ಹೊಸ ಮತಗಳ ಉದಯ.(ಸಾ.ಶ.ಪೂ. 6ನೇ ಶತಮಾನ ) FDA.SDA.HSTR.GPSTR.TET.All Competative exam notes.

ಹೊಸ ಧರ್ಮಗಳ ಉದಯಕ್ಕೆ ಕಾರಣಗಳು.

* ವೈಧಿಕ ಧರ್ಮದಲ್ಲಿನ ಗೊಂದಲಗಳು

* ಪುರೋಹಿತ ವರ್ಗದ ಪರಮಾಧಿಕಾರ

* ಪ್ರಾಣಿಬಲಿ

* ಮಂತ್ರಗಳ ಪಠಣ

* ಜಾತಿ ಪದ್ಧತಿ

* ಮಹಾನ್ ವ್ಯಕ್ತಿಗಳ ಜನನ

   -: ಜೈನ ಧರ್ಮ :-

* ಸ್ಥಾಪಕ – ವೃಷಭನಾಥ ಅಥವಾ ಆದಿನಾಥ

* 23 ನೇ ತೀರ್ಥಂಕ – ಪಾರ್ಶ್ವನಾಥ

* 24 ನೇ ತೀರ್ಥಂಕ – ವರ್ಧಮಾನ ಮಹಾವೀರ

 -: ಪಾರ್ಶ್ವನಾಥ :-

* ಪ್ರೋ. ಜಾಕೊಬಿ ರವರ ಪ್ರಕಾರ ಪಾರ್ಶ್ವನಾಥ ಜೈನ ಧರ್ಮದ ನಿಜವಾದ ಸ್ಥಾಪಕ.

          ಬೋಧನೆಗಳು

* ಅಹಿಂಸೆ, ಸತ್ಯ, ಆಸ್ತೆಯ ( ಕದಿಯದಿರುವುದು )

* ಅಪರಿಗ್ರಹ ( ಸಂಪತ್ತಿನ ವ್ಯಾಮೋಹ ಇಲ್ಲದಿರೂವುದು ಅವಶ್ಯಕತೆಗಿಂತ ಹೆಚ್ಚು ಸಂಪತ್ತನ್ನು ಸಂಗ್ರಹಿಸಬಾರದು)

-: ವರ್ಧಮಾನ ಮಹಾವೀರ ( ಸಾ.ಶ.ಪೂ 599 – 527 ).

* ಜನನ – ವೈಶಾಲಿ ಸಮೀಪದ ಕುಂದ ಗ್ರಾಮ ಸಾ.ಶ.ಪೂ 599.

* ತಂದೆ – ಸಿದ್ಧಾರ್ಥ, ತಾಯಿ – ತ್ರಿಶಲಾದೇವಿ

* ಪತ್ನಿ – ಯಶೋಧರೆ

* ಮಗಳು – ಅನೋಹಜ ( ಪ್ರಿಯದರ್ಶಿನಿ)

* ಜ್ಞಾನೋದಯ – ಜೃಂಬಿಕ ಗ್ರಾಮದ ಸಾಲುಮರದಡಿಯಲ್ಲಿ

* ಕೇವಲಿನ್ ಜ್ಞಾನ ( ಸರ್ವಜ್ಞ) ಪಡೆದು ಜಿನ ( ಇಂದ್ರಿಯ ನಿಗ್ರಹ) – ಪ್ರಾಪಂಚಿಕ ಸುಖ ದುಃಖಗಳನ್ನು ಹತ್ತಿಕ್ಕಿದವನು/ ರಾಗ ದ್ವೇಷಗಳನ್ನು ಗೆದ್ದವನು ಎಂದರ್ಥ.

* ಮರಣ – ಬಿಹಾರದ ರಾಜಗ್ರಹ ಸಮೀಪದ ಪಾವಪುರಿ ಸಾ.ಶ.ಪೂ 527.

-:ವರ್ಧಮಾನ ಮಹಾವೀರ ಬೋಧನೆಗಳು :-

* ಸತ್ಯ

* ಅಹಿಂಸೆ

* ಆಸ್ತೆಯ

* ಅಪರಿಗ್ರಹ

* ಬ್ರಹಚರ್ಯ ( ಪಾವಿತ್ರ್ಯತೆ )

  -: ತ್ರಿರತ್ನಗಳು :-

* ಸಮ್ಯಕ್ ಜ್ಞಾನ

* ಸಮ್ಯಕ್ ನಂಬಿಕೆ

* ಸಮ್ಯಕ್ ನಡತೆ

=> 11 ಜನ ಶಿಷ್ಯರು – ಗಣಾಧರರು

-: ಜೈನ ಧರ್ಮದ ಪ್ರಸಾರ :-

1. ಮೊದಲ ಸಭೆ ಸಾ.ಶ.ಪೂ 300 ರಲ್ಲಿ ಪಾಟಲಿಪುತ್ರ – ಜೈನ ಧರ್ಮದ ಪವಿತ್ರ ಗ್ರಂಥಗಳ ಸಂಗ್ರಹ

2. ಎರಡನೆಯ ಸಭೆ ಸಾ.ಶ. 512 ಗುಜರಾತಿನ ವಲ್ಲಬಿ – ಜೈನ ತತ್ವಗಳ ಸಂಗ್ರಹ

-: ಜೈನ ಧರ್ಮದ ಪಂಗಡಗಳು :-

* ಶ್ವೇತಾಂಬರ

* ದಿಗಂಬರರು

ಜೈನ ಧರ್ಮದ ಪವಿತ್ರ ಗ್ರಂಥ.

=> ಆಗಮ ಸಿದ್ಧಾಂತ

   -: ಬೌದ್ಧ ಧರ್ಮ :-

ಗೌತಮ ಬುದ್ಧ ( ಸಾ.ಶ.ಪೂ 563 ರಿಂದ 483 ).

* ಬೌದ್ಧ ಧರ್ಮದ ಸ್ಥಾಪಕ.

* ಜನನ ಸಾ.ಶ.ಪೂ 563 ನೇಪಾಳದ ಲುಂಬಿನಿ ವನ , ತಂದೆ- ಶುದ್ಧೋದನ, ತಾಯಿ – ಮಾಯಾದೇವಿ , ಚಿಕ್ಕಮ್ಮ – ಮಹಾ ಪ್ರಜಾಪತಿ ಗೌತಮಿ, ಪತ್ನಿ – ಯಶೋಧರೆ , ಮಗ – ರಾಹುಲ್

 -: ಮಹಾಪರಿತ್ಯಾಗ :-

* ರೋಗಿ

* ವೃದ್ಧ

* ಶವ

* ಸನ್ಯಾಸಿ

 -: ಸತ್ಯಾನ್ವೇಷಣೆ :-

* ಗಯಾದ ಅರಳಿ ವೃಕ್ಷದ ಕೆಳಗೆ 47 ದಿನಗಳ ತಪಸ್ಸಿನ ನಂತರ ( 35 ನೇ ವಯಸ್ಸಿನಲ್ಲಿ ) ಜ್ಞಾನೋದಯವಾಯಿತು.

-: ಬೌದ್ಧ ಧರ್ಮದ ಪ್ರಸಾರ :-

* ಬುದ್ಧ ತನ್ನ ಮೊದಲ ಪ್ರವಚನವನ್ನು ಸಾರಾನಾಥದ ಜಿಂಕೆ ವನದಿಂದ ಆರಂಭಿಸಿದನು ಇದನ್ನು ಧರ್ಮಚಕ್ರ ಪ್ರವರ್ತನ ಎನ್ನುವರು.

* ನಿರ್ವಾಣ ಸಾ.ಶ.ಪೂ 487 ಪೌರ್ಣಿಮೆ.

-: ಬುದ್ಧನ ಬೋಧನೆಗಳು :-

1. ವಿನಯ ಪೀಟಕ – ಇದರಲ್ಲಿ ಬೌದ್ಧ ಬಿಕ್ಷುಗಳು ಅನುಸರಿಸಬೇಕಾದ ಶಿಸ್ತು ಬದ್ಧ ನಿಯಮಗಳಿವೆ.

2. ಸುತ್ತ ಪೀಟಕ – ಇದು ಬುದ್ಧನ ಜೀವನ ಚರಿತ್ರೆ ಹಾಗೂ ಬೋಧನೆಗಳನ್ನು ಒಳಗೊಂಡಿದೆ ಇದರಲ್ಲಿ ತಿಳಿಸುವ ಜಾತಕ ಕಥೆಗಳಿವೆ ( 548).

3. ಅಬಿದಮ್ಮ ಪೀಟಕ – ಇದು ದರ್ಶನನ ಜ್ಞಾನವನ್ನು ಹೊಂದಿದೆ.

 -: ನಾಲ್ಕು ಮೂಲ ತತ್ವಗಳು :-

1. ಸತ್ಯ ನುಡಿಯುವಿಕೆ

2. ಅಹಿಂಸೆ

3. ಕಳ್ಳತನ ಮಾಡದಿರುವುದು

4. ಪವಿತ್ರತೆ

-: ನಾಲ್ಕು ಆರ್ಯ ಸತ್ಯಗಳು :-

1. ಪ್ರಾಪಂಚಿಕ ಜೀವನವು ದುಃಖಮಯವಾಗಿದೆ.

2. ಆಸೆಯೇ ದುಃಖಕ್ಕೆ ಮೂಲ ಕಾರಣ.

3. ಆಸೆಯನ್ನು ನಿದ್ರಿಸುವುದರಿಂದ ಪುನರ್ಜನ್ಮವನ್ನು ಕೊನೆಗಾಣಿಸುವುದು.

4. ಆಸೆಯನ್ನು ಕೊನೆಗಾಣಿಸಲು ಅಷ್ಟಾಂಗ ಮಾರ್ಗವನ್ನು ಅನುಸರಿಸಬೇಕು.

  -: ಅಷ್ಟಾಂಗ ಮಾರ್ಗಗಳು :-

* ನಂಬಿಕೆ

* ಆಲೋಚನೆ

* ಮಾತು

* ನಡತೆ

* ಪ್ರಯತ್ನ

* ಧ್ಯಾನ

* ವಿಚಾರ

* ಜೀವನೋಪಾಯ

=> ಬುದ್ಧನು ಏಷ್ಯಾದ ಬೆಳಕು – ಎಡ್ಮಿನ್ ಅರ್ನಾಲ್ಡ್

-: ಬೌದ್ಧ ಧರ್ಮದ ಸಮ್ಮೇಳನಗಳು :-

ಸಮ್ಮೇಳನಗಳು ಮತ್ತು ವಿಶೇಷತೆಗಳು.

1. ಒಂದನೇ ಸಮ್ಮೇಳನ – ಸಾ.ಶ.ಪೂ 483 ರಾಜಗೃಹ , ಅಧ್ಯಕ್ಷತೆ ಮಹಾಕಶ್ಯಪ.

2. ಎರಡನೇ ಸಮ್ಮೇಳನ – ಸಾ.ಶ.ಪೂ 383 ವೈಶಾಲಿ, ಪೋಷಣೆ – ಕಾಲಾಶೋಕ, ಅಧ್ಯಕ್ಷ – ಸಭಾಕಾಮಿ.

3. ಮೂರನೇ ಸಮ್ಮೇಳನ – ಸಾ.ಶ.ಪೂ 250 ಪಾಟಲಿಪುತ್ರ, ಪೋಷಣೆ – ಅಶೋಕ, ಅಧ್ಯಕ್ಷತೆ – ಮುಗಲಿಪುತ್ರ.

4. ನಾಲ್ಕನೇ ಸಮ್ಮೇಳನ – ಸಾ.ಶ. 100 ಕುಂಡಲಿವನ( ಕಾಶ್ಮೀರ), ಪೋಷಣೆ – ಕನಿಷ್ಕ, ಅಧ್ಯಕ್ಷತೆ – ವಸುಮಿತ್ರ.

5. ಐದನೇ ಸಮ್ಮೇಳನ – ಸಾ.ಶ. 643, ಪೋಷಣೆ – ಹರ್ಷವರ್ಧನ, ಅಧ್ಯಕ್ಷತೆ – ಹ್ಯೂಯೆನ್ ತ್ಸಾಂಗ್.

WhatsApp Group Join Now
Telegram Group Join Now