆಯಾಯಿತು ಇದರ ಉದ್ದೇಶ ಭಾರತದ ಕ್ರಾಂತಿಕಾರಿ ಚಟುವಟಿಕೆಗಳನ್ನು ತಿಕ್ಕುವುದಾಗಿತ್ತು. ಅಂತಿಮವಾಗಿ ಈ ಕಾಯ್ದೆ 1919ರ ಫೆಬ್ರುವರಿಯಲ್ಲಿ ಜಾರಿಯಾಯಿತು. ಈ ಕಾಯ್ದೆಯ ಪ್ರಕಾರ ಅನುಮಾನ ಬಂದ ಯಾವುದೇ ವ್ಯಕ್ತಿಯನ್ನು ಯಾವುದೇ ಕಾರಣ ನೀಡದೆ ಸರ್ಕಾರ ಬಂಧಿಸಬಹುದಾಗಿದೆ. ಮುನ್ಸೂಚನೆ ನೀಡಿದೆ ಯಾವುದೇ ಪ್ರದೇಶವನ್ನು ಶೋಧ ಮಾಡಬಹುದಾಗಿತ್ತು. ಬಂಧಿತ ವ್ಯಕ್ತಿಗೆ ವಕೀಲರನ್ನು ನೇಮಿಸಿಕೊಳ್ಳುವುದಕ್ಕೂ ಕೂಡ ಇರಲಿಲ್ಲ. ಹೀಗಾಗಿ ಭಾರತೀಯರು ಇದನ್ನು ತೀವ್ರವಾಗಿ ವಿರೋಧಿಸಿದರು.
-: ಜಲಿಯನ್ ವಾಲಾಬಾಗ್ ಹತ್ಯಾಕಾಂಡ (1919):-
=> ಕ್ರಾಂತಿಕಾರಿ ರಾಷ್ಟ್ರೀಯತೆ.
* ರಹಸ್ಯ ಸಂಘಟನೆಯನ್ನು ರೂಪಿಸಿಕೊಂಡ ಕ್ರಾಂತಿ ಕಾರ್ಯಗಳಲ್ಲಿ ವಾಸುದೇವ ಬಲವಂತ ಫಡ್ಕೆ ಮೊದಲಿನವರು. ದಾಮೋದರ್ ಮತ್ತು ಬಾಲಕೃಷ್ಣ ಚಾಪೇಕರ್ ಸಹೋದರರು ಅವರ ರಹಸ್ಯ ಸಂಘಟನೆಯ ಜೀವನದಿಗಳು ಆಗಿದ್ದರು.
=> ನಮ್ಮ ದೇಶದ ಇತರ ಕ್ರಾಂತಿಕಾರಿಗಳೆಂದರೆ .
* ವಿನಾಯಕ್ ದಾಮೋದರ ಸಾವರ್ಕರ್.
* ಖುದಿರಾಮ್ ಬೋಸ್.
* ಚಂದ್ರಶೇಖರ್ ಆಜಾದ್.
* ಭಗತ್ ಸಿಂಗ್.
* ಸ್ವಾತಂತ್ರ್ಯ ಹೋರಾಟದಲ್ಲಿ ನೇಣುಗಂಬ ಏರಿದ ಭಾರತದ ಮೊದಲ ಹುತಾತ್ಮ ಖುದಿರಾಮ್ 1908. ಆಗ ಇವನ ವಯಸ್ಸು ಕೇವಲ 19 ವರ್ಷ.
* ವಿನಾಯಕ್ ದಾಮೋದರ್ ಸಾವರ್ಕರ್ 1899 ರಲ್ಲಿ ಮಿತ್ರಮೇಳ ಎನ್ನುವ ಪ್ರಥಮ ಗುಪ್ತ ಸಂಘಟನೆಯನ್ನು ಕಟ್ಟಿದರು.
* ಚಂದ್ರಶೇಖರ್ ಆಜಾದ್ ” ಹಿಂದುಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್ ” ಗೆ ಸೇರಿ ಕಾಕೋರಿ ಪಿತೂರಿ, ಶಾಸನಸಭೆಯ ಬಾಂಬ್ ಘಟನೆ, ಹಾಗೂ ಲಾಹೋರಿನಲ್ಲಿ ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ನ ಮೇಲೆ ಗುಂಡಿನ ದಾಳಿ ಮುಂತಾದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಬ್ರಿಟಿಷರ ಸೈನಿಕರಿಂದ ತಪ್ಪಿಸಿಕೊಳ್ಳಲು ಆದರೂ ಒಂದು ಸಣ್ಣ ಪಿಸ್ತೂಲಿನಿಂದ ಏಕಾಂಗಿಯಾಗಿ ಹೋರಾಟ ನಡೆಸಿದರು. ಕೇವಲ ಒಂದು ಗುಂಡು ಉಳಿದಿದ್ದಾಗ ತನ್ನ ಕಪಾಲಕ್ಕೆ ಗುರಿ ಇಟ್ಟು ಆರಿಸಿಕೊಂಡು ತಾನು ಬಂಧನಕ್ಕೆ ಒಳಗಾಗುವುದಿಲ್ಲ ಎನ್ನುವ ತನ್ನ ಪ್ರತಿಜ್ಞೆಯನ್ನು ಉಳಿಸಿಕೊಂಡರು.
* ಭಗತ್ ಸಿಂಗ್ ” ಹಿಂದುಸ್ತಾನ್ ಸಮಾಜವಾದಿ ರಿಪಬ್ಲಿಕನ್” ಸಂಘಟನೆಯನ್ನು ಸೇರಿ ಅದರ ಪ್ರಧಾನ ಕಾರ್ಯದರ್ಶಿಯಾದರು. ಸಾಮಾನ್ಯ ಶಕ 1929ರಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ದಿಲ್ಲಿಯಲ್ಲಿ ಕೇಂದ್ರೀಯ ಶಾಸನಸಭೆಯ ಮೇಲೆ ಬಾಂಬ್ ಎಸೆದರು. ಲಾಹೋರ್ ಸೆಂಟ್ರಲ್ ಜೈಲ್ ನಲ್ಲಿ ಈ ಮೂವರನ್ನು ಗಲ್ಲಿಗೇರಿಸಲಾಯಿತು.