ಹೈದರಾಲಿ ಮತ್ತು ಟಿಪ್ಪು ಸುಲ್ತಾನರ.TET,GPSTR,HSTR, FDA, SDA,All Competative exam notes.

ಹೈದರಾಲಿ ( 1761-1782).

* ಜನನ ಸಾಮಾನ್ಯ ಶಕ 1721 ಕೋಲಾರ ಜಿಲ್ಲೆಯ ಬೂದಿಕೋಟೆ.

* 1759 ರಲ್ಲಿ ಮರಾಠರನ್ನು ಸೋಲಿಸಿ ನಂಜರಾಜಯ್ಯನನ್ನು ಅಧಿಕಾರದಿಂದ ಕೆಳಗಿಳಿಸಿ ತಾನೇ ಅಧಿಕಾರ ವಹಿಸಿಕೊಂಡನು.

* 1761 ರಲ್ಲಿ ಕಾರ್ಯಕರ್ತ ಎಂಬ ಬಿರುದು ಪಡೆದು ಸರ್ವಾಧಿಕಾರಿಯಾಗಿದ್ದ.

* ಬೆಂಗಳೂರು ಮತ್ತು ಶ್ರೀರಂಗಪಟ್ಟಣದಲ್ಲಿ ಕೋಟೆ ಕಟ್ಟಿಸಿದನು.

* ಬೆಂಗಳೂರಿನಲ್ಲಿ ಲಾಲ್ ಬಾಗ್ ನಿರ್ಮಿಸಿದನು.

* 1761 ರಲ್ಲಿ ಬೆಂಗಳೂರಿಗೆ ಕಲ್ಲಿನ ಕೋಟೆಯನ್ನು ನಿರ್ಮಿಸಿದನು.

-: ಮೊದಲನೇ ಆಂಗ್ಲೋ-ಮೈಸೂರು ಯುದ್ಧ ( ಸಾಮಾನ್ಯ ಶಕ 1767-1769):-

* ಹೈದರಾಲಿ ವಿರುದ್ಧ ಬ್ರಿಟಿಷರು ( ಕರ್ನಲ್ ಸ್ಮಿತ್).

* ನಡೆದ ಸ್ಥಳ- ಮದ್ರಾಸ್

* ಮುಕ್ತಾಯ – ” ಮದ್ರಾಸ್ ಒಪ್ಪಂದ “.

* ಒಪ್ಪಂದದ ಅಂಶಗಳು:-

-> ಗೆದ್ದ ಪ್ರದೇಶಗಳನ್ನು ವಾಪಸ್ ನೀಡುವುದು.

-> ಸೆರೆ ಹಿಡಿದ ಸೈನಿಕರನ್ನು ಬಿಡುವುದು.

-> ಪರಸ್ಪರ ಸಹಾಯ ಮಾಡುವುದು.

-: ಎರಡನೇ ಆಂಗ್ಲೋ-ಮೈಸೂರು ಯುದ್ಧ (ಸಾಮಾನ್ಯ ಶಕ 1780-1784):-

* ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ನ ವಿರುದ್ಧ ಬ್ರಿಟಿಷ್ ಗೌರ್ನರ್ ಜನರಲ್ ವಾರ್ನ್ ಹೇಸ್ಟಿಂಗ್ಸ್ ( ಭಾರತದ ಮೊದಲ ಬ್ರಿಟಿಷ್ ಗೌರ್ನರ್ ಜನರಲ್).

* ಕದನ ನಡೆದ ಸ್ಥಳ – ಪಾಲೀಲೂರು ( ಹೈದರಾಲಿ ವಿರುದ್ಧ ಬ್ರಿಟಿಷರು), ಪೋರ್ಟೋನೋವಾ ( ಹೈದರ್ ವಿರುದ್ಧ ಬ್ರಿಟಿಷರು ) – ಸರ್ ಐರ್ ಕೂಟ್.

* ತಾಂಜಾವೂರು ( ಟಿಪ್ಪು ಸುಲ್ತಾನ್ ವಿರುದ್ಧ ಬ್ರಿಟಿಷರು).

* ಮೊದಲ ಕದನದಲ್ಲಿ ಹೈದರ್ ಜಯ ಸಾಧಿಸಿದ ( ಕರ್ನೂಲ್ ಬೇಲಿಯನ್ನು ಸೋಲಿಸಿದ) ನಂತರದ ಕದನದಲ್ಲಿ ಸೋತನು.

* 1782 ರಲ್ಲಿ ಬೆತ್ತೂರಿನ ಬಳಿ ಸಂಭವಿಸಿದ ಕದನದಲ್ಲಿ ಹೈದರಾಲಿ ( ನರಸಿಂಹರಾಜಪೇಟೆ) ಡಿಸೆಂಬರ್ 7ರಂದು ಮರಣ ಹೊಂದಿದನು ( ಬೆನ್ನು ಹುಣ್ಣಿನ ರೋಗ).

* ಟಿಪ್ಪು ಯುದ್ಧ ಮುಂದುವರಿಸಿ ” ಮಂಗಳೂರು ಒಪ್ಪಂದದ” ಮೂಲಕ ಮುಕ್ತಾಯ ಮಾಡಿದನು.

 ಟಿಪ್ಪು ಸುಲ್ತಾನ್ ( ಸಾಮಾನ್ಯ ಶಕ 1753-1799).

* ಜನನ 1753 ನವೆಂಬರ್ 10 ಶುಕ್ರವಾರ ಬೆಂಗಳೂರ್ ಜಿಲ್ಲೆಯ ದೇವನಹಳ್ಳಿ.

* 1783 ಮೇ ನಾಲ್ಕರಂದು ಬಾದಶಹ ಅಂದರೆ ಚಕ್ರವರ್ತಿ ಎಂಬ ಬಿರುದನ್ನು ಧರಿಸಿ ಪಟ್ಟಾಭಿಷಿಕ್ತನಾದನು.

-: ಮೂರನೆ ಆಂಗ್ಲೋ ಮೈಸೂರು ಯುದ್ಧ ( 1790-1792) :-

* ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ, ಆರಾಜ್ಯದ ರಾಜ ನೆರೆಯ ಕೊಚ್ಚಿ ಸಂಸ್ಥಾನದಲ್ಲಿ ಬ್ರಿಟಿಷರ ಬೆಂಬಲದಿಂದ ಕೋಟೆಯನ್ನು  ನಿರ್ಮಿಸಿದನು. ಮತ್ತು ಆತನು ಡಚ್ಚರಿಂದ ಆಯಕೋಟೆ ಮತ್ತು ಕಾಂಗನೂರು ಕೋಟೆಗಳನ್ನು ಪಡೆದುಕೊಂಡಿದ್ದನು.

* ಇದು ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆಯಾಗಿತ್ತು.

* ಬ್ರಿಟಿಷರ ಜನರಲ್ ಮೆಡೋಸ್ ನ ನಾಯಕತ್ವದಲ್ಲಿ ಕಾರವಾರ, ಕೊಯಮತ್ತೂರು, ದಿಂಡಿಗಲ್ ಮೊದಲಾದವುಗಳನ್ನು ವಶಪಡಿಸಿಕೊಂಡರು. ಇದಕ್ಕೆ ವಿರುದ್ಧವಾಗಿ ಟಿಪ್ಪು ಬಾರಾಮಹಲ್ ಮತ್ತು ಸತ್ಯಮಂಗಲವನ್ನು ವಶಪಡಿಸಿಕೊಂಡನು.

* ಈ ಸಮಯದಲ್ಲಿ ಲಾರ್ಡ್ ಕಾರ್ನ್ ವಾಲೀಸ್ ಬ್ರಿಟಿ ಸೈನ್ಯದ ನಾಯಕತ್ವ ವಹಿಸಿಕೊಂಡನು.

* ಲಾರ್ಡ್ ಕಾರ್ನ್ ವಾಲೀಸ್, ನಿಜಾಮ ಮತ್ತು ಮರಾಠರ ನೆರವಿನಿಂದ ಯುದ್ಧದ ತಿರುವನ್ನು ಪಡೆದುಕೊಂಡಿತು.

* 1792ರಲ್ಲಿ ಸಂಘಟಿತ ಸೈನ್ಯ ಒಂದೊಂದಾಗಿ ಕೋಟೆಗಳನ್ನು ವಶಪಡಿಸಿಕೊಂಡು ಶ್ರೀರಂಗಪಟ್ಟಣದ ಕಡೆಗೆ ಸಾಗಿತು. ರಾತ್ರಿ ವೇಳೆಯಲ್ಲಿ ಕೋಟೆಯನ್ನು ಹಾಳು ಗೆಡವಲಾಯಿತು ಇದರಿಂದ ವಿಚಲಿತಗೊಂಡ ಟಿಪ್ಪು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದನು.

* ” ಶ್ರೀರಂಗಪಟ್ಟಣ ” ಒಪ್ಪಂದದ ಅನ್ವಯ ಮೂರನೇ ಆಂಗ್ಲೋ ಮೈಸೂರು ಯುದ್ಧ ಕೊನೆಗೊಂಡಿತು.

-: ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳು :-

* ಟಿಪ್ಪು ತನ್ನ ಅರ್ಧ ರಾಜ ಬಿಟ್ಟು ಕೊಡುವುದು.

* ಮೂರು ಕೋಟಿ ರೂಪಾಯಿಗಳನ್ನು ಯುದ್ಧ ನಷ್ಟ ಭರ್ತಿಯಾಗಿ ಕೊಡುವುದು.

* ಯುದ್ಧ ನಷ್ಟ ಭರ್ತಿಗೆ ಗ್ಯಾರಂಟಿಯಾಗಿ ತನ್ನ ಎರಡು ಗಂಡು ಮಕ್ಕಳನ್ನು ಒತ್ತೆಯಾಗಿಡುವುದು.

* ಯುದ್ಧದ ಸಂದರ್ಭದಲ್ಲಿ ಬಿಡುಗಡೆಗೊಳಿಸುವುದು. ಇದರ ಅನ್ವಯ ಶ್ರೀರಂಗಪಟ್ಟಣದಿಂದ ಬ್ರಿಟಿಷರ ನೇತೃತ್ವದಲ್ಲಿದ್ದ ಸೈನ್ಯ ಹಿಂತೆಗೆಯಿತು.

 -: ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ (1799):-

* ಟಿಪ್ಪು ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿನ ಸೋಲನ್ನು ವೈಯಕ್ತಿಕವಾಗಿ ಸ್ವೀಕರಿಸಿ ಅದನ್ನು ಪ್ರಮುಖ ಸವಾಲ್ ಎಂದು ಸ್ವೀಕರಿಸಿದನು.

* ಒಪ್ಪಂದದ ಅನ್ವಯ ಬ್ರಿಟಿಷರ ನೇತೃತ್ವದ ಮಿತ್ರಕೂಟಕ್ಕೆ ನೀಡಬೇಕಾದ ಭೂ ಪ್ರದೇಶಗಳು ಮತ್ತು ಹಣವನ್ನು ಚಾಚುತ್ತಪ್ಪದೆ ಸಲ್ಲಿಸಿ ಒತ್ತೆಯಾಳಾಗಿ ಕಳುಹಿಸಿಕೊಟ್ಟಿದ್ದ ತನ್ನ ಇಬ್ಬರು ಮಕ್ಕಳನ್ನು ಕರೆಸಿಕೊಂಡನು.

* ಟಿಪ್ಪು ಬ್ರಿಟಿಷರ ದಿನದಲ್ಲಿ ಮಲಯಾಳಂ ಮಾತನಾಡುವ ಭೂಪ್ರದೇಶಗಳು ನ್ಯಾಯಯುತವಾಗಿ ತನಗೆ ಸೇರಬೇಕೆಂದು ವಾದಿಸಿದನು. ಆದರೆ ಬ್ರಿಟಿಷರು ಇದನ್ನು ಪುಷ್ಠಿಕರಿಸಲಿಲ್ಲ.

* ಲಾರ್ಡ್ ವೆಲ್ಲೆಸ್ಲಿ 1798ರಲ್ಲಿ ಭಾರತದ ಗವರ್ನರ್ ಆಗಿ ನೇಮಕಗೊಂಡನು.

* ಟಿಪ್ಪು ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದನು. ಇದರಿಂದಾಗಿ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವು ಆರಂಭವಾಯಿತು.

* 1799ರಲ್ಲಿ ಯುದ್ಧ ಆರಂಭವಾಯಿತು, ಈ ಯುದ್ಧದಲ್ಲಿ ಟಿಪ್ಪು 1799 ರಲ್ಲಿ ಹತನಾದನು.

* ಒಂದು ಸಣ್ಣ ಭೌಗೋಳಿಕ ಪ್ರದೇಶವು ಮೈಸೂರು ಒಡೆಯರ ರಾಜವಂಶದ ಪ್ರತಿನಿಧಿಗೆ ವರ್ಗಾಯಿಸಲ್ಪಟ್ಟಿತು.

ಟಿಪ್ಪುವಿನ ಸಾಧನೆಗಳು.

* ಮರಾಠರ ದಾಳಿಯಿಂದ ಹಾನಿಗೊಳಗಾದ ಶೃಂಗೇರಿ ಶಾರದಾ ದೇವಾಲಯಕ್ಕೆ ಧನ ಸಹಾಯ ಮಾಡಿದರು.

* ಈತನ ಬಿರುದು ಬಾದಶಾಹ ಮತ್ತು ಮೈಸೂರಿನ ಹುಲಿ.

* ಶ್ರೀರಂಗಪಟ್ಟಣದಲ್ಲಿ ಹೈದರಾಲಿಯಿಂದ ದರಿಯಾದೌಲತ್ ಅರಮನೆ ಕಾರ್ಯವನ್ನು ಪೂರ್ಣಗೊಳಿಸಿದ. ಇದು ಟಿಪ್ಪುವಿನ ಬೇಸಿಗೆ ಅರಮನೆ ಆಗಿತ್ತು.

* ಈತ ಕರ್ನಾಟಕಕ್ಕೆ ರೇಷ್ಮೆ ಮತ್ತು ನೀಲಗಿರಿಯನ್ನು ಪರಿಚಯಿಸಿದನು.

* ಯುದ್ಧಗಳಲ್ಲಿ ರಾಕೆಟ್ ಅನ್ನು ಬಳಸಿದ ಮೊದಲ ರಾಜ ಟಿಪ್ಪು ಸುಲ್ತಾನ್.

WhatsApp Group Join Now
Telegram Group Join Now